ಬಾಳಿಕೊಳ್ಳಯಲ್ಲಿ ಕುಷ್ಠ ರೋಗಿಯ ಪರಿಹಾರ ಮಾಡಿದ ಕಥೆ  

 ಬಾಳಿಕೊಳ್ಳಕ್ಕೆ ಆಗಮನ 🌺🌷



ಅಲ್ಲಿಂದ ಸಿದ್ಧನು  ಹೊರಟು ಅನೇಕ ಗ್ರಾಮ, ಹೊಳೆ, ಹಳ್ಳ, ಗುಡ್ಡ, ಅಡವಿ  ಸಂಚರಿಸುತ್ತ ಚಳಿ, ಮಳೆ, ಗಾಳಿಗೆ ಹೆದರದೇ ಹಸಿವು, ನೀರಡಿಕೆಗಳಿಗೆ ಬಳಲದೆ ಕಾಡಿನ ವೃಕ್ಷಗಳಂತೆ ಧೈರ್ಯದಿಂದ ಆದವಾನಿಯ  ಸಮೀಪ ಬಾಳೆಕೊಳ್ಳಕೆ ಆಗಮಿಸಿದನು. ಅಲ್ಲಿದ್ದ ಸಾಧುಗಳ ಜೊತೆಗಿದ್ದು ಕೆಲವು ದಿನ ಆತ್ಮ ಚಿಂತನೆಯಲ್ಲಿ ಕಾಲ ಕಳೆದನು. ಒಂದಾನೊಂದು ದಿನ ಆ ಸಾಧುಗಳ ಪೈಕಿ ಓರ್ವನು ಸಿದ್ಧನನ್ನು ಕುರಿತು ಕಾಣತಕ್ಕ ಈ ಶರೀರವನ್ನು ಲಕ್ಷಿಸಿ  ನಾನು ಪುರುಷ, ನಾನು ಸ್ತ್ರೀ, ಹೀಗೆ ಬೇರೆ ಬೇರೆಯಾಗಿ ಭಾವದಿಂದ ಇದ್ದಾಗ, ಆತ್ಮನು ಬೇರೆ ಅಂತಾ ಹೇಗೆ ಅರಿತುಕೊಳ್ಳಬೇಕು. ಈ ಸಂಶಯ ನಿವಾರಣೆ ಮಾಡು ಅಂತಾ ಕೇಳಿಕೊಂಡನು.


ಆಗ ಸಿದ್ಧನು  ಆತನನ್ನು ಕುರಿತು ಪೇಳತೊಡಗಿದನು.


