ಸಿದ್ಧನು ಗುರು ಗಜದಂಡಸ್ವಾಮಿಗಳಿಂದ ಸಿದ್ಧಾರೂಢಭಾರತಿ ನಾಮಾಕಿಂತನಾಗಿದ್ದು




ಅಂದಿನಿಂದ ಗಜದಂಡ ಸ್ವಾಮಿಯವರು ಶ್ರವಣಕಾಲದಲ್ಲಿ ಸಿದ್ಧನನ್ನು ನಿತ್ಯ ತಮ್ಮ ಸಮೀಪ ಕೂಡ್ರಿಸಿಕೊಂಡು ಮಹಾದ್ವಿಚಾರಗಳನ್ನು ಆತನಿಗೆ ಪ್ರೇಮದಿಂದ ಹೇಳುತ್ತಿದ್ದರು. ಒಂದು ದಿನ ಸಿದ್ಧನು ಗುರುಗಳನ್ನು ಕುರಿತು “ಗುರುಮಹಾರಾಜರೇ, ನನ್ನಗೆ ದಯವಿಟ್ಟು ಇದನ್ನು ಹೇಳಿರಿ. ಅದೇನೆಂದರೆ,

" ಷಟ್‌ಶಾಸ್ತ್ರಗಳ ಅರ್ಥ ನಿಶ್ಚಯವಾದ್ದರ ಚಿನ್ಹವೇನು ?ಎಂದು ಪ್ರಶ್ನೆ ಮಾಡಲು,
ಸದ್ಗುರುಗಳು -"ಎಲೈ ಶಿಷ್ಯನೇ ಕೇಳು, ಷಟ್‌ಶಾಸ್ತ್ರಗಳ ಅರ್ಥವು ಸಾಧನದಿಂದ ನಿಶ್ಚಯವಾದವನ ಚಿನ್ಹ ಯಾವುದೆಂದರೆ - ಆತನಿಗೆ ಸಂಶಯ ವಿಪರೀತ ಭಾವನೆಗಳು ರಹಿತವಾದ ಬ್ರಹಾತ್ಮಭಾವವು ಪ್ರಾಪ್ತವಾಗುವದು,” ಎಂದು ಉತ್ತರ ಕೊಡಲು,

ಸಿದ್ಧನು - "ಅಹಂ ಆತ್ಮಾ ಈ  ದ್ವೈತ ವಿದ್ಯೆಯಲ್ಲಿ ಐಕ್ಯತ್ವವು ಹ್ಯಾಗೆ ಘಟಿಸುವದು? " ಎಂದು ವಿನಯ ಭಾವದಿಂದ ಕೇಳಲು, ಗುರುಗಳಂದದ್ದು - “ಜೀವನಿಗೆ ದೇಹದಲ್ಲಿ ಎಲ್ಲಿ ತನಕ ಆತ್ಮಬುದ್ದಿ ಇರುವದೋ ಅಲ್ಲಿ ತನಕ ದ್ವೈತದ ಭಾಸವಿರುವದು. ಯಾವಾಗ್ಗೆ ದೇಹಾಭಿಮಾನವು ನಿಃಶೇಷ ಹೋಗಿ, ಅನ್ಯ ದೇಹದಂತೆ  ಸ್ವದೇಹವನ್ನು ಜೀವನು  ನೋಡುವನೋ, ಆಗ ಇವೆರಡರ ಐಕ್ಯಜ್ಞಾನವು ಸಹಜವಾಗಿ ಆಗುವುದು.

