ಕೃಷ್ಣಾ ನದಿಯ ತೀರದಲ್ಲಿ ಹಠಯೋಗಿಗೆ ಯೋಗ ಸಾಧನೆಗಳ ಕುರಿತು ಹೇಳಿದ ಆರೂಢ ಭಾಗ-1

🧘‍♂️ಕೃಷ್ಣಾ ನದಿಯ ತೀರದಲ್ಲಿ ಹಠಯೋಗಿಗೆ  ಯೋಗ ಸಾಧನೆಗಳ ಕುರಿತು ಹೇಳಿದ ಆರೂಢ ಭಾಗ-1 


ಮಧುರೆಯಿಂದ ಸಿದ್ದನು ಹೊರಟು ಅನೇಕ ಪುರಗಳನ್ನು ನೋಡುತ್ತ ರಾಮನಾಥಪುರ ಪ್ರವೇಶಿಸಿ, ಅಲ್ಲಿ ಬ್ರಹ್ಮಾಕಾರ ವೃತ್ತಿಯಲ್ಲಿದ್ದ ಜ್ಞಾನಿಗಳ ದರುಶನ ಪಡೆದು, ನವಪಾಷಾಣ, ಹರಬಲಾಖಾತ ದಾಟಿ ರಾಮೇಶ್ವರಕ್ಕೆ ಬಂದು ರಾಮೇಶ್ವರನ ದರುಶನ ಪಡೆದು ರಾಮನ ಝರಿಗೆ ಬಂದನು. ಕೃಷ್ಣಾನದಿಯ ತೀರದಲ್ಲಿಯ ಗುಹೆಯಲ್ಲಿ ಪ್ರಾಣಾಯಾಮ ಮಾಡುತ್ತಿದ್ದ ಹಠಯೋಗಿಯನ್ನು ಕಂಡನು. ಆತನನ್ನು ಕುರಿತು ಸಿದ್ದನು ''ಹೇ  ಯತಿಯೇ ನೀನು ಮಾಡುತ್ತಿರುವ ಪ್ರಾಣಾಯಾಮ ಯಾವುದು?  ಕ್ರಮಬದ್ಧವಿದೆಯೋ' ಎಂದು ಕೇಳಲು, ಆ ಯೋಗಿಯು 'ತಾನು ಮಾಡುತ್ತಿರುವುದು ವೈಕೃತ ಅರಸಗರ್ಭ ಪ್ರಾಣಾಯಾಮ, ದೇಹವನ್ನು ಹಗುರು ಮಾಡಿ ನೇತ್ರ ನೈರ್ಮಲ್ಯ, ಜಠರಾಗ್ನಿ ಸ್ಫೂರ್ತಿಯಾಗಿ ಆರೋಗ್ಯ ಲಭಿಸುವ ಆಸನ ಸಿದ್ಧಿಯಾಗಿರುವುದು. ಹೆಚ್ಚಿನ ಯೋಗಸಾಧನೆಗಳನ್ನು ನನಗೆ ತಿಳಿಸಬೇಕೆಂದು ನಮ್ರತೆಯಿಂದ ಸಿದ್ದನನ್ನು ಕುರಿತು ಪ್ರಾರ್ಥಿಸಿದನು. ಆಗ ಸಿದ್ದ ಬಾಲಕನು ಆ ಯೋಗಿಗೆ 'ಹೇ ಯತಿಯೇ ಮಂತ್ರ (ಧ್ಯಾನ) ಯೋಗ ಲಯಯೋಗ, ಹಠಯೋಗ, ರಾಜಯೋಗ ಹೀಗೆ ನಾಲ್ಕು ಯೋಗಗಳಿರುವವು.

