ಸಿದ್ಧಾರೂಢರ ಜಾತ್ರೆಯಿಂದ ಲಕ್ಷಾವಧಿ ಭಕ್ತ ಸಮುದಾಯಕ್ಕೆ ಬೋಧನೆ, ಅನ್ನಸಂತರ್ಪಣೆ ಮುಂತಾದವುಗಳಿಂದ ಅವತಾರಿ ಪುರುಷನ ಮಹಿಮೆ
🕉️ಸಿದ್ಧಾರೂಢರ ಜಾತ್ರೆಯಿಂದ ಲಕ್ಷಾವಧಿ ಭಕ್ತ ಸಮುದಾಯಕ್ಕೆ ಬೋಧನೆ, ಅನ್ನಸಂತರ್ಪಣೆ ಮುಂತಾದವುಗಳಿಂದ ಅವತಾರಿ ಪುರುಷನ ಮಹಿಮೆ.
ಸಿದ್ಧಾರೂಢ ಮಹಿಮೆಯನ್ನು ಈತನು ಬೋಧನೆ ಮಾಡುತ್ತಿರುವ ಪರಬ್ರಹ್ಮ ವಿದ್ಯೆಯನ್ನು ನೋಡುತ್ತಾ, ಈತನು ಸಾಕ್ಷಾತ್ ಪರಶಿವನ ಅವತಾರಿಯೆಂದು, ಸಿದ್ಧಾರೂಢ ಸದ್ಗುರು ತಂದೆ ಉದ್ದಾರರಾದೇವೈ ನಿಮ್ಮಿಂದೇ ಅಂತ ದೇಶದ ಜನರು ಭಕ್ತಿಪೂರ್ವಕ ಮಠಕ್ಕೆ ಆಗಮಿಸಿ ತಮ್ಮ ಸಂಶಯಗಳನ್ನು ನಿವಾರಣೆ ಮಾಡಿಕೊಂಡು ಹರ್ಷದಿಂದ ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದರು. ಈ ಪ್ರಕಾರ ಭರತ ಖಂಡದಲ್ಲಿ ಎಲ್ಲಿ ನೋಡಿದಲ್ಲಿ ಪರಮ ಪಂಚಾಕ್ಷರಿ ಭಜನೆ ನಡೆಯುತ್ತಿತ್ತು. ಮತ್ತು ಮೆರವ ವೇದಾಂತ ಶಸ್ತ್ರಾಭ್ಯಾಸ ನಡೆಯಹತ್ತಿತ್ತು. ಹೀಗಿರುತ್ತಿರುವಲ್ಲಿ ಶಿವರಾತ್ರಿಯಲ್ಲಿ ಶಿವಯೋಗಿಗಳ ಗಣದೊಡನೆ ಸಂಭ್ರಮದಿಂದ ಆನಂದೋತ್ಸಾಹದ ಜಾತ್ರೆಯಲ್ಲಿ ಕೂಡುತ್ತಿರುವ ರಾಗಿಗಳು ಹಾಗೂ ವಿರಾಗಿಗಳು ತಮ್ಮ ತಮ್ಮ ಮನಸ್ಸಿನ ಸಂಶಯದ ಬೇರುಗಳನ್ನು ಕಿತ್ತುಹಾಕಿ ಹೋಗುತ್ತಿದ್ದರು. ಈ ಜಾತ್ರೆಯ ಖ್ಯಾತಿಯು ದೇಶದ ನಾನಾ ಮೂಲೆಗಳಲ್ಲಿ ಪಸರಿಸಿತು. ಪೂರ್ವದಲ್ಲಿ ಇಂತಹ ಜಾತ್ರೆಗಳನ್ನು ಕಂಡಿಲ್ಲ. ಅಭೂತಪೂರ್ವ ಐತಿಹಾಸಿಕ ಶಿವರಾತ್ರಿ ಉತ್ಸವವು ಮಹದಾನಂದ ಸುಖವನ್ನು ನೀಡುತ್ತದೆ ಅಂತಾ ಭಕ್ತವೃಂದವು ಅಭಿಪ್ರಾಯಪಡುತ್ತಿತ್ತು.
