ಶ್ರೀರಂಗ ಪಟ್ಟಣದಲ್ಲಿ ವಾಮಾಚಾರದಲ್ಲಿ ತೊಡಗಿದ ಬ್ರಾಹ್ಮಣರನ್ನು ಸನ್ಮಾರ್ಗಕ್ಕೆ ತಂದ ಆರೂಢರು,

✡️ ಶ್ರೀರಂಗ ಪಟ್ಟಣದಲ್ಲಿ ವಾಮಾಚಾರದಲ್ಲಿ  ತೊಡಗಿದ ಬ್ರಾಹ್ಮಣರನ್ನು ಸನ್ಮಾರ್ಗಕ್ಕೆ ತಂದ ಆರೂಢರು,

ಶ್ರೀಶೈಲದಿಂದ ಸಂಚಾರ ಮಾಡುತ್ತಾ ಸಿದ್ದನ್ನು ತಿರುಪತಿಗೆ ಆಗಮಿಸಿದನು.
ವೈಭವೋಪೇತ ವೆಂಕಟೇಶನ ಮೂರ್ತಿಯ ದರ್ಶನ ಪಡೆದನು. ಹಸಿವಿಗೆ ಅಂಜದೆ, ಶೀತೋಷ್ಣ ಬಾಧೆಗಳಿಗೆ ಹೆದರದೆ, ತುಂಡು ಲಂಗೋಟಿಧಾರಿ ಸಿದ್ಧನು ಬಂಡೆಗಲ್ಲಿನಂತಿದ್ದನು. ಈ ಭೂಮಂಡಲವೇ ಹಾಸಿಗೆಯನ್ನಾಗಿ ಮಾಡಿಕೊಂಡು ಆಕಾಶವನ್ನೇ ಹೊದಿಕೆ ಮಾಡಿ, ತನ್ನ ಕೈಗಳೇ ಪಾತ್ರೆಯನ್ನಾಗಿ ಮಾಡಿಕೊಂಡು ಮಳೆಯಲ್ಲಿ ತಿರಿದುದೇ ಪರಮಾನ್ನವೆಂದು ತಿಳಿದು ನಡೆಯುತ್ತಿದ್ದ ಸಿದ್ಧನನ್ನು, ಕೆಲವರು ''ಈತನು ಮೂರ್ಖನು, ಹುಚ್ಚನು ಅಂತಾ ಭಾವಿಸಿ ಹೊಡೆಯುತ್ತ ಪರಿ ಪರಿಯಾಗಿ ಕಾಡುತ್ತಿದ್ದರು. ಹೊಡೆತ ತಿನ್ನುವಾಗ ಸಿದ್ದನು “ಓಂ ನಮಃ ಶಿವಾಯ'' ಅಂತಾ ಮಹಾಮಂತ್ರವನ್ನು ನುಡಿಯುವುದನ್ನು ಕಂಡು, ಆ ಗದ್ದಲದಲ್ಲಿಯ ಸಜ್ಜನರು ಪುಂಡರನ್ನು ದೂರೀಕರಿಸಿದರು.

"ಈತನು ಸಾಧು" ಅಂತಾ ತಿಳಿದುಕೊಂಡ ಓರ್ವನು ಸಿದ್ಧನನ್ನು ಕರೆದುಕೊಂಡು ಹೋಗಿ ಪೂಜೆ  ಮಾಡಿ ಭೋಜನ ಮಾಡಿಸಿದನು.

