ಹಸಿವುನಿಂದ ಕಂಗೆಟ್ಟ ಸೋಮು ಭೀಮುರಿಗೆ ಹಸಿವು ಜಯಸು ಬಗೆ ಹೇಳಿದ ಬಾಲಸಿದ್ಧನ ಕಥೆ

 🍛ಹಸಿವುನಿಂದ ಕಂಗೆಟ್ಟ ಸೋಮು ಭೀಮುರಿಗೆ ಬಾಲಸಿದ್ದ  ಉಪದೇಶ ಮಾಡಿದ್ದು 🍁

ಮೂರು ಜನ ಸಂಚಾರ ಮಾಡುತ್ತ ಹೊರಟರು ಆಗ ಸೋಮ, ಭೀಮರಿಗೆ  ಹಸಿವಿನಿಂದ ಕಸಿವಿಸಿಗೊಂಡು “ಸಿದ್ದಾ ಈ ಊರಿನಲ್ಲಿ ನಮಗೆ ಊಟಕ್ಕೆ ಯಾರು ಕರೆಯುವರು” ಅಂತಾ ಕೇಳಲು
ಗೆಳೆಯರೇ ನೀವು ಗುರುವಿನ ಶೋಧಕ್ಕೆ ಹೊರಟಿರುವಿರೋ, " ಕೊಳೆಯತಕ್ಕ ಅನ್ನ ಶೋಧಕ್ಕೆ ಹೊರಟಿರುವರೋ ವಿಚಾರ ಮಾಡಲಾಗಿ ನಿಜವಾದ ಮೋಕ್ಷಾರ್ಥಿಗಳಿಗೆ ಇದು ಯೋಗ್ಯವಲ್ಲ, ಅನ್ನಕ್ಕಿಂತಲೂ ಅಧಿಕವಾದ ತೃಪ್ತಿಯು ಶಿವಧ್ಯಾನದಿಂದ ಲಭಿಸುವುದು. ಇದನ್ನು ತಿಳಿದುಕೊಳ್ಳದೆ, ಹಸಿವಿನ ಬಾಧೆಯ ನೆನಪಿನಿಂದ ದುಃಖಕ್ಕೊಳಗಾಗುವಿರಿ, ಇದನ್ನು ತ್ಯಾಗ ಮಾಡಿ ಶಿವನ ಧ್ಯಾನ ಮಾಡಿರಿ, ಶಿವನ ಧ್ಯಾನ ಬಿಡುವದು ಚಿಂತೆ ಮಾಡುವದು ಸರಿಯಲ್ಲ, ಹಸಿದ ಗೆಳೆಯರೇ, ಶಾಂತಿಯಿಲ್ಲದೆ ನಿಮ್ಮ ಮನಸ್ಸು ಜಠರಾಗ್ನಿಯಲ್ಲಿ ನಿಂತು ತಾಪಕ್ಕೆ ಗುರಿಯಾಗಿದೆ. ಹೃದಯ ಕಮಲದಲ್ಲಿ ವಿರಾಜಮಾನನಾದ ಶಿವನ ಧ್ಯಾನದಲ್ಲಿ ನಿಮ್ಮ ಮನಸ್ಸು ಮುಳುಗಲು ಅಲ್ಲಿಂದಲೇ ಅಮೃತ ಧಾರೆಯು ಉಕ್ಕೇರಿ ಹಸಿವು ಶಮನವಾಗಿ ಪರಮ ಸುಖ ತೋರುವದು, ಅನ್ನ ಸೇವನೆಯ ಶಾಂತಿಯು ಕ್ಷಣಿಕವಾದುದು. ಇದರಿಂದ ತಾಪವು ಶಮನವಾಗುವದು, ಪರಮಾತ್ಮನ ಧ್ಯಾನದಿಂದ ದೊರೆಯುವ ಸುಖವು ಅತ್ಯಂತ ಆನಂದದಾಯಕ. ಗೆಳೆಯರೇ, ಪದ್ಮಾಸನವನ್ನು ಹಾಕಿ ಹೃದಯ ಕಮಲದಲ್ಲಿಯ ಪರಮಾತ್ಮನ ಧ್ಯಾನದಲ್ಲಿ ಪೂರ್ಣ ಲಕ್ಷ್ಯವನ್ನು ನಿಲ್ಲಿಸಿರಿ. ಮೂಗಿನಲ್ಲಿ ಈಡಾ ಪಿಂಗಳ ನಾಡಿಗಳಲ್ಲಿ ಒಳಗೆ, ಹೊರಗೆ ಚಲಿಸುತ್ತಿರುವ ಪ್ರಾಣವಾಯುವನ್ನು ಸೂಕ್ಷ್ಮ ನಾಡಿಯಲ್ಲಿ ಸೇರಿಸುವ ಪ್ರಾಣಾಯಾಮ ಮಾಡುತ್ತಿರುವಲ್ಲಿ ಸಮಾಧಿ ಪ್ರಾಪ್ತಿಯಾಗುವದು. ಈ ಕ್ರಿಯೆಯಿಂದ ಜಠರಾಗ್ನಿಯು ಕ್ಷೀಣವಾಗಿ ಹಸಿವಿನಿಂದ ತಾಪವು ನಾಶವಾಗುವದು. ಹಸಿವಿನ ತಾಪವು ನಾಶವಾಗಲು ಮನಸ್ಸು ಸ್ಥಿರವಾಗಿ ನಿಂತು ಸಮಾಧಿಯ ಸುಖವು ಅತ್ಯಧಿಕವಾಗುವದು. ಈ ಪ್ರಕಾರ ಸಿದ್ಧನು ಸೋಮ ಮತ್ತು ಭೀಮನಿಗೆ ತಿಳಿಸಿದನು. ನೀನು ಹೇಳಿದ ಪ್ರಕಾರ ನಾವು ನಡೆದುಕೊಳ್ಳುತ್ತೇವೆ ಅಂತಾ ಈರ್ವರೂ ಹೇಳಿದರು.


ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ  ಕಥೆಗಳ ಲಿಂಕಗಳು 
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 
2)Facebook shareಗಾಗಿ👉


«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