ಸಿದ್ದನು ಆನೆಕಪುರ, ಗ್ರಾಮ, ಗಿರಿಗಳನ್ನು ನೋಡುತ್ತಾ ಕಿಷ್ಕಿಂದಾ ಕ್ಷೇತ್ರವಾದ ಹಂಪಿಗೆ ಆಗಮಿಸಿದ ಬಾಲಸಿದ್ಧ

🕉️ ಸಿದ್ದನು ಆನೆಕಪುರ, ಗ್ರಾಮ, ಗಿರಿಗಳನ್ನು ನೋಡುತ್ತಾ ಕಿಷ್ಕಿಂದಾ  ಕ್ಷೇತ್ರವಾದ ಹಂಪಿಗೆ ಆಗಮಿಸಿದ 


ಶ್ರೀ ಗಜದಂಡ ಸ್ವಾಮಿಗಳ ಮಠದಿಂದ ಸಿದ್ಧಾರೂಢ ಭಾರತಿಯು ವಿವಿಧ ಊರು, ನಗರ, ಗ್ರಾಮ, ಕ್ಷೇತ್ರಗಳನ್ನು ನೋಡುತ್ತಾ ಅಲ್ಲಲ್ಲಿ ಋಷಿಗಳನ್ನು ಕಂಡು ಅವರಿಗೆ ನಮಿಸುತ್ತಾ, ಜಿಜ್ಞಾಸ ಮಾಡುತ್ತಾ, ಆಶ್ರಮಗಳಲ್ಲಿ ವಾಸ ಮಾಡುತ್ತಾ ಕಿಸ್ಕಿಂಧಾ ಕ್ಷೇತ್ರಕ್ಕೆ ಆಗಮಿಸಿದರು. ಹಂಪಿಯಲ್ಲಿ ಶ್ರೀ ವಿರುಪಾಕ್ಷೇಶ್ವರನ ಮೂರ್ತಿಯ ದರ್ಶನ ಮಾಡಿಕೊಂಡು ಹೇಮಕೂಟದ ಮೇಲೆ ಕರಸ್ಥಲ ನಾಗಲಿಂಗ ಸ್ವಾಮಿಯ ಗವಿಗೆ ಹೋದನು. ಅಲ್ಲಿ ಮೂರು ತಿಂಗಳುಗಳಿಂದಲೂ ಯೋಗ ಸಾಧನೆಯಿಂದ ಸವಿಕಲ್ಪ ಸಮಾಧಿಸ್ಥನಾಗುವದರೊಂದಿಗೆ ನಿರ್ವಿಕಲ್ಪ ಸಮಾಧಿ ಹೊಂದಿದ ಯೋಗಿಯ ದರ್ಶನವನ್ನು ಪಡೆದು ಸಿದ್ದನು ವಶಿಷ್ಠಾಶ್ರಮಕ್ಕೆ ಆಗಮಿಸಿದನು, ಅಲ್ಲಿ ಮೂರು ದಿನ ಅಖಂಡಾನಂದವನ್ನು ಅನುಭವಿಸುತ್ತಾ ವಾಸ ಮಾಡಿ ಅಲ್ಲಿಂದ ಗಿರಿ, ಗಂಧ ಮಾಧನಕ್ಕೆ ಬಂದು ಬಹು ವಿಸ್ತಾರವಾದ ಮಾತಂಗಾಶ್ರಮಕ್ಕೆ ಆಗಮಿಸಿ ಸ್ಪಟಿಕದ ಶಿಲೆಯನ್ನು ಕಂಡನು.