ಸಪ್ತಾಹದಲ್ಲಿ ಅನ್ನಸಂತರ್ಪಣೆ ನಡೆಯಲಾರಂಭಿಸಿದ್ದುದನ್ನು ವೀಕ್ಷಿಸಿ ೧೨ನೇ ಶತಮಾನದಲ್ಲಿ ಬಸವಣ್ಣನು ನಡೆಸಿದ ದಾಸೋಹಕ್ಕಿಂತಲೂ ಮಿಗಿಲಾದುದು ಅಂತ ಪ್ರಸಾದ ಸ್ವೀಕರಿಸುತ್ತಾ ಭಕ್ತರು ಆನಂದ ಪಡುತ್ತಿದ್ದರು. ರಾಶಿ ರಾಶಿಯಾಗಿ ದಾನ ಮಾಡುತ್ತಿದ್ದರು. ಅಲ್ಲಲ್ಲಿ ದಾಸೋಹದ ಛತ್ರಗಳ ಚಪ್ಪರಗಳನ್ನು ಹಾಕಿಸುತ್ತಾ ಅನ್ನ ಸಂತರ್ಪಣೆಯನ್ನು ಸುವ್ಯವಸ್ಥಿತವಾಗಿ ಮಾಡುತ್ತಿದ್ದರು. ಎಲ್ಲ ಛತ್ರಗಳಲ್ಲಿ ಸಿದ್ಧಾರೂಢರು ಹೋಗಿ ಅನ್ನಪೂರ್ಣೆಯ ಪೂಜೆ ಹಾಗೂ ಶ್ರೀಗಳ ಪೂಜಾ ಮಂಗಳಾರತಿ ಮಾಡಿ ಹರಹರ ಮಹಾದೇವ ಅಂತಾ ಜಯಘೋಷಗಳಿಂದ ಅನ್ನ ಪ್ರಸಾದ ಸ್ವೀಕರಿಸುವರು. ಅನ್ನಪೂರ್ಣಾಮಾತೆಯು ವಿರಾಟ್‌ರೂಪ ಧರಿಸಿ ತನ್ನ ಸಹಸ್ರ ಸಹಸ್ರ ಬಾಹುಗಳಿಂದ ಉಣಬಡಿಸುತ್ತಿರುವಳೋ , ಏನೋ ಎಂಬಂತೆ ಭಾಸವಾಗುತ್ತಿತ್ತು. ಈತನು ಸಾಕ್ಷಾತ್ ಭಗವಾನ್ ಪರಶಿವನವತಾರಿ ಅಂತಾ ಭಕ್ತರು ನಮಿಸುತ್ತಾ ಭೋಜನ ಸ್ವೀಕರಿಸುವ ದೃಶ್ಯ ಆಕರ್ಷಣೀಯವಾಗಿತ್ತು. ಇಲ್ಲಿ ಯಾವುದರ ಕೊರತೆಯಿರಲಿಲ್ಲ. ಶಾಸ್ತ್ರ ಶ್ರವಣ, ಕೀರ್ತನ ಕೇಳುವುದು, ಶಿವ ಪಂಚಾಕ್ಷರಿ, ಭಜನೆ ಹಾಗೂ ಶ್ರೀಗಳ ದರ್ಶನ, ಪೂಜಾ, ಮಹಾಮಂಗಳಾರತಿ ನೋಡಿ ಆಶೀರ್ವಾದ ಪಡೆದು ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದರು.
ಅಸೂಯೆಪರ ನಿಂದಕರು ಪುಣ್ಯದ ಸಲುವಾಗಿ ಅನ್ನದಾನವನ್ನು ಮಾಡುವ ಪರಿಪಾಠವಿದೆ. ಆದರೆ ನರರನ್ನು ಉದ್ಧಾರ ಮಾಡಲು ಬಂದ ಶಿವನವತಾರಿ ಈತನು ಹೇಗಾಗುವನು ಅಂತ ಮಾಡುತ್ತಿರುವ ನಿಂದನೆಯನ್ನು ಕೇಳಿ ಮನನೊಂದ ಭಕ್ತರು, ಶ್ರೀಗಳಲ್ಲಿ ಹೋಗಿ ಇದನ್ನು ಹೇಳಿ ತಮಗಾದ ದುಃಖವನ್ನು ತೋಡಿಕೊಂಡರು.
