ನಾನಾ ಕ್ಷೇತ್ರಗಳನ್ನು ಸಂಚರಿಸುತ್ತಾ ಕಾಶ್ಮೀರಕ್ಕೆ ಬಂದು, ಅಲ್ಲಿ ಜ್ಯೋತಿಷಿಗೆ ಸಿದ್ಧನು. ಖಗೋಳ ಸಿದ್ಧಾಂತವನ್ನು ವಿವರಿಸಿದ್ದು.

ಅನೇಕ ಕ್ಷೇತ್ರಗಳನ್ನು ಸಂಚರಿಸುತ್ತಾ ಕಾಶ್ಮೀರಕ್ಕೆ ಬಂದು, ಅಲ್ಲಿ ಜ್ಯೋತಿಷಿಗೆ ಸಿದ್ಧನು. ಖಗೋಳ ಸಿದ್ಧಾಂತವನ್ನು ವಿವರಿಸಿದ್ದು. 



ಕಾಶ್ಮೀರಕ್ಕೆ ಆಗಮನ✡️


ಅಲ್ಲಿಂದ ಹೊರಟು ಕಾಡು, ಗುಡ್ಡ, ಕಂದರಗಳಲ್ಲಿ ಸಂಚರಿಸುತ್ತಾ ಸಿದ್ದನು ಕಾಶ್ಮೀರ ತಲುಪಿದನು. ಗಣಪತಿ ಗುಡಿಯ ಆವಾರದಲ್ಲಿ ನೆರೆದ ಜ್ಯೋತಿಷ್ಯ ಪಂಡಿತರ ಸಭೆಯಲ್ಲಿ ಖಗೋಲದ ಬಗ್ಗೆ ಚರ್ಚೆಯಾಗುತ್ತಿದ್ದುದನ್ನು ಕಂಡು ಆ ಸ್ಥಳಕ್ಕೆ ಧಾವಿಸಿದನು. ಪಂಡಿತರ ಸಮೀಪದಲ್ಲಿಯೇ ಕೂತನು. ಆಗ ಓರ್ವ ಪಂಡಿತನು ಮತ್ತೋರ್ವ ಪಂಡಿತನನ್ನು ಕುರಿತು ಸುಮುಹೂರ್ತವನ್ನು ಉಚ್ಚರಿಸುವ ಕಾಲ ಯಾವುದು ಅಂತಾ ಪ್ರಶ್ನಿಸಿದನು. ಅದಕ್ಕೆ ಉತ್ತರಿಸುತ್ತಾ ಸುಮುಹೂರ್ತದ ಪ್ರಥಮ ಚರಣದ ಐದನೇದಾದ ಸಮಯದಲ್ಲಿ ಉಚ್ಛರಿಸಬೇಕು ಅಂತಾ ಹೇಳಿದನು. ಸಿದ್ದನು ಬಹುಶಃ ಜ್ಯೋತಿಷ್ಯದಲ್ಲಿ ಪರಿಣತೆಯುಳ್ಳವನಿರಬಹುದೆಂದು ಆತನನ್ನು ಕುರಿತು ಅಯ್ಯಾ ಆಗಂತುಕನೆ, ಪ್ರಕಾಶಮಾನವಾಗಿ ಬೆಳಗುವ ಸೂರ್ಯ, ಚಂದ್ರರನ್ನು ಮರೆಮಾಚುವ ಖಗ್ರಾಸ ಹಾಗೂ  ಖಂಡಖಗ್ರಾಸ ಗ್ರಹಣಗಳಾಗುವ ವಿಧಾನಗಳೇನು ವಿವರಿಸಿ ಅಂತಾ ಪ್ರಶ್ನಿಸಿದನು.


