ತೇಜಪ್ಪ ಕನಸಲ್ಲಿ ಅವನ ಸತ್ತ ತಂದೆ ಬಂದು ತೇರು ಎಳೆಯಲು ಜಾಗ ಕೊಡಲು ಹೇಳಿದ ಕಥೆ,

 🌺 ತೇಜಪ್ಪ ಕನಸಲ್ಲಿ ಅವನ ತಂದೆ ಬಂದು ತೇರು ಎಳೆಯಲು ಜಾಗ ಕೊಡಲು ಹೇಳಿದ ಕಥೆ,

ಒಂದು ದಿನ ಭಕ್ತರು ಕೂಡಿ ಸುಂದರವಾದ ಮಂತ್ರಪೂರಿತ ಗಡ್ಡೆಯ ತೇರು ಕಟ್ಟಿಸಬೇಕೆಂದು ಮಾತನಾಡಿ ಕಟ್ಟಿಗೆ ತಂದು ತೇರು ಕಟ್ಟಿಸಿದರು. ಆ ತೇರಿನ ಪ್ರತಿಯೊಂದು ಭಾಗದಲ್ಲಿ ಸಂಸ್ಕೃತ, ಕನ್ನಡ, ಮರಾಠಿ, ಹಿಂದಿ, ಗುಜರಾತಿ, ತಮಿಳು, ತೆಲುಗು, ಉರ್ದು ಇನ್ನೂ ಅನೇಕ ಭಾಷೆಗಳಲ್ಲಿ ಮಂತ್ರಗಳನ್ನು ಕೆತ್ತಿಸಿ ಸಿದ್ಧಪಡಿಸಿದರು. ಅದನ್ನು ನೋಡಿ ಎಲ್ಲರಿಗೂ ಸಂತೋಷವಾಯಿತು  (ಅದನ್ನು ಈಗಲೂ ನೋಡಬಹುದು) ಮಠದ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿದ್ದು, ಜನರು ಸಾಕಷ್ಟು ಬರುತ್ತಿದ್ದರು. ರಸ್ತೆ ಸಣ್ಣದಾಗಿರುವುದರಿಂದ ಅದನ್ನು ಅಗಲ ಮಾಡಬೇಕೆಂದು ವಿಚಾರ ಮಾಡಿ ಮಠದ ದಕ್ಷಿಣ ಭಾಗದ ಜಮೀನಿನ ಮಾಲಕ ಹುಬ್ಬಳ್ಳಿ ತೇಜಪ್ಪ ನಿಂದ ಖರೀದಿಸಬೇಕೆಂದು ಹಣವನ್ನು ಮಾಲಕನಿಗೆ ಕಳಿಸಿಕೊಟ್ಟರು. ಆದರೆ ಮಾಲಕನು ಜಮೀನು ಕೊಟ್ಟರೆ ನನಗೆ ಅನಾನುಕೂಲವಾಗುತ್ತದೆಂದು ಹಣವನ್ನು ಮರಳಿ ಕಳಿಸಿದನು. ಆಗ ಭಕ್ತರು ನಿರಾಶರಾಗಿ ಸಿದ್ಧರಿಗೆ ಈ ವಿಚಾರ ತಿಳಿಸಿದಾಗ ಸಿದ್ಧ ಹೇಳಿದ ಭಕ್ತರೇ, ಅವನು ಜಮೀನು ಕೊಡದಿದ್ದರೆ ಬಿಡಲಿ. ಆದರೆ ಅವನ ತಂದೆಯೇ ಜಮೀನು ಕೊಡುವಂತೆ ಮಾಡುತ್ತಾನೆ. ನೀವು ಚಿಂತಿಸಬೇಡಿರಿ. ಈ ವಿಚಾರವನ್ನು ಯಾರಿಗೂ ಹೇಳಬಾರದು' ಎಂದರು. ಆಗ ಎಲ್ಲರೂ ಸಂತೋಷಗೊಂಡರು. ಮುಂದೆ ಅನಲಸಂವತ್ಸರ ಹದಿನೆಂಟು ನೂರಾ ಮೂವತ್ತೆಂಟರಲ್ಲಿ (ಹತ್ತೊಂಭತ್ತು ನೂರಾ ಹದಿನಾರು) ವಿಚಿತ್ರ ಘಟನೆ ನಡೆಯಿತು.


ಮುಂದ ಎರಡು ತಿಂಗಳು ಕಳೆಯಲಿಲ್ಲ. ಒಂದು ದಿನ ಆ ಮಾಲಕ ತೇಜಪ್ಪನ ಕನಸಿನಲ್ಲಿ ಅವನ ತಂದೆ ಸಿದ್ಧರನ್ನು ಕರೆದುಕೊಂಡು ಬಂದು ಮಗನಿಗೆ ಹೇಳಿದ 'ನೋಡು ಮಗೂ, ಮಠದ ತೇರನ್ನೆಳೆಯಲು ದಾರಿ ಸಣ್ಣದಿದೆ. ಆದ್ದರಿಂದ ರಸ್ತೆ ಅಗಲ ಮಾಡಿಸಲು ಸಿದ್ದರಿಗೆ ನಿನ್ನ ಜಮೀನು ಬೇಕಾಗಿದೆ. ಅವರ ಸಮಕ್ಷಮ ಆ ಜಮೀನನ್ನು ದಾನ ಮಾಡಿ ನನ್ನ ಇಚ್ಛೆಯನ್ನು ಪೂರೈಸು' ಎಂದಾಗ ಮಗ ಹೇಳಿದ “ತಂದೆಯೇ, ನಿಮ್ಮ ಇಚ್ಛೆಯ ಪ್ರಕಾರ ನಾನು ಗುರುಗಳಿಗೆ ಏನು ಬೇಕಾದರೂ ದಾನ ಮಾಡುತ್ತೇನೆ' ಎಂದು ಹೇಳಿ ಕನಸಿನಲ್ಲಿಯೇ ಗುರುಗಳಿಗೆ ಜಮೀನು ದಾನ ಮಾಡಿದನು. ಆಗ ಅವನ ತಂದೆ ಮತ್ತು ಸಿದ್ಧರು ಹರ್ಷಗೊಂಡು ಅಂತರ್ಧಾನರಾದರು.