🕉️ (ಅ) ಮಂತ್ರಯೋಗ:-🌺

ಶ್ರೋ ಬ್ರ ಸದ್ಗುರುವನ್ನು ಸೇವಿಸಿ ಆತನ ಕರುಣೆಗೆ ಪಾತ್ರರಾಗಿ ಆತನಿಂದ ಮಂತ್ರೋಪದೇಶವನ್ನು ಪಡೆಯಬೇಕು. ಆ ಮಂತ್ರಕ್ಕೆ ಬೀಜಯಾವುದು, ಶಕ್ತಿದೇವತೆ ಯಾವುದು? ಛಂದ, ಋಷಿಯಾರು? ಇತ್ಯಾದಿ ನ್ಯಾಸದ ವಿವಿಧ ಅಂಗಗಳನ್ನು ಗುರುಮುಖದಿಂದ ತಿಳಿದುಕೊಳ್ಳಬೇಕು. ಉಚಿತಾಸನದಲ್ಲಿ ಕೂತು ನಿರ್ಮಲವಾಗಿ ನ್ಯಾಸಗಳನ್ನು ಮಾಡುತ್ತಾ ಭೃಕುಟಿಯ ಮಧ್ಯದಲ್ಲಿ ರತ್ನಖಚಿತ ಸಿಂಹಾಸನದ ಸಂಕಲ್ಪ ಮಾಡಿ ಅದರ ಮೇಲೆ ಕಪ್ಪುಗೊರಳಿನ ನೀಲಕಂಠನ ಮೂರ್ತಿಯನ್ನು ವಿರಾಜಿಸಬೇಕು. ಆತನ ಶಿರದ ಮೇಲೆ ಝಗ್ ಝಗ್ ಪ್ರಕಾಶಮಾನ ಕಿರೀಟವನ್ನು ಹಾಕಿರಬೇಕು. ಅಭಯ ಹಸ್ತದಿ ಪ್ರಫುಲ್ಲಿತವದನ ಶಿವ ಧ್ಯಾನ ಮಾಡುತ್ತ ಆತನ ಪದಗಳಲ್ಲಿ ಮಂತ್ರಪುಷ್ಪಗಳನ್ನು ಅರ್ಪಿಸುವುದೇ ಮಂತ್ರಯೋಗವಾಗುವುದು.

🕉️(ಬ) ಲಯಯೋಗ :-✡️

ಹೇ ಯತಿಯೇ ಕೇಳು ಮಂತ್ರಯೋಗದಲ್ಲಿ ಹೇಳಿದ ಪ್ರಕಾರ ಧ್ಯಾನ ಮಾಡುತ್ತಾ ಮಾಡುತ್ತಾ ಆ ಮೂರ್ತಿಯನ್ನು ತದೇಕ ದೃಷ್ಟಿಯಿಂದ ನೋಡುತ್ತಿರಬೇಕು. ಹೀಗೆ ವೈಕೃತ ಪ್ರಾಣಾಯಾಮದಿಂದ ಪ್ರಾಣ ಮನಸ್ಸುಗಳು ಹೃದಯಪದ್ಮದಲ್ಲಿ ವಿರಾಜಮಾನನಾದ ಭಗವಾನ್ ಶಂಕರನಲ್ಲಿ ಲಯ ಹೊಂದುವದರಿಂದ ಲಯಯೋಗವಾಗುವುದು. ಆಗ ಪ್ರಣವದ ಧ್ವನಿಯು ಪ್ರತಿಧ್ವನಿತವಾಗಿ ಆನಂದ ಅವಿರ್ಭವಿಸುವುದು. ಇದರಿಂದ ಮುಕ್ತಿ ಸೋಪಾನವಾಗುವುದು ಅಂತಾ ಹೇಳಿದನು.

🕉️ (ಕ) ಹಠಯೋಗ :✡️
 'ಹೇ ಯೋಗಿಯೇ ಕೇಳು. ಕಠಿಣವಾದ ಅಷ್ಟಾಂಗ ಸಾಧನೆ, ಷಟ್ಕರ್ಮಗಳನ್ನು ಮಾಡುತ್ತ ಈ ಸೂಕ್ಷ್ಮ ಶರೀರದಲ್ಲಿಯ ಆಧಾರಾದಿ ನವಚಕ್ರಗಳಲ್ಲಿಯ ವಿರಾಜಮಾನರಾದ ಅಧಿದೈವತೆಗಳನ್ನು ತಿಳಿದು ಕುಂಭಕದ ಮುಖಾಂತರ ಪ್ರಾಣವನ್ನು ತನ್ನ ವಶದಲ್ಲಿರಿಸಿಕೊಳ್ಳುವುದೇ ಹಠಯೋಗವು, ಯೋಗಕೃತಿಗಳ ಪ್ರಕಾರ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಅಂತಾ ಈ ಹಠಯೋಗದ ಅಷ್ಟಾಂಗ ಸಾಧನೆಗಳು.
 
