ಸಿದ್ಧಾರೂಢರಿಂದ ಪಿಚ್ಚಂಡಯ್ಯನ ಪ್ರಶ್ನೆಗಳಿಗೆ ಉತ್ತರ ಹಾಗೂ ಧ್ಯಾನ ಮತ್ತು ಕರ್ಮಯೋಗಿಗಳ ವಿಕ್ಷೇಪ ತಿಳಿಸಿದರು
🕉️ ಸಿದ್ಧಾರೂಢರಿಂದ ಪಿಚ್ಚಂಡಯ್ಯನ ಪ್ರಶ್ನೆಗಳಿಗೆ ಉತ್ತರ ಹಾಗೂ ಧ್ಯಾನ ಮತ್ತು ಕರ್ಮಯೋಗಿಗಳ ವಿಕ್ಷೇಪ ತಿಳಿಸಿದರು
ರಾಮಝರಿಯಲ್ಲಿ ಹಠಯೋಗಿಯ ಸ್ಥಾನವನ್ನು ಬಿಟ್ಟು ಮುಂದೆ ಸಿದ್ಧನು ಹೊರಟನು. ಅಲ್ಲಿ ಎರಡೂ ಕಣ್ಣುಗಳನ್ನು ಮುಚ್ಚಿ ಕುಳಿತಿದ್ದ ಉಪಾಸಕನನ್ನು ಕಂಡು ಹರ್ಷದಿಂದ ಆತನ ಕಿವಿಯಲ್ಲಿ ಓಂಕಾರವನ್ನು ಜೋರಾಗಿ ಊದಲು ಆತನು ಕಣ್ಣು ತೆರೆದನು. ಹೇ ಉಪಾಸಕನೇ, ನಿನ್ನ ಉಪಾಸನವು ಜ್ಞಾತವೋ ಅಥವಾ ಅಜ್ಞಾತವೋ ಅಂತಾ ಕೇಳಲು, ನೀನು ಜ್ಞಾತವೆಂದರೆ ಧ್ಯಾನದ ಉಪಾಸನೆ ದೇವತೆಯು ಅಡಗಲು, ಧ್ಯಾತೃತ್ವ ನೀಗಿ, ಜ್ಞೆಯವಾಗಲು ಅಲ್ಲಿ ಜ್ಞಾನವಡಗಲು ಜ್ಞಾತ ಹೇಗೆನ್ನುವಿ? ಅಜ್ಞಾತ ಎನಲು ಧ್ಯೇಯ, ಧ್ಯಾತೃಗಳ ನಿಜವನ್ನರಿಯದೆ ಧ್ಯಾನವಾಗಲಾರದು ಕಾರಣ ನಿನ್ನ ಧ್ಯಾನ ಯಾವುದು? ಅಂತಾ ಸಿದ್ಧನು ಪ್ರಶ್ನಿಸಿದನು.
ಆಗ ವಿಪ್ರನು ಹೇ ಸಿದ್ಧನೇ, ಪರೋಕ್ಷ ಜ್ಞಾನಕ್ಕೆ ಭಿನ್ನವಾದ ಶಾಸ್ತ್ರಗಳ. ಅಪರೋಕ್ಷ ಜ್ಞಾನದಿಂದ ಮಾಡುವೆ. ಈ ಶಾಸ್ತ್ರಗಳಲ್ಲಿ ನಾನು ಶ್ರದ್ಧೆಯುಳ್ಳವನು ಈ ಧರೆಯಲ್ಲಿ ಶಾಸ್ತ್ರಜ್ಞರಿಗೆ ತಮ್ಮ ದೇವತೆಗಳಲ್ಲಿ ದೃಢವಾದ ಶ್ರದ್ದೆ ಇರದೆ, ಧ್ಯಾನಾದಿ ವಿಧಿಗಳ ಕಡೆ ನಡೆಸುವರು ಮುಂದೆ ನಾಸ್ತಿಕರಾಗುವರು. ಕಾರಣ ಉಪಾಸಕನಿಗೆ ಶ್ರದ್ದೆಯು ಮುಖ್ಯವಾದುದು ಎಂದನು. ಈತನು ಸಂಪ್ರದಾಯವಾದಿ ಅಂತಾ ಅಂದುಕೊಳ್ಳುತ್ತಾ ಸಿದ್ಧನು ಅಲ್ಲಿಂದ ಹೊರಟನು.