ಅಲ್ಲಿಂದ ಹೊರಟ ಸಿದ್ದನು ಕಾಳಹಸ್ತಿಗೆ ಬಂದು ಲಿಂಗದರ್ಶನ ಪಡೆದು ಶಿವಕಂಚಿಗೆ ಬಂದನು. ಅಲ್ಲಿ ಲಿಂಗದರ್ಶನ ಪಡೆದು ವಿಷ್ಣುಕಂಚಿಗೆ ಬಂದನು. ಕಾಮಾಕ್ಷಿ ದೇವಾಲಯಕ್ಕೆ ಬಂದನು ವರದರಾಜನ ದರ್ಶನಕ್ಕೆ ಸಿದ್ದನು ಹೋಗುವ ಸಮಯಕ್ಕೆ ಬ್ರಾಹ್ಮಣನೊಬ್ಬನು, ''ಈತನು ವೈರಾಗ್ಯಶಾಲಿ ಮಹಾತ್ಮನು'' ಅಂತಾ ಗುರ್ತಿಸಿ  ಸಿದ್ಧನನ್ನು ಕರೆದೊಯ್ದು ಪೂಜಿಸಿ ಆನಂದಪಡುತ್ತ ಸಿದ್ಧನನ್ನು ಕುರಿತು. “ಹೇ ಮಹಾತ್ಮನೇ, ಮುನಿಯ ದರ್ಶನ, ಪೂಜೆಯಿಂದ ದೊರೆವ ಫಲವನ್ನು ತಿಳಿಸೋಣವಾಗಬೇಕು ಅಂತಾ ಪ್ರಾರ್ಥಿಸಿದನು. ಅದಕ್ಕೆ ಒಪ್ಪಿ ಸಿದ್ದನು ನೀನಾರು ಅಂತಾ ಕೇಳಲು ಆಗ ವಿಪ್ರನು ''ದೇಹವೇ ನಾನು'' ಅಂತಾ ಹೇಳಿದನು. ಸಿದ್ದನು ಧಾತುಮಯವಾದ ಈ ದೇಹವನ್ನು ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ ಈ ಪಂಚಭೂತಗಳಲ್ಲಿ ವಿಭಾಗಣಿಯಾದಲ್ಲಿ ನಿನ್ನಯ ಪ್ರೀತಿಯ ತನು ಹೋದ ನಂತರ ನೀನಾರು ಅಂತಾ ಕೇಳಲು " ಇಂದ್ರಿಯಗಳು ಮತ್ತು ಬುದ್ಧಿ ಪ್ರತಿಯೊಂದು ದೇಹದಲ್ಲಿದ್ದು ಪ್ರತಿ ಲೋಕಗಳನ್ನು ಸಂಚರಿಸುವವನೇ ನಾನು” ಅಂತಾ ಹೇಳಿದನು. ಆಗ ಸಿದ್ಧನು, “ಹೇ ವಿಪ್ರನೆ ಬುದ್ದಿಯೆಂಬುದು ಸುಪ್ತಿಯಲ್ಲಿ ಇದ್ದುಕೊಂಡು ಇಲ್ಲದಂತಿರುವದು ಕಾರಣ ಬುದ್ದಿ ನೀನು ಹೇಗಾಗುವಿ'' ಹೇಳು ಅಂತಾ ಕೇಳಿದನು.
ಸಿದ್ದನು ಹೇಳಿದ್ದನ್ನು ಕೇಳುತ್ತ, “ಹೇ ಮಹಾಮಹಿಮನೆ, ನಿದ್ದೆಯೊಳಗೆ ನಾನು ಹೇಗಿದ್ದೆನೆಂಬುದು ತಿಳಿಯದು ಅದರಾಚೆಗೆ ಏನಿಹುದು ಹೇಳಿರಿ'' ಅಂತಾ ಕೇಳಿದನು ಅದಕ್ಕೆ ಸಿದ್ಧನು ಬ್ರಾಹ್ಮಣನನ್ನು ಕುರಿತು, ''ಹೇ ದ್ವಿಜನೇ ನೀನು ನಾನರಿಯಲಾರೆ ಎಂಬ ನಿನ್ನ ಮರೆಯುವಿಕೆಯನ್ನು ಅರಿಯುತ್ತಿರುವ ಜ್ಞಾನರೂಪನೆ ನೀನಿರುವಿ'' ಅಂತ ಹರ್ಷದಿಂದ ಅನುಭವದಿಂದ ನೋಡುತ್ತ ಇರುವುದೇ ಮಹಾತ್ಮರ ಪೂಜಾ, ದರ್ಶನದ ಸಾಕ್ಷಾತ್ ಫಲರೂಪವಾಗಿದೆ ಅಂತಾ ವಿವರಿಸಿದನು. ಆಗ ವಿಪ್ತನು ಸಿದ್ಧನನ್ನು ಕುರಿತ “ಹೇ ಮಹಾಮಹಿಮನೇ, ನಿನ್ನ ಬೋಧನೆಯಿಂದ ನಾನು ಧನ್ಯನಾದೆ, ನಿನ್ನ ಪೂಜೆಯಿಂದ  ಧನ್ಯನಾದೆ, ನಿನ್ನ ದರುಶನದಿಂದ ಧನ್ಯನಾದೆ, ನಿನ್ನ ಕರುಣೆಯಿಂದ ಧನ್ಯನಾದೆ  ನನ್ನಲ್ಲಿರುವ ಮಲ, ವಿಕ್ಷೇಪ ಇತ್ಯಾದಿ ಕಲ್ಮಷಗಳು ಕಳೆದು ನಾನು ಧನ್ಯನಾದೆ ಅಂತಾ  ಪುನಃ ಪೂಜೆ ಮಾಡಿ ತೃಪ್ತಿಗೊಂಡನು.