ಆಗ ಸಿದ್ದಾರೂಢರು ಸಾಂತ್ವನ ಮಾಡುತ್ತಾ ಅವರನ್ನು ಕುರಿತು, ಹೇ ಭಕ್ತರೇ, ಅನ್ನವನ್ನು ಸ್ವೀಕಾರ ಮಾಡುವುದರಿಂದ ಅದು ಶರೀರದಲ್ಲಿ ಹೋಗಿ ಮೂರು ಭಾಗವಾಗುವುದು. ತಾಮಸದ ಭಾಗ ಮಲವಾಗುವುದು, ರಾಜಸ ಭಾಗವು ಧಾತುವಾಗುವದು, ಸಾತ್ವಿಕ ಭಾಗವು ಕರಣಗಳಾಗುವವು, ಕಾರಣ ಊಟ ಮಾಡುವಾಗ ಪರಶಿವನ ಧ್ಯಾನ ಮಾಡಿದಲ್ಲಿ ರೋಗವಿಲ್ಲದ ಶರೀರವಾಗಿ ಸತ್ವಗುಣವು ಅಧಿಕವಾಗುವುದು. ಸ್ಥಿರ ಮನಸ್ಸಿನಿಂದ ಸನ್ಮಾರ್ಗದಲ್ಲಿ ನಡೆಯುವನು. ಶ್ರೇಷ್ಠವಾದ ವೀರ್ಯ ವೃದ್ಧಿಯಾಗಿ ಆತನಿಗೆ ಸತ್ಪುತ್ರರು ಜನಿಸಿ ಆ ವಂಶದ ಇಪ್ಪತ್ತೊಂದು ತಲೆಯವರೆಗೆ ಉದ್ಧರಿಸುವನು. ವಸ್ತುಸ್ಥಿತಿ ಹೀಗಿರುವದರಿಂದ, ಪ್ರಪಂಚದಲ್ಲಿದ್ದುಕೊಂಡು ಇದನ್ನು ಸಾಧಿಸಲು ಸಾಧ್ಯವಾಗದ್ದನ್ನು ಕಂಡು ಸಾಧುಗಳು, ಮಹಾತ್ಮರು ಸಂತರು ಪ್ರತಿವರ್ಷ ಶಿವರಾತ್ರಿ, ಶ್ರಾವಣದಲ್ಲಿ ಜಾತ್ರೆಯನ್ನು ಮಾಡಲು ಜನರು ಭಕ್ತಿಯಿಂದ ಆಗಮಿಸಿ ತಮ್ಮ ನಿತ್ಯದ ವ್ಯವಹಾರಗಳನ್ನು ಮರೆತು ಪರಮಾನಂದದಲ್ಲಿ ಲೀನರಾಗಿ ಅದರ ಆಕಾರವಾಗಿ ಶಿವ ಮಂತ್ರೋಚ್ಯರಣೆಯಿಂದ ಸಿದ್ಧಪಡಿಸಿದ ಅನ್ನವನ್ನು ಆನಂದದಿಂದ ಸಿದ್ದರು ಎಲ್ಲರಿಗೂ ಉಣಬಡಿಸಲು, ಈ ಪ್ರಕಾರ ಪ್ರತಿ ವರ್ಷ ಸಂತಸದ ಪ್ರಸಾದ ಸ್ವೀಕರಿಸಿ ಸನ್ಮಾರ್ಗಪಿಡಿದು ಶಾಂತ ಸ್ವಭಾವಗಳನ್ನು ಪಡೆದಲ್ಲಿ ಮೇಲಿಂದ ಮೇಲೆ ಧರೆಗೆ ಶಿವನು ಅವತಾರ ಧಾರಣ ಮಾಡಿ ಬರುವನು ಅಂತಾ ಹೇಳಿದರು. ಅದಕ್ಕೆ ಆನಂದ ಪಡೆದು ಸಿದ್ಧಾರೂಢ ಸ್ವಾಮಿ ಮಹಾರಾಜ ಕಿ ಜಮ್ ಅಂತಾ ಜಯಘೋಷ ಮಾಡಿದರು.