ಪಂಚಾತ್ಮಕಂ ಪಂಚಸುವರ್ತಮಾನಂ| ಷಡಾಶ್ರಯಂ ಷಡ್ಗುಣ ಯೋಗ ಯುಕ್ತ೦ll


ತಂ ಸಪ್ತಧಾತುಂ ತ್ರಿಮಲಂ ತ್ರಿಯೋನಿಂ | ಚತುರ್ವಿಧಾಹಾರ ಮಯಂ ಶರೀರಂ||1||


ಈ ಶರೀರದ ಬಗ್ಗೆ ಪ್ರಮಾಣವಿದೆ. ನಿಜವಾಗಿ  ದೇಹದ ಎಲ್ಲಾ ತತ್ವಗಳನ್ನು ನೇತಿಗಳೆಯುತ್ತಾ, ಕೊನೆಗೆ ಉಳಿಯುವ ಚೇತನವೇ ಬ್ರಹ್ಮವೆಂದು ತಿಳಿ, ಆ ಪರಬ್ರಹ್ಮನು  ಮೊದಲಿಗೆ ಪಂಚ ಮಹಾಭೂತಗಳನ್ನು ಅಂದರೆ ಪೃಥ್ವಿ, ಅಪ್, ತೇಜ, ವಾಯು, ಆಕಾಶಾದಿಗಳನ್ನು ಸೃಷ್ಟಿಸಿದನು. ತನ್ನ ಲೀಲೆಯಿಂದ ಈ ಪಂಚಭೂತಗಳನ್ನು ಎರಡೆರಡು ಭಾಗ ಮಾಡಿ, ಅರ್ಧಭಾಗದಲ್ಲಿ ನಾಲ್ಕು ಭಾಗ ಮಾಡಿದನು. ಬಳಿಕ ವಿಜಾತಿಯ ಭಾಗವಾಗಿರುವ ಪಾದಾಂಶಗಳಲ್ಲಿ ಅರ್ಧರ್ಧ  ಭಾಗಗಳನ್ನು ಬೆರೆಸಿ ಅವು ಇಪ್ಪತ್ತು ಮತ್ತು ನಿಜಾಂಶಗಳು ಐದು ಇವೆಲ್ಲ ಕೂಡಿ ಇಪ್ಪತ್ತೈದು ತತ್ವಗಳಾದವು. ಇವಕ್ಕೆ ಪಂಚೀಕರಣ ಅನ್ನುತ್ತಾರೆ. ಇವುಗಳಿಂದ ಜಡವಾದ. ಈ ದೇಹದ ಸೃಷ್ಟಿಯಾಯಿತು. ಜಡವಾಗಿದ್ದರಿಂದ ಬ್ರಹ್ಮರಂಧ್ರದ ಮುಖಾಂತರ ಬ್ರಹ್ಮನು ಜೀವ ರೂಪದಿಂದ ಅದರಲ್ಲಿ ಸೇರಿದನು. ದೇಹದ ಅಭಿಮಾನವುಳ್ಳವನು ಜಾಗ್ರತ್ ಅವಸ್ಥೆಯಲ್ಲಿ ಸ್ಥೂಲ  ಭೋಗದಲ್ಲಿರತನಾದನು. ಸ್ವಪ್ನಾವಸ್ಥೆಯಲ್ಲಿ ಸೂಕ್ಷ್ಮ ಸಂಸ್ಕಾರಗಳಿಂದ ಭೋಗಿಸಿ ಸುಷುಪ್ತಿ ಅವಸ್ಥೆಯಲ್ಲಿ ನಿಜಸುಖವನ್ನು ಅನುಭವಿಸುವವನು. ಈ ಅವಸ್ಥೆಗಳಲ್ಲಿ ನೀನು ಬೇರೆಯಾಗಿರುವಿ  ಅವನೇ ಪರಮಾತ್ಮನೆಂದು ತಿಳಿ, ಕಾರಣ ನೀನೇ ನೀನಾದ  ಪರಬ್ರಹ್ಮನಿಗೆ  ದೇಹದ ಸಂಗವೆಲ್ಲಿ ಅಂತಾ ಸವಿಸ್ತಾರವಾಗಿ ಹೇಳಿದನು. ಪುನಃ ಆ ಸಾಧು ಸಿದ್ಧನನ್ನು ಕುರಿತು ಅಯ್ಯಾ, ಈ ಇಪ್ಪತ್ತೈದು ತತ್ವಗಳನ್ನು ಈ ದೇಹದಲ್ಲಿ ಯಾವ ರೀತಿಯಿಂದ ಗುರುತಿಸಬೇಕು. ಸವಿಸ್ತಾರವಾಗಿ ತಿಳಿಸೋಣವಾಗ ಬೇಕು ಅಂತ ಪ್ರಾರ್ಥಿಸಿದನು.


ಆಗ ಸಿದ್ದಾರೂಢರು ಆತನನ್ನು ಕುರಿತು 'ಅಯ್ಯಾ ವರ ಮುಮುಕ್ಷುವೇ ಚಿತ್ತವಿಟ್ಟು ಕೇಳು, ಈ ದೇಹದಲ್ಲಿರುವ ಕಠಿಣತ್ವವು ಪೃಥ್ವಿಯ ಅಂಶವಾಗಿದೆ. ದ್ರವಿಸುವದೆಲ್ಲ  ನೀರಿನ ಅಂಶವು. ದೇಹದಲ್ಲಿಯ ಉಷ್ಣತೆಯು  ಅಗ್ನಿಯಂಶವಾಗಿದೆ. ಚಲನವಲನವೇ ವಾಯುವಿನ ಅಂಶವಾಗಿದೆ. ದೇಹದಲ್ಲಿಯ  ಪೊಳ್ಳುತನವೆಲ್ಲ ಆಕಾಶದ ಅಂಶವಾಗಿದೆ. ಈ ಅಂಶಗಳನ್ನು ಆಯಾ ಭೂತಗಳಿಗೆ ಹಂಚಲು ತೋರತಕ್ಕ ಈ ದೇಹವು ಮಿಥ್ಯವಾಗುವದು. ಅದಕ್ಕೆ ಸಾಕ್ಷಿಯಾಗಿರುವ ಚೈತನ್ಯವೇ ನೀನಾಗಿರುವೆ ತಿಳಿದುಕೋ'' ಅಂತ ಮನವರಿಕೆ ಮಾಡಿದರು.


