ಸಿದ್ಧರಿಂದ ಚಿಂತಾಮಣಿ ಆಶ್ರಮದಲ್ಲಿ ಸ್ವಾಮಿಗಳ ಶಿಷ್ಯ ಬ್ರಹ್ಮಾನಂದ ಗರ್ವಭಂಗ

✡️ ಸಿದ್ಧರಿಂದ ಚಿಂತಾಮಣಿ ಆಶ್ರಮದಲ್ಲಿ ಸ್ವಾಮಿಗಳ ಶಿಷ್ಯ ಬ್ರಹ್ಮಾನಂದ ಗರ್ವಭಂಗ 


ಆನೆಗೊಂದಿ ರಾಜನಿಂದ ಬೀಳ್ಕೊಂಡು, ಸಿದ್ದನು ಪುನಃ ಚಿಂತಾಮಣಿ ಆಶ್ರಮಕ್ಕೆ ಆಗಮಿಸಲು, ಹರ್ಷದಿಂದ ಆಶ್ರಮದಲ್ಲಿಯ ಸ್ವಾಮಿಗಳು ಆದರಾತಿಥ್ಯಗಳಿಂದ ಸ್ವಾಗತಿಸಿ, ಉಚಿತಾಸನದಲ್ಲಿ ಕೂಡ್ರಿಸಿದರು. ಎಲ್ಲ ಶಿಷ್ಯರು ಸಿದ್ದನಿಗೆ ವಂದನೆಗಳನ್ನು ಸಲ್ಲಿಸಿ ತಮ್ಮ ತಮ್ಮ ಸ್ಥಳಗಳಲ್ಲಿ ಕೂತರು. ನಂತರ ಬ್ರಹ್ಮಾನಂದನು ಸಿದ್ಧನನ್ನು ಕುರಿತು"ಬ್ರಹ್ಮಸೂತ್ರದಲ್ಲಿಯ

ಅಥಾತೊ ಬ್ರಹ್ಮ ಜಿಜ್ಞಾಸ ಲಲಿತ ಸೂತ್ರದ ಅರ್ಥವನ್ನು ಹೇಳಿರಿ'' ಅಂತಾ ಪ್ರಶ್ನಿಸಿದನು. ಅದಕ್ಕೆ ಸಿದ್ಧನು ಉತ್ತರಿಸುತ್ತ "ಬ್ರಹ್ಮಸೂತ್ರದ ಲಲಿತ ಸೂತ್ರದಲ್ಲಿಯ ಅಥಾತೊ ಬ್ರಹ್ಮ ಜಿಜ್ಞಾಸ, ಇದರಲ್ಲಿಯ ಅಥ ಪದವನ್ನು ಮೊದಲಿಗೆ ತಿಳಿಯಬೇಕು. ಆ ಬಳಿಕ ಉಳಿದ ಪದ ಅಂದರೆ ಮೊದಲಿಗೆ ಕರ್ಮೋಪಾಸನೆ, ಆನಂದದಿಂದ ನಿಷ್ಕಾಮನೆಯಿಂದ ಚಿತ್ತ ಚಾಂಚಲ್ಯವಿಲ್ಲದೆ ಶುದ್ಧವಾಗಿ ಕರ್ಮೋಪಾಸನೆ ಮಾಡಲು, ತಾನೇ ಸುಖೇಚ್ಚು ಆಗುವನು. ಸುಖೇಚ್ಚು ಅಂದರೆ ನಿಜವಾದ ಸುಖವನ್ನು ಬಯಸುವವನು. ನಂತರ ಈ ಪ್ರಪಂಚದಲ್ಲಿಯ ಆತ್ಮಾನಾತ್ಮ ವಿಚಾರದ ವಿಶ್ಲೇಷಣೆಯಿಂದ ತಿಳಿದುಕೊಂಡು, ಇಹಪರ ಬೋಗಗಳ ಇಚ್ಛೆಯನ್ನು ತೊರೆದು, ಶಮನಮಾಡಿ
ಷಟ್ ಸಂಪತ್ತಿ ಸಾಧನೆಗಳನ್ನು ದೃಢವಾಗಿಸಾಧಿಸುತ್ತ, ಅಥ ಪದದ ಅರ್ಥವನ್ನು ಸುಲಲಿತವಾಗಿ ತಿಳಿದು ಬ್ರಹ್ಮ ಜಿಜ್ಞಾಸೆ ಅಂತಾ ತಿಳಿಯೋಣವಾಗಬೇಕು.

