ಐರಣಿ ಶ್ರೀ ಶ್ರೀ ಶ್ರೀ ಮುಪ್ಪಿನಾರ್ಯ ಮಹಾಸ್ವಾಮೀಜಿಗಳ ಕಥೆ

 🕉️ ಐರಣಿ ಶ್ರೀ ಶ್ರೀ ಶ್ರೀ ಮುಪ್ಪಿನಾರ್ಯ ಮಹಾಸ್ವಾಮೀಜಿಗಳ ಕಥೆ 



ಸಾವಿರಾರು ವರ್ಷಗಳಿಂದ ರಾಣೆಬೆನ್ನೂರು ತಾಲೂಕಿನ ಐರಣಿಯ ಗ್ರಾಮದಲ್ಲಿ ಹರಿಯುತ್ತಿರುವ ತುಂಗಭದ್ರ ತಟಾಕದ ಮೇಲಿನ ಕೊಟ್ರ ಬಸವೇಶ್ವರ ದೇವಸ್ಥಾನದ  ಆವಾರದಲ್ಲಿ ೭೦೦, ೮೦೦ ವರ್ಷಗಳಿಂದಲೂ ಗೃಹಸ್ಥಾಶ್ರಮಗಳಾದ  ಸ್ವಕುಳಸಾಳಿ ಜನಾಂಗದ  ಧರ್ಮಗುರುಗಳು ವಾಸ ಮಾಡುತ್ತಾ ಜನರಲ್ಲಿ ಧರ್ಮ, ಆಧ್ಯಾತ್ಮ ಜಾಗೃತಿ ಮಾಡುತ್ತಿದ್ದರು. ಆಗಿನ ಧರ್ಮಗುರುಗಳಾದ ಶ್ರೀ ಶ್ರೀ ಶ್ರೀ ಲಿಂಗಪ್ಪ ದೇವರು ತಮ್ಮ ಪುತ್ರರಾದ ಮುಪ್ಪಿನಪ್ಪನನ್ನು ಆಧ್ಯಾತ್ಮ ವ್ಯಾಸಂಗಕ್ಕಾಗಿ ಶ್ರೀ ಸಿದ್ಧಾರೂಢ ಸ್ವಾಮಿಗಳಲ್ಲಿ ಕಳಿಸಿದ್ದರು. ಶ್ರೀಗಳ ಅಂಗಸೇವೆ, ಆಪ್ತಸೇವೆ ಮಠದ ಸೇವೆಯಲ್ಲಿ ರತನಾಗಿ ಪ್ರತಿನಿತ್ಯ ಶಾಸ್ತ್ರ ಶ್ರವಣ, ಶಮೆ ದಮಾದಿ ಸಾಧನೆ, ಯೋಗ ಸಾಧನೆಗಳಲ್ಲಿ ಪರಿಪಕ್ವತೆ ಹೊಂದಿ ಶ್ರೀಗಳ ಕೃಪೆಗೆ ಪಾತ್ರರಾಗಿದ್ದರು. ಮುಂದೆ ಐರಣಿಯ  ಲಿಂಗಪ್ಪ ದೇವರು ದೇಹ ತ್ಯಾಗ ಮಾಡಿದ ನಂತರ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳು ಮುಪ್ಪಿನಪ್ಪನನ್ನು ಕರೆದು, ನಿಮ್ಮ ತಂದೆಯವರ ಸ್ಥಾನದಲ್ಲಿ ನೀನು ಜನ ಕಲ್ಯಾಣ ಮಾಡಬೇಕೆಂದು ತಿಳಿಸಿದರು. ಅದಕ್ಕೆ ಮುಪ್ಪಿನಪ್ಪನು ಐರಣಿಗೆ ಹೋಗುವುದಿಲ್ಲವೆಂದೂ  ತಾನು ಇಲ್ಲಿಯೇ ಸನ್ಯಾಸಧರ್ಮವನ್ನು ಸ್ವೀಕರಿಸಿ ಶ್ರೀಗಳ ಸೇವೆಯಲ್ಲಿ ಕಾಲ ಕಳೆಯುವೆ  ಅಂತ ಹೇಳಿದರು. ಅದಕ್ಕೆ ಸಿದ್ದಾರೂಢರು, ನೀನು ಐರಣಿಯ  ಪೀಠದಲ್ಲಿ ಆಸೀನನಾಗಿ  ಇಲ್ಲಿ ಮಾಡುವ ಕಾರ್ಯವನ್ನು ಅಲ್ಲಿಯೇ ಇದ್ದು  ಮಾಡಬೇಕು. ಇದು ನನ್ನಾಜ್ಞೆ ಅಂದರು. ಗುರುವಿನ ಆಜ್ಞೆಯನ್ನು ಅನಿವಾರ್ಯವಾಗಿ ಮುಪ್ಪಿನಪ್ಪನು ಶಿರಸಾವಹಿಸಲು ಸಿದ್ಧರಾದನು. ೧೯೨೮ರಲ್ಲಿ ಸಾಧು ಚಕ್ರವರ್ತಿ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿಯವರ ನೇತೃತ್ವದಲ್ಲಿ ಸ್ವಕುಳಸಾಳಿ ಜನಾಂಗದ ಹಿರಿಯ ಧುರೀಣ ದಿ. ಭೀಮಪ್ಪಣ್ಣ ಗಂಗಾಧರಪ್ಪ ದಿವಟೆ ಇವರ ಹಿರಿತನದ ಪಟ್ಟಾಭಿಷೇಕ ಮಹೋತ್ಸವ ಸಮಿತಿಯಿಂದ ಸುಮಾರು ೨೫ ಸಾವಿರ ಜನರ ಮಧ್ಯದಲ್ಲಿ ಐರಣಿಯ  ಹೊಳೆಮಠ ಪೀಠದಲ್ಲಿ ಅತೀ  ವೈಭವದಿಂದ ಮುಪ್ಪಿನಪ್ಪನ ಪಟ್ಟಾಭಿಷೇಕ ಸಮಾರಂಭ ಜರುಗಿತು. ಪರಮಹಂಸ, ಪರಿವ್ರಾಜಕಾಚಾರ್ಯ ಶ್ರೀ ಶ್ರೀ ಶ್ರೀ ಮುಪ್ಪಿನಾರ್ಯ ಮಹಾಸ್ವಾಮಿ ಅಂತಾ ಶ್ರೀ ಸಿದ್ಧಾರೂಢ ಸ್ವಾಮಿಗಳು ಅವರನ್ನು ಕರೆದರು. ಪಲ್ಲಕ್ಕಿಯಲ್ಲಿ ಕೂಡ್ರಿಸಿ, ಆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆಯಾಯಿತು. ತೇರಿನಲ್ಲಿ ಕೂಡ್ರಿಸಿ ರಥಯಾತ್ರೆಯಾಯಿತು.