ಪರತರ ವೇದಾಂತ ಶಾಸ್ತ್ರ ಶ್ರವಣ, ಶಿವಭಜನಾ ತತ್ಪರನನ್ನಾಗಿ ಮಾಡಿದ ಸ್ವಾಮಿಯು ಭರತ ಖಂಡದಲ್ಲಿ ಅಭೂತಪೂರ್ವ ಜಾತ್ರೆಯನ್ನು ಸಂಘಟಿಸಿ, ಜಗದುದ್ಧಾರ ಮಾಡುತ್ತಿರುವನು, ಜನರನ್ನು ಸನ್ಮಾರ್ಗಕ್ಕೆ ಹೆಚ್ಚುತ್ತಿರುವನು. ಕಾರಣ ಆತನ ಮಾಡುತ್ತಿರುವ ಅನ್ನದಾನವು ಪುಣ್ಯ ಪಡೆಯಲಿಕ್ಕೆಯೋ ಅಥವಾ ಲೋಕೋದ್ವಾರಕ್ಕಾಗಿಯೋ ನೀವೇ ಯೋಚನೆ ಮಾಡಿರಿ ಅಂತ ಪರಸ್ಪರರು ತಾವು ತಾವೇ ಮಾತನಾಡುತ್ತಿದ್ದರು, ಸರ್ವರೀತಿಯಿಂದ ವಿಚಾರ ಮಾಡಿ ನೋಡಲಾಗಿ, ಈತನು ಪರಶಿವನ ಅವತಾರಿಯಲ್ಲದೆ ಸಾಮಾನ್ಯ ಮಾನವನಲ್ಲ. ಗುರುವಿನ ಮಹಿಮೆಯನ್ನು ಹರಿಹರಾದ್ಯರಿಗೆ ತಿಳಿಯಲು ಅಸಾಧ್ಯವಾಗಿದ್ದರಿಂದ ನ ಗುರೋದಧಿಕ0 ಅಂತ ಸಾರಿ ಸಾರಿ ಹೇಳಿದ್ದಾರೆ. ಈ ಪ್ರಕಾರ ಶಿವನೇ ಪ್ರೀತಿಯಿಂದ ಶಾಸನ ಮಾಡಿದ್ದರಿಂದ ಸದ್ಗುರುನಾಥನು ನರನೆಂದು ನಿಂದಿಸುವ ಹಂದಿಯಂಥ ಜನರ ಕಾಲುಗಳನ್ನು ಹಗ್ಗಗಳಿಂದ ಕಟ್ಟಿಹಾಕಿ ಕೋಟಿ ಕೋಟಿ ಯುಗ ಪರ್ಯಂತರ ನರಕದಲ್ಲಿ ಹಾಕಬೇಕೆಂದು ಉಗ್ರವಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಲಿದ್ದರು. ಧಾನ್ಯಗಳನ್ನು ತುಂಬಿಕೊಂಡು ಬರುವ ಅನೇಕ ಬಂಡಿಗಳ ಸಾಲು, ಕಟ್ಟಿಗೆ ತುಂಬಿದ ಟ್ರಕ್ಕುಗಳು, ಕಾಯಿಪಲ್ಲೆ ಬುಟ್ಟಿಗಳು ರಾಶಿ ರಾಶಿಯಾಗಿ ಬರುವ ದೃಶ್ಯ, ಗಿರಣಿ ಕಾರ್ಮಿಕರು ಬಂದು ಕಟ್ಟಿಗೆ ಒಡೆಯುವ ದೃಶ್ಯ, ನೇಕಾರರು ಮುಂತಾದವರು ಭೋಜನ ತಯಾರಿಸುವ ದೃಶ್ಯ, ರೊಟ್ಟಿ ಮಾಡುವ ಹೆಣ್ಣು ಮಕ್ಕಳ ಸೇವೆ ಇವರೆಲ್ಲರಿಗೆ ಶಿವಭಜನೆ ಮಾಡಿಸಿ ಭೋಜನ ತಯಾರಿಸುವ ದೃಶ್ಯ, ಎಲ್ಲಿ ನೋಡಿದಲ್ಲಿ ಓಂ ನಮಃ ಶಿವಾಯ ಭಜನೆಯ ನಿನಾದವು, ಸಾಧುಗಳ ಬ್ರಹ್ಮಜಿಜ್ಞಾಸೆ ವೇದಾಂತ, ಶಾಸ್ತ್ರ, ಕೀರ್ತನೆ, ಪ್ರವಚನ ನಡೆದ ದೃಶ್ಯ, ಅನೇಕ ಮಹಾತ್ಮರ ಸಮಾಗಮದ ಮನಮೋಹಕ ದೃಶ್ಯಗಳು ಹೃನ್ಮನಗಳನ್ನು ತಣಿಸುತ್ತಿದ್ದವು.
ಇಂತಹ ಜಾತ್ರೆಯಲ್ಲಿ ಭಾಗವಹಿಸುವುದರಿಂದಲೂ ಭಕ್ತಿಪೂರ್ವಕ ಸಿದ್ಧಾ ಸಿದ್ಧಾ ಅಂತ ಸ್ಮರಿಸಲು ಕೂಡಿಬಿದ್ದ ಪಾಪಗಳು ದೆಶೆಗೆಟ್ಟು ಓಡಿಹೋಗುವವು. ಇದು ಸತ್ಯವು ಇದು ಸತ್ಯವು .
👇👇👇👇
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಹರಿಜನ-ಗಿರಿಜನರೊಡನೆ ಬೆರೆತು ಘೋಡಕೆ ಮಲ್ಲಪ್ಪನಲ್ಲಿ ಪ್ರಸಾದ ಸ್ವೀಕರಿಸಿ ಅಕ್ಷಯ ಪ್ರಸಾದ ಮಾಡಿದ ಸಿದ್ಧಾರೂಢರು
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