ಸದ್ಗುರುವಿನ ಧ್ಯಾನ ಮಾಡುತ್ತಾ ಸಿದ್ದನು ತೋತಾದ್ರಿಗೆ ಬಂದು, ವಿಷ್ಣು ಮೂರ್ತಿಯ ದರ್ಶನ ಮಾಡುತ್ತಾ ಅಲ್ಲಿಂದ ನಡೆದನು. ಶಂಕರರೂಪನಾದ ತಿರಕ ರಾಯನ ಕೋಟೆಗೆ ಬಂದನು. ಅಲ್ಲಿ ಲಂಬ ನಾರಾಯಣನ ಗುಡಿಯಲ್ಲಿ ಅಂಬುಜಾಕ್ಷನ ದರ್ಶನಕ್ಕೆ ಬಂದ ಶಾಸ್ತ್ರಿಗಳು ಸಿದ್ದನ ಕಡೆ ಬಂದರು. ಅವರಲ್ಲಿಯ ಕರ್ಮಠನು ಸಿದ್ಧನನ್ನು ಕುರಿತು ಕರ್ಮವನ್ನು ನೀನೇಕೆ ತ್ಯಜಿಸಿರುವಿ ಅಂತಾ ಕೇಳಿದನು. ಆಗ ಸಿದ್ದನು ಹೇ ದ್ವಿಜೋತ್ತಮರೇ ಕೇಳಿರಿ. ಕರ್ಮದಿಂದ ಪಿತೃಲೋಕ, ನರಲೋಕಕ್ಕೆ ಪುನಃ ಪುನಃ ಮರಳುವದೇ ಫಲವು ಅಂತಾ ಜ್ಞಾನಿಗಳು ಹೇಳಿದ್ದಾರೆ. ಕರ್ಮದ ಸಂಸ್ಕಾರವಳ್ಳ ಕರ್ಮಿಯ ಚಿತ್ತದಲ್ಲಿ ಕರ್ಮವೇ ಮಾಡುವ ಹವ್ಯಾಸ ಇರುತ್ತದೆ. ಕರ್ಮರೂಪದ ಅಶ್ವಗಳು, ರಥಗಳು ಕರ್ಮಗಳಿಂದ ಎಳೆಯಲ್ಪಟ್ಟು, ಕರ್ಮಠನ ಪ್ರಾಣವನ್ನು ಎಳೆಯುತ್ತಾ ಧೂಮ್ರದಲ್ಲಿ ಮಿಶ್ರಣವಾಗಿಹುದು. ಆ ಕರ್ಮದ ಫಲದಿಂದ ಆ ಕರ್ಮಿಯ ಸೂಕ್ಷ್ಮಶರೀರವನ್ನು ರಾತ್ರಿಯಲ್ಲಿ, ಕೃಷ್ಣಪಕ್ಷದಲ್ಲಿ, ದಕ್ಷಿಣಾಯನ ತಾಣದಲ್ಲಿ ಚಂದ್ರಲೋಕಕ್ಕೆ ಒಯ್ಯುತ್ತಾ ಮುಂದೆ ಪಿತೃಲೋಕಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಭೋಗ ಮಾಡುವ ತನುವನ್ನು ಪ್ರಾಪ್ತಿ ಮಾಡಿಕೊಡುವದು.