🙏ಯಮ- 🌷

ಈ ಅಂಗದ ಸಾಧನೆಗಳಲ್ಲಿ ಅಹಿಂಸಾ, ಸತ್ಯ, ಆಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, ಕ್ಷಮಾ, ಧೃತಿ, ಆರ್ಜವ, ದಯೆ, ಶೌಚ ಹೀಗೆ ಹತ್ತು
ಪ್ರಕಾರಗಳಿವೆ. ಮನದಿಂದ, ವಾಣಿಯಂದ, ಕೈಯಿಂದ ಯಾವುದೇ ಪ್ರಾಣಿಗೆ, ಮನುಷ್ಯನಿಗೆ ಕಿಂಚಿತ್ತಾದರೂ ಹಿಂಸೆ ಕಪ್ಪ ಕೊಡದೇ ಇರುವುದೇ ಅಹಿಂಸೆಯೆನಿಸುವುದು. ಕಪಟವಿಲ್ಲದೆ, ಕಠೋರವಾಗಿ ಇದ್ದುದನ್ನು ಇದ್ದಕ್ಕಿದ್ದಂತೆ ಹೇಳುವುದೇ ಸತ್ಯವೆನಿಸುವುದು. ಮನಸ್ಸಿನಿಂದಾಗಲಿ ವಾಣಿಯಿಂದಾಗಲಿ, ಶರೀರದಿಂದಾಗಲಿ ಯಾವುದೇ ಪ್ರಕಾರ ಯಾರಾದರೂ ಹಕ್ಕನ್ನು ಕಸಿದುಕೊಳ್ಳದೆ ಇರುವದು, ತೆಗೆದುಕೊಳ್ಳದೇ ಇರುವುದು, ಆಸ್ತೇಯವೆನಿಸುವುದು. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಇತ್ಯಾದಿಗಳ ಭೋಗ ಸಾಮಗ್ರಿಗಳನ್ನು ಸಂಗ್ರಹ ಮಾಡದೇ ಇರುವಿಕೆಯ ಅಪರಿಗ್ರಹವೆನಿಸುವುದು, ತೊಂದರೆ ಕೊಟ್ಟು ನಂತರ ಅದಕ್ಕೆ ತಿಳುವಳಿಕೆಯಿಂದ ಪಶ್ಚಾತ್ತಾಪ ಪಟ್ಟವರ ಮೇಲೆ ಪ್ರತಿ ಸೇಡು ತೀರಿಸಿಕೊಳ್ಳದೇ ಇರುವುದು ಕ್ಷಮಾ ಎನಿಸುವುದು. ಸುಖದುಃಖಗಳಲ್ಲಿ ಒಂದೇ ಸಮನಾಗಿ ವರ್ತಿಸಿ ಧೈರ್ಯ ತೋರುವುದೇ ಧೃತಿ ಎನಿಸುವುದು, ನಯವಿನಯತೆಯಿಂದ ಇರುವುದೇ ಆರ್ಜವ ಎನಿಸುವುದು. ಕಷ್ಟ ಕಾರ್ಪಣ್ಯದಲ್ಲಿರುವವರಿಗೆ ಸಹಾನುಭೂತಿ ತೋರುವುದೇ ದಯವೆನಿಸುವುದು. ದೇಹದ ಮಲಿನತೆ ಸ್ವಚ್ಛಗೊಳಿಸುವಿಕೆ ಹಾಗೂ ಮನಸ್ಸಿನಲ್ಲಿ ವಿಕಾರವಾದ ಭಾವನೆಯ ನೋವು ಆಗದಂತಹ ಮಾತುಗಳನ್ನು ಆಡುವುದೇ ಶೌಚವೆನಿಸುವುದು. ಈ ಹತ್ತು ಪ್ರಕಾರ ಸಾಧನೆಗಳು ಯಮಾಂಗದ ಸಾಧನೆಗಳಾಗಿವೆ.