ಆಗ ಸಿದ್ದನು ವಿವರಿಸತೊಡಗಿದನು. ವರ್ಷದಲ್ಲಿ ಅಮವಾಸ್ಯೆ, ಪೌರ್ಣಿಮೆ ಎರಡರಲ್ಲಿ ಮೇಷಾದಿ ದ್ವಾದಶ ರಾಶಿಗಳಲ್ಲಿ ರವಿ, ಶಶಿ ಇದ್ದ ರಾಶಿಯಲ್ಲಿ ಕಪ್ಪು ವರ್ಣದ ರಾಹು ಕೇತುಗಳ ಯೋಗವಾಗುವ ತೆರ ಗ್ರಹಣಗಳಾಗುವವು. ಇಪ್ಪತ್ತೇಳು ನಕ್ಷತ್ರಗಳಲ್ಲಿ ಒಂದೊಂದು ನಕ್ಷತ್ರಕ್ಕೆ ನಾಲ್ಕು ಚರಣಗಳು, ದ್ವಾದಶ ರಾಶಿಗಳಲ್ಲಿ ಒಂದೊಂದು ರಾಶಿಗೆ ಎರಡು ನಕ್ಷತ್ರಗಳ ಎಂಟು ಚರಣಗಳು ಮತ್ತು ಇನ್ನೊಂದು ನಕ್ಷತ್ರದ ಒಂದು ಚರಣ ಹೀಗೆ ೯ ಚರಣಗಳು ಇರುತ್ತವೆ. ಅವುಗಳ ವಿವರಗಳಾವವು ಎಂದರೆ ೧) ಮೇಷ ರಾಶಿಯಲ್ಲಿ ಅಶ್ವಿನಿ ಭರಣಿ ನಕ್ಷತ್ರಗಳ ನಾಲ್ಕು ನಾಲ್ಕು ಚರಣಗಳು. ಕೃತ್ತಿಕಾ ನಕ್ಷತ್ರದ ಒಂದನೇ ಚರಣ, ೨) ವೃಷಭರಾಶಿಯಲ್ಲಿ ಕೃತ್ತಿಕಾದ ಉಳಿದ ೩ ಚರಣಗಳ ರೋಹಿಣಿ ನಕ್ಷತ್ರದ ನಾಲ್ಕು ಚರಣಗಳು, ಮೃಗಶಿರಾದ ೧ನೇ ವ ೨ನೇ ಚರಣಗಳು. ೩) ಮಿಥುನ ರಾಶಿಯಲ್ಲಿ ಮೃಗಶಿರಾದ ೩ನೇ ೪ನೇ ಚರಣ, ಆರಿದ್ರಾದ ನಾಲ್ಕು ಚರಣ, ಪುನರ್ವಸುವಿನ ಒಂದರಿಂದ ಮೂರು ಚರಣ, ೪) ಕರ್ಕರಾಶಿಯಲ್ಲಿ ಪುನರ್ವಸುವಿನ ನಾಲ್ಕನೇ ಚರಣ, ಪುಷ್ಯ ಮತ್ತು ಆಶ್ಲೇಷಗಳ ನಾಲ್ಕು ನಾಲ್ಕು ಚರಣಗಳು, ೫) ಸಿಂಹರಾಶಿಯಲ್ಲಿ ಮಘಾ, ಹುಬ್ಬಾದ ನಾಲ್ಕು ನಾಲ್ಕು ಚರಣಗಳು ಉತ್ತರಾದ ಒಂದನೇ ಚರಣ, ೬) ಕನ್ಯಾರಾಶಿಯಲ್ಲಿ ಉತ್ತರಾದ ಉಳಿದ ಮೂರು ಚರಣ, ಹಸ್ತಾದ ನಾಲ್ಕು ಚರಣ, ಚಿತ್ತಾದ ಒಂದನೇ ವ ಎರಡನೇ ಚರಣ, ೭) ತುಲಾರಾಶಿಯಲ್ಲಿ ಚಿತ್ತಾದ ಮೂರನೇ ನಾಲ್ಕನೇ ಚರಣ, ಸ್ವಾತಿಯ ನಾಲ್ಕು ಚರಣ ವಿಶಾಖಾದ ಮೂರು ಚರಣ, ೮) ವೃಶ್ಚಿಕ ರಾಶಿಯಲ್ಲಿ ವಿಶಾಖಾದ ನಾಲ್ಕನೇ ಚರಣ. ಅನುರಾಧಾ, ಜೈಷ್ಠಾದ ನಾಲ್ಕು ನಾಲ್ಕು ಚರಣ. ೯) ಧನು ರಾಶಿಯಲ್ಲಿ ಮೂಲಾ, ಪೂರ್ವಾಷಾಢ ನಾಲ್ಕು ನಾಲ್ಕು ಚರಣ ಉತ್ತರಾಷಾಢದ ಒಂದನೇ ಚರಣ, ಮಕರ ರಾಶಿಯಲ್ಲಿ ಉತ್ತರಾಷಾಢ ಉಳಿದ ಮೂರು ಚರಣ ಶ್ರವಣಾದ ನಾಲ್ಕು ಚರಣ ಧನಿಷ್ಟಾದ ಎರಡು ಚರಣ, ೧೧) ಕುಂಭರಾಶಿಯಲ್ಲಿ ಧನಿಷ್ಟಾದ ಮೂರನೇ ಚರಣ, ಶತತಾರಾದ ನಾಲ್ಕು ಚರಣ ಪೂರ್ವಾಭಾದ್ರದ ಮೂರು ಚರಣ. ೧೨) ಮೀನ ರಾಶಿಯಲ್ಲಿ ಪೂರ್ವಾಭಾದ್ರದ ನಾಲ್ಕನೇ ಚರಣ, ಉತ್ತರಾಭಾದ್ರ ರೇವತಿಯ ನಾಲ್ಕು ನಾಲ್ಕು ಚರಣಗಳು ಈ ಪ್ರಕಾರ ವಿಭಜನೆಯಾಗಿದೆ.