ಭೋಗದ ಸಮಯ ತೀರಲು, ಕೂಡಲೇ ಆಣೆಕಲ್ಲಿನಂತೆ ಅಳಿಯುವದು ಕರ್ಮಶೇಷದ ಪೂರ್ವ ಸೂಕ್ಷ್ಮದೇಹವನ್ನು ಅಲ್ಲಿಂದ ದೇವತೆಗಳು ಬಿಡಿಸಿ ಆಕಾಶಕ್ಕೆ ತಳ್ಳುವರು. ಆಗ ವಾಯುವಿನಾಕಾರವಾಗಿ ನಂತರ ಅಗ್ನಿಯಲ್ಲಿ ಕೂಡಿ, ಮೇಘದಲ್ಲಿ ಸೇರ್ಪಡೆಯಾಗಿ ಭೂಮಿಗೆ ಪತನವಾಗುವನು. ನಂತರ ಧ್ಯಾನ, ಅನ್ನ, ಬಿಂದು ನಂತ ಪಾಪಪುಣ್ಯ ಮಿಶ್ರಣ ದೇಹವನ್ನು ಪೊಂದುವನು. ಆ ತನುವಿಗೆ ಮೋಹಿಸಿ ಮತ್ತೆ ಕರ್ಮ ಮಾಡಿ ಮೊದಲಿನಂತೆ ಹುಟ್ಟು, ಸಾವು ಪಡೆಯುತ್ತಾ, ಇಹ ಪರಕ್ಕೆ ಕತ್ತೆಯಂತೆ ನಟನೆ ಮಾಡುತ್ತಾ ದುಃಖವನ್ನೇ ಸೌಖ್ಯವೆಂದೂ, ಚಿತ್ತದಲ್ಲಿ ತಿಳಿದುಕೊಂಡು ಕರ್ಮಿಗೆ ಬೇರೆ ಫಲವಿಲ್ಲ. ದೃಢವಾದ ಮೋಕ್ಷಪೇಕ್ಷ ಕರ್ಮವನ್ನು ಶಿರಸ್ಕಾರ ಮಾಡಲು ಕರ್ಮದ ತೊಡಕು ಬ್ರಹ್ಮಜ್ಞಾನಿಗೆ ಇಲ್ಲಾ "ಅಂತಾ ಸಿದ್ದನು ಗಂಬೀರವಾಗಿ ಪೇಳಿದನು. ಈ ನುಡಿಗಳನ್ನು ಕೇಳಿದ ಆ ವಿಪ್ರನು ಈತನು ಜ್ಞಾನಿಗಳಿಗೆ ಒಡೆಯನಾಗಿರುವನು ಅಂತಾ ಸಿದ್ಧನಿಗೆ ನಮಸ್ಕರಿಸಿದನು.
ಆ ದ್ವಿಜರಲ್ಲಿಯ ಒಬ್ಬನು ಭಕ್ತಿಯಿಂದ ನಮಿಸುತ್ತ ಸಿದ್ಧನನ್ನು ಕುರಿತು ಹೇ ಮಹಾತ್ಮನೆ, ಮೋಕ್ಷಾಸಕ್ತನಿಗೆ ಮೋಕ್ಷ ಪಡೆಯಬೇಕೆಂಬುದು ಧರ್ಮವೋ ಅಥವಾ ಗುಣವೊ ತಿಳಿಸೋಣವಾಗಬೇಕು ಅಂತಾ ಪ್ರಾರ್ಥಿಸಿದನು. ಅದಕ್ಕೆ ಸಿದ್ಧನು, ಅಯ್ಯಾ ದ್ವಿಜನೇ ಕೇಳು ಅಗ್ನಿಗೆ ಉಷ್ಣತೆಯ ಶಕ್ತಿಯಂತೆ ಧರ್ಮವೆಂದರೆ ಅದು ಸದಾ ಇರಬೇಕಾಗುತ್ತದೆ ಮತ್ತೆ ಗುಣ ಅಂದರೆ ಚಿತ್ತಜ್ಞಾನಾಭ್ಯಾಸದಲ್ಲಿ ಪ್ರವೃತ್ತಿ ಇರದೆ ಹಾಗೆಯೇ ಇರಬೇಕಾಗುತ್ತದೆ. ಈ ಎರಡೂ ಸತ್ಯವಲ್ಲ. ಮೋಕ್ಷಾಪೇಕ್ಷೆ ಅಭ್ಯಾಸದಿಂದ ಉದಯಿಸುವದು. ಗುರುಕೃಪ ಪಡೆದ ನಂತರ ತತ್ವಮಸಿ ಇತ್ಯಾದಿಗಳ ಶ್ರವಣದಿಂದ ಮುಮುಕ್ಷತ್ವ ಉದಯಿಸುವದು. ಮುಂದೆ ನಾನು ಬ್ರಹ್ಮಸ್ವರೂಪನು ಅಂತಾ ವೃತ್ತಿ ಆವಿರ್ಭವಿಸಿ ಅಪರೋಕ್ಷವಾಗಿ ದೇಹಭಾವವನ್ನು ಕಳೆದುಕೊಳ್ಳುತ್ತಾ ಬ್ರಹ್ಮಾತ್ಮಭಾವನೆ ತೋರುವದು. ಸಮುದ್ರದಲ್ಲಿ ಜಲಬಿಂದು ಬಿದ್ದು ಸಮರಸವಾಗುವಂತೆ ಬ್ರಹ್ಮಚೈತನ್ಯದಲ್ಲಿ ಐಕ್ಯತೆ ಹೊಂದುವದೇ ಮುಮುಕ್ಷತಾ ಲಕ್ಷಣ ಅಂತಾ ವಿವರವಾಗಿ ತಿಳಿಸಲು ಸಿದ್ದನಿಗೆ ನಮಿಸುತ್ತ ಆನಂದಸಾಗರದಲ್ಲಿ ತಲ್ಲೀನರಾದರು.
ಹರ್ಷದಿಂದ ಇರುವ ಅವರಲ್ಲಿ ಪಿಚ್ಚಂಡಯ್ಯನೆಂಬಾತನು ಸಿದ್ದನಿಗೆ ನಮಿಸಿ ಹೇ ಸ್ವಾಮಿ, ಈ ಚರಾಚರ ಜಗತ್ತಿಗೆ ಈ ಧರಣಿಯು ಆಶ್ರಯವಾಗಿರುವದು. ಈ ಧರಣಿಗೆ ಆಶ್ರಯ ಯಾವುದು ? ಅಂತಾ ಪ್ರಶ್ನಿಸಿದನು. ಆಗ ಸಿದ್ದನು ಆ ದ್ವಿಜನನ್ನು ಕುರಿತು ಕೇಳು ದ್ವಿಜನೇ, ನೀರಿನ ಆಶ್ರಯದಲ್ಲಿ ಧರೆಯು, ಅಗ್ನಿಯ ಆಶ್ರಯದಲ್ಲಿ ನೀರು, ವಾತದ ಆಶ್ರಯದಲ್ಲಿ ಅಗ್ನಿಯು ನಿಲ್ಲದು, ಈ ಘನವಾದ ಆಕಾಶದ ಆಶ್ರಯದಲ್ಲಿ ವಾಯುವು, ಬ್ರಹ್ಮ ದಾಶ್ರಯದಲ್ಲಿ ಅಥವಾ ಬ್ರಹ್ಮದಾಶ್ರಯದಲ್ಲಿ ಅಥವಾ ಆತ್ಮದಾಶ್ರಯದಲ್ಲಿ ಆಕಾಶವು ಇದಕ್ಕೆ ಶೃತಿ ಹೀಗೆ ಹೇಳುತ್ತದೆ,
ತಸ್ಮಾದ್ವಾಏತಸ್ಮಾದಾತ್ಮನ ಆಕಾಶಃ ಸಂಭೂತಃ |