🙏 ನಿಯಮ -✡️
 ಹರುಷ, ಲಜ್ಞಾ, ಆಸ್ತಿಕ್ಯ, ಜಪ, ತಪ, ಹರನಪೂಜಾ, ದಾನ, ವ್ರತ, ಶ್ರೇಷ್ಠತರ ಶಾಸ್ತ್ರಗಳಲ್ಲಿ ಆಸಕ್ತಿ, ಶ್ರವಣ ಈ ಹತ್ತು ಪ್ರಕಾರದ ಸಾಧನೆಗಳು ನಿಯಮಾಂಗದ ಸಾಧನೆಗಳು. ಇವುಗಳ ವಿವರ ಹೀಗಿವೆ - ಹರುಷ - ಸುಖ, ದುಃಖ, ಲಾಭ, ಹಾನಿ, ಯಶ, ಅಪಯಶ, ಸಿದ್ದಿ, ಅಸಿದ್ದಿ, ಅನುಕೂಲತೆ, ಪ್ರತಿಕೂಲತೆ ಇವೆಲ್ಲವುಗಳಲ್ಲಿ ಯಾವಾಗಲೂ ಭಾವಾವೇಶವಾಗದೆ ಪ್ರಸನ್ನ ಚಿತ್ತತೆಯಿಂದ ಇರುವುದೇ ಹರುಷವು.

🕉️ ಲಜ್ಞಾ ✡️ 
ಅಕ್ರಮ ವ್ಯವಹಾರ ಪಾಪಕರ್ಮಗಳಲ್ಲಿ ಆಸಕ್ತಿಯಾಗಲು ನಾಚಿಕೆಪಟ್ಟು ಅವುಗಳಿಂದ ದೂರಾಗುವುದೇ ಲಜ್ಞಾ ಎನಿಸುವುದು.

🕉️ ಆಸ್ತಿಕ್ಯ 🌷
 ಸರ್ವಶಕ್ತಿಮಾನ್ ಪರಮಾತ್ಮನಲ್ಲಿ ವಿಶ್ವಾಸ, ಶ್ರದ್ದಾ ಭಾವವುಳ್ಳವನಾಗುವುದೇ ಆಸ್ತಿಕ್ಯ  ಎನಿಸುವುದು. 

🕉️ಜಪ -🌺
 ಇಷ್ಟದೇವತೆಯ ನಾಮಸ್ಮರಣೆ, ಸ್ತೋತ್ರ ಮಾಡುವುದೇ ಜಪ ಎನಿಸುವುದು. 

🙏ತಪ -🌷
 ಮನಸ್ಸು ಮತ್ತು ಇಂದ್ರಿಯಗಳನ್ನು ನಿಗ್ರಹಿಸಿ ಧರ್ಮದಿಂದ ನಡೆಯುವುದೇ ತಪ ಎನಿಸುವುದು,

🕉️ಹರನಪೂಜಾ ✡️
ಪರಮಾತ್ಮನಲ್ಲಿ ಶ್ರದ್ಧಾ ಭಕ್ತಿಯಿಂದ ಭಜಿಸುವುದೇ ಹರಣಪೂಜಾ ಎನಿಸುವುದು. 🌺

🌺ದಾನ ✡️
 ತನ್ನ ಗಳಿಕೆಯಲ್ಲಿಯ ಕೆಲ ಭಾಗವನ್ನು ಸತ್ ಪಾತ್ರಕ್ಕೆ ಅರ್ಪಿಸುವುದೇ ದಾನವನಿಸುವುದು.