ಬ್ರಹ್ಮಪದವೆಂದರೆ ನಾಶರಹಿತಾನಂದ, ಶುದ್ದ ಪ್ರಕಾಶ, ವ್ಯಾಪಕ ನಿತ್ಯವಾಗಿರುವ ಚೇತನವಾಗಿರುವ, ಈ ಪಂಚಲಕ್ಷಣ ಅಂತಾ ಅರ್ಥವು. ಹೇ ಸನ್ನುತನೆ 'ಜ್ಞಾ'' ಪದವು ನಿಶ್ಚಯ ಜ್ಞಾನವಾಚಕವು. ಇದನ್ನು ತಿಳಿಯುವುದರಿಂದ ಇಚ್ಚಾವಾಚಕವು ನಿಜವಾದುದು ಮೊದಲಿಗೆ ಈ ಸಾಧನದಿಂದ ನಿಜ ಸುಖದ ಸಾಗರವಾದ ಸುಜ್ಞಾನವನ್ನು ಪಡೆಯುವುದೇ ಪ್ರಥಮ ಸೂತ್ರದ ಅರ್ಥವಾಗಿದೆ ಅಂತಾ ಹೇಳಿದನು. ಆಗ ಬ್ರಹ್ಮಾನಂದನು ಸಿದ್ಧನನ್ನು ಕುರಿತು ಗರ್ವದಿಂದ ಪುನಃ ಪುನಃ ಇದರರ್ಥ ಇಷ್ಟೆ ಇರುವದೇ ಎಂದು ಗದರಿಸಿ ಕೇಳಿದನು. ಆಗ ಸಿದ್ದನು ಬ್ರಹ್ಮಾನಂದನನ್ನು ಕುರಿತು'' ಅಯ್ಯಾ ಕೇಳು, ಶೋಧಮಾಡಿ ನೋಡಲು ಈ ದೇಹ ಜಗತ್ತು ಬಹುವಾಗಿ ರಸಾಯನಮಯವಾಗಿರುತ್ತದೆ. ಪ್ರಥಮವಾಗಿ ಸಾಮಾನ್ಯ ಚೇತನದೊಂದಿಗೆ ಅಣು ಪರಮಾಣು ರೂಪವನ್ನು ಒಡೆಯುತ್ತ ಅಲ್ಲಿ ರಸಾಯನ ಕ್ರಿಯೆ ಜರುಗಿತು. ಅವಿರೋಧ ಅಂಶಗಳು ಪಿಂಡೀಕರಣವಾಗಲು ಉತ್ಪತ್ತಿ ಸ್ನೇಹಾಕರ್ಷಣವಾಗಿದೆ. ಇದಕ್ಕೆ ಅಧಿಪತಿ ಬ್ರಹ್ಮನು ಇದನ್ನು ಕೆಡಿಸಲು ಕಾರಣಗಳಾದ ವಿರೋಧಾಂಶಗಳನ್ನು ತಡೆದು ಕಾಯುವುದೇ ಸ್ಥಿತಿ ಸ್ನೇಹಾಕರ್ಷಣವು, ಇದಕ್ಕೆ ಅಧಿಪತಿ ವಿಷ್ಣುವು. ಇದನ್ನು ನಾಶಿಸುವ ಅಂಶಗಳು ನಾಶ ಸ್ನೇಹಾಕರ್ಷಣವು, ಇದಕ್ಕೆ ಅಧಿಪತಿ ರುದ್ರನು.

ಈ ಪ್ರಕಾರ ಸೃಷ್ಟಿ, ಸ್ಥಿತಿ, ಲಯ ಈ ಮೂರು ಕಾರ್ಯಗಳಿಗೆ ಬ್ರಹ್ಮ, ವಿಷ್ಟು, ರುದ್ರ ಈ ತ್ರಿಮೂರ್ತಿಗಳು ಕ್ರಮವತ್ ಅಧಿಪತಿಗಳು. ಶುದ್ಧ ಸತ್ವ ಗುಣದಂಶಿಕ ತನುವಿನಲ್ಲಿ ವಿಶೇಷ ಚೇತನ ಈಶ್ವರ ಅಂತಾ ಅನ್ನಬೇಕು. ರಜೋಂಶ ಸಂಭೂತ ತನು ಜೀವರೆನ್ನಬೇಕು. ಮೂಲ ಚೇತನದೊಡನೆ ಕೂಡುತ್ತ ಮತ್ತು ಜಡತನುವಿನಂದದಿ ಚಿತ್ತ ಮೊದಲಾದ ಕರಣಗಳಲ್ಲಿ ಸತ್ಯವಾಗಿಯೂ ರಸಾಯನ ಕ್ರಿಯೆ ನಡೆದಿರುವದು. ಇದು ಹೇಗೆ ಎನ್ನಲು ವಿಷಯೇಂದ್ರಿಯಂಗಳು ಕೂಡುವಿಳಿಯಾಗಲು ಸತ್ಯವಾಗಿಯೂ ಆಯಾ ವಿಷಯಗಳ ಹೆಸರಿನಿಂದ ಸ್ನೇಹಾಕರ್ಷಣವಾಗಿರುವುದನ್ನು ಪಂಡಿತನಾದ ನೀನು ತಿಳಿದುಕೊ. ವಾಯು ಚಲಿಸಲು ಸುಗಂಧ ದುರ್ಗಂಧ ವಾಸನೆಯ ವೈಖರಿಯ ವಾಕ್ಯಗಳು ಹಾಗೂ ಮಲ, ವಿಮಲ ಅಣುಗಳು ಕಿವಿಗಳಿಗೆ ಅಪ್ಪಳಿಸಲು, ಶಭಾದಕರ್ಷಣವಾಗುವುದು. ಆ ನಂತರ ಬುದ್ಧಿಯಿಂದ ಪರರ ಇ೦ಗಿತವನ್ನು ಜೀವಗೆ ತಿಳುಹಿಸಿ ತದಾಕಾರ ವೃತ್ತಿಯನ್ನು ಮಾಡುವ ಅರ್ಥವನ್ನು ತಿಳಿಯಲು ಬಹುತರದ ಇಹಪರಗಳ ಸಾಧಕ ಬಾಧಕ ಸುಖ ದುಃಖಗಳು ಸತ್ಯ ನೋಡು ದಯಾರಸ ಪರಿಪೂರ್ಣ ಅಂತಃಕರಣದಿಂದ ಸದ್ಗುರುವಿನ ವಾಕ್ಯವು, ತಪದಿಂದ ನಿರ್ಮಲವಾದ ಹೃದಯವುಳ್ಳ ಪರಮ ಶಿಷ್ಯನ ಕರ್ಣದ್ವಾರದಲ್ಲಿ ಸರಸದಿಂದ ಬೋಧವಾಗುತ್ತಿರುವ ಕಾಲದಲ್ಲಿ, ಗರ್ವಯುತ ವಾಕ್ಯದಿಂದ ನೀನು ನುಡಿಯುತ್ತಿರುವಿ.