ವರದರಾಜನನ್ನು ಕಂಡು ಬ್ರಾಹ್ಮಣನ ಪರವಾನಿಗೆಯನ್ನು ಪಡೆದು ಸಿದ್ದನು ಅಲ್ಲಿಂದ ಹೊರಟನು. ಒಂಬತ್ತು ತಿಂಗಳು ಸಂಚರಿಸುತ್ತ ಚಿದಂಬರ ಕ್ಷೇತ್ರಕ್ಕೆ ಆಗಮಿಸಿ ಚಿದಂಬರೇಶನನ್ನು ತದೇಕ ನೋಟದಿಂದ ನೋಡಿ ದರ್ಶನ ಪಡೆದು ಅಲ್ಲಿಂದ ಹೊರಟನು. ಸಿದ್ದಬಾಲಕ ವಿವಿಧ ದೇಶಗಳನ್ನು ನೋಡುತ್ತ ಜನರಿಗೆ ಪಂಚಾಕ್ಷರಿ ಮಂತ್ರವನ್ನು ಬೋಧಿಸುತ್ತ  ಪುರುಷಾರ್ಥ ಸಾಧನೆಯ ಬಗ್ಗೆ ತಿಳಿ ಹೇಳುತ್ತ ಶಿವಭಜನೆಯನ್ನು ಭಕ್ತಿಯನ್ನು ಜಾಗೃತಿ ಮಾಡುತ್ತ ಉತ್ತಮ ಅಧಿಕಾರಿಗಳಿಗೆ ಜ್ಞಾನವನ್ನು ಬೋಧಿಸುತ್ತ ನಡೆದನು. ಅಲ್ಲಲ್ಲಿ ಚಾರ್ವಾಕಾದಿ ಮತಗಳನ್ನು ಖಂಡಿಸುತ್ತಾ ಅದ್ವೈತ ಮತವನ್ನು ಪ್ರಚಾರ ಮಾಡುತ್ತ ಸಜ್ಜನರಿಂದ ಮನ್ನಣೆ ಪಡೆಯುತ್ತ ಕುಂಭಕೋಣಕ್ಕೆ ಆಗಮಿಸಿದನು. ಕುಂಭೇಶನ ದರ್ಶನ ಪಡೆದು ಅಲ್ಲಿಂದ ತಂಜಾವೂರಿಗೆ ಬಂದು ಲಿಂಗದರ್ಶನಗೈದು ಅಲ್ಲಿಂದ ಹೊರಟು ಶ್ರೀರಂಗಪಟ್ಟಣಕ್ಕೆ ಆಗಮಿಸಿ ನದಿ ತೀರದಲ್ಲಿಯ ಶಕ್ತಿದೇವಾಲಯದಲ್ಲಿ ಸಿದ್ದನು ಕುಳಿತನು. ಆಗ ಬ್ರಾಹ್ಮಣನು ಬಂದು ಸಿದ್ಧನ ಮುಖವನ್ನು ಕಂಡು ಈತನು ವೇದಾಂತಿ ಇರಬಹುದೆಂದು ತರ್ಕಿಸಿದನು. ವಿಪ್ರನು ಸಿದ್ದನನ್ನು ಕುರಿತು ''ನೀನಾರು'' ಅಂತಾ ಕೇಳಲು ಸಿದ್ದನು “ನಾನು ನೀನು ಅಂತಾ ದ್ವೈತ  ಭಾವವನ್ನು ತೊರೆಯಲು ಉಳಿದಂತ ಸತ್ಯ ವಸ್ತುವೇ ನಾನಿರುವೆ'' ಅಂತಾ ಹೇಳಿದನು. ಆಗ ವಿಪ್ರನು "ವಾಮ ತಂತ್ರವನ್ನು ತಿಳಿದುಕೊಂಡು ಸಹ್ಯ ಅಸಹ್ಯ ಈ ದ್ವೈತವನ್ನು ತೊರೆದು ಶಕ್ತಿ ಪ್ರಸಾದವನ್ನು ಸ್ವೀಕಾರ ಮಾಡುವ ಅದ್ವೈತವೇನು'' ಅಂತಾ ಪ್ರಶ್ನಿಸಿದನು. ಈ ಪ್ರಕಾರ ಸಿದ್ದ ಮತ್ತು ಆ ವಿಪ್ರ ಇವರೀರ್ವರ ವಾದವಿವಾದ ಕೇಳಿ ಆ ನಗರದ ಪಂಡಿತರೆಲ್ಲರು ಆ ಗುಡಿಗೆ ಆಗಮಿಸಿದರು. ಹೇಯ ಪದಾರ್ಥಗಳನ್ನು ತಿಂಬುವದೇ ಮುಕ್ತಿಯ ಸಾಧನ ಅಂತಾ ಕೆಲವರು ಹೇಳುತ್ತಾರೆ.

ಪಾಪಮಾರ್ಗದ ವಾಮ ತಂತ್ರವನ್ನು ಎಳೆ ಎಳೆಯಾಗಿ ಹೇಳಿದ್ದು 
ಮಧ್ಯಂ ಮಾಂಸಂಚ ಮಿನಂಚ ಮುದ್ರಾಮೈಥುನಮೇವಚ |
ಏತೇ ಪಂಚಮಕಾರಾಃ ಸ್ಯುರ್ಮೋಕ್ಷದಾಹಿ ಯುಗೆ  ಯುಗೆ||

ಮುಟ್ಟಾದ ಹೊಲತಿಯೇ ಧ್ಯಾನಶಕ್ತಿಯು, ದೀಕ್ಷೆ ಪಡೆದವನು ತಾನು ಶಿವನು, ಉಳಿದವರು ಯೋಗಿ ಯೋಗಿನಿಯರಂತೆ ಎಲ್ಲರಿಗಿಂತಲೂ ಉತ್ತಮರಂತೆ  ಹೀನವಾದ ಮೈಥುನ, ಮಾಂಸ, ಮುದ್ರಾ, ಮೀನ, ಮಧ್ಯಗಳ ಸೇವನೆ ಇವು ಪಂಚ ಮಕಾರವೆಂದು ಕರೆಸಲ್ಪಡುವವು. ಮಧ್ಯಕ್ಕೆ ತೀರ್ಥವೆಂದು, ಮಾಂಸಕೆ ಶುದ್ದಿಯೆಂದು, ಮೀನಕ್ಕೆ ಜಲ, ಮುದ್ರೆಗೆ ಕುಸುಮ, ಮೈಥುನ, ಹೆಂಡಕ್ಕೆ ಆಕಾಶದ ಹಾಲು ಅಂತಾ ಕರೆಯುವರು.

