ಸುರಪುರದ ರಾಜಸಭೆಯ ಪಂಡಿತ ಸುಬ್ಬಯ್ಯಶಾಸ್ತ್ರಿಯ ವಿದ್ಯಾಗರ್ವಭಂಗ ಮಾಡಿದ ಸಿದ್ಧ,

🕉️ ಸುರಪುರದ ರಾಜಸಭೆಯ ಪಂಡಿತ ಸುಬ್ಬಯ್ಯಶಾಸ್ತ್ರಿಯ ವಿದ್ಯಾಗರ್ವಭಂಗ ಮಾಡಿದ ಸಿದ್ಧ,



ಶ್ರೀ ಗಜದಂಡ ಸ್ವಾಮಿಗಳು ಮಠದ ಸರ್ವವಿಧ ಸೇವೆಯಲ್ಲಿ ಸಿದ್ದ ಬಾಲಕನು ಭಕ್ತಿ ಪೂರ್ವಕ ತನ್ಮಯತೆಯಿಂದ ಇರುವ ಸ್ಥಿತಿಯನ್ನು ಪರೀಕ್ಷಿಸಿ, ಈತನಲ್ಲಿಯ ಮೋಕ್ಷಾಪೇಕ್ಷೆಯ ಅಧಿಕಾರಿ ಲಕ್ಷಣವನ್ನು ಗುರ್ತೈಸಿ, ಆತನನ್ನು ಶಾಸ್ತ್ರ ಶ್ರವಣ, ಮನನ, ನಿಧಿಧ್ಯಾಸದಲ್ಲಿ ತೊಡಗಿಸಿದರು. ಏಕಾಗ್ರಚಿತ್ತದಿಂದ ಶ್ರವಣಾನಂತರ ಮನನ, ನಿಧಿಧ್ಯಾಸನಗಳಲ್ಲಿ ಸಿದ್ದನು ಮಗ್ನನಾಗಿರುತ್ತಿದ್ದನು. ಹೀಗೆಯೇ ಕೆಲಕಾಲವಾದ ನಂತರ ಒಂದಾನೊಂದು ದಿನ ಸುರಪುರದ ರಾಜಸಭೆಯ ಪಂಡಿತ ಸುಬ್ಬಯ್ಯ ಶಾಸ್ತ್ರಿಯು ಶ್ರೀಗಳ ಮಠಕ್ಕೆ ಆಗಮಿಸಿದರು. ಆ ಸಮಯದಲ್ಲಿ ಶ್ರೀಗಳು ತಮ್ಮ ಶಿಷ್ಯರಿಗೆ ಶಾಸ್ತ್ರ ಶ್ರವಣ ಮಾಡಿಸುತ್ತಿದ್ದರು. ಆಗ ಸುಬ್ಬಯ್ಯ ಶಾಸ್ತ್ರಿಯು ''ಸ್ವಾಮಿಗಳೇ ನಿಮ್ಮ ಶಿಷ್ಯರಿಗೆ ಯಾವ ಶಾಸ್ತ್ರದ ಬೋಧನೆಯನ್ನು ಮಾಡಿಸುತ್ತಿರುವಿರಿ?" ಅಂತಾ ಕೇಳಲು ಅದಕ್ಕೆ ಸ್ವಾಮಿಗಳು ಉಪನಿಷತ್ ಅಂತಾ ಉತ್ತರಿಸಿದರು.