ಹೆಪ್ಪುಗಟ್ಟಿಹ ಹಾಲಿನಲ್ಲಿ ಉಪ್ಪುಹಾಕಲು ಹಾಲು ಕೆಡುವಂತೆ ಸುಶ್ರಾವ್ಯ ಶಬ್ದದ ಕಾಲಕ್ಕೆ ರಸಾಯನ ಕ್ರಿಯೆ ನಡೆಯಲು ಕ್ರೋಧವುಂಟಾಗಿ ಸುಬೋಧನೆಯು ಕೆಡುವದೆಂಬುದನ್ನು ಸತ್ಯವಾಗಿ ನೀನು ತಿಳಿದುಕೊ, ನಿನಗೆ ಈ ಗರ್ವ ಸಲ್ಲದು. ಅನಘ ಶುಕನ ವೈರಾಗ್ಯ ನೃಪವರನಾದ ಜನಕ ಮಹಾರಾಜನ ಆತ್ಮವಿಚಾರ, ವೇದವ್ಯಾಸ ಮುನಿಯ ಅಪ್ರತಿಮ ವೇದಾರ್ಥ ಶೋಧನೆ, ಘನ ಪರಾಕ್ರಮಿ ಆಂಜನೇಯನ ಸದ್ ವಿನಯ ಗುರುಭಕ್ತಿ ಇವುಗಳಲ್ಲಿ ಒಂದೊಂದೂ ನಿನಗೆ ಸಿದ್ದಿಯಾಗಲಾರವು ಮುಂತಾಗಿ ಸಿದ್ದನು ಬಹು ಮಾರ್ಮಿಕವಾಗಿ ಹೇಳಿದನು.
ಆಗ ಬ್ರಹ್ಮಾನಂದನು ಎದ್ದು, 'ಗುರುಗಳೇ ನಾನು ತಪ್ಪು ಮಾಡಿದೆ. ನನ್ನ ಬುದ್ದಿಗೆ ತಿಳಿಯಲಿಲ್ಲ. ನನ್ನಿಂದಾದ ಅಪರಾಧವನ್ನು ಕ್ಷಮಿಸಬೇಕೆಂದು" ಸಿದ್ದನ ಚರಣ ಕಮಲಗಳಲ್ಲಿ ಹೊರಳಾಡಿ ಬಹುವಿಧದಿಂದ ಪ್ರಾರ್ಥಿಸತೊಡಗಿದನು. ಆಗ ಸಿದ್ಧನು ಈತನಿಗೆ ತಾನು ಮಾಡಿದ ಅಪರಾಧದ ಪ್ರಾಯಶ್ಚಿತ್ತವಾಗಿದೆ ಅಂತಾ ಹಿಡಿದೆತ್ತಿ ಕ್ಷಮಿಸಿದನು. ಆಗ ಸರ್ವರೂ ಆನಂದೋಲ್ಲಾಸಗಳಿಂದ  ಮೃಷ್ಟಾನ್ನ ಭೋಜನ ಮಾಡಿದರು.

ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಚಿಂತಾಮಣಿ ಆಶ್ರಮದ ಸ್ವಾಮಿಗಳ ಶಿಷ್ಯ ಜೊತೆ ಶ್ರೀಶೈಲಕ್ಕೆ ಪ್ರಯಾಣ
ಎಲ್ಲಾ  ಕಥೆಗಳ ಲಿಂಕಗಳು 
👉ಎಲ್ಲಾ150 ಕಥೆಗಳ ಲಿಂಕಗಳಿಗಾಗಿ ಒತ್ತಿ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉  
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಲು 👉📚

«««««ಓಂ ನಮಃ ಶಿವಾಯ »»»»»»
»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