ಊರ ಹೊರಗಿನ ಗೌಪ್ಯಸ್ಥಾನದಲ್ಲಿ ರಾತ್ರಿಯಲ್ಲಿ ಇವರೆಲ್ಲರೂ ಸೇರುವರು. ಮಣ್ಣಿನ ಹರಿವಿಯನ್ನು ಡಬ್ಬು ಹಾಕಿ ಅದರ ಮೇಲೆ ಚಾಂಡಾಲ ಸ್ತ್ರೀಯನ್ನು ಕೂಡ್ರಿಸುವರು. ಈಕೆಯು ಹರನ ಶಕ್ತಿಯೆಂದು ಪರಮ ಭಕ್ತಿಯಿಂದ ಪೂಜಿಸಿ ನಮಸ್ಕರಿಸುವರು. ಅಲ್ಲಿ ನೆರೆದ ಪುರುಷರು ಮತ್ತು ಸ್ತ್ರೀಯರು ಹರ್ಷದಿಂದ ಈ ಎಲ್ಲಾ ಸ್ತ್ರೀಯರು ಭೈರವಿಯರು ಅನ್ನುತ್ತ ಅವರ ಪಾದಪೂಜೆ ಮಾಡುವರು. ಒಂದು ಮಣೆಯ ಮೇಲೆ ಕುಂಕುಮದಿಂದ ತ್ರಿದಳ ಚಕ್ರವನ್ನು ಬರೆದು ಅದರ ಮೇಲೆ ಹೆಂಡದ ಕುಂಭವನ್ನು ಇಡುವರು ಈ ಹೆಂಡವನ್ನು ಕುಡಿಯುವದರಿಂದಲೇ ಯುಗಯುಗದಲ್ಲಿ ಮುಕ್ತಿ ದೊರೆಯುವದು ಅಂತಾ ಭಾವಿಸುವರು.

ಪ್ರವೃತ್ತೆ ಭೈರವಿ ಚಕ್ರೇ ಸರ್ವೇ ವರ್ಣಾದ್ವಿಜಾತಯಃ |
ನಿವೃತ್ತೇ ಭೈರವಿ ಚಕ್ರೇ ಸರ್ವೇವರ್ಣಾ ಫ್ತೃಥಕ್ ಪೃಥಕ್ || 

ಪರಮ ಭೈರವಿ ಚಕ್ರಪೂಜಾ ಮಾಡುವಾಗ ವಿಪ್ರರು ಮಾದಿಗರು, ಪುರುಷರು, ಸ್ತ್ರೀಯರು ಎಲ್ಲರೂ ಯೋಗ್ಯರಾದ ಬ್ರಾಹ್ಮಣರೆಂದೂ ಆ ಕಾರ್ಯಪೂರ್ಣಗೊಂಡ ಮೇಲೆ ತಮ್ಮ ತಮ್ಮ ನಿವಾಸಕ್ಕೆ ಪೋಗಲು ಮೊದಲಿನ ತಮ್ಮ ವರ್ಣದವರಾಗುವರು ಅಂತಾ ಪೇಳುವರು.

ಬಳಿಕ ಆ ಚಾಂಡಾಲ ಸ್ತ್ರೀಯನ್ನು ಹಾಗೂ ತುಳುಕುತ್ತಿರುವ ಹೆಂಡದ ಕೊಡವನ್ನು ಪೂಜಿಸಿ ಮಾಂಸದ ನೈವೇದ್ಯವನ್ನು ತಂದು ಇಟ್ಟು ಸ್ತ್ರೀಯರು, ಪುರುಷರೆಲ್ಲರೂ ಆ ಭೈರವಿಗೆ ಆರತಿಯನ್ನು ಬೆಳಗಿ ನಮಸ್ಕರಿಸಿ ನಂತರ ತಮ್ಮ ತಮ್ಮ ಸ್ಥಳಗಳಲ್ಲಿ ಕೂಡ್ರುವರು.