ಸೂರ್ಯ ಚಂದ್ರರು ಯಾವ ರಾಶಿಯಲ್ಲಿರುವರೋ ಅಲ್ಲಿರುವ ನಕ್ಷತ್ರಗಳ ಚರಣಗಳಿಗೆ ರಾಹು ಕೇತುಗಳು ಕೂಡಿ ಒಂದಾಗಲು ಅದು ಒಂದು ಚರಣ, ಚರಣ ಒಂದಿದ್ದರೆ ಒಂದು ಪಾದಾಂಶವು. ಎರಡು ಚರಣಗಳಿರಲು ಎರಡು ಪಾದಾಂಶವು. ಮೂರು ಚರಣಗಳಿರಲು ಮೂರು ಪಾದಾಂಶವು, ನಾಲ್ಕು ಇದ್ದರೆ ಪೂರ್ಣ ಗ್ರಹಣವಾಗುವದು ಎಂದನು. ಆಗ ಆ ಪಂಡಿತರು ಸಿದ್ದನ ಮುಖದಿಂದ ಗ್ರಹಣದ ಬಗ್ಗೆ ತಿಳಿದು ಸಂತೋಷಭರಿತರಾದರು. ಸೂರ್ಯನ ಕಿರಣ ಮತ್ತು ಅವನ ಗತಿ ಮುಂತಾದವುಗಳ ಬಗ್ಗೆ ವಿವರಿಸಬೇಕೆಂದು ಕೇಳಿಕೊಂಡರು.


ಆಗ ಸಿದ್ಧನು ಪ್ರಶ್ನಕರ್ತನನ್ನು ಕುರಿತು ಹೇ ಪಂಡಿತರೆ ಸೂರ್ಯನ ಕಿರಣ ಮತ್ತು ಗತಿಯ ಬಗ್ಗೆ ವಿವರಿಸುವೆ. ಈ ಭೂಮಂಡಲಕ್ಕೆ ಹಿತಕರವಾಗುವಂತಹ ಸೂರ್ಯನಿಗೆ ಹನ್ನೆರಡು ಶುಭಕರ ಕಲೆಗಳುಂಟು. ಅವು ಯಾವವೆಂದರೆ ಕ್ಷಮೆ, ತಪನಿ, ತಾಪಿಸಿ, ಧರಣಿ, ಭೋಗದೆ, ಧೂಮ್ರೆ ' ಜ್ವಾಲಿನಿ, ಪರಮ ಪ್ರಭೆ, ರುಚಿ, ವಿಶ್ವೆ, ಬೋಧಿನಿ ಮತ್ತು ಸುಷುಮ್ನೆ  ಅಂತಾ ಇರುತ್ತವೆ. ಆ ಸೂರ್ಯ ನಾರಾಯಣನಿಗೆ ಬೀಜೋತ್ಪತ್ತಿಗಾಗಿ ಚಿನ್ನದ ಕೇಶಮುಖ ಲೋಮಗಳಿಂದ ಪ್ರಕಾಶಮಾನ ೩೩೩ ಹಿಮಕಿರಣಗಳು. ೩೩೩ ಉಷ್ಣ ಕಿರಣಗಳು ಮತ್ತು ೩೩೩ ವೃಷ್ಠಿಗರೆಯುವ ಕಿರಣಗಳು ಮತ್ತು ಬೀಜ ಭೂತದಿಂದಿದ್ದ ಒಂದು ಈ ಪ್ರಕಾರ ಈ ಎಲ್ಲ ಕಿರಣಗಳನ್ನು ಕೂಡಿಸಲು ಸಹಸ್ರ ಕಿರಣಗಳಿಂದ ಸೂರ್ಯನು ರಾರಾಜಿಸುತ್ತಿಹನು, ಕಲಮಲಾದಿಕ ತೇಜದಿಂದಲೂ ನವರತ್ನ ಖಚಿತ ನಾಲ್ಕು ಭುಜಗಳಿಂದಲೂ ಕೇಯೂರ ಮುಕುಟ ಕಟಕ ಮಾಲೆ, ಕುಂಡಲಾದಿ ಆಭರಣ ಭೂಷಿತನಾಗಿಯೂ ಝಗ್ ಝಗ್ ಪ್ರಕಾಶಮಾನ ಜರಿಯಂಚಿನ ರೇಷ್ಮೆ ವಸ್ತ್ರವನ್ನು ಧರಿಸಿ ಸುಗಂಧಲೇಪನದಿಂದ ಸುವಾಸಿತನೂ ಸಿಂಧೂರ ವರ್ಣದವನಾದ ಆ ಸಾಕ್ಷಾತ್ ಭಗವಾನ್ ಸೂರ್ಯ ನಾರಾಯಣನು ಮರೆಯುತ್ತಾ ಜಗತ್ತಿನ ಗಮನವನ್ನೇ ಕೇಂದ್ರೀಕರಿಸಿದ್ದಾನೆ. ಈತನು ಪ್ರತಿನಿತ್ಯವೂ ಸಂಚರಿಸುವ ಮಾರ್ಗದ ಸುತ್ತಳತೆ ೯ ಸಾವಿರ ಯೋಜನವಿದೆ. ಸೂರ್ಯನಾರಾಯಣನು ಸಂಚರಿಸಲು ಉಪಯೋಗಿಸುತ್ತಿರುವ ರಥಕ್ಕೆ ಏಳು ಕುದುರೆಗಳಿವೆ. ಏಳು ಸರ್ಪಗಳೇ ಲಗಾಮು.

