ಮಧುರೆ ಮೀನಾಕ್ಷಿ ದೇವಾಲಯದಲ್ಲಿ ಬ್ರಾಹ್ಮಣನು ಸಿದ್ಧನಿಗೆ ಬೈದು, ನಂತರ ಪಶ್ಚತ್ತಾಪ ಪಟ್ಟು ಸಿದ್ಧರಿಗೆ ಊಟ ಕೊಟ್ಟನ್ನು,
✡️ ಮಧುರೆ ಮೀನಾಕ್ಷಿ ದೇವಾಲಯದಲ್ಲಿ ಬ್ರಾಹ್ಮಣನು ಸಿದ್ಧನಿಗೆ ಬೈದು, ನಂತರ ಪಶ್ಚತ್ತಾಪ ಪಟ್ಟು ಸಿದ್ಧರಿಗೆ ಊಟ ಕೊಟ್ಟನ್ನು,
ಮೀನಾಕ್ಷಿ ಗುಡಿಯ ಪೂಜಾರಿಯು ಸಿದ್ದನನ್ನು ಕುರಿತು ''ನೀನಾರು ನಿಲ್ಲು ಇಲ್ಲಿ ಭವಿಯೆ, ಕರ್ಮಭ್ರಷ್ಟನೆ, ಕಾಮುಕನೆ ಗುಡಿಯಲ್ಲಿ ಪ್ರವೇಶಿಸಬೇಡಾ" ಅಂತಾ ಗದರಿಸಿ ತಡೆದನು.
ಆಗ ಸಿದ್ದ ಭಾರತಿಯು ವಿಪ್ರನನ್ನು ಕುರಿತು, “ಅಯ್ಯಾ ಪೂಜಾರಿ ಕೋಪವು ನಿನ್ನಲ್ಲಿ ಮನೆಮಾಡಿಕೊಂಡಿರುವುದರಿಂದ ನೀನೇ ಭವಿ, ಚಾಂಡಾಲ ನಿರುವಿ ಕೂಳಬಾಕನೆ, ಒಳಗೆ ಬಿಡಲು ದುಡ್ಡು ಕೇಳುವ ಧನದಾಶೆಯುಳ್ಳ ಕಾಮುಕನೆ, ನನ್ನ ಬಳಿ ಏನೂ ದೊರೆಯುವುದಿಲ್ಲ" ಅಂತಾ ಹೋಗು ಎನ್ನುವವ ನೀನೇ ಚಾಂಡಾಲ, ನಿನ್ನ ಕೂಡ ವಾದ ಸಾಕು, ಸ್ನಾನಕ್ಕೆ ಹೋಗುವೆ ಅಂತಾ "ವಿಪ್ರ ಹೇಳಲು, ಸಿದ್ದ ಭಾರತಿಯು ಹೇ ವಿಪ್ರನೆ, ಅನ್ನಕ್ಕೆ ಇಚ್ಛೆಪಟ್ಟು ಸತ್ಸಂಗ ನೀನು ತ್ಯಾಗ ಮಾಡಲು ಅನೀತಿ, ಕರ್ಮಭ್ರಷ್ಟ ಮಾದಿಗತನವು ನಿನ್ನಲ್ಲಿದೆ. ಘನವಾದ ಪ್ರಾಯಶ್ಚಿತ್ತ ಮಾಡಿಕೊ'' ಅಂತಾ ಹೇಳಲು ಆ ವಿಪ್ರನು, 'ಹೇ ಬಾಲಕನೆ ನೀನಾಡುವ ಮಾತುಗಳನ್ನು ಕೇಳಲು ನೀನು ನಿಜವಾದ ಋಷಿಯಾಗಿರುವಿ. ಮನಬಂದಂತೆ ನಿನಗೆ ಜರಿದೆನು. ನನ್ನನ್ನು ಕ್ಷಮಿಸಬೇಕು' ಅಂತಾ ನಮಸ್ಕರಿಸಿ ಹೋದನು.
ಘಟ್ಟಿಗನಾದ ಸಿದ್ದಾರೂಢನು ಹಟದಿಂದ ಗುಡಿಯಲ್ಲಿ ಪ್ರವೇಶಿಸಿ ಮೀನಾಕ್ಷಿ ದೇವಿಯ ಪೂಜೆಯನ್ನು ಕಂಡು ಶಿವನಾಮ ಸ್ಮರಿಸುತ್ತ ತೃಪ್ತಿಪಡುತ್ತ ದುಷ್ಟರನ್ನು ತ್ಯಾಗ ಮಾಡಿ ನದಿ ತಟಾಕಕ್ಕೆ ಹೋದನು. ಅಲ್ಲಿಯ ಏಕಾಂತ ಸ್ಥಾನದಲ್ಲಿ ಸಿದ್ಧನು ಶಯನ ಮಾಡಿದನು. ಜಗಳ ಮಾಡಿದ ವಿಪ್ರನು ಸಿದ್ಧನನ್ನು ಹುಡುಕುತ್ತ ಆ ಏಕಾಂತಸ್ಥಾನಕ್ಕೆ ಆಗಮಿಸಿ, 'ಹೇ ಸ್ವಾಮಿಗಳೇ, ಕ್ಷುಲ್ಲಕತನದಿಂದ ನಿನ್ನನ್ನು ಬಿಟ್ಟು ಮನೆಗೆ ಹೋದದ್ದು ತಪ್ಪಾಯಿತು. ನನ್ನ ಮೇಲಿನ ಕರುಣೆಯಿಂದ ನಮ್ಮ ಮನೆಗೆ ಅನ್ನ ಪ್ರಸಾದಕ್ಕೆ ಬರಬೇಕು” ಅಂತಾ ಪ್ರಾರ್ಥಿಸಿದನು. ಅದಕ್ಕೆ ಸಿದ್ಧಭಾರತಿಯು, "ಅಯ್ಯಾ ವಿಪ್ರನೆ, ನಡೆಸುತ್ತ ನನ್ನನ್ನು ನಿಮ್ಮ ಮನೆಗೆ ಕರೆದೊಯ್ದು ಅನ್ನವನ್ನು ನೀಡಲು ಬರುವ ಫಲದ ನೂರುಪಟ್ಟು ನೀನು ಇಲ್ಲಿಗೆ ತಂದು ಅನ್ನವನ್ನು ನೀಡಿದರೆ ಫಲ ಪ್ರಾಪ್ತಿಯಾಗುವುದು ಅಂತಾ " ಹೇಳಿದ ಕೂಡಲೇ ಆ ಬ್ರಾಹ್ಮಣನು ಮನೆಗೆ ಹೋಗಿ ಮೃಷ್ಟಾನ್ನವನ್ನು ತೆಗೆದುಕೊಂಡು ಬಂದು ಸಿದ್ದನಿಗೆ ನೀಡಲು ತೃಪ್ತಿಪಟ್ಟನು ಮತ್ತು ಬ್ರಾಹ್ಮಣನಿಗೆ ಶುಭಾಶೀರ್ವಾದ ಮಾಡಿದನು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಕೃಷ್ಣಾ ನದಿಯ ತೀರದಲ್ಲಿ ಹಠಯೋಗಿಗೆ ಯೋಗ ಸಾಧನೆಗಳ ಕುರಿತು ಹೇಳಿದ ಆರೂಢ ಭಾಗ-1
ಎಲ್ಲಾ ಕಥೆಗಳ ಲಿಂಕಗಳು
👉 ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)
«««««ಓಂ ನಮಃ ಶಿವಾಯ »»»»»»»