ಮತ್ತೆ ವಾಮ ಮಹಾನಿರ್ವಾಣ ತಂತ್ರ 
ಪೀತ್ವಾ  ಪೀತ್ವಾ  ಪುನಃ ಪೀತ್ವಾ ಯಾವತ್ವತತಿಭೂತಲೇ | 
ಪುನರುತ್ಥಾಯವೈ ಪೀತ್ವಾ ಪುನರ್ಜನ್ಮ ನ ವಿದ್ಯತೆ|| 

ಹೆಂಡವನ್ನು ಕುಡಿಯುತ್ತಾ ಕುಡಿಯುತ್ತ ಚಂಡಿಯನ್ನು ಸ್ಮರಿಸುತ್ತ ಪಾನಮತ್ತರಾಗಿ ಕೆಳಗೆ ಬಿದ್ದು, ಪಾನಮತ್ತತೆ ಇಳಿಯಲು ಎದ್ದು ಪುನಃ ಪುನಃ ಮಧ್ಯವನ್ನು ಕುಡಿದರೆ ತಮಗೆ ಪುನರ್ ಜನ್ಮವಿಲ್ಲವೆಂದು ಅಂದುಕೊಳ್ಳುತ್ತ, ಪುನಃ ತಮ್ಮ ಕೈಯಲ್ಲಿ ಮಧ್ಯದ ಪಾತ್ರೆಯನ್ನು ತೆಗೆದುಕೊಂಡು ಜೋರಾಗಿ “ಭೈರವೋಹಂ" ಅಂತಾ ಒದರುತ್ತಾ, ಕುಡಿದು ಶಕ್ತಿಗೂ ಕುಡಿಸುತ್ತ ಎಲ್ಲರೂ ಕುಡಿದು ಕುಡಿದೂ ನಿಶೆಯುಳ್ಳವರಾಗಿ ನೈವೇದ್ಯದ ಮಾಂಸವನ್ನು ತಿನ್ನತೊಡಗುವರು.

ಮತ್ತೆ ಜ್ಞಾನ ಸಂಕಲನೀ ತಂತ್ರ 
ಮಾತೃಯೋನಿ ಪರಿತ್ಯಜ್ಯ ವಿಹರೇತ್ ಸರ್ವಯೋನಿಷು। 
ವೇದಶಾಸ್ತ್ರ ಪುರಾಣಾನಿ ಸಾಮಾನ್ಯ ಗಣಿಕಾ ಇವ| 
ಏಕೈಕ ಶಾಂಭವಿ ಮುದ್ರಾ ಗುಪ್ತಾಕುಲವ ಧೂರಿವ||

ಹಡೆದ ತಾಯಿಯನ್ನು ಮಾತ್ರ ಬಿಟ್ಟು ಉಳಿದ ಎಲ್ಲ ಸ್ತ್ರೀಯರ ಜೊತೆಗೆ ರಮಿಸುವದೇ ಶಾಂಭವಿಯ ಮಹಾಮುದ್ರೆಯ ಮಹಾನ್ ಮಾರ್ಗ ಅಂತಾ ಹೇಳಿ ವೇದಶಾಸ್ತ್ರ ಪುರಾಣದಲ್ಲಿ ಹೇಳಲಾದ ಮಾರ್ಗಗಳು ತುಚ್ಛವಾದವುಗಳು ಅಂತಾ ಈ ಮಾಮತಂತ್ರವಾದಿಗಳು ತಿಳಿಯುವರು.

ಮತ್ತೆ  ವಾಮ ರುದ್ರಯಾಮಳ ತಂತ್ರ 
ರಜಸ್ವಲಾ ಪುಷ್ಕರಂ ತೀರ್ಥ೦ ಚಾಂಡಾಲೀತು ಸ್ವಯಂಕಾಶಿ।
ಚರ್ಮಕಾರೀ ಪ್ರಯಾಗಃ ಸ್ಯಾದ್ರಜಕೀ ಮಥುರಾ ಮತಾ| 
ಅಯೋಧ್ಯಾ ಪುಕ್ಕ ಸೀ ಪ್ರೋಕ್ತಾ|| 

ರಜಸ್ವಲೆಯಾದ ಹೊಲತಿ, ವೇಶ್ಯ ಮುಂತಾದ ಹೀನ ಸ್ತ್ರೀಯರನ್ನು ರಮಿಸುವದೇ ಪುಷ್ಕರ, ವಾರಣಾಶಿ, ಪ್ರಯಾಗ, ಮಥುರಾ ಅಯೋಧ್ಯೆ ಮುಂತಾದ ಯಾತ್ರೆಗಳ ಫಲ ಪ್ರಾಪ್ತಿಗೆ ಕಾರಣವಾಗುವದು. ಈ ಪ್ರಕಾರದ ವಾಮತಂತ್ರವನ್ನು ಹೇಳುತ್ತ ಸುರಾಪಾನ ಮಾಡುವರು. ಈ ಪ್ರಕಾರ ಕುಡಿದೂ ಕುಡಿದೂ ನೆಲದ ಮೇಲೆ ಉರುಳಾಡುವರು.