ಹಸಿವು ತೃಷೆ ಬಾಧೆಗೆ ಲಕ್ಷ ಕೊಡದೆ ಒಂಭತ್ತು ದಿನಗಳ ವರೆಗೆ ಕಿಸ್ಕಿಂಧಾ ಕ್ಷೇತ್ರದಲ್ಲಿಯ ತಪೋಭೂಮಿಗಳನ್ನು ನೋಡುತ್ತಾ, ಹರ್ಷಪಡುತ್ತ ಸಂಚರಿಸಿದನು. ವಿಪರೀತ ಭಾವ ತೊರೆದು ಸಂಶಯ ಭಾವಗಳಿಂದ ದೂರಾಗಿ ಯೋಗಗಳಿಗೆ. ವಿಘ್ನುಕಾರಕ ಮಲ ವಿಕ್ಷೇಪಗಳನ್ನು ಕಳೆದು ಅಖಂಡ ಪರಬ್ರಹ್ಮಾಕಾರ ವೃತ್ತಿಯ ಆನಂದದ ತಾಣವಾಗಿರುವ ಈ ತಪೋಭೂಮಿ ಅಂತಾ ವರ್ಣಿಸಿದನು. ಅಲ್ಲಿಂದ ಹೊರಟು ಪಂಪಾ ಸರೋವರದ ಸಮೀಪಕ್ಕೆ ಬಂದು ಮಾನಸ ಸರೋವರದಲ್ಲಿ ಸ್ನಾನ ಮಾಡಿ ಶ್ರೀ ರಾಮ ಮೂರ್ತಿಯ ದರ್ಶನ ಪಡೆದನು. ಚಕ್ರತೀರ್ಥದ ಬಳಿ ನಿಂತು, ವಾಲಿಭಾಂಡಾರವನ್ನು ನೋಡಿದನು. ಸಿದ್ದಾರೂಢ ಭಾರತಿಯು ಕೂಡಲೇ ಗುಡಿ, ಕಾಡು, ಗುಡ್ಡ, ಗವಿಗಳಲ್ಲಿ ಸಂಚರಿಸುತ್ತಾ ಮಾರ್ಗದಲ್ಲಿ ಹಸಿವು ತೃಷೆಗಳಿಗೆ ಲಕ್ಷ್ಯ ಕೊಡದೇ ಶೀತೋಷ್ಣಗಳಿಗೆ ಅಂಜದೆ, ಮದ್ದಾನೆಯಂತೆ ಧೈರ್ಯದಿಂದ ನಡೆಯುತ್ತಾ ಆನೆಗೊಂದಿ ತಲುಪಿದನು.

ಆಗ ಆಕಾಶದಲ್ಲಿ ಕಾರ್ಮೋಡಗಳು ಕವಿದು ಗಿರಿಗಳಂತೆ ತೆರೆ ತೆರೆಯಾಗಿ ವೇಗವಾಗಿ ಚಲಿಸುತ್ತಿರುವಂತೆ ಇದಕ್ಕೆ ಬೆರಗಾದಂತೆ ದೇವೇಂದ್ರನು ಗಿರಿಗಳನ್ನು ಧ್ವಂಸ ಮಾಡಲು ವಜ್ರಾಯುಧವನ್ನು ಪ್ರಯೋಗಿಸಿರಬಹುದೇ? ಎಂಬಂತೆ ಕೋಲ್ಕಿಂಚಿನ ಬೆಳಕು ಝಳಪಿಸುತ್ತಿತ್ತು. ವರುಣದೇವನ ಬಾಣಗಳಂತೆ ಮಳೆ ಹನಿಗಳು ಬೀಳುತ್ತಿದ್ದವು. ಇಂದ್ರನ ಸೈನಿಕರು ಆರ್ಭಟ ಮಾಡುತ್ತಿರುವರೋ ಎಂಬಂತೆ ಗುಡುಗು ಸಿಡಿಲುಗಳು, ಆರ್ಭಟ ಶತೃಸೈನ್ಯ ನಿಗ್ರಹಿಸಲು ಆ ಕ್ಷೇತ್ರದ ರಾಜನ ಸೈನಿಕರು ಬಂದಿರುವರೋ ಏನೋ ಎಂಬಂತೆ ತುಂಗಭದ್ರಾ ನದಿಯು ಭೋರೆಂದು ಹರಿಯುತ್ತು,  ಆನೆಗೊಂದಿಯ ಮಾರ್ಗವು ಜಲಾವೃತವಾಯಿತು. ಈ ಪ್ರಕಾರ ಅಬ್ಬರದ ಮಳೆ ಸುರಿ ಸುರಿದು ಶಾಂತವಾಗಿ ಬಿರುಗಾಳಿ ರಭಸಕ್ಕೆ ಮೋಡಗಳು ಚದುರಿದವು. ಸೂರ್ಯನು ಕಾಣಿಸತೊಡಗಿದನು. ಸರೋವರದಲ್ಲಿ ಸೂರ್ಯದರ್ಶನವಾಗುತ್ತಲೇ ಕಮಲಗಳು ಅರಳಿದವು. ಬೀರಿದ ಸುವಾಸನೆಗೆ ಆಕರ್ಷಿಸಿದ ಭೃಂಗಗಳು ಝೇಂಕಾರ ನಿನಾದದಿಂದ ಕಮಲದಲ್ಲಿಯ ಮಧು ಪಾನ ಮಾಡುತ್ತ ಮೈಮರೆತವು. ಗಗನ ಚುಂಬಿತ ಗಿಡಗಳಿಂದ ಕೂಡಿದ ಆ ವನದಲ್ಲಿ ಗಿಳಿ, ಪೀಕಾಕ್, ಶಾರಿಕ, ಚಾತಕ, ಮೈನೆ, ಪಕ್ಷಿಗಳೆಲ್ಲವು ತಮ್ಮ ಹರುಷದಿಂದ ಮಾಡುತ್ತಿರುವ ಮನೋಲ್ಲಾಸಕ ಇಂಪಾದ ಕಿಲ-ಕಿಲ ನಾದವು ಕೇಳತೊಡಗಿತು. ತೆಂಗು, ಹಲಸು, ನಾರಂಗಿ, ನೆಲ್ಲಿಹಣ್ಣು, ನೇರಲ ಹಣ್ಣು, ಖರ್ಜೂರ, ಮುಂತಾದವುಗಳನ್ನು ಮುನಿಗಳಿಗೆ ಶೃಂಗಾರದಿಂದ ಅಂಗನೆಯರು ಫಲಗಳನ್ನು ಕೊಡುತ್ತಿರುವರೋ ಏನೋ ಎಂಬಂತೆ ತುಂಗ-ಭದ್ರಾ ತಟಾಕದಲ್ಲಿ ನಿಂತಿರುವ ಗಿಡಗಳು ಶೋಭಿಸಿದವು. ಪಾರಿಜಾತ, ವಾಸನೆ ಮಲ್ಲಿಗೆ, ಸೇವಂತಿ, ಸಂಪಿಗೆ, ಜಾಜಿಮಲ್ಲಿಗೆ, ಮುಂತಾದ ಹೂಬಳ್ಳಿ ಗಿಡಗಳು ಸುವಾಸನೆ ಬೀರಿ ಭೃಂಗಗಳಿಗೆ ಪಾನ ನೀಡುವ ಆಕರ್ಷಣೀಯಗಳಾಗಿದ್ದವು. ಗಿಡದಿಂದ ಗಿಡಕ್ಕೆ ಜಿಗಿಯುತ್ತಿರುವ ಮಂಗಗಳು ಹಣ್ಣುಗಳನ್ನು ಅರ್ಧಮರ್ಧ ಕಡಿದು ಹಲ್ಲು ಕಿಸಿಯುತ್ತಾ ಸ್ತ್ರೀ ಮತ್ತು ಬಾಲಕರ ಮೇಲೆ ಒಗೆಯುತ್ತಿದ್ದ ಚೇಷ್ಟೆಯನ್ನು ಕಂಡು ನೋಡಿದವರಿಗೆಲ್ಲ ಉಲ್ಲಾಸವಾಗುತ್ತಿತ್ತು. 

