ಹೊಳೆಯ ದಡದಲ್ಲಿರುವ ನಾವೆಯನ್ನು ಸಿದ್ಧನೊಬ್ಬನೇ ನೀರೊಳಗೆ ಎಳೆದು ಹಾಕಿದ ಕಥೆ
ಗೋಕಾವಿಗೆ ಆಗಮನ 🌺
ಗಿರಿ, ಅರಣ್ಯಗಳನ್ನು ದಾಟುತ್ತಾ ಗ್ರಾಮಗಳನ್ನು ನೋಡುತ್ತಾ ರೋಗಾದಿಗಳು ಬರಲು ಅನ್ನ ನೀರನ್ನು ಮೂರುದಿನ ಬಿಡುತ್ತಾ, ಮನಸ್ಸಿನಲ್ಲಾಗುವ ತಾಪವನ್ನು ಕಳೆದುಕೊಳ್ಳುತ್ತಾ ಪ್ರಾರಬ್ಧ ಪರಿಚಾರಕರಿಗೆ ತನುವನ್ನು ಒಪ್ಪಿಸಿ, ಸುಖ ದುಃಖಗಳನ್ನು ಅನುಭವಿಸುತ್ತಾ, ಸಿದ್ಧಾರೂಢ ಭಾರತಿಯು ಗೋಕಾವಿಪುರಕ್ಕೆ ಬಂದು ಅಲ್ಲಿ ಭಿಕ್ಷಾನ್ನವನ್ನು ಉಣ್ಣುತ್ತಾ ಹೊಳೆಯ ದಡ ಸೇರಿದನು. ಹೊಳೆಯ ನೀರನ್ನು ಕುಡಿದು ಆನಂದದಲ್ಲಿ ನಿಂತನು. ಅಲ್ಲಿಯ ನಾವಿಕನೊಬ್ಬನು ಈತನನ್ನು ಹುಚ್ಚಾ ಬಾ ಅಂತಾ ಕರೆದು ನಿನ್ನನ್ನು ನದಿಯನ್ನು ದಾಟಿಸಿ ಆಚೆಯ ದಡಕ್ಕೆ ತಲುಪಿಸುವೆ ಅಂತಾ ನುಡಿದನು. ಸಿದ್ಧನು ಆ ನಾವಿಕನ ಕಡೆ ಬೆನ್ನು ಮಾಡಿ ಸುಮ್ಮನೆ ನಿಂತನು. ಆಗ, ನಾವಿಕನು ಸಿದ್ಧನನ್ನು ಹಿಡಕೊಂಡು ನಾವೆಯ ಬಳಿ ನಿಲ್ಲಿಸಿ ಹೊಳೆಯಲ್ಲಿ ಇದನ್ನು ಜಗ್ಗಲೇಬೇಕು ಅಂತಾ ಒತ್ತಾಯ ಮಾಡಿ ಆ ನಾವೆಗೆ ಕಟ್ಟಿದ ಹಗ್ಗವನ್ನು ಸಿದ್ದನ ಕೈಗೆ ಕೊಟ್ಟನು. ಈಗ ಸಿದ್ದನು ನಾವಿಕನು ಹೇಳಿದಂತೆ ನಾವೆಯನ್ನು ಎಳೆದುಕೊಂಡು ಹೋದನು. ಆಗ ನಾವಿಕನು ಚಕಿತನಾಗಿ ಅಹಹಾ! ಹತ್ತು ಜನರು ಕೂಡಿ ಎಳೆದರೂ ಈ ನಾವೆಯು ಸರಿಯದು. ಈತನೊಬ್ಬನೇ ಎಳೆದಿದ್ದಕ್ಕೆ ನೀನಾರು ಅಂತಾ ಪ್ರಶ್ನಿಸಿದನು.
ಆಗ ಸಿದ್ಧನು ಅಯ್ಯಾ ನಾವಿಕನೆ ಕೇಳು, ವೇದದ ಮಹಾವಾಕ್ಯದ ದೋಣಿಯಲ್ಲಿ ಅಜ್ಞ ಜನರನ್ನು ಕೂಡ್ರಿಸಿಕೊಂಡು ಅತ್ಯಂತ ದುಃಖಕರ ಭವ ಸಾಗರವನ್ನು ದಾಟಿಸಿ ಆಚೆಯ ದಡವಾದ ಪರಮಾನಂದ ಸ್ಥಳಕ್ಕೆ ಹರ್ಷದಿಂದ ತಲುಪಿಸುವ ನಾವಿಕ ನಾನು ಅಂತಾ ಉತ್ತರಿಸಿದನು. ಕೂಡಲೇ ಆ ನಾವಿಕನು ಸಿದ್ಧನಿಗೆ ಪೂಜಿಸಿ ವಂದಿಸುತ್ತ ಕ್ಷಮಾಪಣೆ ಕೇಳಿದನು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