ಈತನ ರಥದ ವೇಗವು ಒಂದು ಶ್ವಾಸಕ್ಕೆ ಇಪ್ಪತ್ತೊಂದು ಸಾವಿರದಾ ಆರು ನೂರು ಯೋಜನ. ಒಂದು ಘಳಿಗೆಗೆ ಅಂದರೆ ೨೪ ನಿಮಿಷಗಳಿಗೆ ಇಪ್ಪತ್ತೇಳು ಲಕ್ಷ ಇಪ್ಪತ್ತು ಸಾವಿರ ಯೋಜನದ ವೇಗದ ಮಿತಿಯಾಗುವದು. ಇಂತಹ ಬಹು ದೊಡ್ಡ ಪ್ರಮಾಣದ ವೇಗದಿಂದ ಹಗಲು ರಾತ್ರಿ ಎಲ್ಲಿಯೂ ನಿಲ್ಲದೆ ಆಕಾಶದಲ್ಲಿ ಸೂರ್ಯದೇವನು ಸುತ್ತುವನು.

 

ಈ ಭೂಮಂಡಲದ ಕೇಂದ್ರಕ್ಕೆ ಧೃವ ನಕ್ಷತ್ರವು ಸ್ಥಿರವಾಗಿ ನಿಂತಿರುತ್ತದೆ. ಇಲ್ಲಿಂದ ಒಂದು ಲಕ್ಷ ಯೋಜನಳತೆಯ ಮೇಲಿನ ಪ್ರವಹಿಯೆಂಬ ವಾಯು ಮಂಡಲದಲ್ಲಿ ಚಂದ್ರಗ್ರಹವಿರುವದು. ಅಲ್ಲಿಂದ ಒಂದು ಲಕ್ಷ ಯೋಜನಳತೆ ಎತ್ತರದಲ್ಲಿಯ ಸಂವಹಿಸು ಎಂಬ ವಾಯು ಮಂಡಲದಲ್ಲಿ ನಕ್ಷತ್ರ ಮಂಡಲವಿದೆ. ಅಲ್ಲಿಂದ ಎರಡೆರಡು ಲಕ್ಷ ಯೋಜನಳತೆಯ ಎತ್ತರದಲ್ಲಿ ಒಂದರ ಮೇಲೊಂದು ವಿವಹ ವಾಯುಮಂಡಲ ದಲ್ಲಿ ಮಂಗಳ, ಬುಧ, ಗುರು, ಶುಕ್ರ ಗ್ರಹಗಳಿವೆ. ವರಾಹ ವಾಯುಮಂಡಲದಲ್ಲಿ ಶನಿಗ್ರಹವಿದೆ. ಇದರ ಮೇಲೆ ಪಡಿವಹನಾಮದ ವಾಯುಮಂಡಲದಲ್ಲಿ ರಾಹು ಕೇತು ಗ್ರಹಗಳಿಗೆ ಈ ಪ್ರಕಾರದ ಪಂಚಸೂತ್ರದ ವಾಯು ಮಂಡಲಗಳನ್ನು ಈಶನ ಕೃಪೆಯಿಂದ  ರವಿಯು ನಡೆಸುವನು ಅಂತಾ ಖಗೋಲದ ಬಗ್ಗೆ ಸಿದ್ದನು ವಿಸ್ತಾರವಾಗಿ ತಿಳಿಸಿದನು.  ಆನಂದಭರಿತರಾದ ಬ್ರಾಹ್ಮಣರೆಲ್ಲರೂ ಗಣಪತಿಯೇ ಅವತಾರ ಮಾಡಿ ಈ ರೂಪದಿಂದ ಬಂದಿರುವನು ಅಂತಾ ಉದ್ಗರಿಸಿದರು. ಆಗ ಸಿದ್ದನು ಅವರೆಲ್ಲರನ್ನು ಕುರಿತು "ಹೇ ಬ್ರಾಹ್ಮಣೋತ್ತಮರೆ, ಶ್ರೇಷ್ಠವಾದ ಬ್ರಹ್ಮವಿದ್ಯೆಯನ್ನು