ಸಾದುಚಕ್ರವರ್ತಿ ಸಿದ್ಧರಿಂದ ಆನೆಗೊಂದಿ ಅರಸನಿಗೆ ಜ್ಞಾನೋಪದೇಶ

🕉️ ಸಾದುಚಕ್ರವರ್ತಿ ಸಿದ್ಧರಿಂದ ಆನೆಗೊಂದಿ ಅರಸನಿಗೆ ಜ್ಞಾನೋಪದೇಶ 



ಚಿಂತಾಮಣಿ ಆಶ್ರಮದಿಂದ ರಾಜನು  ನಮಸ್ಕರಿಸಿ ಸಿದ್ಧಬಾಲಕನನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಅರಮನೆಗೆ ಕರೆದೊಯ್ದನು. ಅಲ್ಲಿ ಸಿದ್ದನಿಗೆ ಸ್ನಾನವನ್ನು ಮಾಡಿಸಿ ಶುಭ್ರ ವಸ್ತ್ರಗಳನ್ನು ಉಡಿಸಿ ರತ್ನಖಚಿತ ಸಿಂಹಾಸನದ ಮೇಲೆ ಕುಳ್ಳಿರಿಸಿ ಬಹುಬಗೆಯಿಂದ ಅಲಂಕಾರಗಳಿಂದ ಪೂಜೆ ಮಾಡಿ ಪಂಚಪಕ್ವಾನ್ನಗಳ ಭೋಜನದೊಂದಿಗೆ ಸರಸ ಮಾತುಗಳಿಂದ ಕಾಲ ಕಳೆದರು.


ಕೈ ಮುಗಿದು ರಾಜನು, ಸಿದ್ಧನನ್ನು ಕುರಿತು ''ಹೇ ಪರಮ ಗುರುವೆ, ನಾನು ಯಾರು? ನನ್ನ ಇರವು ಹೇಗೆಂದು ತಿಳಿಸು" ಅಂತಾ ಪ್ರಾರ್ಥಿಸಲು


