ಆನೆಗೊಂದಿಯ ರಾಜ್ಯಸಭೆಯಲ್ಲಿ ಅದ್ವೈತ ಚಕ್ರವರ್ತಿ ಸಿದ್ಧರು

✡️ ಆನೆಗೊಂದಿಯ  ರಾಜ್ಯಸಭೆಯಲ್ಲಿ ಅದ್ವೈತ  ಚಕ್ರವರ್ತಿ ಸಿದ್ಧರು 

ಅನೆಗೊಂದಿಯಲ್ಲಿ ಹರ್ಷೋಲ್ಲಾಸಗಳಿಂದ ಸಿದ್ಧನು  ಗುಡಿಯಲ್ಲಿ ಹೋಗಲು, ಪೂಜಾರಿಯು ಆರ್ಭಟಿಸುತ್ತಾ ಸಿದ್ದನನ್ನು ಕುರಿತು “ಎಲೈ  ಹುಡುಗಾ ನೀನು ಅಂತ್ಯಜನೋ? ಹಸಿದ ಮುಸಲನೋ? ಗುಡಿಯಲ್ಲಿ ಯಾಕೆ ಬಂದಿರುವೆ ಹೊರಗೆ ನಡೆ''  ಅಂತಾ ಗದರಿಸಿದನು. ಆಗ ಸಿದ್ಧ ಬಾಲಕನು ಹೀನ ನಡೆವಳಿಕೆಯ ವಿಪ್ರನೇ ಈ ಸ್ಥೂಲವಾದ ತನುವಿಗೆ ಹೀನವೆನ್ನುವಿಯಾ? ಅಥವಾ ಸೂಕ್ಷ್ಮ ತನುವಿಗೆ ಹೀನನೆನ್ನುವಿಯೋ ಇಲ್ಲವೇ ಕಾರಣ ತನುವಿಗೆ ಹೀನವೆನ್ನುವಿಯಾ ಅಥವಾ ತನುವಿನೊಳಗಿನ ಜ್ಞಾನಕ್ಕೆ ಹೀನತೆಯೇ? ಜ್ಞಾನವಂತನಾದ ವಿಪ್ರನೇ ಹೇಳು? ಸ್ಥೂಲ  ತನುವಿಗೆ ಹೀನತೆ, ಶ್ರೇಷ್ಠತೆ ಅಂತಾ ವಿಂಗಡಿಸಲು, ಎಲ್ಲರೂ ಹೀನ ಸ್ಥಾನದಿಂದ ಜನಿಸಿ, ಹೀನ ಮೊಲೆಯಿಂದ ಹಾಲುಂಡು ಬೆಳೆದವರು. ಹೀಗಾಗಿರುವಾಗ ಹೀನರಾರು? ಶ್ರೇಷ್ಠರಾರು? ಕಾರಣ ಈ ಸ್ಥೂಲ  ದೇಹಕ್ಕೆ ಹೀನತೆ ಶ್ರೇಷ್ಠತೆ ಇಲ್ಲ. ಲಿಂಗ ತನುವಿಗೆ ಹೀನತೆ ಶ್ರೇಷ್ಠತೆ ಎನ್ನಲು ವಿಚಾರ ಮಾಡಲು ನಶ್ವರವಾದ ಈ ದೇಹಗಳಿದ್ದು ಅಮಂಗಳದ ಕನಸುಗಳನ್ನು ಕಾಣುತ್ತಿರುವವರು ಇದರಲ್ಲಿ ಶ್ರೇಷ್ಠ ಬ್ರಾಹ್ಮಣರಾರು? ಕೀಳ ಮಾದಿಗರಾರು? ಕಾರಣ ಶರೀರಕ್ಕೆ ಹೀನತೆ ಶ್ರೇಷ್ಟತೆ ಎಣಿಸಲು ಸುಪ್ತಿಯ ಸುಖವು ಸರ್ವರಿಗೂ ಸಮಾನವಾಗಿ ತೋರುವದು. ಕಾರಣ ಇವರಲ್ಲಿ ಬ್ರಾಹ್ಮಣರಾರು? ಶೂದ್ರರಾರು? ಹೇಳುವವನೆ ನೀನು ತಿಳಿದುಕೊ.