ತೊರೆದು ಜ್ಯೋತಿಷ್ಯ ಶಾಸ್ತ್ರವು ಉತ್ತಮವೆಂದು ಭಾವಿಸುವದರಿಂದ ಮುಕ್ತಿಯಾಗುವದೇ ವಿಚಾರ ಮಾಡಲಾಗಿ ಸದ್ಗುರುವಿನಿಂದ ತತ್ವಮಸಿಯಂ ತಿಳಿದುಕೊಂಡರೆ ಮಾತ್ರ ಮುಕ್ತಿ ದೊರೆಯುವದು ಅಂತಾ ಹೇಳಿದನು. ಸಿದ್ದನ ಈ ನುಡಿಗೆ ಆಶ್ಚರ್ಯಚಕಿತರಾದ ಆ ಜೋಯಿಸರು ತಾತ್ಕಾಲಿಕ ಗಣಿತದಿಂದ ಲೆಕ್ಕ ಹಾಕಿದರೂ. ಕಲಿಕಾಲದ 5000 ವರುಷಗಳ ಕಾಲದಲ್ಲಿ ಭೂಲೋಕಕ್ಕೆ  ಸಾಕ್ಷಾತ್ ಭಗವಾನ್ ಅವತಾರ ಧಾರಣ ಮಾಡಿ ಬರುವನೆಂದು ಭವಿಷತ್ ಪುರಾಣವು ಸಾರಿದ ಪ್ರಕಾರ ಪರಮಾತ್ಮನೇ ಅವತರಿಸಿ ಈ ರೂಪದಿಂದ ಬಂದಿರುವನು ಅಂತಾ ಹರ್ಷೋದ್ಧಾರಗಳಿಂದ ಬ್ರಾಹ್ಮಣರೆಲ್ಲರೂ ಸಿದ್ದನಿಗೆ ಅಭ್ಯಂಗ ಸ್ನಾನವನ್ನು ಮಾಡಿಸಿದರು. ಸುಗಂಧದ್ರವ್ಯ ಲೇಪನ ಮಾಡಿ ವಸ್ತ್ರ ನೀಡಿ ಗಂಧ ಕುಂಕುಮ ಹಚ್ಚಿ ಸುವಾಸಿತ ಪೂಮಾಲೆ ಹಾಕಿ ಹದಿನಾರು ತರದ ಪೂಜೆ ಮಾಡಿದರು. ಮೃಷ್ಟಾನ್ನ ಭೋಜನದ ಅನ್ನ ಸಂತರ್ಪಣೆ ಮಾಡಿದರು. ಸಿದ್ದನನ್ನು ಎರಡು ತಿಂಗಳುಗಳ ಪರ್ಯಂತ  ತಮ್ಮಲ್ಲಿರಿಸಿಕೊಂಡು ಹರ್ಷದಿಂದ ಗುರೋಪದೇಶ ಪಡೆದು ತೈತ್ತರೀಯ ಉಪನಿಷತ್ತಿನ ಶ್ರವಣ ಮಾಡಿದರು. ನಂತರ ಸಿದ್ಧನಿಗೆ ಬೀಳ್ಕೊಟ್ಟರು.

ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಪಂಜಾಬಕ್ಕೆ ಸಿದ್ಧನು ಆಗಮಿಸಿ, ವೈದ್ಯನಿಗೆ ಆಯುರ್ವೇದ ಮರ್ಮಗಳನ್ನು ವಿವರಿಸಿದ್ದು,

ಎಲ್ಲಾ  ಕಥೆಗಳ ಲಿಂಕಗಳು 

👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