ಒಂದು ದಿನ ಶಾಸ್ತ್ರ ನಡೆದ ಸಮಯದಲ್ಲಿ ತೇಜಪ್ಪನು ಬಂದು ಗುರುಗಳಿಗೆ ವಂದಿಸಿ ಹೇಳಿದ 'ಗುರುಗಳೇ, ನೀವು ಮತ್ತು ತೀರಿ ಹೋದ ನನ್ನ ತಂದೆಯು ರಾತ್ರಿ ಕನಸಿನಲ್ಲಿ ಬಂದು `ಮಗನೇ ಕೇಳು, ಸಿದ್ದರ ತೇರನ್ನೆಳೆಯಲು ನಿನ್ನ ಭೂಮಿಯಲ್ಲಿ ಅವರು ಎಷ್ಟು ಬೇಡುವರೋ ಅಷ್ಟು ಕೊಟ್ಟರೆ ನನಗೆ ಸಂತೋಷವಾಗುತ್ತದೆ ಎಂದರು. ನಾನು ನಿಮ್ಮ ಸಮಕ್ಷಮ ದಾನ ಮಾಡಿದ್ದೇನೆ. ಆದ್ದರಿಂದ ನಿಮಗೆ ಎಷ್ಟು ಬೇಕೊ ಅಷ್ಟು ತೆಗೆದುಕೊಳ್ಳಿರಿ ಎಂದು ನಮಸ್ಕರಿಸಿದನು. ಆಗ ಭಕ್ತರು ಹೋಗಿ ಅಳತೆ ಮಾಡಿ ನಂತರ ಕಾಗದ ಮಾಡಿಸಿ ಸಿದ್ಧರ ಚರಣಗಳಿಗೆ ಅರ್ಪಿಸಿದರು. ಆಗ ಸಿದ್ದರು ತೇಜಪ್ಪಾ, ನಿನ್ನ ವಂಶಕ್ಕೆ ಹರ್ಷವಾಗಲಿ' ಎಂದು ಆಶೀರ್ವದಿಸಿದರು. ಆಮೇಲೆ ರಸ್ತೆ ಮಾಡಿಸಿದರು.


ಮತ್ತೆ ಕೆಲವು ದಿವಸ ಕಳೆದ ನಂತರ ಸಮಾಧಿ ಮಂದಿರದ ಮೇಲೆ ಗೋಪುರ ಕಟ್ಟಿಸಿ ಕಳಸವನ್ನಿಟ್ಟರು. ಸ್ವಾಮಿಗಳ ಜನ್ಮದಿನವಾದ ರಾಮನವಮಿ ಉತ್ಸವ ಮತ್ತು ಕಸಬಾಪೇಟೆಯಲ್ಲಿ ಇದರ ಹದಿಮೂರನೆಯ ದಿನ ಸ್ವಾಮಿಗಳನ್ನು ಕೂಡಿಸಿ ನಾಮಕರಣೋತ್ಸವವನ್ನು ಪ್ರತಿವರ್ಷ ಮಾಡುತ್ತಿದ್ದರು. ಮತ್ತು ಪಂಡರಪುರದ ಆಷಾಢ ಕಾರ್ತಿಕೋತ್ಸವದಂತೆ ಆ ಮಿತಿಯಲ್ಲಿ ಉತ್ಸವವನ್ನು ಮತ್ತು ಭಾಗವತ ಪುರಾಣ ಸಪ್ತಾಹವನ್ನು ಪ್ರತಿವರ್ಷ ಮಾಡುತ್ತಿದ್ದರು. ಪ್ರತಿ ಸೋಮವಾರ ಶ್ರೀಗಳ ಚರಣ ಪೂಜೆಯನ್ನು ಮಾಡುತ್ತಿದ್ದರು. ಈ ಪ್ರಕಾರದ ಉತ್ಸವಗಳನ್ನು ಕಂಡು ಜನರು ಭೂಕೈಲಾಸವೆಂಬ ಹುಬ್ಬಳ್ಳಿಯಲ್ಲಿ ಸಂತ ಸಿದ್ದರು ಭಗವಂತನೇ ಇರುವನೆಂದು ಬ್ರಾಹ್ಮಣ ಮೊದಲುಗೊಂಡು ಎಲ್ಲರೂ ಭಕ್ತಿಯಿಂದ ಬಂದು ಸೇವೆ ಮಾಡಿ ಶ್ರವಣ ಮಾಡಿ ಧನ್ಯಭಾವದಿಂದ ಹೋಗುತ್ತಿದ್ದರು. ಹೀಗೆ ಆರೂಢರ ಕೀರ್ತಿಯು ನಾಲ್ಕೂ ದಿಕ್ಕಿಗೆ ಹರಡಿತು.

👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ

👇👇👇👇

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಲೋಕಮಾನ್ಯ ತಿಲಕರ ಹಾಗೂ ಸಿದ್ಧಾರೂಢರ ಸಮಾಗಮ

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 📲

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