ಮುಂದೆ ವರ್ಷಾ ವರ್ಷಾ ಹುಬ್ಬಳ್ಳಿಯಲ್ಲಿ ಜರುಗುತ್ತಿದ್ದಂತೆ ಐರಣಿಯಲ್ಲಿಯೂ ಶಿವಭಜನಾ ಸಪ್ತಾಹ, ಸಾಧುಗಳ ಸಮ್ಮೇಳನ, ಆಧ್ಯಾತ್ಮ ಚಿಂತನ, ಕೀರ್ತನೆ, ಭಜನೆ, ಪಲ್ಲಕ್ಕಿ ಉತ್ಸವ, ರಥೋತ್ಸವ, ಭಕ್ತರಿಂದ ಅನ್ನಛತ್ರಗಳು ನಡೆಯುತ್ತಾ ಸುತ್ತಲಿನ ಊರು, ಗ್ರಾಮಗಳ ಭಕ್ತರನ್ನು ಆಕರ್ಷಿಸತೊಡಗಿತು. ಹುಬ್ಬಳ್ಳಿ ಅಧೋನಿ ನಗರಗಳಲ್ಲಿ ಅಭೂತಪೂರ್ವ ಅಡ್ಡಪಲ್ಲಕ್ಕಿ ಉತ್ಸವಗಳು ಜರುಗಿದವು. ಈ ಆಕರ್ಷಣಿಯ ಸಮಾರಂಭಗಳನ್ನು ಕಂಡ ಕರ್ನಾಟಕದ ಅನೇಕ ನಗರಗಳಿಗೆ ಮಹಾರಾಷ್ಟ್ರ ವ ಆಂಧ್ರಪ್ರದೇಶ, ತಮಿಳುನಾಡು, ಗುಜರಾತ, ಮಧ್ಯಪ್ರದೇಶ ಮುಂತಾದ ಕಡೆ ಭಕ್ತರ ಇಚ್ಛೆಯ  ಪ್ರಕಾರ ಮುಪ್ಪಿನಾರ್ಯರ  ಸಂದರ್ಶನ ಶ್ರೀ ಸಿದ್ಧಾರೂಢರ ಸಾಕ್ಷಾತ್ ದರ್ಶನ ಮಾಡಿದಂತಾಗಿತ್ತು. ಹುಬ್ಬಳ್ಳಿ ತರುವಾಯ ಐರಣಿಯು ಈ ಭಾಗದ ಭಕ್ತ ಸಮುದಾಯವನ್ನು ಆಕರ್ಷಿಸಿತು. ಶ್ರೀ ಶ್ರೀ ಶ್ರೀ ಮುಪ್ಪಿನಾರ್ಯ ಸ್ವಾಮಿಗಳು ಹಿಂದಿನ ಗುರುಕುಲದಂತೆ ಐರಣಿ ತುಂಗಭದ್ರಾ ತಟಾಕದ ಮೇಲೆ ವಿಜಯನಗರ ಸಾಮ್ರಾಜ್ಯದಲ್ಲಿಯ  ಕಲ್ಲಿನ ಕಟ್ಟಡಗಳ ಮಾದರಿಯಲ್ಲಿ ಕಟ್ಟಿದ ಕಲ್ಲಿನ ಕಟ್ಟಡಗಳ ಸಮುಚ್ಚಯವು  ಭವ್ಯವಾಗಿದ್ದು, ಭಕ್ತರಿಗೆ ಉಳಿದುಕೊಳ್ಳಲು ಸರ್ವ ಸೌಕರ್ಯಗಳಿಂದ ಕೂಡಿದ್ದಾಗಿದೆ. ನಿತ್ಯವೂ ಅನ್ನ ಸಂತರ್ಪಣೆಯಿಂದ ಸಾಧುಗಳು ಇಲ್ಲಿ ಅವ್ಯಾಹತವಾಗಿ ವಾಸ ಮಾಡಲು ಅನುಕೂಲಕರವಾಗಿದೆ. ಹೊಳೆ ಮಠವು ಇಂದಿಗೂ ಜನರ ಹೃನ್ಮನಗಳನ್ನು ಆಕರ್ಷಿಸಿದೆ.

👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ತವಕದ ಬಾಳಯ್ಯನಿಗೆ ಶ್ರೀ ಸಿದ್ಧಾರೂಢರು ಶಾಂತಿ ತೋರಿಸಿದ್ದು

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»


Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