ಆತ್ಮನಿಗೆ ಹೀನತೆ ಶ್ರೇಷ್ಟತೆ ಎಣಿಸಲು ಸರ್ವರ ಅಂತರಾತ್ಮನಲ್ಲಿದ್ದು ಮೂರು ಅವಸ್ಥೆಗಳನ್ನು ಅರಿಯುತ್ತಾ ಬೆಳಗುವನು. ಒಬ್ಬನೇ ಸತ್ಯ ಸುಖಾತ್ಮ ಪೂರ್ಣಾತ್ಮನಿರಲು ದ್ವಿಜರಾರು? ಶೂದ್ರರಾರು? ಯಾವಾಗಲೂ ತನ್ನ ಕುಲದ ಅಭಿಮಾನದಿಂದ ಮಾತ್ಸರ್ಯವುಳ್ಳವನಾಗಿರುವ ಸ್ವಾರ್ಥಿಯು ತಾನೇ ಶ್ರೇಷ್ಠನನ್ನುವನು ಇವರೆಂಥಹರು? ನಿಜವಾಗಿ ಸರ್ವರಲ್ಲಿ ಸಮಭಾವದಿಂದ ಇರುವ ಪಂಡಿತನಾದ ಬ್ರಹ್ಮಜ್ಞಾನಿಯೇ ಪರಮ ಬ್ರಾಹ್ಮಣನು ಉಳಿದವರೆಲ್ಲರೂ ಅಂತ್ಯಜರು'' ಅಂತಾ ಸಿದ್ದನು ಗಂಭೀರವಾಗಿ ಆ ಪೂಜಾರಿಗೆ ಹೇಳಿದನು.

ಈತನ ಗಂಭೀರ ವಾಕ್ಯಗಳನ್ನು ಕೇಳಿದ ಪೂಜಾರಿಯು ಈ ಬಾಲಕನು ಪರಮ ಬ್ರಹ್ಮಜ್ಞಾನಿಯಾಗಿರುವನು ಅಂತಾ ತಿಳಿದು, ಅರಮನೆಗೆ ಓಡೋಡಿ ಬಂದು ರಾಜನಿಗೆ ನಡೆದ ವೃತ್ತಾಂತವನ್ನು ಸಾಂಗವಾಗಿ ಹೇಳಿದನು. ಕೂಡಲೇ ರಾಜನು ದೂತರನ್ನು ಕರೆದು ಗುಡಿಗೆ ಹೋಗಿ ಬಾಲಕನಾದ ವೈರಾಗ್ಯ ಮೂರ್ತಿಯನ್ನು ರಥದಲ್ಲಿ ಕೂಡ್ರಿಸಿಕೊಂಡು ಬರಲು ಆಜ್ಞಾಪಿಸಿದನು.

ರಾಜದೂತರು ಗುಡಿಗೆ ಬಂದು ನಮ್ರ  ಭಾವದಿಂದ ಸಿದ್ದ ಬಾಲಕನನ್ನು ಕುರಿತು "ಹೇ ಪರಮ ಪುರುಷನೆ, ತಮ್ಮ ಪೂಜ್ಯ ಪಾದಕಮಲಗಳು ಅರಮನೆಗೆ ದಯಪಾಲಿಸಲೆಂದು ಅರಸನು ಪ್ರಾರ್ಥಿಸಿರುವನು. ಕಾರಣ ಭರದಿಂದ ರಥದಲ್ಲಿ ಆಸೀನರಾಗಿರಿ' ಅಂತಾ ಕೈಮುಗಿದು ಕೇಳಿಕೊಂಡರು. ಆಗ ಸಿದ್ದನು ''ಹೇ ರಾಜದೂತರೇ ಈ ಜಡತನುವೇ ರಥವಾಗಿದೆ. ಇಂದ್ರಿಯಗಳೇ ಕುದುರೆಗಳಾಗಿವೆ. ಮನಸ್ಸೇ ಲಗಾಮು ಆಗಿದೆ. ಬುದ್ಧಿಯೇ ಸಾರಥಿ,ಆತ್ಮನೆ  ರಥಿಕ ಈ ಪ್ರಕಾರದ ನನಗೆ ರಥವಿರಲು ಪ್ರತಿರಥವು ದೋಷರಹಿತ ಬ್ರಹ್ಮಚಾರಿಗೆ ಯೋಗ್ಯವಲ್ಲ ನಿಮ್ಮ ರಾಜನಲ್ಲಿಗೆ ಬಂದು ನಾನು ಮಾಡತಕ್ಕದ್ದೇನು?" ಅಂತಾ ಕೇಳಿದನು.

