ತಿರುಕಂಭಟ್ಟನಿಗೆ ಮಾಂಡಕ್ಯೋಪನಿಷತ್ತನ್ನು ಬಾಧಿಸಿದ ಸಿದ್ಧಾರೂಢರು,

 🍁ತಿರುಕಂಭಟ್ಟನಿಗೆ ಮಾಂಡಕ್ಯೋಪನಿಷತ್ತನ್ನು ಬಾಧಿಸಿದ ಸಿದ್ಧಾರೂಢರು,




ಒಂದಾನೊಂದು ದಿನ ಹುಬ್ಬಳ್ಳಿಯಲ್ಲಿ ವಾಸವಾಗಿದ್ದ, ಬ್ರಾಹ್ಮಣರಲ್ಲಿ ಶ್ರೇಷ್ಠನು ಉತ್ತಮ ಅಧಿಕಾರಿಯಾಗಿದ್ದ ತಿರುಕಂಭಟ್ಟನು ಸಿದ್ಧಾರೂಢರಲ್ಲಿ  ಆಗಮಿಸಿ, ಅವರ ಪೂಜ್ಯ ಪಾದಪದ್ಮಗಳಿಗೆ ಶಿರಸಾಷ್ಟಾಂಗ ನಮಸ್ಕರಿಸಿ, ಎದ್ದು ಅಂಜಲಿ ಬದ್ಧನಾಗಿ ಕೈಜೋಡಿಸಿ ಪ್ರಾರ್ಥಿಸುತ್ತಾ, ಹೇ ಪರಮ ಗುರುವೇ, ಪೂರ್ವ ಜನ್ಮದಲ್ಲಿ ಋಷಿಗಳ ಸೇವೆ ಮಾಡಿದ ಫಲದಿಂದ ವರ ಮುಮುಕ್ಷತ್ವ ಪಡೆಯುವ ನರಜನ್ಮ ಬಂದಿದೆ. ಈ ಜನ್ಮ ಸಾಫಲ್ಯಕ್ಕಾಗಿ  ಉಪಾಯಗಳೇನು ಬೋಧ ಮಾಡಿ ನನ್ನನ್ನು ಧನ್ಯನನ್ನಾಗಿ ಮಾಡಬೇಕೆಂದು ಕೇಳಿಕೊಂಡನು. ಹರ್ಷಚಿತ್ತರಾದ ಶ್ರೀಗಳು ಆತನನ್ನು ತಮ್ಮೆಡೆಗೆ ಕೂಡ್ರಿಸಿ, ಹೇ ಭಟ್ಟರೇ, ಅನೇಕ ವಿಧ ಸಾಧನೆಗಳು ಸಾಧಿಸಿದ್ದರೂ ಮನಸ್ಸಿನ ಚಂಚಲತೆ ಅಡಗಲಿಲ್ಲ. ಪರಿಶುದ್ಧ ಮನಸ್ಸುಗಲು ಅನನ್ಯ ಚಿಂತನದ  ಶ್ರೇಷ್ಠ ಪ್ರಣವದ ಉಪಾಸನೆಯನ್ನು ಮಾಡು ಅಂತ ಹೇಳಿ, ಈ ಪ್ರಣವದ  ಉಪಾಸನೆಯ  ಕುರಿತು ಮಾಂಡೊಕ್ಯೋಪನಿಷತ್ತನ್ನು ಸವಿಸ್ತಾರವಾಗಿ ಬೋಧಿಸಿದರು. ಬೋಧಾಮೃತಪಾನ ಮಾಡಿದ ತಿರುಕ0ಭಟ್ಟರು, ಹೇ ಗುರುವೇ, ಈ ಮೊದಲು ತ್ರಿತಾಪಗಳಿಂದ ಸುಡುತ್ತಿದ್ದ ಹೃದಯಕ್ಕೆ ತಮ್ಮ ಬೋಧದಿಂದ ಶೀತಳವಾಯಿತು. ನಾನು ಕೃತಕೃತ್ಯನಾದೆನು ಅಂತ ಶ್ರೀಗಳ ಚರಣಗಳಲ್ಲಿ ನಮಿಸಿದರು. ಆಗ ಶ್ರೀಗಳು ಆತನನ್ನು ಕುರಿತು, ಹೇ ಭಟ್ಟರೆ ಈ ಜ್ಞಾನಾಮೃತದ ಅನುಭವವು ದೃಢತೆಯಾಗಬೇಕಾದಲ್ಲಿ ಈ ಶಾವಾಸ್ಯೋಪನಿಷತ್ತನ್ನು ಕನ್ನಡದಲ್ಲಿ ಭಾಷಾಂತರಿಸಿ ನಿರಂತರವೂ ಪಠಣ ಮಾಡಬೇಕು ಅಂತ ಮಾಡಿದ ಆಜ್ಞೆಗೆ ಆತನು ಶಿರಸಾವಹಿಸುನೆಂದು ಹೇಳಿದನು. ನಂತರ ಅಲ್ಲಿಯೇ ಇದ್ದ ನಿರ್ವಾಣಯ್ಯನನ್ನು ಕರೆದು ಕನ್ನಡದಲ್ಲಿ ಪಂಚೀಕರಣ ಗ್ರಂಥವನ್ನು ಬರೆದು ಜ್ಞಾನವನ್ನು ವೃದ್ಧಿಸುಕೊ ಅಂತಾ ಹೇಳಿದರು. ಬಳಿಕ ಕಬೀರದಾಸರನ್ನು ಕರೆದು, ದಶೋಪನಿಷತ್ತಿನ ಸಾರವನ್ನು ಕನ್ನಡದಲ್ಲಿ ಹಾಗೂ ಗುರು ಚರಿತ್ರೆಯನ್ನು ಅದಕ್ಕೆ ಜೋಡಿಸಿ ಪ್ರಕಟಿಸು ಅಂತ ಮಾಡಿದ ಆಜ್ಞೆಗೆ ಒಪ್ಪಿಕೊಂಡರು.