ಆಗ ಶಾಸ್ತ್ರೀ ಸಭಿಕರನ್ನು ಕುರಿತು "ಉಪನಿಷತ್''  ಈ ಶಬ್ದಕ್ಕೆ ಅರ್ಥ ಮಾಡುವವರೇ ಈ ಧರಣಿಯೊಳಗೆ ಯಾರೂ ಇಲ್ಲ. ಹೀಗಿರುತ್ತಾ ಅದನ್ನು ಪಠಿಸುವುದಕ್ಕೆ ಅಧಿಕಾರಿ ಯಾರಿರಬೇಕು !” ಎಂದು ನುಡಿದದ್ದನ್ನು ಕೇಳಿ, ಸಭಾಸದರೆಲ್ಲ  ಚಕಿತರಾದರು. ಸ್ವಾಮಿಗಳು ಈ ವಾಕ್ಯವನ್ನು ಕೇಳಿ, ಈತನು ವಿದ್ಯೆಯಿಂದ ಉನ್ಮತ್ತನಾಗಿರುವನು; ಇವನ ಗರ್ವ ಹರಣ ಮಾಡಬೇಕೆಂದು ಆಲೋಚಿಸಿದರು. ಅಷ್ಟರಲ್ಲಿ ಸಿದ್ಧನಾಥನು ಎದ್ದುಬಂದು, ವಿನೀತ ಭಾವದಿಂದ
ಸದ್ಗುರುಗಳ ಮುಂದೆ ಕೈಜೋಡಿಸಿ ನಿಂತು, “ಹೇ ಮಹಾಸ್ವಾಮೀ, ನನ್ನ ವಿನಂತಿಯನ್ನು ಪರಾಮರ್ಶಿಸಬೇಕು. ನನಗೆ ತಾವು ಆಜ್ಞೆಯನ್ನು ಕೊಟ್ಟಿದ್ದಾದರೆ, ಈ ಶಾಸ್ತ್ರೀಯು  ನುಡಿದ ವಚನವನ್ನು ನಾನು ಖಂಡನ ಮಾಡುವೆನು,” ಎಂದು ಹೇಳಿದ್ದು ಕೇಳಿ ಗುರುಗಳು ಸಿದ್ಧನಿಗೆ  ಆಜ್ಞೆಯನ್ನು ಕೊಟ್ಟರು.

ಆಗ ಸಿದ್ದ ಬಾಲಕನು ''ಶಾಸ್ತ್ರಿಗಳೇ ಕೇಳಿರಿ ಉಪನಿಷತ್ ಶಬ್ದದ ಅರ್ಥವೇನಂದರೆ ಬ್ರಹ್ಮ ಆತ್ಮ ಐಕ್ಯ ಬೋಧಕ ಬ್ರಹ್ಮವಿದ್ಯೆ'' ಅಂತಾ ಹೇಳಲು, ಶಾಸ್ತ್ರಿಯು “ಹೇ ಬಾಲಕನೇ ವಿದ್ಯೆಗೆ ಅರ್ಥವನ್ನು ಯಾವ ರೀತಿ ಮಾಡುವಿ'' ಅಂತಾ ಪ್ರಶ್ನಿಸಿದರು.

ಆಗ ಸಿದ್ದಬಾಲಕನು, “ಹೇ ಶಾಸ್ತ್ರಿಗಳೇ, ನೀವು ಮಹಾಭಾರತ ಕೇಳಿದ್ದೀರಲ್ಲವೇ ಮೊದಲಿಗೆ ಕರ್ಣನು ತಾನು ರಾಧೇಯನು ಅಂತಾ ತಿಳಿದುಕೊಂಡಿದ್ದನಲ್ಲವೇ ಭಗವಾನ್ ಶ್ರೀಕೃಷ್ಣನು ಕರ್ಣನಿಗೆ ತಾನು ಕುಂತೀಪುತ್ರ ಕೌಂತೇಯನು ಅಂತಾ ಮನದಟ್ಟಾಗುವಂತೆ ತಿಳಿಸಿದ ನಂತರ ಮೊದಲಿನ ರಾಧೇಯನೆಂಬ ತಿಳುವಳಿಕೆ ಅಜ್ಞಾನವು ಹೋಗಿ ತಾನು ಕೌಂತೇಯ ಅಂತಾ ನಿಜವಾದ ಜ್ಞಾನವು ಹೇಗಾಯಿತೋ ಅದರಂತೆ ತಪ್ಪುತಿಳುವಳಿಕೆಯ ಭ್ರಮಾತ್ಮಕ ಅಜ್ಞಾನ ನಾಶವಾಗಿ ನಿಜವಾದ ಜ್ಞಾನ ಪ್ರಾಪ್ತಿಯ ಮಥಿತಾರ್ಥವೇ ವಿದ್ಯೆ ಅಂತಾ ಅರ್ಥೈಸಬೇಕು.
ಮೊದಲಿಗೆ ಅಧಿಕಾರಿಯಾದ ಶಿಷ್ಯರ ಹೃದಯದಲ್ಲಿಯ ಅಜ್ಞಾನವನ್ನು ನಾಶಿಸಲು ಉಪನಿಷತ್ ಧಾತುವಿನ ಅರ್ಥ ಮೂರು ಪದಗಳಲ್ಲಿದೆ' ಅಂತಾ ಹೇಳಿದನು.