ಆಗ ರಾಜದೂತರು 'ಹೇ ಮಹಾಮಹಿಮನೆ ಬುದ್ಧಿವಂತ ಮಂತ್ರಿ ಮಂಡಲದಿಂದೊಡಗೂಡಿದ ನಮ್ಮ ರಾಜನು ಸರ್ವ ಪ್ರಜೆಗಳ ಹಿತ ರಕ್ಷಣೆಯಲ್ಲಿ ಯಾವದೊಂದು ಕೊರತೆ ಬಾರದಂತೆ ಧರ್ಮ  ಮಾರ್ಗದಿಂದ ರಾಜ್ಯವನ್ನಾಳುತ್ತಿರುವನು.
ಅಲ್ಲದೆ ಅತ್ಯಂತ ದು:ಖ ನಿವೃತ್ತಿ ಪರಮಾನಂದ ಪ್ರಾಪ್ತಿಯ ಮೋಕ್ಷಾಪೇಕ್ಷೆಯುಳ್ಳವನಾಗಿ ಸುತ್ತಲಿನ ಪುರ ಗ್ರಾಮಗಳಲ್ಲಿಯ ಪಂಡಿತರನ್ನು ಕೂಡಿಸಿ ಪರಮಾರ್ಥ ಚಿಂತನದಲ್ಲಿ ಚರ್ಚೆಯಲ್ಲಿ ತೊಡಗಿಸುವನು. ಈ ಅಧ್ಯಾತ್ಮ ಚಿಂತನದಲ್ಲಿ ಚಿಕಿತ್ಸಾಪೂರ್ವಕ ಪಾಲುಗೊಂಡು ಸತ್ಯವಾದಂತಹ ಮತದ ಮಾರ್ಗ ಅನುಸರಣೆ ಮಾಡುವಲ್ಲಿ ನಿರ್ಧಾರ ಕೈಗೊಳ್ಳುವನು. ಪರಮ ಪವಿತ್ರ ಪೂಜನೀಯ ಈ ಕ್ಷೇತ್ರದ ಅಧಿಪತಿ ಪಂಪಾಪತಿಯೇ ನರರೂಪದಿಂದ ಬಂದಿರಬಹುದೋ ಏನೋ ಎಂಬಂತೆ ಬಂದಿರುವ ತಮ್ಮನ್ನು ಬರಮಾಡಿಕೊಳ್ಳಬೇಕೆಂಬ ನಿರ್ಧಾರದೊಂದಿಗೆ ಪಂಡಿತರನ್ನು ಸಹ ಪರಮ ಧರ್ಮ ಸಂಪನ್ನ ನಮ್ಮ ರಾಜನು ಆಹ್ವಾನಿಸಿದ್ದಾನೆ. ಕಾರಣ ರಾಜನ ಆಮಂತ್ರಣವನ್ನು ಸ್ವೀಕರಿಸಿ ರಾಜಾಸ್ಥಾನಕ್ಕೆ ಆಗಮಿಸಬೇಕೆಂದು ನಯ ವಿನಯ ಭಕ್ತಿ ಭಾವದಿಂದ ಕೈಮುಗಿದು ಪ್ರಾರ್ಥಿಸಿದರು. ಆಗ ಸಿದ್ದ ಬಾಲಕನು ತಥಾಸ್ತು ಅಂತಾ ರಥವನ್ನೇರಿ ಹೊರಟನು. ಅಮೃತ ಶಿಲೆಗಳಿಂದ ಕಟ್ಟಲ್ಪಟ್ಟ ಕಟ್ಟಡ, ಅವುಗಳಿಗೆ ವಿಚಿತ್ರ ದರ್ಪಣಗಳಿಂದ ಲೇಪಿಸಿದ್ದ ದ್ವಾರ ಕಿಡಕಿಗಳ ನೋಟ ಆಕರ್ಷಣೀಯವಾದುದನ್ನು ನೋಡುತ್ತ ನಡೆದನು. ಗಜಶಾಲೆ, ಕುದುರೆ ಶಾಲೆ, ಗೋಶಾಲೆ, ರಥಶಾಲೆ, ಶಸ್ತ್ರಾಗಾರ, ಮದ್ದುಗುಂಡುಗಳ ಭಂಡಾರ, ಸಾಲುಗುಡಿಗಳು, ಸಾಲು ಬಾಝಾರ, ವಿಸ್ತಾರವಾದ ರಾಜಮಾರ್ಗ, ಅಲ್ಲಲ್ಲಿ ತಂಪಾದ ಹವಾ ನೀಡುವ ಕಾರಂಜಿಗಳಿಂದ ಶೋಭಾಯಮಾನವಾದ ರಾಜಧಾನಿಯನ್ನು ನೋಡುತ್ತ ಮುದದಿಂದ ನಡೆದನು. ಸುಂದರವಾದ ಅರಮನೆ ಬರುತ್ತಲೇ ರಥದಿಂದ ಸಿದ್ದ ಬಾಲಕನನ್ನು ಇಳಿಸಿ  ರಾಜದೂತರು ಬಹು ಮರ್ಯಾದೆಯಿಂದ ಆದರ ಪೂರ್ವಕ ರಾಜನ ದರಬಾರಿಗೆ ಕರೆ ತಂದರು. ಆ ರಾಜಸಭೆಯನ್ನು ಶ್ರೀಗಳು ಮನಸಾರೆ ವರ್ಣಿಸಿದ್ದಾರೆ. ಅಮೃತಶಿಲೆಯ  ತೋಲೆ, ಕಂಬ, ಹೊನ್ನಿನ ಹೊದಿಕೆಯ ಗೋಮೇಧಿಕಾ ದ್ವಾರ,  ಸಾಲು ಕಿಡಕಿಗಳು, ಆಕರ್ಷಣೀಯ ಚಿತ್ರಗಳಿಂದ ರತ್ನ ಖಚಿತ ಮಂಟಪ ಅದಕ್ಕೆ ನವರತ್ನ ಖಚಿತ ಭಂಗಾರದ ಗೋಪುರ, ಅಲ್ಲಲ್ಲಿ ಅಮೂಲ್ಯ ರತ್ನ ಮಣಿಗಳ ಗೊಂಚಲಗಳ ಹಾರಗಳು ನಕ್ಷತ್ರ ಮಂಡಲದಂತೆ ಪ್ರಕಾಶ ಮಾನವಾಗಿದ್ದವು.

ಕ್ಷೀರಸಾಗರದ ಬಿಳಿಯ ನೊರೆಯಂತೆ ಕಾಣುತ್ತಿರುವ ಬಿಳಿರೇಶ್ಮೆಯ ಪರದೆಗಳು ಜರಗಳ ಅಂಚಿನಿಂದಿರುವ ರಮ್ಯವಾದ ಛತ್ರಗಳು ರತ್ನಖಚಿತ ಸಿಂಹಾಸನದ ಮೇಲೆ ಮಣಿಗಳ ಸರ, ಮುಕುಟ, ಕೇಯೂರಾದಿ ಭೂಷಣಗಳಿಂದ ತಿಳಿ ನೀಲಿ ಛಾಯೆಯ ನೆಲಗಟ್ಟು ಇಂತಹ ಅಲಂಕೃತ ಸಿಂಹಾಸನದ ಮೇಲೆ ಸಾಕ್ಷಾತ್ ದೇವೇಂದ್ರನೆ ಆಸೀನರಾಗಿರುವಂತೆ ರಾಜನ ಪ್ರತಿಬಿಂಬ ಅವರ್ಣನೀಯವಾಗಿದೆ. ವಸ್ತ್ರಾಭರಣ ಭೂಷಿತ ಸುಂದರ ತರುಣಿಯರು ಎಡಬಲ ಚೌರಿಗಳನ್ನು ಹಾಕುತ್ತಿರುವ ದೃಶ್ಯ ಗಾಯಕಿಯರಿಂದ ಇಂಪಾದ ಗಾಯನ, ವಿದ್ವಾಂಸರಿಂದ ತುಂಬಿದ ರಾಜಸಭೆಯು ಸ್ವರ್ಗಲೋಕದ ಇಂದ್ರಸಭೆಯಂತೆ ಶೋಭಾಯಮಾನವಾಗಿತ್ತು. ಅಂತಾ ಸ್ವತ ಸಿದ್ಧಾರೂಢರು ವರ್ಣನೆ ಮಾಡಿದ್ದನ್ನು ಗ್ರಂಥಕರ್ತರು ನಿರೂಪಿಸಿದ್ದಾರೆ. ಆಗ ರಾಜದೂತರು. ರಾಜನ ಬಳಿಗೆ ಹೋಗಿ ಮಹಾಮಹಿಮನನ್ನು ಕರೆ ತಂದಿರುವುದಾಗಿ