ನಿತ್ಯವೂ ಮಠದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಗಳು ದಶೋಪನಿಷತ್ ಬ್ರಹ್ಮ ಸೂತ್ರ, ಪಂಚದಶಿ, ಯೋಗವಾಸಿಷ್ಟ, ವಿಚಾರ ಸಾಗರ, ಭಗವದ್ಗೀತೆ, ನಿಜಗುಣರ ಪಂಚರತ್ನ ಇತ್ಯಾದಿ ಶಾಸ್ತ್ರಗಳನ್ನು ನಡೆಸುತ್ತಾ ಶಿಷ್ಯರಿಗೆ  ಬೋಧನೆ ಮಾಡುತ್ತಿದ್ದರು.


ನಾಲ್ಕನೇ ವರ್ಷದ ಜಾತ್ರೆಯು ಕೂಡಿದಾಗ  ಯಾರೋ ಒಬ್ಬಾತನು ಆಕಾಶದಲ್ಲಿ ಆಕಾಶಬುಟ್ಟಿ ಯನ್ನು ತೂರಿದನು. ಗಾಳಿಗೆ ಆಕಾಶಬುಟ್ಟಿ ತೇರಿಗೆ ತಾಕಿದ್ದರಿಂದ ಉರಿಹತ್ತಿತು. ಆಗ ಕೂಡಿದ ಭಕ್ತರು ಉರಿಯನ್ನು ಆರಿಸಿದರು, ಶುಭ ಪ್ರಸಂಗದಲ್ಲಿ ತೇರು ಸುಟ್ಟಿದ್ದರಿಂದ ಚಿಂತಾಕ್ರಾಂತರಾದರು. ಆಗ ಶ್ರೀಗಳು ಭಕ್ತರನ್ನು ಕುರಿತು, ಹೇ ಭಕ್ತರೇ ಇದು ಅಶುಭ ಶಕುನವಲ್ಲ. ನೀವು ಚಿಂತಿಸಬಾರದು. ಆಕಾಶದಿಂದ ಬಂದ ಪ್ರಕಾಶವು ತೇರಿಗೆ ತಾಗಲು ಅದೂ ಪ್ರಕಾಶ್ ಬೀರಿತು. ಬೆಳಕು ಕಾಣುವುದು ಅಶುಭವಲ್ಲ, ಅದು ಶುಭ ಸೂಚಕವಾಗಿದೆ ಅಂತಾ ಹೇಳಿದ್ದನ್ನು ಕೇಳಿ ಎಲ್ಲರೂ ಹರ್ಷಪಟ್ಟರು. ಮುಂದೆ ಯಥಾ ಪ್ರಕಾರವಾಗಿ ಬ್ರಹ್ಮಸೂತ್ರದ  ಪ್ರವಚನ ನಡೆಯಿತು.

👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ

👇👇👇👇

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಸಿದ್ಧಾರೂಢರಿಂದ ಜಯಕೃಷ್ಣನಿಗೆ ಮುಂಡಕೋಪನಿಷತ್ ಭೋದನೆ,

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»


Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