ಮತ್ತೆ ವಾಮಜ್ಞಾನ ಸಂಕಲನೀ ತಂತ್ರ 
ಪಾಶಬದ್ಧೋ ಭವೇಜ್ಜೀವಃ | ಪಾಶಮುಕ್ತಃ ಸದಾಶಿವಃ |

ಸಹ್ಯಾಸಹ್ಯ ಲಜ್ಜೆಗಳೆಲ್ಲ ಶಾಸ್ತ್ರದ ಲಜ್ಜೆಗಳು ಲೋಕದ ಲಜ್ಜೆ ಜಾತಿ ಮೊದಲಾದ ಲಜ್ಞಾರೂಪ ಪಾಶದಿಂದ ಬಂಧಿತನಾದವನೇ ಜೀವನು. ಈ ಎಲ್ಲ ಪಾಶಗಳ ರಹಿತನೇ ಸದಾಶಿವನು ಈ ಅನೇಕ ಈ ಪ್ರಕಾರ ವಿಪರೀತ ಕಲ್ಪನೆಗಳ ತಂತ್ರಗಳಿಂದ ಜನರಿಗೆ ಭ್ರಾಂತಿಗೊಳಿಸಿ ಅನೇಕ ಪಾಪರೂಪದ ಈ ಮಾರ್ಗಕ್ಕೆ ಸೆಳೆದುಕೊಳ್ಳುವವರೇ ವಾಮ ಮಾರ್ಗಿಗಳು.

ಈ ವಾಮಮಾರ್ಗದ ಉತ್ಪತ್ತಿಯನ್ನು ಸಿದ್ದನು ಹೇಳತೊಡಗಿದನು. ದ್ವಾಪರ ಯುಗದಲ್ಲಿ ಓರ್ವ ಬ್ರಾಹ್ಮಣನು ಸೌಂದರ್ಯವತಿಯಾದ ಗುರುಪುತ್ರಿಯನ್ನು ಮೋಹಿಸಿದ್ದನ್ನು ಕಂಡು ಗುರುಗಳು ಕೋಪದಿಂದ ''ಹೇ ಪಾಪಿ ಶಿಷ್ಯನೇ, ನೀನು ಚಾಂಡಾಲನಾಗಿ ಪಾಪಮಾರ್ಗದಿಂದ ನರಕವಾಸಿಯಾಗು” ಅಂತಾ ಶಾಪವನ್ನಿತ್ತರು. ಶಾಪಹೊತ್ತ ಆ ಬ್ರಾಹ್ಮಣ ಕಾಮದ ಮೋಹಪಾಶದಿಂದ ವಿರಹ ತಾಳದೆ, ಒಬ್ಬ ಕೀಳು ಹೊಲತಿಯನ್ನು ಕೈಪಿಡಿದು ನಿತ್ಯವೂ ಮನಬಂದಂತೆ ಆಕೆಯ ಕೂಡ ರಮಿಸತೊಡಗಿದನು, ಮಾಂಸ ಮಧ್ಯ ಸ್ವೀಕರಿಸುತ್ತ ಕೀಳು ಮಾರ್ಗದಲ್ಲಿ ಮುನ್ನಡೆಯಲು ಜನರೆಲ್ಲರ ನಿಂದನೆಗೆ ಪಾತ್ರನಾದ.

ಈ ನಿಂದೆಗೆ ಅಂಜದೆ ನೂತನ ತಂತ್ರವನ್ನು ತನ್ನ ಪಾಂಡಿತ್ಯದಿಂದ ರಚಿಸಿ, ಪಾರ್ವತಿ ಉವಾಚ ಶಿವಉವಾಚ ಅಂತಾ ತನ್ನದೆ ನಿಜವಾದ ಶಾಸ್ತ್ರ ಅಂತಾ ಪೇಳತೊಡಗಿದನು. ಎಲ್ಲ ದೇಶಗಳನ್ನು ಸಂಚರಿಸುತ್ತ ತಾನೇ ಅನುಭವಪೂರ್ಣ ಮುನಿ
ಎಂದು ಆಷಾಢಭೂತಿಯ ವೇಷದಾರಿಯಾಗಿ ಕೃತಕ ತಂತ್ರದ ಪ್ರಚಾರ ಮಾಡುತ್ತ ಸ್ತ್ರೀ ಪುರುಷರು ಯಾವ ಕಟ್ಟಳೆಗಳಿಲ್ಲದೆ  ಮುಕ್ತರಾಗಿ ಭೋಗಸುಖ ಪಡೆಯುವರೋ ಅದೇ ಮುಕ್ತಿಯ ಸಾಧನೆ ಅಂತಾ ಪ್ರಚಾರ ಮಾಡುತ್ತಿರಲು, ಅನೇಕ ಭೋಗಿಗಳನ್ನು ಆಕರ್ಷಿಸಿದನು. ಕೊನೆಗೆ ಕೀಳು ಹೊಲತಿಯ ಸದನದಲ್ಲಿ ಮೃತಪಟ್ಟನು.

ಕೀಳು ಅಸಹ್ಯ ವಾಮಮಾರ್ಗವು ಬೋಗಿಗಳನ್ನಾಕರ್ಷಿಸಿ ಬಹುಜನರು ಈ ಪಾಪ 
ಮಾರ್ಗದಲ್ಲಿಳಿಯಲು, ಶಿವನೇ  ಶಂಕರಾಚಾರ್ಯರಾಗಿ ಜನಿಸಿ ಈ ವಾಮಮಾರ್ಗ ವನ್ನು ಖಂಡಿಸಿ ಸನ್ಮಾರ್ಗ ಬೋಧನೆ ಮಾಡಿದನು.