ಆಕಾಶದ್ವಾಯುಃ ವಾಯೋರಗ್ನಿಃ | ಆಗ್ನೇರಾಪಃ
ಆದ್ಭ್ಯಃ ಪೃಥಿವೀ ||
ಕಾರಣ ಪರಮಾತ್ಮನೆ ಎಲ್ಲಕ್ಕೂ ಮೂಲಾಧಾರ ಅಂತಾ ಹೇಳಿದ್ದನ್ನು ಕೇಳಿ ಆ ಬ್ರಾಹ್ಮಣನು ಮತ್ತೆ ಪ್ರಶ್ನಿಸಿದನು. ದೇವತೆಗಳಿಂದ ನರರಿಗೆ, ನರರಿಂದ ದೇವತೆಗಳಿಗೆ ಸಂರಕ್ಷಣೆಗಾಗಿ ಅನ್ನವು ಯಾವ ಶಕ್ತಿಯ ಬಲದಿಂದ ಪ್ರಾಪ್ತಿಯಾಗುವದು. ಸಾವಧಾನದಿಂದ ಈ ಜಗತ್ತನ್ನು ಯಾವ ಶಕ್ತಿಯ ಬಲದಿಂದ ಇವರು ಪರಸ್ಪರರು ರಕ್ಷಣೆ ಮಾಡುವರು ಅಂತಾ ಇನ್ನೋರ್ವನು ಪ್ರಶ್ನಿಸಿದನು. ಆಗ ಸಿದ್ಧನು ತನಗೆ ಹಿತ ಬಯಸುವ ಹಾಗೂ ಅಹಿತ ಬಯಸುವ ಇವರೀರ್ವರಲ್ಲಿ ನಿರಂತರವಾಗಿ ಸಮಭಾವವನ್ನು ಹರನು ಹೊಂದಿದ್ದನ್ನು ಶೃತಿ ಸಾರುತ್ತಲಿದೆ. ಈ ಕಾರಣದಿಂದಲೇ ಕೈಲಾಸದಲ್ಲಿ ಹಾವು - ಮುಂಗಲಿ, ಹುಲಿ-ಆಕಳು ಇತ್ಯಾದಿ ಪರಸ್ಪರ ಹುಟ್ಟಿನಿಂದಲೂ ವೈರತ್ವ ಹೊಂದಿದ್ದರಿಂದಲೂ ಕೂಡಿ ಆಡುತ್ತವೆ. ಕಾರಣ ಪರಹಿತಕ್ಕಾಗಿ ಎಲ್ಲ ಕರ್ಮಗಳನ್ನು ಹರ್ಷದಿಂದ ಮಾಡುತ್ತಾ ಸ್ವಾರ್ಥ ತ್ಯಾಗ ಮಾಡಿ ಭೂದೇವತಾ ಎನ್ನಿಸಿಕೊಂಡು ದೇವತೆಗಳ ಸುಖಕ್ಕಾಗಿ ಸೋಮಯಾಗವನ್ನು ಮಾಡುವವರೇ ದ್ವಿಜರು, ಉತ್ತಮರಾದ ದ್ವಿಜರನ್ನು ತಮ್ಮ ಆರಾಧ್ಯ ದೈವತವೆಂದು ಮನ್ನಿಸುವವರೂ, ಸತ್ಯನುಡಿ, ಸಮಭಾವದಿಂದ ಜಗತ್ತಿನಲ್ಲಿ ಕೀರ್ತಿಶಾಲಿಗಳೂ ಸತ್ಯವ್ರತ ಅತ್ಯಧಿಕ ಬಲದಿಂದ ಅಶ್ವಮೇಧಯಾಗ ಮಾಡಿ ಜಗತ್ತಿನಲ್ಲಿ ಪುಣ್ಯವರ್ಧನ ಮಾಡಿ ಕೊಳ್ಳುವವನೇ ಕ್ಷತ್ರಿಯನು.
