ಉಜ್ಜಣ್ಣವರ ದಂಪತಿಗಳಿಗೆ ಸಿದ್ಧನು ಪುತ್ರನಾಗಿದ್ದುದು ಹಾಗೂ ತೊಟ್ಟಿಲೋತ್ಸವ
ಉಜ್ಜಣ್ಣವರ ದಂಪತಿಗಳಿಗೆ ಸಿದ್ಧನು ಪುತ್ರನಾಗಿದ್ದುದು ಹಾಗೂ ತೊಟ್ಟಿಲೋತ್ಸವ 🌺
ಈ ಪ್ರಕಾರ ಕಷ್ಟಪಡುತ್ತಲೂ ಸಿದ್ದಾರೂಢರು ನಿಜವಾದ ಶಾಂತಿಯನ್ನು ಪಡೆಯುವ ಸಲುವಾಗಿ ಜೀವ ನಾನು ಎಂಬ ಭ್ರಾಂತಿಯನ್ನು ದೂರೀಕರಿಸಿ ಭಕ್ತಜನರಿಗೆ ಆತ್ಮಜ್ಞಾನ ಬೋಧಿಸುತ್ತಿದ್ದರು. ಹೀಗೆ ನಿತ್ಯ ಶ್ರವಣ ಮಾಡುತ್ತಲಿದ್ದ ಉಜ್ಜಣ್ಣವರ ಭೀಮಪ್ಪನೆಂಬ ಭಕ್ತನು ದಂಪತಿಸಹಿತ ಒಂದಾನೊಂದು ದಿನ ಸಿದ್ಧನ ಚರಣಾರವಿಂದಗಳಲ್ಲಿ ವಂದನೆಗಳನ್ನು ಸಲ್ಲಿಸುತ್ತ, ಹೇ ಸದ್ಗುರುವೇ ಮಕ್ಕಳಾಗಿಲ್ಲ ಅಂತಾ ನನ್ನ ಹೆಂಡತಿಯು ಹಂಬಲಿಸುತ್ತಾ ಇರುವಳು. ಕಾರಣ ನಮ್ಮ ಸಂತಾನೇಚ್ಛೆಯನ್ನು ಪೂರೈಸು ಅಂತಾ ಉಭಯತರು ಕೇಳಿಕೊಂಡರು. ಆಗ ಸಿದ್ದನು ಅವರನ್ನು ಕುರಿತು ಅಯ್ಯಾ ಭೀಮಣ್ಣಾ, ನಿನ್ನ ವಂಶವನ್ನು ಹಾಗೂ ನನ್ನ ಹೆಂಡತಿಯು ಜನಕರ ವಂಶವನ್ನು ಈ ಎರಡೂ ವಂಶಗಳನ್ನು ಉದ್ಧಾರ ಮಾಡುವ ಜ್ಞಾನಿಯಾದ ಸುಪುತ್ರನು ನಿನಗೆ ಬೇಕೋ ಅಥವಾ ಸಂಸಾರದಲ್ಲಿ ಬಹು ಚಿಂತೆಗೆ ಕಾರಣವಾಗಬಲ್ಲ ಕರ್ಮಗಳಲ್ಲಿ ರತನಾದ ಚೆನ್ನಿಗನಾದ ಪುತ್ರನು ಬೇಕೋ ಹೇಳು ಅಂತಾ ಪ್ರಶ್ನಿಸಿದನು. ಆಗ ಆ ದಂಪತಿಗಳು ಹೇ ಸ್ವಾಮೀಜಿ, ಜ್ಞಾನಿಗಳಿಂದ ಪೂಜಿತವಾಗುವ ಸತ್ಪುತ್ರನನ್ನು ನಮಗೆ ಕರುಣಿಸು ಅಂತಾ ಪ್ರಾರ್ಥಿಸಿದ ಕೂಡಲೇ ಸಿದ್ಧನು ಅವರಿಗೆ ಹಾಗಾದರೆ ನಾನೇ ನಿಮಗೆ ಪುತ್ರನಾಗುವೆ. ನನ್ನನ್ನು ನಿಮ್ಮ ಮಗನು ಅಂತ ಭಾವಿಸುತ್ತಾ ಪಾಲನೆ ಪೋಷಣೆ ಮಾಡಿರಿ, ಸತ್ ಸುಖದ ನೂರುಪಟ್ಟು ಸುಖವನ್ನು ಭೋಗ ಮಾಡುತ್ತಾ ಮುಕ್ತಿಯನ್ನು ಪಡೆಯುವಿರಿ. ನಿಮ್ಮ ಉಭಯ ವಂಶಗಳು ನಿಜವಾದ ಮುಕ್ತಿಯನ್ನು ಪಡೆಯುವವು ಅಂತಾ ಹೇಳಿದ್ದನ್ನು ಕೇಳಿ ಹರ್ಷೋಲ್ಲಾಸಗಳಿಂದ ಆ ಭೀಮಣ್ಣ ದಂಪತಿಗಳು ಸ್ವಾಮೀಗೆ ನಮಿಸಿದರು. ಕೂಡಲೇ ಅಕ್ಕಸಾಲಿಗರ ಓಣಿಯಲ್ಲಿಯ ತನ್ನ ನಿವಾಸಕ್ಕೆ ಭೀಮಣ್ಣನು