 "ಆಗ ಸಿದ್ಧನು ಪುನಃ ಗುರುಗಳಿಗೆ ವಿಚಾರಿಸುತ್ತಾನೆ- ''ಹೇ ಸದ್ಗುರುನಾಥನೆ, ಸರ್ವ ಪ್ರಪಂಚವು ನಮಗೆ ಪ್ರತ್ಯಕ್ಷವಾಗಿರುತ್ತಾ, ಇದೆಲ್ಲಾ ಮಿಥ್ಯೆಯೆಂದು ಹ್ಯಾಗಾನ್ನಬೇಕು ?” ಅದಕ್ಕೆ ಗುರುಗಳು ಹೇಳೈ ಶಿಷ್ಯನೇ ಈ ಪ್ರತ್ಯಕ್ಷ ಇಂದ್ರಿಯ ವ್ಯಾಪ್ತಿಯೋ, ವೃತ್ತಿವ್ಯಾಪ್ತಿಯೋ ಅಥವಾ ಚೈತನ್ಯವ್ಯಾಪ್ತಿಯೋ ? ಇಂದ್ರಿಯ ವ್ಯಾಪ್ತಿಯಂದರೆ, ಇಂದ್ರಿಯಗಳು ಜಡವಿದ್ದು ಜಡಭೂತಗಳಿಗೆ ವ್ಯಾಪಿಸಲಾರವು. ವೃತ್ತಿ ವ್ಯಾಪ್ತಿಯೆಂದರೆ ಜ್ಞಾನವಾಗುವದು ಅಸಂಭವವು. ಹ್ಯಾಗೆ ಘಟದ ಮೇಲೆ ಹಾಕಲ್ಪಟ್ಟ ವಸ್ತ್ರಕ್ಕೆ ಘಟಜ್ಞಾನವಾಗಲಾರದೋ ಹಾಗೆಯೇ ಘಟವನ್ನು ವ್ಯಾಪಿಸಿದಂಥಾ ಜಡವೃತ್ತಿಗೆ ಘಟಜ್ಞಾನವಾಗಲಾರದು. ಚೈತನ್ಯ ವ್ಯಾಪ್ತಿಯಿಂದ ಭೂತಗಳು ಪ್ರತ್ಯಕ್ಷವಾಗುತ್ತವೆ ಎಂದರೆ ವಿಷಯ ಮತ್ತು ವೃತ್ತಿಗತ ಚೈತನ್ಯ ಏಕವಿರುವದರಿಂದ, ಕೂಡಲೇ ಐಕ್ಯಜ್ಞಾನವು ಸಂಭವಿಸಬೇಕಾದೀತು. ಹಾಗಾಗುವುದಿಲ್ಲವಾದ್ದರಿಂದ ಚೈತನ್ಯವ್ಯಾಪ್ತಿಯೂ ಅಸಂಭವವು. ಹಾಗಾದರೆ ಪ್ರಪಂಚವು ಆಧ್ಯಾಸವೆಂದು ಹೇಳುವಿಯಾದರೆ, ಅಧ್ಯಾಸವೆಂಬುದು ಭ್ರಮೆ ಇದ್ದು ಮಿಥ್ಯವಾದ್ದರಿಂದ ಪ್ರಪಂಚವು ಸತ್ಯ ಹ್ಯಾಗಾಗುವದು ?" ಎಂದು ಕೇಳಿದ್ದಕ್ಕೆ ಸಿದ್ದನು,

 “ವ್ಯಾಪ್ತಿ ವಿನಹಾ ಸಾಮಾನ್ಯತ್ವದಿಂದ ಜಗತ್ತು ಪ್ರತೀತಿಯಾಗುವದು ಅಂದರೇನು ?” ಎಂದು ಕೇಳಲು, ಗುರುಗಳು, "ಪ್ರತ್ಯಕ್ಷದಿಂದ ಪ್ರತ್ಯಕ್ಷ ಬಾಧಿಸಲ್ಪಡುವದು. ಹ್ಯಾಗೆ ಬಾಲ್ಯ ಪ್ರತ್ಯಕ್ಷ ಬಾಧಿತವಾಗಿ ಯೌವನ ಪ್ರತ್ಯಕ್ಷ ಬರುವುದು, ಹಾಗೆ ಉತ್ತರ ಪ್ರತ್ಯಕ್ಷ ಬರುತ್ತಲೇ ಪೂರ್ವ ಪ್ರತ್ಯಕ್ಷ ಬಾಧಿಸಲ್ಪಡುವದು,” ಎಂದು ಉತ್ತರ ಕೊಟ್ಟರು.

ಆಗ ಸಿದ್ದನು “ಗುರುಗಳೇ, ಕರ್ಮಕಾಂಡದಿಂದ ಲಿಂಗಗ್ರಹಣವಾಯಿತು. ಈಗ ಜ್ಞಾನಕಾಂಡದಿಂದ ಜ್ಞಾನವಾದ  ಕೂಡಲೇ ಲಿಂಗಗ್ರಹಣ ವ್ಯರ್ಥವಾಯಿತು,'' ಹೀಗಂದು ಸಿದ್ಧನು ತನ್ನ ಕೊರಳೊಳಗಿನ ಲಿಂಗವನ್ನು ತೆಗೆದು, ಸದ್ಗುರುಗಳ ಪಾದದಲ್ಲಿಟ್ಟನು. ಇದನ್ನು ನೋಡಿ ಗುರುಗಳು,"ಸಿದ್ಧನೇ, ಇದು ಶಾಸ್ತ್ರವಿರುದ್ಧವಾಗುತ್ತದೆ," ಎಂದು ನುಡಿಯುವದು ಕೇಳಿ, ಸಿದ್ಧನು ಅಂದದ್ದು "ಸದ್ಗುರುಗಳೇ, ಚಿನ್ಮಯ ದೀಕ್ಷೆ ಸಿಕ್ಕಿದ ಮೇಲೆ ಶರೀರವು ಚೈತನ್ಯರೂಪವಾಯಿತು, ಎಂದು ಶಾಸ್ತ್ರದಲ್ಲಿ ಹೇಳುವುದು. 