ಸಿದ್ದ ಬಾಲಕನು ರಾಜನನ್ನು ಕುರಿತು 'ಶೃತಿಯು ತಾನೇತಿ' ಅಂದರೆ ತ್ಯಾಗವನ್ನೇ ಹೇಳಿರುವದು. ಬೇಗನೇ ಕೋಶಗಳನ್ನು ತಿಳಿಯುತ್ತ ಒಂದೊಂದನ್ನೇ ತ್ಯಜಿಸಬೇಕು. ಈ ಪ್ರಕಾರ ತ್ಯಜಿಸಲು ಅನಂತ ಸತ್‌ಚಿತ್ ಸುಖ ಸ್ವರೂಪವೇ ಭ್ರಾಂತಿಯಿಲ್ಲದ ಸ್ವಸ್ವರೂಪವು ಸತ್ಯವಾಗಿರುವುದು ಮತ್ತು ಯಾವಾಗಲೂ ಪರಬ್ರಹ್ಮವಾದುದು. ಈ ಭ್ರಾಂತಿರಹಿತ ಅನಂತ ಸತ್ ಚಿತ್ ಸುಖ ಸ್ವರೂಪ ಪರಬ್ರಹ್ಮವೇ ನೀನಾಗಿರುವೆ, ಸತ್ಯವಾಗಿಯೂ ಇದರಲ್ಲಿ ತತ್, ತ್ವಂ, ಅಸಿ, ಮೂರು ಪದಗಳಿರುವವು. ತತ್ ಎಂದರೆ ಬ್ರಹ್ಮ, ತ್ವಂ ಎನಲು ಜೀವ, ಅಸಿ ಎಂದರೆ ಸಂಗಮ, ಬ್ರಹ್ಮ ಮತ್ತು ಜೀವ ಇವೆರಡರ ಐಕ್ಯವೆಂಬುದನ್ನು ತಿಳಿದುಕೊ, ಶುದ್ಧ ಸತ್ವಗುಣ ಪ್ರಧಾನದಿಂದ ಮಾಯಾ ತದ್ಗತವೆನಿಸುತ ಇದ್ದ ಚಿದಾಭಾಸನು ಇವನಿಗೆ ಆಶ್ರಯ ಬ್ರಹ್ಮನು, ಇವು ಮೂರೂ ಕೂಡಿ ಸರ್ವಜ್ಞಾದಿಗಳಿದ್ದ ದೇವನು ತತ್ ಪದದ ಸಿದ್ಧವಾಗುವ ವಾಚ್ಯಾರ್ಥ ಸತ್ಯ ಒಡೆಯನಾದ ಕೂಟಸ್ಥನೆಂಬನು ರಾಜನ ಮುಖ್ಯ ಗುಣವನ್ನು ಬಿಡದೆ ಅವಿದ್ಯಾತದ್ಗತ  ಚಿದಾಭಾಸ ಇವು ಮೂರೂ ಕೂಡಲು ಕರ್ಮಗಳಿಂದ ಇರುವಂತಹನೆ ಜೀವನು. ಇದು ತ್ವಂ ಪದದ ವಾಚಾರ್ಥವೆನಿಸುವುದು. ದೇವನ ಮಾಯಾ ಉಪಾಧಿಯನ್ನು ಜೀವನ ಅವಿದ್ಯಾ ಉಪಾಧಿಯನ್ನು ಕಳೆಯಲಿಕ್ಕೆ ಉಳಿದ ಚೈತನ್ಯ ದ್ವಂದ್ವವನ್ನು ಐಕ್ಯಗೊಳಿಸುವುದೇ ಅಸಿ ಪದವನ್ನು ತಿಳಿದವರು ಒಪ್ಪಿಕೊಂಡಿರುತ್ತಾರೆ. ಹೇ ರಾಜನೇ ಕೇಳು, ಸಮುದ್ರದಲ್ಲಿ ಉದಿಸಿದ ತೆರೆ, ನೊರೆ, ಗುಳ್ಳೆಗಳು ನೀರಲ್ಲದೇ ಬೇರೆಯುಂಟೆ? ಅದರಂತೆ ನಿತ್ಯವೂ ನಿನ್ನಲ್ಲಿ ಜಾಗೃತ್, ಸ್ವಪ್ನ, ಸುಪ್ತಿ ಮತ್ತು ಅವುಗಳ ಕ್ರಿಯೆಗಳು ನಿನಗೆ ಬೇರೆಯಲ್ಲ. ಬೆಲ್ಲದಿಂದ ತಯಾರಿಸಲಾದ ಪುರುಷ, ಸ್ತ್ರೀ, ಪಕ್ಷಿಗಳ ಗುದಗುಹ್ಯ ಮೊದಲಾದವು ಹೀನಗಳೆಂದು ಭ್ರಾಂತಿಯಿಂದ ತಿಳಿದರೂ ಬೆಲ್ಲ ಒಂದೇ ಇರುವಂತೆ, ಜಗವೆಲ್ಲವೂ, ನಾನು, ನೀನು, ಏಕಾತ್ಮರೂಪ ನಿಜವಾದದ್ದು."ಈ ಪ್ರಕಾರ ರಾಜನಿಗೆ ಹೇಳುತ್ತಾ ಸಿದ್ದನು  ಸಮೀಪದಲ್ಲಿ ಕರೆದು ಬಲಗಿವಿಯಲ್ಲಿ ಮಂತ್ರವನ್ನು ಬೋಧಿಸಿದನು. ಆಗ ರಾಜನು ಸಿದ್ಧನನ್ನು ಕುರಿತು ''ಹೇ ಗುರುನಾಥಾ ನೀನು ಸವಿಸ್ತಾರವಾಗಿ ಮಾಡಿದ ಬೋಧನೆಯಿಂದ ನನ್ನಲ್ಲಿಯ ಎಲ್ಲ ಭ್ರಾಂತಿಗಳು ನಾಶವಾದವು. ಕಿವಿಯಿಂದ ಕೇಳಿದ ನನಗೆ ಆನಂದಾತಿಶಯವಾಗಿ ನನಗೆ ಪರಮಶಾಂತಿಯು ದೊರಕಿತು. ಧನ್ಯನಾದೆನು ಚಿಂತೆಗಳೆಲ್ಲ ಅಡಗಿದವು” ಅಂತಾ ಹೇಳುತ್ತಾ, ಆತನಿಗೆ ಆನಂದಾಶ್ರುಗಳು ಧಾರಾಕಾರವಾಗಿ ಹರಿಯ ತೊಡಗಿದವು. ಪ್ರೇಮಾಂಬುಧಿಯ ಸ್ನಾನವನ್ನು ಮಾಡುತ್ತಾ ವಿರತಿಯೆಂಬ ಮಡಿ ವಸ್ತ್ರ ಧಾರಣ ಮಾಡಿ, ಸದ್ಗುರುವಿನ ಪಾದಪದ್ಮಗಳನ್ನು ಆನಂದಭರಿತ ಕಣ್ಣೀರಿನಿಂದ  ತೊಳೆದು, ಭಕ್ತಿಯೆಂಬ ಗಂಧಲೇಪನ ಮಾಡಿ ಶಿರೋಕಮಲವನ್ನೇರಿಸಿ ಜ್ಞಾನದ ಜ್ಯೋತಿಯನ್ನು ಹಚ್ಚಿ ಜಯತು ದೇವನೆ, ಜನ್ಮರಹಿತನೆ, ಜಯತು ಮುಕ್ತಾಂಗನೆಯ ರಮಣನೆ, ಜಯತು ಶೂಲಿಯೆ ಸತ್ತು ಚಿತ್ತಾನಂದ ಲಕ್ಷ್ಮಿತನೆ, ಜಯತು ಪರತರ ಮಂಗಲಾತ್ಮನೆ, ಜಯತು ನಿಶ್ಚಲ ಬ್ರಹ್ಮರೂಪನೆ ಜಯತು ಸಿದ್ಧಾರೂಢ ಸದ್ಗುರು ಸ್ವಾಮಿಯೆ ಜಯತು' ಅಂತಾ ಸದ್ಗುರುನಾಥನಿಗೆ ರಾಜನು ಜಯಜಯಕಾರ ಮಾಡಿದನು.


