ಗುರುಶೋಧನೆಗಾಗಿ ತಂದೆತಾಯಿ ಪುರಜನರು ಹರುಷದಿಂದ ಕಳಿಸಿಕೊಟ್ಟ ಕಥೆ
🕉️ ಗುರುಶೋಧನೆಗಾಗಿ ತಂದೆತಾಯಿ ಪುರಜನರು ಹರುಷದಿಂದ ಕಳಿಸಿಕೊಟ್ಟಿದು
ಆನಂದೋತ್ಸಾಹಗಳಿಂದ ಸಿದ್ದನನ್ನು ಪಲ್ಲಕ್ಕಿಯಲ್ಲಿ ಕೂಡ್ರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ಮಾಡುತ್ತಾ ವಿರಕ್ತಮಠಕ್ಕೆ ಬಂದು ಅಲ್ಲಿ ವೈಭವದಿಂದ ಪೂಜಿಸಿದರು. ಅನ್ನ ಸಂತರ್ಪಣೆ ಮಾಡಿದರು. ನಿಮ್ಮ ಸತ್ಕಾರಕ್ಕೆ ಮೋಹಪರವಶನಾಗಿ ಇಲ್ಲಿ ವಾಸಮಾಡುವದು ಸೂಕ್ತವಲ್ಲ. ಗುರುಶೋಧನೆಗೆ ಹೊರಡಲು ಪರವಾನಿಗೆಯನ್ನು ಕೊಡಬೇಕೆಂದು ಸಿದ್ಧನು ಕೇಳಿಕೊಂಡನು. ಹೊರಡಲು ಸಿದ್ಧನಾದ ಕೂಡಲೇ ತಂದೆ ತಾಯಿಗಳು ದುಃಖಿಸತೊಡಗಿದರು. ಮಗನ ಅಗಲುವಿಕೆಯ ದುಃಖದಿಂದ ರೋಧಿಸುತ್ತಿದ್ದ ತಂದೆ ತಾಯಿಗಳನ್ನು ಕುರಿತು ಸಿದ್ದನು "ಪುತ್ರನು ನನ್ನವನೆಂಬ ಮಮಕಾರವು ಭ್ರಾಂತಿ ಹುಟ್ಟಿಸಿ ದುಃಖದಲ್ಲಿ ತಳ್ಳುವದು". ಇದನ್ನು ನಿವಾರಿಸಲು ಶಿವನ ನಾಮ ಸ್ಮರಣೆ ಮಾಡಿರಿ ಅಂತಾ ಹೇಳಿದನು. ಮರುದಿನ ಮಠದಿಂದ ಮಗನನ್ನು ಮನೆಗೆ ಕರೆದೊಯ್ದು ಮಂಗಲ ಸ್ನಾನ ಮಾಡಿಸಿ ಜನರನ್ನು ಕೂಡಿಸಿ ಅನ್ನ ಸಂತರ್ಪಣೆ ಮಾಡಿದ ತಂದೆ ತಾಯಿಗಳು ಶಾಲು ಕೊಟ್ಟು ಸಿದ್ಧನನ್ನು ಬಿಗಿದಪ್ಪಿ ಕುಲಪುತ್ರಾ ಸಂತಸದ ವಚನಗಳಿಂದ ಆಹ್ವಾದ ನೀಡುತ್ತಿದ್ದ ನಿನ್ನ ಮೋಹವನ್ನು ಹೇಗೆ ಬಿಡಲು ಸಾಧ್ಯ ಎಂದು ದೊಡ್ಡ ಧ್ವನಿದಿಂದ ಅಳತೊಡಗಿದರು. ಆಗ ಸಿದ್ಧನು ಅಮ್ಮಾ ಗುರುಸೇವೆ ಮಾಡಿ ಮೋಹವನ್ನು ಕಳೆದುಕೊಳ್ಳಿರಿ ಪುತ್ರನ ಹಂಬಲ ಬಿಟ್ಟು ಭಕ್ತಿ ಜ್ಞಾನದಿಂದ ಶಿವನ ಧ್ಯಾನ ಮಾಡಿರಿ, ನನ್ನ ಕರ್ಮವೇ ಜನ್ಮ ನೀಡಿತು ನನ್ನ ಕರ್ಮವೇ ಪುನಃ ಬದುಕಿಸಿತು. ಪ್ರಾರಬ್ಧ ಕರ್ಮವನ್ನು ತಪ್ಪಿಸಲಿಕ್ಕೆ ಸಾಧ್ಯವಿಲ್ಲ ಮುಂತಾಗಿ ಪ್ರಾರಬ್ದದ ಬಗ್ಗೆ ಸಿದ್ದನು ಹೇಳಿದನು. ನಂತರ ವಸ್ತ್ರ, ದಕ್ಷಿಣೆ, ಗಂಧ, ಮಾಲೆ ಹಾಕಿ ಹಾಡಿ ಹರಿಸಿದರು.
ಜಯವನೀಯೌಧರಣಿ ಮಾತೆಯೇ ಜಯವನೀಯಿರಿ ಚಂದ್ರ ಸೂರ್ಯರೆ ಜಯವನೀಯರಿಯಷ್ಟ ದಿಕ್ಕಾಲಕರೆ ಕಾಲಗಳೇ ಜಯವನೀಯೈ ಕಲಿ ಪುರುಷನೇ ಜಯವನೀಯೈ ದೇವದೇವನೇ ಜಯಪನೀಯೈ ಸಿದ್ದಗೆಲ್ಲಲು ಎಂದು ಕಳುಹಿದರು.
ಬಂದ ದಕ್ಷಿಣೆಯನ್ನು ಹಳೆಯ ದೇವಾಲಯವನ್ನು ಜೀರ್ಣೋದ್ಧಾರ ಮಾಡಬೇಕೆಂದು ಹಿರಿಯರಿಗೆ ಕೊಟ್ಟನು. ಬಂದ ವಸ್ತ್ರಗಳನ್ನು ಬಡವರಿಗೆ ಕೊಟ್ಟನು. ಹಣ್ಣು ಹಂಪಲಗಳನ್ನು ಸರ್ವರಿಗೂ ವಿತರಣೆ ಮಾಡಿದನು. ಸಿದ್ದನು ಗುರುಹಿರಿಯರಿಗೆ ನಮಿಸಿ ಹೊರಡಲು ಅಣಿ ಅದ ಕೂಡಲೇ ಪುರದ ಜನರೆಲ್ಲರೂ ಹೃದಯ ಸ್ಪರ್ಶಿಯಾಗಿ ಬೀಳ್ಕೊಟ್ಟರು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