ಪರಮ ಬ್ರಾಹ್ಮಣರು ತನ್ನ ದೈವವಂದೂ ರಾಜ್ಯಪಾಲನೆ ಮಾಡುವ ಅರಸನೆ ತನ್ನ ತಂದೆಯೆಂದೂ, ತನ್ನ ಸೇವೆ ಮಾಡುವ ಶೂದ್ರರು ತನ್ನ ಮಕ್ಕಳೆಂದು ಸತ್ಕರ್ಮದಿಂದ ಸಿರಿ ಸಂಪತ್ತನ್ನು ಗಳಿಸಿ ಸರ್ವರಲ್ಲಿ ಸಮಭಾವ ತೋರುತ್ತಾ ಸ್ವಾರ್ಥವನ್ನು ತೊರೆಯುತ್ತ ಸುಗುಣಗಳಿಂದ ಕೃಷಿ, ವಾಣಿಜ್ಯ ಸೂರ್ಯಭಗವಾನ್‌ನ ಸ್ಮರಣೆ, ಗೋಸಂರಕ್ಷಣೆ ಮುಂತಾದ ಕಾರ್ಯಗಳಲ್ಲಿ ಆಸಕ್ತಿಯುಳ್ಳವನಾಗಿ, ಕನಕ, ವಸ್ತ್ರ, ಧನ, ಧಾನ್ಯ ಸತ್ಪಾತ್ರಕ್ಕೆ ದಾನ ಮಾಡುತ್ತಾ ಸ್ಕೃತಿಗಳಲ್ಲಿ ಹೇಳಿದ ಪ್ರಕಾರ, ಯಾವಾಗಲೂ ರಾಜ್ಯ ವಿಚಾರ, ಯಜ್ಞ ವಿವರಣ ಮಾಡಿ ಪುಣ್ಯ ಮಾಡುತ್ತಿರುವವನೇ ವೈಶ್ಯನು. ಸ್ವಾರ್ಥ ತ್ಯಾಗ ಮಾಡಿ, ಮೂರು ವರ್ಣದವರಿಗೆ ಸೇವಕನಾಗಿ ದ್ವಿಜರ ಕೃಪೆಗೆ ಪಾತ್ರರಾಗಿ, ರಾಜ ರಕ್ಷಣೆ ಕಾರ್ಯದಲ್ಲಿ ತೊಡಗಿ ವೃಶ್ಯರಿಗೆ ಸಹಾಯ ಮಾಡುವಲ್ಲಿ ಸತ್ಯತೆ, ಸಮಭಾವ ನಯ - ವಿನಯ ಸಂಪನ್ನ, ನಿತ್ಯವೂ ದೈವಭಕ್ತಿಯಲ್ಲಿ ಆಸಕ್ತಿಯುಳ್ಳವನೇ ಶೂದ್ರನು. ಈ ಪ್ರಕಾರ ನಾಲ್ಕೂ ವರ್ಣದವರು ಶೃತಿ, ಸ್ಮೃತಿ ಪುರಾಣೋಕ್ತಿಗಳ ಪ್ರಕಾರ ನಡೆದುಕೊಂಡು ದೂರದೃಷ್ಟಿಯಿಂದ ತಮ್ಮ ತಮ್ಮ ವೃತ್ತಿಗತ ವರ್ಣಾಚರಣೆಗಳನ್ನು ನಡೆಸಲು ಸುರರು, ಜೀವರು ಜೀವಿಸುವರು. ಅದರ ವಿವರವನ್ನು ಹೇಳುವೆ.
ಪರಮ ಸಂತೋಷದಿಂದ ಮಾನವರ ಸಲುವಾಗಿ ಅರುಣನು ವಾಯುವಿನೊಂದಿಗೆ ಉಷ್ಣ ಕಿರಣಗಳಿಂದ ಭೂಮಿಯಲ್ಲಿಯ ಜಲವನ್ನು ಹೀರಿ ಆಕಾಶದಲ್ಲಿ ಮೋಡಗಳನ್ನು ನಿರ್ಮಾಣ ಮಾಡುವನು. ವರ್ಷಾ ಕಿರಣಗಳಿಂದ ಮೋಡಗಳು ಕರಗಿ ಧರಣಿಗೆ ಮಳೆ ಬೀಳುವದು, ಈ ಮಳೆಯಿಂದ ಬಿತ್ತಲಿಕ್ಕೆ ಅನುಕೂಲವಾಗುವದು. ನಂತರ ಹಿಮ ಕಿರಣದಿಂದ ಭೂಮಿಯಲ್ಲಿ ಫಲ ಬರುವದು. ಚಂದ್ರನ ಅಮೃತ ಕಿರಣದಿಂದ ಆ ಧಾನ್ಯಾದಿ ಫಲಗಳಲ್ಲಿ ಅಮೃತವು ತುಂಬಿ ಪೌಷ್ಠಿಕ ಭರಿತ ರಸವತ್ತತೆ ಪ್ರಾಪ್ತವಾಗುವದು. ಸುರಪ, ವಾಯುದೇವ ಮುಂತಾದ ದೇವತೆಗಳಿಂದ ಧರೆಯಲ್ಲಿ ಬೆಳೆದ ಅನ್ನವನ್ನು ಹರ್ಷದಿಂದ ತಮ್ಮ ತಮ್ಮ ಪ್ರಾರಬ್ಧಕ್ಕನುಸಾರವಾಗಿ ಉಣ್ಣುವರು. ಈ ಪ್ರಕಾರ ನಿರಂತರವಾಗಿ ಸಕಲ ಲೋಕದ ಸುರ, ನರ, ಉರಗ, ಪಕ್ಷಿ ಮೊದಲಾದ ಸರ್ವ ಜೀವಕೋಟಿಗಳು ಸತ್ಕರ್ಮದ ಬಲದಿಂದ ಜೀವಿಸುವರು. ಕೊರತೆಯಿಲ್ಲದಂತೆ ರಾಜಧಾನಿಯನ್ನು ಪಡೆದ ಪ್ರಜಾ ಪಾಲನೆ ಮಾಡುವ ರಾಜನು ನಾಣ್ಯ ತಯಾರಿಸಿ ಬಿಡುಗಡೆ ಮಾಡುವನು. ಆ ನಾಣ್ಯ ಚಲಾವಣೆಯಿಂದ ರಾಜ, ಪ್ರಜರು ವ್ಯವಹರಿಸಿ ಆನಂದ ಪಡೆಯುವರು. ಬಂದ ಲಾಭದಲ್ಲಿ ಧನಿಕ ಮತ್ತು ರುಣಕೊ ನ್ಯಾಯಸಮ್ಮತವಾಗಿ ಉಪಜೀವನ ಸಾಗಿಸುವರು. ಪುಣ್ಯಬಲದಿಂದ ತ್ರಿಮೂರ್ತಿಗಳು, ದೇವೇಂದ್ರನು, ಎಲ್ಲ ದಿಕ್ಪಾಲಕರು, ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಶೂದ್ರರು ಇವರೆಲ್ಲರೂ ಕೂಡಿದ ಜಗತ್ತು ನಡೆಯುವದು ಮುಂತಾಗಿ ಸಿದ್ದನು ಹೇಳಿದನು. ಆಗ ಆ ದ್ವಿಜನು ಈತನು ವಿದ್ಯಾಮೂರ್ತಿ ಅಂತಾ ನುಡಿಯುತ್ತ ಭೋಜನ ನೀಡಿ ತೃಪ್ತಿಗೊಳಿಸಿದನು.
ಪುನಃ ಸಿದ್ಧನನ್ನು ನಮಿಸುತ್ತಾ ಹೇ ಮಹಾತ್ಮನೆ ನನ್ನ ಮನಸ್ಸು ವಾಯುವಿನಂತೆ ಯಾಕೆ ಚಲಿಸುವದು ತಿಳಿಸು ಅಂತಾ ಪ್ರಾರ್ಥಿಸಿದನು. ಅದಕ್ಕೆ ಸಿದ್ಧನು ಅವನನ್ನು ಕುರಿತು ಅಯ್ಯಾ ಬ್ರಾಹ್ಮಣೋತ್ತಮನೆ ಎರಡನೇ ಭೂತವಾದ ವಾಯುವಿನ ಗುಣವು ಚಲನೆ. ಈ ಗುಣವು ಮನಸ್ಸಿನಲ್ಲಿರುವದಕ್ಕೆ ಚಂಚಲ, ವಾಯುವಿನ ಏಕಪಾದಾಂಶ ಆಕಾಶದ ಅರ್ಧಭಾಗ ಕೂಡಿಕೊಂಡದ್ದೇ ಮನವಾಗುತ್ತದೆ. ಕಾರಣ ವಾಯುವಿನ ಗುಣ ಮನಸ್ಸಿನಲ್ಲಿದ್ದುದಕ್ಕೆ ದಳದಿಂದ ದಳಕ್ಕೆ ಜಿಗಿಯುತ್ತದೆ. ಚಿತ್ತದ ಚಲನೆಯು ವಾಯುವಿನ ಚಲನೆ ಒಂದೇ ಸ್ಥಳದಲ್ಲಿದ್ದು ವಿಷಯದ ಬಗ್ಗೆ ನಿರ್ಧಾರ ಮಾಡದೇ ಇರುವದು, ವಿಕಲ್ಪ ಮಾಡಿಸುವ ವೃತ್ತಿಯು ರಾಜಸ ಗುಣದ ಚಲನೆಯು. ಇದೆಲ್ಲ ವಾಯುವಿನ ಚಲನೆಯು. ಯೋಗ ಸಾಧನೆಯಿಂದ ಈ ಚಲನೆ ಹೋಗುವದು. ನಿನ್ನ ಮನಸ್ಸಿನಲ್ಲಿ ನಾನಾರು ಎಂಬ ಘನವಾದ ದೃಗ್ ದೃಶ್ಯ ತಿಳುವಳಿಕೆಯಿಂದ ರಾಜಸ ಚಲನೆ ಹೋಗುವದು, ಪ್ರಕಾಶಮಾನವಾದ ಚಿತ್ ಪ್ರತಿಬಿಂಬಿತ ಚಿತ್ತ ವೃತ್ತಿಯು ಜ್ಞಾನೇಂದ್ರಿಯಗಳಲ್ಲಿ ಕೂಡಿ ಶಬ್ದ ಸ್ಪರ್ಶರೂಪ ರಸಗಂಧ ಇವುಗಳ ಜ್ಞಾನವಾಗಲು ಆ ವಿಷಯಗಳೇ ದೃಶ್ಯ, ಜ್ಞಾನೇಂದ್ರಿಯಗಳೇ ದೃಕ್, ಅಂಧ, ಮೂಕ ಮುಂತಾದ ಪಾತಕಗಳ ದೋಷಗಳನ್ನು ತಿಳಿಯುವದೇ ದೃಕ್ ಇದಕ್ಕೆ ಸಂಶಯಗಳ ದೋಷವಿರುವದು. ಆ ವೃತ್ತಿಯಲ್ಲಿ ದೋಷವನ್ನು ಕಾಣುವ ಸತ್ಯಮತಿಯಾದ ಜೀವನು ದೃಕ್ಕೆನಿಪನು.
ಮತ್ತೆ ಆ ಕಡು ಬುದ್ದಿಯು ಪ್ರತಿದಿನ ನಿದ್ರಾವಸ್ಥೆಯಲ್ಲಿ ಲಯವಾಗಲು ನಿತ್ಯ ಕೂಟಸ್ಥಾತ್ಮನೇ ನಿಜವಾದ ದೃಕ್ಕೆನಿಪನು, ಹೇ ದ್ವಿಜತ್ತೋಮನೆ, ಇವುಗಳನ್ನು ಅರಿಯುವ ಈತನು ಒಳಗೆ ಹೊರಗೆ ಭಿನ್ನರಹಿತ ಸಮಸ್ಥಿತಿಯನ್ನು ಹೊಂದಿ ಪರಮ, ಸಚ್ಚಿತ್ಮಾತ್ರ ನಿರ್ಗುಣ, ಸರ್ವವ್ಯಾಪಿ,ನಿಸ್ಸೀಮ, ನಿಷ್ಕಲ, ನಿರಘ, ವರಕೂಟಸ್ಥ, ನಿತ್ಯಾನಂದ ಪರಮಾತ್ಮಾ ಪರತರ, ಪರಬ್ರಹ್ಮ ಸಾಕ್ಷಿಕ, ನಿರುಪಮ, ನಿರಾಲಂಭನೆ ನೀನಿರುವ ಎನ್ನುವದು ನಿಜ. ಇದಕ್ಕೆ ದೃಕ್ ಇಲ್ಲಾ ಅಂತಾ ಹೇಳಲು, ವಿಪ್ರನು ಹೇ ಗುರುವೆ ನೀವು ಸತ್ಯ ದೃಕ್‌ಗೆ ಇಷ್ಟೊಂದು ಲಕ್ಷಣವೇಕೆ ಅಂತಾ ಪ್ರಶ್ನಿಸಿದನು. ಅದಕ್ಕೆ ಸಿದ್ಧನು ವಿಪ್ರನನ್ನು ