ಶ್ರೀಶೈಲಕ್ಕೆ ಆಗಮಿಸಿದ ಸಿದ್ಧನಿಗೆ ಸೂರ್ಯಸಿಂಹಾಸನದ ಸ್ವಾಮಿಗಳಿಂದ ಆಶೀರ್ವಾದ
🕉️ ಶ್ರೀಶೈಲಕ್ಕೆ ಆಗಮಿಸಿದ ಸಿದ್ಧನಿಗೆ ಸೂರ್ಯಸಿಂಹಾಸನದ ಸ್ವಾಮಿಗಳಿಂದ ಆಶೀರ್ವಾದ ✡️
ಮಿತ್ರರನ್ನು ಬಿಳ್ಳುಗೊಟ್ಟು ತಾನೊಬ್ಬನೇ ಅಲ್ಲಿಂದ ಹೊರಟು ಹೈದ್ರಾಬಾದ, ಅಲ್ಲಿಂದ ಗೋವಳಕೊಂಡಕ್ಕೆ ಆಗಮಿಸಿ, ಅಲ್ಲಿ ತಿರುವಲಿಂಕನ ಗವಿಯಲ್ಲಿ ಧ್ಯಾನಯೋಗದಲ್ಲಿ ಲೀನವಾದಾಗ ದಿವ್ಯದೃಷ್ಟಿ ಗೋಚರಿಸಿತು. ಮುಂದೆ ದಕ್ಷಿಣಕ್ಕೆ ಸಾಗಿ ಶ್ರೀಶೈಲಕ್ಕೆ ಆಗಮಿಸಿ ಸೂರ್ಯ ಸಿಂಹಾಸನಾಧೀಶ ಮಠಕ್ಕೆ ಬಂದು ಸ್ವಾಮಿಗಳ ದರ್ಶನ ಪಡೆದನು. ಆಗ ಸ್ವಾಮಿಗಳು ಸಿದ್ಧನನ್ನು ಕಂಡು "ಬಾಲಕನೇ ನೀನಾರು. ಈ ಬಾಲ್ಯಾವಸ್ಥೆಯಲ್ಲಿ ನೀನೆಲ್ಲಿಗೆ ಹೋಗುವೆ'' ಎಂದು ಕೇಳಲು ಸಿದ್ದನು "ನಾನು ಬಿದರಿಕೋಟೆಯಲ್ಲಿರುವ ಗುರುಶಾಂತಪ್ಪನ ಮಗನು. ಗುರುವಿನ ಶೋಧಕ್ಕೆ ಹೊರಟಿರುವ ಸಿದ್ದ ನಾನು” ಅಂತಾ ಹೇಳಿದನು. “ಗುರುವಿನ ಕರುಣಾಮೃತ ಪಡೆಯಲು ಮಾಡಬೇಕಾದ ಸಾಧನ ಯಾವುದು? ಅಂತಾ ಸ್ವಾಮಿಗಳು ಕೇಳಲು ಸಿದ್ದನು ಹರ್ಷದಿಂದ ಮೊದಲು ಭವವು ದುಃಖಕರವೆಂದು ಅರಿತು ಶಾಶ್ವತವಾದ ಪರಮಾನಂದವನ್ನು ಇಚ್ಛೆಪಡುವದೇ ಮೋಕ್ಷಾಪೇಕ್ಷೆಯು.
ಅಹಂಕಾರ ಮಮಕಾರಗಳ ಬಗ್ಗೆ ತಿಳಿದುಕೊಳ್ಳಬೇಕು. ಘಟದಿಂದ ಬೇರೆಯಾದ ಆತ್ಮನನ್ನು ತಿಳಿದುಕೊಳ್ಳುವದು ಸುವಿವೇಕವು. ಈ ಸುವಿವೇಕವುಳ್ಳವನಾಗಿ ಇಹಲೋಕ ಪರಲೋಕ ಭೋಗಗಳೆಲ್ಲವು ದುಃಖದಾಯಕವೆಂದೂ ಕ್ಷಣಿಕ ಸುಖವೆಂದು ತಿಳಿದುಕೊಂಡು, ಇವುಗಳನ್ನು ತ್ಯಾಗ ಮಾಡುವದೇ ನಿಜವಾದ ಗುರು ಶೋಧನೆ ಯಾಗುವದು. ವಿಷಯವಾಸನೆಯ ನಿಗ್ರಹ ಮಾಡುವದೇ ಶಮೆ, ವಿಷಯದ ಕಡೆ ಧಾವಿಸುವ ಇಂದ್ರಿಯಗಳನ್ನು ತಡೆಯುವದೇ ದಮೆ. ಗುರುವಾಕ್ಯ, ಶಾಸ್ತ್ರ ವಾಕ್ಯದಲ್ಲಿ ವಿಶ್ವಾಸವಿಡುವದೇ ನೀಜವಾದ ಶ್ರದ್ಧೆಯಾಗಿದೆ. ಪ್ರತಿ ನಿತ್ಯ ಉಪಾಸನೆಯ ಸಾಧನೆಯಿಂದ ಮನಸ್ಸಿನ ವಿವಿಧ ವಿಕ್ಷೇಪ ದೋಷಗಳನ್ನು ಕಳೆಯುವದೇ ಶಾಂತಿಯು.