ದನಕರುಗಳನ್ನು ಅಡವಿಯಲ್ಲಿ ಮೇಯಿಸಿ ಮಳೆ ಬಂದಿದ್ದರಿಂದ ಹೊಳೆಯ ದಂಡೆಯ ದೇವಾಲಯದಲ್ಲಿ ಗೋಪಾಲಕರು ಕೂತು ಊಟ ಮಾಡುತ್ತಿದ್ದರು. ಸಿದ್ದನು ಆ ದನ ಕಾಯುವ ಬಾಲಕರಲ್ಲಿ ಅನ್ನ ಭಿಕ್ಷೆ ಕೇಳಿ ಭೋಜನ ಮಾಡಿದನು, ಆ ವನದ ಎಲ್ಲ ದಿಕ್ಕುಗಳಲ್ಲಿಯೂ ವ್ಯಾಪಕವಾದ ಪರಿಮಳವನ್ನು ಆಸ್ವಾದಿಸುತ್ತ ಸಿದ್ದನು ಪುರ ಪ್ರವೇಶಿಸಿದನು. ಆ ರಾಜಧಾನಿಯ ಕೋಟೆಗೆ ಅಮೃತ ಶಿಲಾವರಣ ಸುಂದರವಾಗಿತ್ತು. ನೀಲವರ್ಣದ ಶಿಲೆಯಿಂದ ತಯಾರಿಸಲಾದ ಪುರದ ಮಹಾದ್ವಾರದ ಮೇಲೆ ಭಂಗಾರದ ಕಲಶ ಅದಕ್ಕೆ ಮುತ್ತಿನ ಸರದಲ್ಲಿ ಪಂಚ ರತ್ನದಿಂದ ಸುತ್ತುವರೆದದ್ದು ಚಿನ್ನದ ಕದ ಅದಕ್ಕೆ ಚಿನ್ನದ ಸರಪಳಿ ಇತ್ಯಾದಿಗಳಿಂದ ಆಕರ್ಷಣೀಯವಾಗಿತ್ತು. ಈ ಮಹಾದ್ವಾರವನ್ನು ನೋಡುತ್ತ ಸಿದ್ಧನು ಆನಂದಿಸುತ್ತ ಪುರ ಪ್ರವೇಶ ಮಾಡುತ್ತಲಿದ್ದನು. ಆ ಪುರವನ್ನು ಕಂಡು ಸಕಲ ವೈಭವ ಸಂಪನ್ನ ದ್ವಾರಕಾ ಪಟ್ಟಣವು ಪಶ್ಚಿಮ ಸಮುದ್ರದಲ್ಲಿ ಮುಳುಗಿ ಇಲ್ಲಿ ಉದಯವಾಗಿರಬಹುದೇ ಅಂತಾ ಚಕಿತಗೊಂಡು ಸಿದ್ಧನು ವರ್ಣಿಸತೊಡಗಿದನು. ಎಡಬಲಕ್ಕೆ ಹೂಮಾಲೆ  ಮಾರುವ ಅಂಗಡಿಗಳಲ್ಲಿ ಸಂಭ್ರಮದಿಂದ ಸುಂದರ ತರುಣಿಯರು ಪೂಮಾಲೆಗಳನ್ನು ಕೊಳ್ಳುತ್ತಿರುವ ರಮಣೀಯ
ದೃಶ್ಯ, ನಡು ಬಜಾರದಲ್ಲಿರುವ ಕಂಕಣ, ಕಟಕ, ಕುಂಡಲ, ನಡುವಿನ ಒಡ್ಯಾಣಗಳ ಸರಾಫಿ ಅಂಗಡಿಗಳನ್ನು ನೋಡುತ್ತಾ, ಆ ಪುರದ ರಾಜನ ಕುಲದೇವತೆ ಮೃಡನ ದೇವಾಲಯಕ್ಕೆ ಆಗಮಿಸಿದನು. ಆ ಗುಡಿಯ ಸಡಗರವನ್ನು ವರ್ಣಿಸಲಸಾಧ್ಯ. ಈ ದೇವಾಲಯಕ್ಕೆ ಚಿನ್ನದ ಮಹಾದ್ವಾರ, ಗೋಪುರಕ್ಕೆ ನವರತ್ನ ಖಚಿತ ಕಲಶಗಳು ಅವುಗಳಿಗೆ ಆಕರ್ಷಣೀಯ ಗೋಡೆಗಳು ಅವುಗಳಲ್ಲಿ ಮುತ್ತಿನ ಮಣಿಗಳು ಅಂದವಾಗಿದ್ದವು. ದೇವಾಲಯದ ಸುತ್ತಲೂ ವಿಸ್ತಾರವಾದ ಪೌಳಿ, ಅಮೃತ ಶಿಲೆಯ ತೊಲೆ ಕಂಭಗಳು, ಸುತ್ತಲೂ ಕಾರಂಜಿಗಳು ಗಿಡಬಳ್ಳಿ ಹಾಗೂ ಅವುಗಳಲ್ಲಿ ಘಮಘಮಿಸುವ ಹೂವುಗಳು ಆಕರ್ಷಣೀಯವಾಗಿದ್ದವು.