ಶಂಕರಾಚಾರ್ಯರು ಭಾರತದ ತುಂಬಾ ಸಂಚರಿಸಿ ಅದ್ವೈತ ಮತವನ್ನು ಪ್ರಚಾರ ಮಾಡಿದರು. ವಾಮಮಾರ್ಗದ ಜನತೆಯಲ್ಲಿ ಸುಜ್ಞಾನದ ಜಾಗೃತಿ ಮಾಡಿ ಆ ಪಾಪ ಮಾರ್ಗದಿಂದ ಪರಾವರ್ತನಗೊಳಿಸಿದರು. ಗುರುಮುಖದಿಂದ ಶ್ರವಣ ಮಾಡಿ ಭಕ್ತಿಯುಳ್ಳವನಾಗಿ ಸಾಧನ ಚತುಷ್ಟಯ ಸಂಪನ್ನ ಉತ್ತಮ ಅಧಿಕಾರಿಯು ತತ್ವಮಸಿಯ ಅರ್ಥವನ್ನು ತಿಳಿದುಕೊಂಡು ಮನನ ನಿಭಿಧ್ಯಾಸ ಮಾಡಿ ಜೀವ ಬ್ರಹ್ಮದಲ್ಲಿ ಐಕ್ಯತೆ ಯನ್ನು ಪಡೆದಾಗಲೇ ಮುಕ್ತಿ ಪ್ರಾಪ್ತಿಯಾಗುವದು ಇದರಿಂದ ಅತ್ಯಂತ ದುಃಖ ನಿವೃತ್ತಿ. ಪರಮಾನಂದ ಪ್ರಾಪ್ತಿಯಾಗುವದು ಕಾರಣ ಸತ್‌ಚಿತ್  ಸುಖರೂಪ ನಿತ್ಯ ಪರಿಪೂರ್ಣ ಸಚ್ಚಿದಾನಂದ ಸ್ವರೂಪದರ್ಶನವೇ ಅದ್ವೈತ  ಮತದ ರಹಸ್ಯವಾಗಿದೆ. ಕಾರಣ ಅದ್ವೈತ  ಮತವೇ ಶ್ರೇಷ್ಠವಾದುದು ಅಂತಾ ಸಿದ್ದಬಾಲಕನು ಹೇಳುತ್ತಿರುವುದನ್ನು ತದೇಕ ಚಿತ್ತ ದಿಂದ ಆಲಿಸಿದರು. ಚಿಕ್ಕ ವಯಸ್ಸಿನ ಈ ಸಿದ್ಧಬಾಲಕನು ವಾಮತಂತ್ರದ ಪಾಪಮಾರ್ಗದ ಜನತೆಯ ಆಚರಣೆಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಯವಾದ ಮಾರ್ಗದ ಪಾಪದ ಕಾರ್ಯಗಳನ್ನು ಖಂಡಿಸಿ, ದಿಟ್ಟವಾಗಿ ಅದ್ವೈತ ಮತ ಪ್ರತಿಪಾದಿಸುತ್ತಿರುವುದನ್ನು ಕಂಡು ಆಶ್ಚರ್ಯಚಕಿತರಾದರು. 

