ಸೋಮ ಭೀಮರಿಗೆ ಗುರುಶೋದನೆ ಬಗ್ಗೆ ಹೇಳಿದ್ದು
☸️ ಸೋಮ ಭೀಮರಿಗೆ ಗುರುಶೋದನೆ ಬಗ್ಗೆ ಹೇಳಿದ್ದು
ಸಿದ್ಧನು ಹೋಗುವಾಗ ಅವನ ಮಿತ್ರರಾದ ಸೋಮ ಮತ್ತು ಭೀಮ ಎಂಬವರಿಬ್ಬರು ದಾರಿಯಲ್ಲಿ ಭೆಟ್ಟಿಯಾದರು. ಅವರು ಸಿದ್ಧನನ್ನು ಕುರಿತು- "ಸಿದ್ಧಾ ಎತ್ತಲಾಗೆ ಹೊರಟಿರುವಿ?” ಎಂದು ಕೇಳಲು, ಸಿದ್ದನು, "ಸರ್ವ ಪ್ರಪಂಚ ನಾಶವಾಗುವದು. ಹೀಗಿರುವಾಗ್ಗೆ ಇಲ್ಲಿದ್ದು ಏನು ಪ್ರಯೋಜನ? ದೇಹವಿರುತ್ತಾ ಪ್ರಾಣಿಯು ತನ್ನ ನಿಜಾತ್ಮ ಸಂಪಾದನೆಗೊಸ್ಕರ ಯತ್ನ ಮಾಡತಕ್ಕದ್ದು. ಆ ಸಲುವಾಗಿ ಗುರುಬೋಧವು ಬೇಕಾಗಿರುತ್ತದೆ. ಇಲ್ಲವಾದರೆ ಸರ್ವ ಯತ್ನಗಳು ವ್ಯರ್ಥ. ಆದ್ದರಿಂದ ನಾನು ಈಗ ಗುರುಶೋಧನೆಗೆ ಹೊರಟಿರುವೆನು", ಎಂದು ಉತ್ತರ ಕೊಟ್ಟನು. ಅದಕ್ಕವರು, ''ಇಷ್ಟು ಚಿಕ್ಕವಯಸ್ಸಿನಲ್ಯಾಕೆ ? ಈ ಕೆಲಸವು ವೃದ್ದಾಪ್ಯ ಕಾಲದಲ್ಲಿ ಶೋಭಿಸುವದು'' ಎಂದು ಅಂದದ್ದು ಕೇಳಿ, ಬಾಲ್ಯಾವಸ್ಥೆಯಲ್ಲಿ ಶುದ್ಧ ಮನಸ್ಸಿದ್ದಾಗ ಮನೆಯನ್ನು ತ್ಯಾಗ ಮಾಡಿ, ಸದ್ಗುರುವನ್ನು ಶೋಧಿಸಿ, ಆತನ ಪಾದಕ್ಕೆ ಬಿದ್ದು ಅಪ್ಪ, ಅಂಗ, ಸ್ಥಾನ, ಸದ್ಭಾವ ಸೇವೆ ಸರ್ವವಿಧ ಸೇವೆಗಳಿಂದ ಆತನ ಕೃಪೆಗೆ ಪಾತ್ರರಾಗಿ ಶಿವ ಜೀವರ ಐಕ್ಯತೆಯ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳುವದು ಯೋಗ್ಯ, ಯೌವನದಲ್ಲಿ ವಿಷಯ ಲಾಲಸೆಯಲ್ಲಿ ಮನಸ್ಸು ಮುಳುಗಿರುವದು. ಆ ಸಮಯದಲ್ಲಿ ಮೋಕ್ಷ ಪಡೆಯಬೇಕೆಂಬ ಇಚ್ಛೆ ಬರಲಾರದು.
ಕೂಡಲೇ ಮುಪ್ಪಿನಾವಸ್ಥೆ ಬರಲು ಯೌವನದಲ್ಲಿ ರುಚಿಯುಂಡ ವಿಷಯದ ವಾಸನೆ ರಭಸದ ಮನದ ಸ್ಥಿತಿ ಅವಿಚಾರಮಯವಾಗಿರುತ್ತದೆ.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