ಶ್ಲೋಕ -ಲಿಂಗಮದ್ಯೆ ಜಗತ್ಸರ್ವಂ ಸರ್ವಂ ಲಿಂಗಮಯಂ ಜಗತ್ ಲಿಂಗ ಬಾಹ್ಯಾತ್ಪರಂ ನಾಸ್ತಿ
ತಸ್ಮಾಲಿಂಗಮಹಂ ಸದಾ ||1 |
ಲಿಂಗದೊಳಗೆ ಸರ್ವ ಜಗತ್ತಿರುವದು, ಸರ್ವ ಜಗತ್ತು ಲಿಂಗಮಯವು, ಲಿಂಗದ ಹೊರಗೆ ಎರಡನೇದೇನೂ ಇಲ್ಲ. ಆದ್ದರಿಂದ ಸದಾ ನಾನು ಲಿಂಗವೇ ಇದ್ದೇನೆ, ಎಂಬ ಶಾಸ್ತ್ರಕ್ಕನುಸರಿಸಿ, ಸದ್ಯೋ ನಿರ್ವಾಣ ಭಾವವನ್ನು ಯಾವಾತನು ಹೊಂದಿರುವನೋ ಆತನಿಂದ ಜ್ಞಾನಕರ್ಮಗಳೆರಡೂ ಸಿದ್ದಿಸಲಾರವು. ಇದೇ ಅರ್ಥದಿಂದ ಐತರೇಯ ಶ್ರುತಿಯ ಪ್ರಥಮ ಕಾಂಡದಲ್ಲಿ ಭಾಷ್ಯಾಕಾರರು ಅನುತ್ತಾರಲ್ಲ, ಯಥಾರ್ಥ ಜ್ಞಾನವು ಯಾವಾಗ್ಗೆ ಪ್ರಾಪ್ತಿಯಾಗುವದೋ ಆಗ್ಗೆ ಜ್ಞಾನಿಗೆ ಕರ್ಮದ ಸಮಾಪ್ತಿಯಾಗುವದು. ಯಾವಾತನಿಗೆ ಆತ್ಮಜ್ಞಾನವಾಗಿದೆಯೋ, ಆತನು
ಅನಾಶ್ರಮಿ, ಅಗೋತ್ರ, ಅನಾವರಣ, ಅಕರ್ಮರೂಪ, ಆತ್ಮಾಕಾರಾಂತಃಕರಣ ಮತ್ತು ಅದೇಹ, ಎಂದು ಕರ್ಮ ನಡಿಯದು. ಕರ್ಮಕ್ಕೆ ದೇಹಾಭಿಮಾನ ಬೇಕು, ಕರ್ಮಫಲದ  ಅನುಸಂಧಾನ ಮತ್ತು ಕರ್ಮತ್ಯಾಗದ ಭೀತಿ ಇವಷ್ಟು ಬೇಕು. ಇವು ಮೂರು ಜ್ಞಾನಿಗೆ ಇಲ್ಲದ್ದರಿಂದ ಆತನಿಂದ ಕರ್ಮ ನಡಿಯದು.'"