ಆ ದೇವಾಲದಲ್ಲಿ ಮಧ್ಯಭಾಗದಲ್ಲಿ ನವರತ್ನ ಖಚಿತ ಚಿನ್ನದ ಗೋಡೆಗಳಿಂದಿರುವ ಪಂಪಾಪತಿಯ ಗರ್ಭಗುಡಿಗೆ ಚಿನ್ನದ ಗೋಪುರ ಬಾಗಿಲುಗಳು, ಅವುಗಳಲ್ಲಿಯ ಆಕರ್ಷಣೀಯ ಪುಷ್ಪರಾಗದ ಚಿತ್ರಗಳನ್ನು ಕೆತ್ತಿದ್ದವು. ಗರ್ಭಗುಡಿಯ ಗೋಪುರದ ಕಳಸಕ್ಕೆ ಸಾಲು ಮುತ್ತಿನ ಸರ ಹಾಕಿದ್ದನ್ನು ನೋಡಲು ನಕ್ಷತ್ರ ಮಂಡಲದಂತೆ ಭಾಸವಾಗುತ್ತಿತ್ತು. ಆ ಭವ್ಯ ದೇವಾಲಯದಲ್ಲಿ ಸ್ಪಟಿಕದ ಪೀಠದ ಮೇಲೆ ಪ್ರತಿಷ್ಠಾಪನೆಯಾದ ಶಿವಲಿಂಗ, ಎದುರಿಗೆ ನಂದಿ ನವರತ್ನ ಖಚಿತ ಕಿರೀಟದೊಂದಿಗೆ ಪೂಜಿಸುತ್ತಿರುವ ದೃಶ್ಯವು ರಮಣೀಯವಾಗಿತ್ತು. ಪಂಪಾಪತಿಗೆ ನಂದಿಗೆ ಮುತ್ತು ರತ್ನಾಭರಣಗಳ ಅಲಂಕಾರ, ಗಂಧಾಕ್ಷತೆ, ಕಸ್ತೂರಿ ಹಚ್ಚಿ ಬಿಲ್ವಪತ್ರ ಏರಿಸಿ, ಶ್ರೀಗಂಧತೈಲದಿಂದ ಉರಿಯುವ ಲಕ್ಷದೀಪ ನಂತರ ಧೂಪಾರ್ತಿ ಹಚ್ಚಲು ನಗಾರಿ ಘಂಟೆ, ಕಹಳೆ, ತುತೂರಿ, ಮೃದಂಗ , ತಮ್ಮಟೆ, ವಾದ್ಯಗಳು ಮೊಳಗಿದವು, ಸಾಕ್ಷಾತ್ ಕೈಲಾಸದಲ್ಲಿ ಶಿವನ ಪೂಜೆಯಂತೆ ವೈಭವದಿಂದ ಪಂಪಾಪತಿಯ ಪೂಜಾ ನಡೆಯಿತು. ಆಚಾರ್ಯರು ಸ್ವರಯುಕ್ತವಾಗಿ ಪುರುಷ ಸೂಕ್ತ ಮಂತ್ರಗಳ ಘೋಷಣೆ ಮಾಡಿ ನೈವೇದ್ಯವನ್ನು ಮಾಡಿದರು. 

ಮಹಾಪೂಜೆಗೆ ಆಗಮಿಸಿದ ಜರದ ಪೀತಾಂಬರವನ್ನು ಉಟ್ಟ ವಿವಿಧ ರತ್ನಾಭರಣಗಳಿಂದಲಂಕೃತ ಸುಂದರ ವದನೆಯರು ತಮ್ಮ ತಮ್ಮ ಮಕ್ಕಳೊಂದಿಗೆ ಆಗಮಿಸಿ ಪಂಪಾಪತಿಯ ದರ್ಶನ ಪ್ರದಕ್ಷಿಣೆ ಗೈದು ಪ್ರಸಾದ ಸ್ವೀಕರಿಸಿ ತೆರಳುತ್ತಿರುವ ದೃಶ್ಯವು ಮನಮೋಹಕವಾಗಿತ್ತು. ಈ ಎಲ್ಲ ವೈಭವದ ದೃಶ್ಯವನ್ನು ಕಂಡು ಹರ್ಷೋಲ್ಲಾಸಗಳಿಂದ ಸಿದ್ಧನು ಗುಡಿಯಲ್ಲಿ ಹೋಗಲು, ಪೂಜಾರಿಯು ಆರ್ಭಟಿಸುತ್ತಾ ಸಿದ್ದನನ್ನು ಕುರಿತು “ಎಲೈ  ಹುಡುಗಾ ನೀನು ಅಂತ್ಯಜನೋ? ಹಸಿದ ಮುಸಲನೋ? ಗುಡಿಯಲ್ಲಿ ಯಾಕೆ ಬಂದಿರುವೆ ಹೊರಗೆ ನಡೆ''  ಅಂತಾ ಗದರಿಸಿದನು.


ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಆನೆಗೊಂದಿಯ ರಾಜ್ಯಸಭೆಯಲ್ಲಿ ಅದ್ವೈತ ಚಕ್ರವರ್ತಿ ಸಿದ್ಧರು
ಎಲ್ಲಾ  ಕಥೆಗಳ ಲಿಂಕಗಳು 
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉  
3

«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