ಸಿದ್ಧನನ್ನು ಕರೆತಂದನು. ಜನರನ್ನು ಕೊಡಿಸಿದನು. ತಳಿರು ತೋರಣಗಳಿಂದ ಮನೆಯನ್ನು ಶೃಂಗರಿಸಿದರು. ಹೂಮಾಲೆಗಳಿಂದಲಂಕೃತ ತೊಟ್ಟಿಲವನ್ನು ಕಟ್ಟಿದರು. ಮುತ್ತೈದೆಯರು ಕೊಡದಲ್ಲಿ ಗಂಗೆಯನ್ನು ಸಡಗರದಿಂದ ತಂದರು. ಸಿದ್ದನಿಗೆ ಅಭ್ಯಂಗ ಸ್ನಾನವನ್ನು ಮಾಡಿಸಿ, ಮಡಿ ರೇಷ್ಮೆ ವಸ್ತ್ರಗಳಿಂದ ಅಲಂಕರಿಸಿ ತೊಟ್ಟಿಲಲ್ಲಿ ಕೂಡ್ರಿಸಿದರು. ತೊಟ್ಟಿಲದ ಹತ್ತಿರ ಅಭ್ಯಂಗ ಸ್ನಾನ ಮಾಡಿ ಜರಿ ಪೀತಾಂಬರವನ್ನುಟ್ಟ ಭೀಮಣ್ಣನ ಹೆಂಡತಿಯಾದ ಲಕ್ಷ್ಮವ್ವನನ್ನು ಕೂಡ್ರಿಸಿದರು. ತೊಟ್ಟಿಲೋತ್ಸವಕ್ಕೆ ಆ ಓಣಿಯಲ್ಲಿಯ ಜನರು ಬಂದು ನೆರೆದರು. ಇದೇನಿದು ಪರಶಿವನ ಅವತಾರಿಯಾಗಿ ಸಿದ್ಧಾರೂಢನ್ನು ಪುತ್ರನನ್ನಾಗಿ ಪಡೆದ ಭೀಮಣ್ಣನು ಭಾಗ್ಯವಂತ. ಈತನ ಭಾಗ್ಯಕ್ಕೆ ಈ ವಂಶವು ಉದ್ದಾರವಾಯಿತು. ಉಜ್ಜಣ್ಣವರ ವಂಶವೃಕ್ಷವು ಸ್ವರ್ಗಲೋಕದ ಪಾರಿಜಾತ ಕಲ್ಪವೃಕ್ಷಕ್ಕೆ ಸಮಾನವಾದುದು ಅಂತ ಮಾತನಾಡುತ್ತ ಆನಂದಸಾಗರದಲ್ಲಿ ತೇಲಾಡಿದರು. ಮುತ್ತೈದೆಯರು ಬಹು ಸಡಗರದಿಂದ ಜೋಗುಳ ಹಾಡಿದರು, ನಾಮಕರಣ ಮಾಡಲು ಮುಂದಾದ ಸುಂದರಾಂಗನೆಯರು ಡುಬ್ಬ ಚಪ್ಪರಿಸುತ್ತಾ ವಿನೋದಪಡುತ್ತಿದ್ದರು. ಶ್ರೀ ಗುರು ಸಿದ್ಧ ಅಂತ ನಾಮಕರಣ ಮಾಡಿದರು. ಎಲ್ಲ ಮುತ್ತೈದೆಯರಿಗೆ ಸೀರೆ, ಖಣ ಮುಂತಾಗಿ ಬಾಗಿಣ ಸಲ್ಲಿಸಿ ಗೌರವಿಸಿದರು. ನಂತರ ನೆರೆದವರೆಲ್ಲರೂ ಆನಂದೋಲ್ಲಾಸೆಗಳಿಂದ ಪಂಚ ಪಕ್ಷಾನ್ನಗಳಯುಕ್ತ ಭೋಜನ ಮಾಡಿ ಸಂತೃಪ್ತಿಗೊಂಡು ತಾಂಬೂಲ ಸ್ವೀಕರಿಸಿ ಭೀಮಪ್ಪನ ಅಪ್ಪಣೆ ಪಡೆದು ಶ್ರೀಗಳಿಗೆ ವಂದನೆ ಸಲ್ಲಿಸಿ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಅಂದಿನಿಂದ ಕೊನೆವರೆಗೂ ಅಕ್ಕಸಾಲಿಗರ ಓಣಿಯಲ್ಲಿಯ ಶ್ರೀ ಭೀಮಪ್ಪ ಉಜ್ಜಣ್ಣವರ ಮನೆಗೆ ಪ್ರತಿನಿತ್ಯ ಸಾಯಂಕಾಲ ಬಂದು ಶಾಸ್ತ್ರ ಶ್ರವಣ ಮಾಡಿಸುತ್ತಿದ್ದರು. ಓಂ ನಮಃ ಶಿವಾಯ ಶಿವಭಜನೆಯನ್ನು ಒಂದೇ ಮಾಡುವಂತೆ ಭಕ್ತರಿಗೆ ಮನವರಿಕೆ ಮಾಡಿದ್ದರು. ಸಿದ್ಧನು