ಆಗ ಆ ಸಾಧು " ಹೇ ಸದ್ಗುರುವೇ ತಮ್ಮ ಬೋಧದಿಂದ ಧನ್ಯನಾದೆ. ಸರ್ವ ಭೂತಗಳ ತತ್ವಗಳನ್ನು ಬೇರೆ ಮಾಡುತ್ತಾ  ಅವುಗಳನ್ನು ಅರಿಯುವ ಸಾಕ್ಷಿ ಚೇತನವೇ ನಾನೇ  ಅಂತಾ ತಿಳಿದುಕೊಂಡು ಪರಮ ಧನ್ಯನಾದೆನು” ಅಂತಾ ಹರುಷದಿಂದ ಸಿದ್ಧನ ಚರಣ ಕಮಲಗಳಲ್ಲಿ  ಶಿರೋಕಮಲವನ್ನಿಟ್ಟು ವಂದನೆಗಳನ್ನು ಮಾಡಲು, ಸಿದ್ಧನು  ಆತನಿಗೆ ಮುದದಿಂದ ಆಶೀರ್ವದಿಸಿದನು.


ಈ ಎಲ್ಲ ಬೋಧವಾಕ್ಯಗಳನ್ನು ತದೇಕಚಿತ್ತದಿಂದ ಕೇಳುತ್ತಾ ಅಲ್ಲಿಯೇ ನಿಂತಿದ್ದ ಓರ್ವ ಕುಷ್ಠರೋಗಯು  ಸಿದ್ಧನಿಗೆ ನಮಿಸುತ್ತಾ, ದಿನ ವಾಣಿಯಿಂದ ಹೇ ಸದ್ಗುರುವೇ, ಉತ್ತಮನಾದ ಆ ಶಿಷ್ಯನಿಗೆ ಒಲವಿನಿಂದ ಆತನ ಮನೋರೋಗವನ್ನು ಕಳೆದಿರುವಂತೆ  ನನ್ನ ಕುಷ್ಠರೋಗವನ್ನು ನಿವಾರಣೆ ಮಾಡು ಅಂತಾ ಅಂಗಲಾಚಿ ಕೇಳಿಕೊಂಡನು.



ಆಗ ಸಿದ್ಧನು  ''ಶಿವ ಪಂಚಾಕ್ಷರಿ ಮಹಾ ಮಂತ್ರವನ್ನು ಜಪಿಸಲು ಭವರೋಗವೇ  ನಾಶವಾಗುವಾಗ  ಕ್ಷುಲ್ಲಕವಾದ  ಈ ಕುಷ್ಠರೋಗ ಉಳಿಯುವುದೇ ತಿಳಿದುಕೊ ಅಂತಾ ಹೇಳಿ' ತನ್ನ ಪಾದತೀರ್ಥದಿಂದ ಆ ರೋಗಿಗೆ ಸ್ನಾನ ಮಾಡಿಸಿ ಪಂಚಾಕ್ಷರಿ ಮಂತ್ರವನ್ನು ಬೋಧಿಸಿದನು. ಶಿವ ಪಂಚಾಕ್ಷರಿಯನ್ನು ನುಡಿಯುತ್ತಿರುವಲ್ಲಿಯೇ ಮಹಾರೋಗ ನಾಶವಾಗಿ ಸುಂದರ ದೇಹವುಳ್ಳವನಾಗಿ  ಹರ್ಷದಿಂದ ಸಿದ್ದನಿಗೆ ವಂದಿಸಿ, ಊರಿಗೆ ಬಂದು ಆದ ವೃತ್ತಾಂತವನ್ನು ಹೇಳಿದನು. ಇದನ್ನು ಕೇಳಿ ತೆರೆ ತೆರೆಯಾಗಿ ಜನರು ಬಂದರು. ಆ ಜನದಟ್ಟಣೆಯ ಕಡೆ ಲಕ್ಷ್ಯ ಕೊಡದೆ ಮೌನವಾಗಿ ಸಿದ್ದನು ಅಲ್ಲಿಂದ ಹೊರಟು ಸಂಚರಿಸುತ್ತಾ ಸಂಚರಿಸುತ್ತಾ ವಿಜಾಪುರಕ್ಕೆ ಆಗಮಿಸುದನು.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ವಿಜಾಪುರದಲ್ಲಿ ಸಿದ್ಧನು ದನಗಳ ಕಸಾಯಿ ಖಾನೆಯಲ್ಲಿ ಶಗಣಿ ತೆಗೆದ ಹಾಗೂ ಮೊಹರಂ ಹಬ್ಬದ ಮೆರವಣಿಗೆಯಲ್ಲಿ ಸಿದ್ಧನ ಹೆಗಲ ಮೇಲೆ ನೊಗವನ್ನು ಹೇರಿ ಊರತುಂಬಾ ಸಾಯಂಕಾಲದವರೆಗೆ ತಿರುಗಾಡಿಸಿದ ಕಥೆ

ಎಲ್ಲಾ  ಕಥೆಗಳ ಲಿಂಕಗಳು 

👉ಸಿದ್ಧಾರೂಢ ಭಗವಾತ ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»


Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