ನಂತರ ಈ ಕೆಳಗಿನಂತೆ ರಾಜನು ಮಂಗಳಾರತಿ ಮಾಡಿದನು.


ಮಂಗಲಂ ಜಯ ಮಂಗಲೆನ್ನುತ |

ಲಿಂಗಮಯ ಗುರುಸಂಗದಿಂ ನಾ | 

ನಂಗಿ ಭಾವವ ನುಂಗಿ ಬೆಳಗುವೆ  ಮಂಗಳಾರತಿಯಾ|

ತುಂಗಮಂತ್ರದ ರಂಗಿನಿಂ ಮಿಗೆ |

ಹಿಂಗಿಯದು ವಿದು ಲಿಂಗನಾಗುತ |

ಮಂಗಭವಮಂ ಪಿಂಗಿ ಬೆಳಗುವೆ ಮಂಗಳಾರತಿಯಾ |


ಈ ಪ್ರಕಾರ ತನ್ನ ಅನುಭವಕ್ಕೆ ಬಂದಿರುವುದನ್ನು ರಾಜನು ಪೇಳತೊಡಗಿದನು.

ಪ್ರತಿನಿತ್ಯ ಗುರು ಹೇಳಿದಂತೆ ರಾಜನು ಪದ್ಮಾಸನಾಬದ್ದನಾಗಿ ತನ್ನ ಹೃದಯ ಕಮಲದಲ್ಲಿ ತನ್ನ ಇಷ್ಟದೈವತ ಪಂಪಾಪತಿಯನ್ನು ಸ್ಮರಿಸುತ್ತ, ಮಂತ್ರವನ್ನು ಉಚ್ಚರಿಸುತ್ತ ಧ್ಯಾನದಲ್ಲಿ ತತ್ಪರನಾದನು. ಅಲ್ಲದೆ ಶ್ರವಣ ಮಾಡಿದ್ದನ್ನು ಆಧ್ಯಾತ್ಮ ಚಿಂತನದ ನಿಧಿಧ್ಯಾಸನದಲ್ಲಿ ಆಸಕ್ತನಾದನು. ಈ ಪ್ರಕಾರ ರಾಜನಿಗೆ ಸ್ವಸ್ವರೂಪ ಜ್ಞಾನ ತೋರಿ ಶುಭಾಶೀರ್ವಾದ ಮಾಡಿ ರಾಜನ ಪರವಾನಿಗೆ ಪಡೆದು ಸಿದ್ದನು ಅಲ್ಲಿಂದ ಹೊರಟನು.

ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಸಿದ್ಧರಿಂದ ಚಿಂತಾಮಣಿ ಆಶ್ರಮದಲ್ಲಿ ಸ್ವಾಮಿಗಳ ಶಿಷ್ಯ ಬ್ರಹ್ಮಾನಂದ ಗರ್ವಭಂಗ

ಎಲ್ಲಾ  ಕಥೆಗಳ ಲಿಂಕಗಳು 

👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉  

3)



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