ಆಗ ಶಾಸ್ತ್ರಿಯು 'ಬಾಲಕನೇ ಆ ಮೂರು ಪದಗಳ ಅರ್ಥ ಯಾವುವು?' ಅಂತಾ ಕೇಳಲು ಸಿದ್ಧಬಾಲಕನು ಶಾಸ್ತ್ರಿಗಳೇ ಕೇಳಿರಿ'
ಅಂತಾ ಹೇಳತೊಡಗಿದನು. 

" ಸದೇರುಪನಿ ಪೂರ್ವಸ್ಯಕ್ವಿಪಿಚೋಪನಿಷದ್ಭವತ್ |
ಮಂದೀಕರಣ ಭಾವಾಚ್ಚಗರ್ಭಾದೇಃಶಾತನಾತ್ತಥಾ || 

ಹೇ ಶಾಸ್ತ್ರೀ, ಪಾಣಿನಿ ಸೂತ್ರದಲ್ಲಿ ಹೇಳಿದಂತೆ ಷದ್ಲ, ವಿಶರಣ, ಅವಸಾಧನ ಹೀಗೆ ಮೂರು ಪದಗಳಿರುತ್ತವೆ. ನಂತರ ಉಪನಿಷತ್ ಶಬ್ದವಿಹುದು. ಇದರಲ್ಲಿ ಉಪನಿಷತ್ ಎರಡು ಪದಗಳಿಗೆ ಉಪಸರ್ಗ ಪ್ರತ್ಯಯ ಧಾತು ಇರಲು ಮೂರು ಪ್ರಕಾರದ ಅರ್ಥವನ್ನು ವಿಷದೀಕರಿಸುವೆ ಚೆನ್ನಾಗಿ ತಿಳಿದುಕೋ ಮಂದ ಜಿಜ್ಞಾಸಗಳ ದುಃಖಕ್ಕೆ ಕಾರಣಗಳಾದ ಹುಟ್ಟು ಮುಪ್ಪು ಸಾವುಗಳನ್ನು ಶಿಥಿಲಮಾಡುವದು ಅಂತಾ ಉಪನಿಷತ್‌ನ ಅರ್ಥವಿದೆ. ಇದಕ್ಕೆ ವಿಶರಣ ಪದಕ್ಕೆ ಸಂಬಂಧವಿರುವದು. ಯಾರು ಬ್ರಹ್ಮಜಿಜ್ಞಾಸೆ ಮಾಡುವುರೋ ಅಂಥ ಸಾಧಕರನ್ನು
'ಉಪ' ಎಂದರೆ ಸಮೀಪ
'ನಿ"ಎಂದರೆ ಒಯ್ಯುತ್ತದೆ
 "ಷತ್" ಎಂದರೆ  ಸ್ಥಾಪನೆ ಮಾಡುವದು ಹೀಗೆ ಅರ್ಥವಾಗುತ್ತದೆ. ಇದು ೨ನೇ ಪದಕ್ಕೆ ಸಂಬಂಧವಾಗಿದೆ. ಪ್ರೌಢವಾದ ತತ್ವದಲ್ಲಿ ಅವಿದ್ಯೆಯನ್ನು ತೋರಿಸುವದೇ ೩ನೇ ಪದವಾದ ಅವಸಾಧನ ಈ ಪ್ರಕಾರ ಇರುವದು ಮೂಢಶಾಸ್ತ್ರೀಯೇ ಉಪನಿಷತ್ ಅಂದರೆ ಜ್ಞಾನ, ಜ್ಞಾನವೆಂದರೆ ಉಪನಿಷತ್ ಅಂತಾ ವೇದಗಳ ಗರ್ಭದಲ್ಲಿಯ ರಹಸ್ಯವನ್ನು ಬಲ್ಲಂಥ ಶಿವಯೋಗಿ ತಿಳಿಸಬಲ್ಲನು.ಕಾರಣ ಭೇದರಹಿತ ಜ್ಞಾನವನ್ನು ಕೊಡುವಂತಹದು ಉಪನಿಷತ್. ಈ ಭೂಮಂಡಲದಲ್ಲಿ ಜ್ಞಾನ ಸಾಧನೆಯ ಸಾಧಕರು ಹಲವರುಂಟು. ಭೇದವನ್ನು ತಿಳಿಯದೇ ಮನಸ್ಸಿಗೆ ಬಂದಂತೆ ನುಡಿಯಬೇಡಾ ಬ್ರಾಹ್ಮಣ ಶಾಸ್ತ್ರೀಯೇ.