ಲಕ್ಷ್ಮವ್ವನಿಗೆ ಮಗನಾಗಿರುವೇ ಅಂತ ಹೇಳಿದ್ದರಿಂದ ಬಾಲ್ಯದ ತುಂಟತನದಿಂದ ಬಾಲಲೀಲೆಯಿಂದ ತಾಯಿಗೆ ಮೋದ ನೀಡುತ್ತಿದ್ದನು. ಊಟ ಮಾಡಿ ಮುಸುರೆ ಕೈಯನ್ನು ತಾಯಿಯ ಸೆರಗಿಗೆ ಒರೆಸುವುದು, ಅದಕ್ಕೆ ತಾಯಿಯು ಮಗನಿಗೆ ಬಯ್ಯುವಂತೆ ಒದರುವಿಕೆಯ ಬಾಲ್ಯ ಕ್ರೀಡೆಗಳಿಂದ ತಂದೆ ತಾಯಿಗಳನ್ನು ಆನಂದಗೊಳಿಸುತ್ತಿದ್ದನು. ಶ್ರೀಕೃಷ್ಣನು ಬಾಲ್ಯಾವಸ್ಥೆಯಲ್ಲಿ ತಾಯಿಯಾದ ಯಶೋದೆಯ ಕಣ್ಣುತಪ್ಪಿಸಿ ಬೆಣ್ಣೆಯನ್ನು ಕದ್ದು ತಿನ್ನುತ್ತಿದ್ದಂತೆ, ಲಕ್ಷ್ಮವ್ವನು ದೇವರಿಗೆ ಮಾಡಿದ ಎಡೆಯನ್ನು ಆಕೆಯ ಕಣ್ಣಿಗೆ ಕಾಣದಂತೆ ಸಿದ್ಧನು ಅದನ್ನು ಸೇವಿಸುತ್ತಾ ಕೃಷ್ಣಾನಂತೆ ಲೀಲಾ ಮಾಡಿ ತಾಯಿ ಲಕ್ಷ್ಮವ್ವನಿಗೆ ಸಿಟ್ಟು ಬರುವಂತೆ ಮಾಡುತ್ತಿದ್ದನು. ಪೂರ್ವ ಕಾಲದಲ್ಲಿ ಅಮ್ಮೆವ್ವನೆಂಬ ಮಹಾಪತಿವ್ರತೆ ಸದ್ಭಕ್ತ ಶಿರೋಮಣಿ ಸದನದಲ್ಲಿ ಸಾಕ್ಷಾತ್ ಶಂಕರನು ಬಾಲನಾಗಿ ಬಾಲಕ್ರೀಡೆ ಮಾಡಿದ್ದನ್ನು ಕೇಳುತ್ತಿದ್ದೆವು. ಆದರೆ ನಾವು ಈಗ ಪ್ರತ್ಯಕ್ಷ ಕಾಣುತ್ತಲಿರುವೆವು ಅಂತಾ ಭಕ್ತರು ಸಿದ್ಧನು ವಿನೋದಗಳನ್ನು ಕಂಡು ಸಂತೋಷಪಡುತ್ತಿದ್ದರು. ಕೆಲ ಮಾತ್ಸರ್ಯ ಭಾವದ ಕುಹಕರು ಭೀಮಪ್ಪನಿಗೆ ವ್ಯಂಗೋಕ್ತಿಗಳಿಂದ ನೋಯಿಸುತ್ತಿದ್ದರು. ಎಲ್ಲ ಕುಹಕಿಗಳ ಭಾವನೆಗಳನ್ನು ಕಂಡು ಧೈರ್ಯಶಾಲಿಯಾದ ಭೀಮಪ್ಪನು ತನ್ನಷ್ಟಕ್ಕೆ ತಾನೆ ಪರಶಿವನು ಸಿರಿಯಾಳನ ಸತ್ವಪರೀಕ್ಷಿಸುತ್ತಿರುವಂತೆ ನನ್ನ ಪರೀಕ್ಷೆಯಾಗುತ್ತಲಿದೆ ಅಂತ ಅಂದುಕೊಳ್ಳುತ್ತಿದ್ದನು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
👇ಕೆಳಗಿನ ಲಿಂಕ್ ಕ್ಲಿಕ್ ಮಾಡಿ WhatsApp ge ಹೋಗುತ್ತೆ ಅಲ್ಲಿ ನಿಮ್ಮ್ ಫ್ರೆಂಡ್ಸ್ ಲಿಸ್ಟ್ ಬರುತ್ತೆ ಹಾಗೂ ನೀವು ಇರುವ ಗ್ರೂಪ್ ಬರುತ್ತವೆ ಅದನ್ನ select ಮಾಡಿ ಅವರಿಗೆ ಈ ಕಥೆಯನ್ನು ಶೇರ್ ಮಾಡಬಹುದು 👇1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