🙏ವ್ರತ 🕉️
ನಿಯಮಮಿತತನದಿಂದ ನಡೆದುಕೊಳ್ಳುವುದೇ ವ್ರತವೆನಿಸುವುದು. ಶ್ರೇಷ್ಟತರ ಶಾಸ್ತ್ರಗಳಲ್ಲಿ

🕉️ಆಸಕ್ತಿ 
ಅತ್ಯಂತ ದುಃಖ ನಿವೃತ್ತಿ ಪರಮಾನಂದ ಪ್ರಾಪ್ತಿಯ ವಿವಿಧ  ಮಾರ್ಗಗಳನ್ನು ತೋರಿಸುವ ಪರತರ ಶಾಸ್ತ್ರಗಳಲ್ಲಿ ಆಸಕ್ತಿವುಳ್ಳವರಾಗುವಿಕೆ - ಶ್ರವಣ- ಆಧ್ಯಾತ್ಮ ಚಿಂತನದ ಪ್ರವಚನಗಳ ಸಾಧನೆಯ ವಿವಿಧ ಹಂತಗಳು. 

🕉️ ಯಮ -ನಿಯಮಗಳ ಫಲ ✡️

ಯೋಗದರ್ಶನದಲ್ಲಿ ಪ್ರಸ್ತಾವನೆಯಾದ ಪ್ರಕಾರ 'ಅಹಿಂಸಾ ಪ್ರತಿಷ್ಠಾಯಾಂ ತತ್ ಸನ್ನಿದೌ ವೈರತ್ಯಾಗಃ ' 
ಅಂದರೆ ಅಹಿಂಸೆಯ ವ್ರತಾಚರಣೆಯಿಂದ ಆ ಯೋಗಿಯ ಸಮೀಪಕ್ಕೆ ಇರುವವರು ವೈರತ್ವದ ಅರ್ಥಾತ್ ಹಿಂಸಾವೃತ್ತಿಯನ್ನು ತ್ಯಾಗ ಮಾಡುತ್ತಾರೆ.
'ಸತ್ಯ ಪ್ರತಿಷ್ಠಾಯಾಂ ಕ್ರಿಯಾಫಲಾಶ್ರಯತ್ವಮ್ ' ಸತ್ಯವನ್ನು ಉತ್ತಮ ರೀತಿಯಿಂದ ಪಾಲನೆ  ಮಾಡುವವನ ವಾಣಿಯಲ್ಲಿ ಸಫಲತೆ ಬರುತ್ತದೆ. ಅಂದರೆ ಆತನು ಹೇಳುವುದೆಲ್ಲವು ಅದೇ ಪ್ರಕಾರ ಸತ್ಯವಾಗುತ್ತದೆ. 'ಅಸ್ತೇಯ ಪ್ರತಿಷ್ಟಾಯಾಂ ಸರ್ವರತ್ನೋಪಸ್ಥಾನಮ್' ಕಳುವು ತ್ಯಾಗ ಮಾಡುವವನಲ್ಲಿ ರತ್ನಗಳು ಪ್ರಾಪ್ತವಾಗುತ್ತವೆ.
ಸಮಸ್ತ ಜನತೆ ಆತನಲ್ಲಿ ವಿಶ್ವಾಸವನ್ನಿಡುತ್ತದೆ. 'ಬ್ರಹ್ಮಚರ್ಯ ಪ್ರತಿಷ್ಠಾಯಾಂ ವೀರ್ಯಲಾಭ' ಬ್ರಹ್ಮಚರ್ಯ ಪಾಲನೆಯಿಂದ ಶರೀರ, ಮನ ಮತ್ತು ಇಂದ್ರಿಯಗಳಲ್ಲಿ ಸಾಮರ್ಥ್ಯತೆ ಪ್ರಾಪ್ತಿಯಾಗುತ್ತದೆ. 'ಅಪರಿಗ್ರಹಸ್ಥೈರ್ಯ ಜನ್ಮಕಥಂತಾ ಸಂಬೋಧಃ' ವಿಷಯೋಪಭೋಗ ಸಾಮಗ್ರಿಗಳನ್ನು ಸಂಗ್ರಹ ಮಾಡದೇ ಇರುವುದರಿಂದ ವೈರಾಗ್ಯ ಮತ್ತು ಉಪರತಿ ಪ್ರಾಪ್ತಿಯಾಗಿ ಮನಸ್ಸಿನ ಸಂಯಮತನ ಒದಗುತ್ತದೆ. ಈ ಮನಸ್ಸಿನ ಸಂಯಮತೆಯಿಂದ ಭೂತ, ಭವಿಷತ್ ವರ್ತಮಾನ ಜನ್ಮಗಳ ಕಾರಣಗಳ ಬಗ್ಗೆ. ಜ್ಞಾನೋದಯವಾಗುತ್ತದೆ. 