ಇನ್ನು ಬ್ರಾಹ್ಮಣರೇ ಬ್ರಹ್ಮವಿದ್ಯೆಗೆ ಅಧಿಕಾರಿ ಅಂತಾ ನೀನು ನುಡಿದಿಯಾದರೆ, ಮೊದಲಿನಿಂದಲೂ ಅನ್ಯಜಾತಿಗಳಲ್ಲಿ ಅಧಿಕಾರಿಗಳಿಲ್ಲವೇ? ನಿಮ್ಮ ಗೋತ್ರವನ್ನು ತಿಳಿಯಲು ನೀವು ಬ್ರಾಹ್ಮಣರಲ್ಲ. ಇದನ್ನು ತಿಳಿಸುವೆ. ವಜ್ರಸೂಚಿ ಉಪನಿಷತ್ತಿನಲ್ಲಿ ಬ್ರಾಹ್ಮಣರಾರು ಎಂಬ ಬಗ್ಗೆ ಆರು ಪ್ರಶ್ನೆಗಳನ್ನು ಮಾಡಿ ನಿಜವಾದ ಬ್ರಾಹ್ಮಣರಾರು ಎಂಬುದನ್ನು ಸಮತ್ವ ಭಾವದಿಂದ ಹೇಳಿದೆ. 

ಹೇ ಶಾಸ್ತ್ರೀಯೇ ಕೇಳು, ಕಾಣತಕ್ಕ ಈ ದೇಹಕ್ಕೆ ಬ್ರಹ್ಮಣ್ಯವೇ? ಜೀವತ್ವ ಬ್ರಾಹ್ಮಣವೋ? ತೋರುತಿಹ ಜಾತಿ ಬ್ರಾಹ್ಮಣವೋ? ಕರ್ಮದಿಗಳು, ಭೂರಿದಾನ ಇತ್ಮಾದಿ ಬ್ರಾಹ್ಮಣವೇ? "ನಿಜವಾದ ಜ್ಞಾನ ಮಾತ್ರ ಬ್ರಾಹ್ಮಣ ತಿಳಿದುಕೊ,

ಜೀವವು ಬ್ರಾಹ್ಮಣನೆಂದರೆ ತನ್ನ ಕರ್ಮಗಳಿಂದ ಅನೇಕ ಕ್ರಿಮಿಕೀಟಾದಿಗಳಲ್ಲಿ ಜನಿಸಿದ ಜೀವ ಬ್ರಾಹ್ಮಣನಲ್ಲ,

ಈ ಶರೀರಕ್ಕೆ ಬ್ರಾಹ್ಮಣನೆಂದರೆ ಈ ಶರೀರವನ್ನು ಸತ್ತ ನಂತರ ಸುಡುವಾಗ ಆತನ ಮಗನಿಗೆ ಬ್ರಹ್ಮಹತ್ಯೆ ದೋಷವಾಗುವದು.ಅಂತಾ ನೀನು ಒಪ್ಪಿಕೊಂಡಂತಾಗುವದು.

ಜಾತಿ ಬ್ರಾಹ್ಮಣನೆಂದರೆ, ಅನೇಕ ಋಷಿಗಳು ಪಶುಗಳಿಂದ ಪಕ್ಷಿಗಳಿಂದ ಜನಿಸಿರುವರು. ಊರ್ವಸಿಯಿಂದ ಜನಿಸಿದ ವಸಿಷ್ಠನು, ಅಂಬಿಗಾರಳಿಂದ ಜನಿಸಿದ ವ್ಯಾಸನು, ಜಂಬುಕದಿಂದ ಜನಿಸಿದ ಜಂಬುಕರು, ಹರಿಣಿಯಿಂದ ಶೃಂಗರುಷಿ,
ಹುತ್ತದಿಂದ ವಾಲ್ಮೀಕಿಮುನಿ,
ಕುಂಭಸಂಭವ ಅಗಸ್ತ್ಯನು,
ವಿಶ್ವಾಮಿತ್ರ ಗೌತಮ ಮುಂತಾದ ಋಷಿಗಳು ಬ್ರಾಹ್ಮಣರಲ್ಲವೇ? ಈ ಎಲ್ಲ ಋಷಿಮುನಿಗಳು ಬ್ರಹ್ಮವಿದ್ಯೆ ಪಾರಂಗತರಾಗಿ ಭ್ರಾಂತಿಮಯ ಜಾತಿಗಳನ್ನು ತೊರೆದು ಭೂಮಂಡಲದಲ್ಲಿ ಪೂಜ್ಯನೀ ಯರಾಗಿಲ್ಲವೇ? ಕಾರಣ ಶಾಸ್ತ್ರಿಯೇ, ಜಾತಿಯು ಹೇಗೆ ಬ್ರಾಹ್ಮಣ? ತಿಳುವಳಿಕೆ ಮಾಡಿಕೊ, ಜ್ಞಾನ ಬ್ರಾಹ್ಮಣನೆಂದರೆ ಎಲ್ಲ ಪ್ರಾಣಿಗಳಲ್ಲಿ ಜ್ಞಾನವುಂಟು ಪಾರಮಾರ್ಥಿಕ ಜ್ಞಾನವೆಂದರೆ ಎಲ್ಲ ವರ್ಣಗಳಲ್ಲಿ ಜ್ಞಾನಿಗಳು ಇರಲು ಇವರೆಲ್ಲರೂ ಬ್ರಾಹ್ಮಣರೇನು? ವಿವರವಾಗಿ ತಿಳಿದುಕೊಂಡರೆ ಜ್ಞಾನ ಬ್ರಾಹ್ಮಣನಲ್ಲ ಕರ್ಮ ಬ್ರಾಹ್ಮಣವೆಂದರೆ ಪ್ರಾರಬ್ದ ಸಂಚಿತ ಕರ್ಮ ಸರ್ವರಿಗಿರಲು ಬ್ರಾಹ್ಮಣರಾರು? ಷಟ್ಕರ್ಮವೇ ಬ್ರಾಹ್ಮಣ ಅಂದರೆ ಕರ್ಮವನ್ನು ತ್ಯಜಿಸಿದ ಮುನಿಗಳಿರುವರು. ಈ ಜಗತ್ತಿನಲ್ಲಿ ಪೂಜನೀಯರಾಗಿರುತ್ತಾರೆ. ಬಹಿರ್ಮುಖಿ ಶಾಸ್ತ್ರಿಯೇ ಕರ್ಮವನ್ನು ಬ್ರಾಹ್ಮಣ ಅಂತಾ ಹೇಳಬಾರದು. ದಾನ ಮಾಡುವದೇ ಬ್ರಾಹ್ಮಣ್ಯವೆಂದರೆ ಕ್ಷತ್ರಿಯರು, ವೈಶ್ಯರು, ಭಂಗಾರ, ರತ್ನ, ಧನ ಹೇರಳವಾಗಿ ದಾನ ಮಾಡವಂತೆ ದಾನದಿಂದಲೂ ಬ್ರಾಹ್ಮಣ್ಯವಿಲ್ಲ.

ಜಾತಿರಹಿತನು ಅಕಲಂಕ ಗುಣವುಳ್ಳವನು ಕ್ರೀಯಾತೀತ ಷಡ್ ಭಾವ ಅರಿಷಡ್ ವರ್ಗವಿಕಾರ ರಹಿತನು. ಅರಿವುರೂಪ ಪರಬ್ರಹ್ಮನ ತಿಳಿದು ಅವನಲ್ಲಿ ಲೀನವಾದ ಪರಮಹಂಸನೇ ನಿಜವಾದ ಬ್ರಾಹ್ಮಣನು. ಶಾಸ್ತ್ರಿ ನೀನೆಲ್ಲಿಯ ಬ್ರಾಹ್ಮಣಾ? ಬ್ರಹ್ಮಜಾನಾತಿ ಅಂದರೆ ಬ್ರಹ್ಮನನ್ನು ಅರಿತವನು ನಿಜವಾದ ಬ್ರಾಹ್ಮಣನು ಅಂತಾ ವೇದವು ಸಾರಿ ಸಾರಿ ಹೇಳಿದೆ. ಜಾತಿಯಿಂದ ಬ್ರಹ್ಮವಿದ್ಯೆ ತಿಳಿಯಲಾದೀತೇ? ಹಾಗೆ ನೀನು ಬ್ರಾಹ್ಮಣನಾಗಬಹುದೇ ಹೇಳು ಶಾಸ್ತ್ರಿ? ಈ ಎಲ್ಲ ವಿವರಗಳಲ್ಲಿ ಬರುವ ಅರ್ಥವ್ಯಾಪ್ತಿಯಿಂದ ಬ್ರಾಹ್ಮಣನಾರು ಎಂಬುದನ್ನು ತಿಳಕೊ" ಅಂತಾ ಸಿದ್ಧಬಾಲಕ ತನ್ನ ವಾಕ್‌ದಾಳಿಯಿಂದ ಸುಬ್ಬಯ್ಯ ಶಾಸ್ತ್ರಿಯಲ್ಲಿಯ ಗರ್ವಭಂಗ ಮಾಡಿದನು.


ಗರ್ವಭಾವನಾಶವಾಗಲು ಸುಬ್ಬಯ್ಯ ಶಾಸ್ತ್ರಿಯು 'ಹೇ ಬಾಲಕನೇ ನಿನ್ನ ವಾಣಿಯಲ್ಲಿಯ ಅರ್ಥ ಗರ್ಭಿತ ಸುಧಾಪಾನ ಮಾಡಿ ಧನ್ಯನಾದೆ. ಈತನು ತಪೋಭ್ರಷ್ಟನೋ? ಸಾಕ್ಷಾತ್ ಪರಶಿವನ ಪರಾವತಾರನಿರುವನೋ? ವಿದ್ಯಾಮೂರ್ತಿಯಾಗಿರುವನೋ?'' ಈ ಪ್ರಕಾರ ಅನೇಕ ವಿಧವಾಗಿ ಸ್ತುತಿಸುತ್ತ ಹೀನಮುಖನಾಗಿ ಅಲ್ಲಿಂದ ಹೋದನು. 

ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ


ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಸಿದ್ಧನು ಗುರು ಗಜದಂಡಸ್ವಾಮಿಗಳಿಂದ ಸಿದ್ಧಾರೂಢಭಾರತಿ ನಾಮಾಕಿಂತನಾಗಿದ್ದು
ಎಲ್ಲಾ  ಕಥೆಗಳ ಲಿಂಕಗಳು 
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಲು 👉📚

«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