ಈತನು ಶುದ್ದ ಬ್ರಹ್ಮಜ್ಞಾನಿಯು ಬುದ್ಧಿಹೀನತೆಯಿಂದ ಪಾಪದ ಕೂಪವಾದ ವಾಮಮಾರ್ಗದಲ್ಲಿ ನಾವು ರತರಾಗಿ ಕೆಟ್ಟೆವು. ಈ ವಾಮ ಮಾರ್ಗವನ್ನು ಕೂಡಲೇ ತ್ಯಾಗ ಮಾಡುತ್ತೇವೆ ಅಂತಾ ನುಡಿಯುತ್ತ ಪ್ರಾಯಶ್ಚಿತ್ತಪೂರ್ವಕ ಸಿದ್ಧನ ಚರಣಗಳಿಗೆ ನಮಸ್ಕರಿಸಿದರು. ಈ ಬ್ರಾಹ್ಮಣರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಸಿದ್ಧನನ್ನು ಕರೆದೊಯ್ದು, ಪೂಜೆ ಮಾಡಿ ಭಿಕ್ಷೆ ನೀಡಿ ಪುನಃ ಪುನಃ ವಂದನೆಗಳನ್ನು ಸಲ್ಲಿಸುವುದನ್ನು ಕಂಡು, ನಿಮ್ಮ ಬಯಕೆಯನ್ನು ಬಹಿರಂಗಗೊಳಿಸಬೇಕು ಅಂತಾ ಸಿದ್ದನ್ನು ಕೇಳಿದನು. ಅದಕ್ಕೆ ಆ ವಾಮಮಾರ್ಗಿಗಳಾಗಿದ್ದವರು ಪರಿವರ್ತನಗೊಂಡ ಬ್ರಾಹ್ಮಣರು, “ಹೇ ಮಹಾಮಹಿಮನೆ ಕೆಲಕಾಲ ಇಲ್ಲಿಯೇ ವಾಸಮಾಡಿ ಉದ್ದರಿಸು'' ಅಂತಾ ಅಂಗಲಾಚಿ ಬೇಡಿಕೊಂಡರು. ಸಿದ್ದಬಾಲಕನು ಆ ಶ್ರೀರಂಗ ಪಟ್ಟಣದ ಶಕ್ತಿಗುಡಿಯಲ್ಲಿ ಪ್ರತಿನಿತ್ಯವೂ ವೇದಾಂತ ಶಾಸ್ತ್ರ ಶ್ರವಣ ಮಾಡಿಸುತ್ತಿದ್ದನು. ಭಕ್ತಿಭಾವದಿ ಶಿವಧ್ಯಾನ ಮಾಡುತ್ತ ಶಮದಮಾದಿ ಸಾಧನಗಳಿಂದಲೂ ಸಿದ್ದ ಬಾಲಕನು ಹೇಳಿದ ಪ್ರಕಾರ ನಿಷ್ಕಲ್ಮಷವಾದ ಶ್ರವಣಾದಿಗಳಿಂದ ಸ್ಫೂರ್ತಿಗೊಂಡು, ಮನನ ನಿಧಿಧ್ಯಾಸನಗಳಿಂದಲೂ ವಾಮತಂತ್ರಗಳ ಗಂಧವನ್ನು ಸಮೂಲಾಗ್ರವಾಗಿ ಪರಿತ್ಯಜಿಸಿ, ವಿಷಯಾದಿಗಳಲ್ಲಿ ವೈರಾಗ್ಯಧರಿಸಿ ಪರಿಶುದ್ಧ ಆಚರಣೆಯಲ್ಲಿ ತತ್ಪರರಾಗಿದ್ದರಿಂದ ಅತ್ಯಂತ ದುಃಖ ನಿವೃತ್ತ ಪರಮಾನಂದದಾಯಕ ಮೋಕ್ಷಕ್ಕೆ ಅಧಿಕಾರಿಗಳಾದರು ಏಳು ತಿಂಗಳುಗಳವರೆಗೆ ಅವ್ಯಾಹತವಾಗಿದ್ದು ಈ ವಿಪ್ರರಿಗೆಲ್ಲ ವೇದಾಂತ ಶ್ರವಣ ಮಾಡಿಸಿ ಧನ್ಯರನ್ನಾಗಿ ಮಾಡಿ, “ಸಿದ್ದನು ಅಲ್ಲಿಂದ ಹೊರಡಲನು ವಾದನು.''

ಪಾಪಮಾರ್ಗದಿಂದ ಮುಕ್ತರಾಗಿ ಸನ್ಮಾರ್ಗಕ್ಕೆ ಪ್ರವೇಶಿಸಿ ಭಕ್ತಿಭಾವದಿಂದ ಸಿದ್ಧನ.
ಬೋಧನೆಯಿಂದ ಕೃತಾರ್ಥರಾದ ಆ ವಿಪ್ರರು ಜಯಜಯಕಾರ ಹಾಕಿದರು.

ಭೂಮಿಗೊಡೆಯನೆ ಸೀಮೆಗೆಲೆದನೆ|
ಕಾಮಧೇನುವೆ ಕಾಮರೂಪನೆ|
ಕಾಮವೈರಿಯೆ ಸ್ವಾಮಿ ಸಿದ್ದರೆ ನಿನಗೆ ಜಯ ಜಯತು|| 
ಕೋಮಲಾಂಗನೆ ರಾಮರಾಜನೆ |
ಪ್ರೇಮಮೂರ್ತಿಯೆ ಸೋಮಧಾರಿಯೆ |
ಭೀಮದೇವನೆ ಜಯತು ಜಯತೆಂದು ಕಳುಹಿದರು.

ಶ್ರೀರಂಗನಾಥನ ದರ್ಶನವನ್ನು ಪುನಃ ಪಡೆದು ಸಿದ್ದಭಾರತಿ ಅಲ್ಲಿಂದ ಹೊರಟನು. ಸಂಚಾರ ಮಾಡುತ್ತ ಜಂಬುಕೇಶ್ವರ ಪಕ್ಷಿತೀರ್ಥ ನೋಡಿಕೊಂಡು ಮಧುರೆಗೆ ಆಗಮಿಸಿ ಮೀನಾಕ್ಷಿ ದೇವಾಲಯ ಪ್ರವೇಶಿಸಿದನು.

ಪ್ರಾಪ್ತವಾಗುವುದು


👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ


ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಮಧುರೆ ಮೀನಾಕ್ಷಿ ದೇವಾಲಯದಲ್ಲಿ ಬ್ರಾಹ್ಮಣನು ಸಿದ್ಧನಿಗೆ ಬೈದು, ನಂತರ ಪಶ್ಚತ್ತಾಪ ಪಟ್ಟು ಸಿದ್ಧರಿಗೆ ಊಟ ಕೊಟ್ಟು ಆಶೀರ್ವಾದ ಪಡೆದ ,
ಎಲ್ಲಾ  ಕಥೆಗಳ ಲಿಂಕಗಳು 
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉  
3)

«««««ಓಂ ನಮಃ ಶಿವಾಯ »»»»»»
»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