ವೈರಾಗ್ಯದಿಂದ ಸ್ಥಿರತೆಯಿಂದಿರುವ ಮನಸ್ಸನ್ನು ಪುನಃ ವಿಷಯಾಕಾರ ಆಗದಂತೆ ನೋಡಿಕೊಳ್ಳುವದೇ ಉಪರತಿಯು, ಅತೀವ ಉತ್ಸಾಹದಿಂದ ಮಾಡುತ್ತಿರುವ ಶ್ರವಣಗಳನ್ನು ಬಿಡದೆ, ಹೊಟ್ಟೆಯಲ್ಲಿ ಉದಯಿಸುವ ವಿಘ್ನಕಾರಕ ಶೀತೋಷ್ಣಗಳನ್ನು ತಡೆಯುವದು ತಿತೀಕ್ಷೆ, ಈ ಪ್ರಕಾರ ಸಾಧನೆಗಳನ್ನು ಮಾಡಬೇಕು'' ಅಂತಾ ಹೇಳಿದನು. ಆಗ ಸ್ವಾಮಿಗಳು ''ಹೇ ಕಂದನೇ ಈಗ ನೀನು ಹೇಳಿದ ಸಾಧನೆಗಳನ್ನು ಸುಜ್ಞಾನ ಪ್ರಾಪ್ತಿಗಾಗಿ ಇರುವವೋ ಅಥವಾ ಮುಂದೆ ಬೇರೆ ಸಾಧನೆ ಮಾಡಬೇಕೋ'' ಅಂತ ಕೇಳಲು ಸಿದ್ದನು “ಹೇ ಸ್ವಾಮಿಗಳೇ ಶ್ರೇಷ್ಠತರ ಶಮೆ, ದಮೆ, ಉಪರತಿ, ತಿತಿಕ್ಷ, ನಾಲ್ಕು ಸಾಧನಗಳು, ಪರತರ ಶ್ರವಣ, ಮನನ, ನಿಧಿಧ್ಯಾಸನ ಜೊತೆಗೆ ತತ್ವಂಮಸಿ ಜ್ಞಾನ ಪಡೆಯಲು ಮುಖ್ಯ ಸಾಧನಗಳು. ಅಂತಾ ವೇದದ ಅಭಿಪ್ರಾಯವಾಗಿದೆ.
ಹಲವರು ಚಿತ್ತಶುದ್ದಿ ಮುಖಾಂತರ ಜ್ಞಾನ ಪಡೆಯಲು ನಿಷ್ಕಾಮದಿಂದ ಯಜ್ಞ ಯಾಗಾದಿ ಕರ್ಮಗಳನ್ನು ಮಾಡುವರು. ಇವು ಬಹಿರಂಗ ಸಾಧನೆಗಳು. ''ಹೇ ಸ್ವಾಮಿಗಳೇ ತತ್ವಮಸಿ ಪದದ ಶೋಧನೆಗಾಗಿ ಮೇಲೆ ಹೇಳಿದ ಅಷ್ಟ ಸಾಧನಗಳೇ ಉತ್ತಮ. ಇದರಿಂದ ಜ್ಞಾನ ಪ್ರಾಪ್ತಿಯಾಗುವದು.
ಬಹಿರಂಗ ಸಾಧನಗಳಿಗೂ ಮತ್ತು ಈ ಅಷ್ಟ ಸಾಧನಗಳಿಗೂ ಅಂತರವಿರುವದನ್ನು ಗಮನಿಸಿ ಯೋಗ್ಯವಾದ ಸಾಧನಗಳನ್ನು ಮಾಡಬೇಕು" ಅಂತಾ ಹೇಳಿದ್ದನ್ನು ಕೇಳಿ ಸ್ವಾಮಿಗಳು ಅತೀವ ಆನಂದದಿಂದ ''ಮೊದಲಿಗೆ ಈ ಬಾಲಕನು ಬಹು ಜನ್ಮಗಳಲ್ಲಿ ತಪಸ್ಸನ್ನಾಚರಿಸುವಾಗ ತಪೋಭ್ರಷ್ಟನಾಗಿ ಬಂದವನೇ? ಅಥವಾ ಭವಸಾಗರ ದುಃಖ ಹರನಾಗಿ ಶಂಕರನೇ ಅವತರಿಸಿ ಬಂದವನಿರಬಹುದು" ಅಂತ ಉದ್ಗರಿಸಿದರು. ''ಅಯ್ಯಾ ಬಾಲಕನೇ, ನಿನಗೆ ಶ್ರೀಗುರು ಅತಿ ಶೀಘ್ರವಾಗಿ ಲಭಿಸಿ ಜ್ಞಾನವನ್ನು ಬೋಧಿಸಲಿ. ಭೂಲೋಕದಲ್ಲಿ ಮಾನವ ಮಾತ್ರರನ್ನು ಉದ್ಧರಿಸು" ಅಂತಾ ಅಶೀರ್ವದಿಸಿದರು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