ಹೇಳಿದ ಕೂಡಲೇ ಸಿಂಹಾಸನದಿಂದ ರಾಜನು ಕೆಳಗಿಳಿದು ಸಿದ್ದ ಬಾಲಕನ ಹತ್ತಿರ ಬಂದು, ಅತಿ ವಿನಮ್ರತೆಯಿಂದ ಶಿರಬಾಗಿ ಆತನ ಕರಗಳನ್ನು ಹಿಡಿದುಕೊಂಡು ಸಿಂಹಾಸನದ ಅಗ್ರಭಾಗದ ಉಚಿತಾಸನದಲ್ಲಿ ಕುಳ್ಳಿರಿಸಿದನು. ಆಗ ಆ ಸಭೆಯಲ್ಲಿ ಉಪಸ್ಥಿತರಿದ್ದ ಪಂಡಿತರು ತಮ್ಮ ತಮ್ಮಲ್ಲಿ ರಾಜನು ಈ ತಿರುಕನನ್ನು ಈ ಪೀಠದಲ್ಲಿ ಕೂಡ್ರಿಸಿರುವದು ಸರಿಯಲ್ಲ ಅಂತಾ ಬಡಬಡಿಸತೊಡಗಿದರು. ಇದನ್ನು ಗಮನಿಸಿ ಸಿದ್ಧ ಬಾಲಕನು ರಾಜನನ್ನು ಕುರಿತು 'ಹೇ ರಾಜನ್ ಧನದ ಭಿಕ್ಷೆಯ ಇಚ್ಛೆಯುಳ್ಳ ತಿರುಕರು ಮತ್ಸರ, ನಿಂದಾರೂಪ ಹಂದಿಗಳು ಈ ಸಭೆಯಲ್ಲಿ ಅಮಂಗಳ ರೂಪದಿಂದ ಕಾಣುತ್ತಿರುವರು'' ಅಂತಾ ಪಂಡಿತರನ್ನು ಕುರಿತು ಹೇಳಿದನು. ರಾಜನ ಅಪ್ಪಣೆಯಂತೆ ರಥಗಳನ್ನೇರಿ ಚಿಂತಾಮಣಿ ಆಶ್ರಮಕ್ಕೆ ಆಗಮಿಸಿದರು. ಅಲ್ಲಿರುವ ಸ್ವಾಮಿಗಳು ಉಚಿತಾಸನಗಳನ್ನು ಎಲ್ಲರಿಗೆ ನೀಡಿ ಉಪಚಾರ ಮಾಡಿದರು.

ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಚಿಂತಾಮಣಿ ಆಶ್ರಮದಲ್ಲಿ ಷಣ್ಮತ ಪಂಡಿತರನ್ನು ಜಯಸಿದ ಯತಿಶಿರೋಮಣಿ ಸಿದ್ಧಾರೂಢರು
ಎಲ್ಲಾ  ಕಥೆಗಳ ಲಿಂಕಗಳು 
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3

«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