'ಶೌಚಾತ್ ಸ್ವಾ0ಗ ಜುಗುಪ್ಸಾ  ಪರೈರ ಸಂಸರ್ಗ' ತನ್ನ ಅಂಗಾಗಗಳ ಬಹಿರ್‌ಭಾಗವನ್ನು ಶುಚಿಯಿಂದ ಇಡಲು ಪ್ರಾಪ್ತಿಯಾಗುವ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳಲು ಅನ್ಯರ ಶರೀರ ಸಂಸರ್ಗದಲ್ಲಿ ನಿರಾಸಕ್ತಿಯಾಗುತ್ತದೆ.
'ಸತ್ವಶುದ್ದಿ ಸೌಮನಸ್ಯೆಕಾಗ್ರೆ  ಇಂದ್ರಿಯ ಜಯಾತ್ ಅತ್ಮದರ್ಶನ ಯೋಗ್ಯತ್ವಾನಿ ಚ' ಅಂತಃಕರಣದ ಪವಿತ್ರತೆಯಿಂದ ಮನಸ್ಸಿನ ಪ್ರಸನ್ನತೆ, ಏಕಾಗ್ರತೆ, ಇಂದ್ರಿಯಗಳ ನಿಯಂತ್ರಣ ಮತ್ತು ಆತ್ಮ ಸಾಕ್ಷಾತ್ಕಾರದ ಯೋಗ್ಯತೆ ಪ್ರಾಪ್ತಿಯಾಗುತ್ತದೆ, ಸಂತೋಷ ದಿಂದ ಸುಖದ ಪ್ರಾಪ್ತಿಯಾಗುವುದು. 'ಕಾಯೇಂದ್ರಿಯ ಸಿದ್ಧಿರಶುದ್ಧಿಕ್ಷಯಾತ್ತ  ಪಸಃ' ತಪಸ್ಸಿನಿಂದ ಮಲದೋಷ ನಿವಾರಣೆ ಅಂದರೆ ಪಾಪಗಳು ನಾಶವಾಗುವುದರಿಂದ ಅಣಿಮಾದಿ ಸಿದ್ಧಿಗಳು ದೂರದೃಷ್ಟಿ ಇತ್ಯಾದಿಗಳು ಪ್ರಾಪ್ತಿಯಾಗುತ್ತವೆ. 'ಸ್ವಾಧಯಾಯಾಧಿಷ್ಠದೇವತಾ ಸಂಪ್ರಯೋಗ' ತನ್ನ ಇಷ್ಟದೇವತಾ ನಾಮಸ್ಮರಣ, ಗುಣಗಾನ ಪಠನ, ಪಾಠನ, ಶ್ರವಣ ನಿಧಿದ್ಯಾನಗಳಿಂದ ಸಾಕ್ಷಾತ್ ದರ್ಶನ ಆಗುತ್ತದೆ. 'ಸಮಾಧಿಸಿದ್ದೀರೀಶ್ವರ ಪ್ರಣಿಭಾತ್' ಪರಮಾತ್ಮನ ಪೂಜಾ, ಧ್ಯಾನ ಮಾಡುತ್ತ ಹೋದಂತೆ ಸಮಾಧಿ ಪ್ರಾಪ್ತಿಯಾಗುವುದು.
(ಮುಂದಿನ ಭಾಗದಲ್ಲಿ ಮುಂದುವರೆಯುದು )

ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ


ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಹಠಯೋಗಿಗೆ ಯೋಗ ಸಾಧನೆಗಳ ಕುರಿತು ಹೇಳಿದ್ದು ಭಾಗ-2,
ಎಲ್ಲಾ  ಕಥೆಗಳ ಲಿಂಕಗಳು 
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉  
3)

«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