ಸಿದ್ಧಮುನಿಯ ಈ ಭಾಷಣವನ್ನು ಕೇಳಿ ಈತನ ವೃತ್ತಿ ನಿರ್ಗುಣದಲ್ಲಿ ಅನನ್ಯವಾಗಿ ಆರೂಢವಾಗಿರುವದು, ಆದ್ದರಿಂದ ಈತನಿಗೆ  "ಸಿದ್ದಾರೂಢಭಾರತಿ "ಎಂಬ ನಾಮವು ಶೋಭಿಸುವುದು ಎಂದು ತಿಳಿದು,  ಸಿದ್ಧನನ್ನು ಕುರಿತು ಗುರುಗಳು ಅನ್ನುತ್ತಾರೆ - "ಎಲೈ ಸಿದ್ಧಾರೂಢನೇ, ನೀನು ನನ್ನ ಸಮಾನಾನಿದ್ದಿಯೆಂದು ನಾನು ತಿಳಿಯುವೆನು. ನಿನಗೆ ಪ್ರಾಪ್ತವಾದ ಈ ಜ್ಞಾನವು ಶ್ರೀ ಮಲ್ಲಿಕಾರ್ಜುನನ ಪ್ರಸಾದದಿಂದ ನಿನ್ನ ಹೃದಯದಲ್ಲಿ ಪ್ರಕಾಶಮಾನವಾಗಲಿ  ಮತ್ತು ನೀನು ಇದರಿಂದ ಮುಮುಕ್ಷು ಜನರನ್ನು ಉದ್ಧರಿಸುವಂಥವನಾಗು.” ಗಜದಂಡ ಸದ್ಗುರುಗಳು ಹೀಗನ್ನುವಾಗ ಬಹು ಆನಂದದಿಂದ ಗದ್ಗದಿತರಾಗಿ ಪ್ರೇಮದಿಂದ ಸಿದ್ಧನನ್ನು ಅಪ್ಪಿಕೊಂಡರು. ಆನಂದ ಸಾಗರದಲ್ಲಿ ಮುಳುಗಿದ ಸಿದ್ದನು ಕುಣಿದಾಡುತ್ತಾ ಗುರುಗಳನ್ನು ಹಾಡಿ ಹಾರೈಸಿದನು. ಜೀವಭಾವವನ್ನು ತ್ಯಾಗ ಮಾಡಿಸಿ, ಜಾತಿ ಜಾತಿ ಅಂತಾ ಸಂಕುಚಿತ ಭಾವವನ್ನು ನಾಶಮಾಡಿ ಪರಬ್ರಹ್ಮನಲ್ಲಿ ನನ್ನನ್ನು ನೆಲೆಗೊಳಿಸುತ್ತಾ, ನೀನು ಆತ್ಮಾ ರಾಮನಂತಾ ಬೋಧಿಸಿದ ಪಾವನನೆ, ಪಂಡಿತರಲ್ಲಿ ಪಂಡಿತನಾದ ಆತ್ಮೋದ್ಧಾರಕ ಗುರುವರನೆ, ಪರಮಶೈವನೆ ಪರಮ ಬ್ರಾಹ್ಮಣನೆ, ಸಚ್ಚಿದಾನಂದರೂಪ ವೇದಾಂಗನೆ, ಹರನೆ ನೀನಾಗಿ ಧರೆಯಲ್ಲಿ ಅವತರಿಸಿದವನೆ, ಬಹುಜನರನ್ನು ಉದ್ಧಾರ ಮಾಡುವವನೆ ಕಾರಣ್ಯಮೂರ್ತಿಯೇ ನಿನಗೆ ನಮಿಪೆ.

ನಿನ್ನ ನೋಟದಿಂದ ನಿನ್ನ ಸ್ಪರ್ಶದಿಂದ ನಿನ್ನ ಕರುಣೆಯಿಂದ ನಿನ್ನ ನುಡಿಯಿಂದ ಧನ್ಯನಾದೆನು, ನಿನ್ನ ಧ್ಯಾನದಿಂದ ಧನ್ಯನಾದೆ, ನಿನ್ನ ಪದದಿಂದ, ನಿನ್ನ ಆಶ್ರಯದಿಂದ, ನಾನು ಧನ್ಯನಾದೆ, ಮುನಿಕುಲ ತಿಲಕನೆ, ಮುನಿಕುಲ ವಂದಿತನೆ, ಮುನಿಕುಲ ಜ್ಯೋತಿಯೇ, ಸ೦ತಜನರಿಂದ ಸೇವಿಸಲ್ಪಡುವವನೆ, ಸರ್ವಶಕ್ತಿಮಾನ್, ಶೃತಿಮೂರ್ತಿಯೆ, ನಿನಗೆ ಅನೇಕ ವಂದನೆಗಳು ಅಂತಾ ವಂದನೆಗಳನ್ನು ಸಲ್ಲಿಸುತ್ತಾ ಸಿದ್ಧಬಾಲಕನು ಶ್ರೀ ಗಜದಂಡ ಸ್ವಾಮಿಗಳಿಗೆ ಪ್ರದಕ್ಷಿಣೆ ಹಾಕಿ ಸಾಷ್ಟಾಂಗ ನಮಸ್ಕಾರ ಮಾಡಿ, ಗುರುಪದವನ್ನು ಹೇಗೆ ಬಿಟ್ಟು ಹೋಗಲಿ ಅಂತಾ ಚಿಂತಿಸುತ್ತಾ ಗುರುಗಳ ಆಜ್ಞೆಯಂತೆ ಮಹಾಮಂತ್ರದ ಧ್ಯಾನ ಮಾಡುತ್ತಾ ಸಿದ್ಧನು ಅಲ್ಲಿಂದ ಮುಂದೆ  ಸಂಚಾರಕ್ಕೆ ಹೊರಟನು.


ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಸಿದ್ದನು ಆನೆಕಪುರ, ಗ್ರಾಮ, ಗಿರಿಗಳನ್ನು ನೋಡುತ್ತಾ ಕಿಷ್ಕಿಂದಾ ಕ್ಷೇತ್ರವಾದ ಹಂಪಿಗೆ ಆಗಮಿಸಿದ
ಎಲ್ಲಾ  ಕಥೆಗಳ ಲಿಂಕಗಳು 
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಲು 👉📚

«««««ಓಂ ನಮಃ ಶಿವಾಯ »»»»»»
»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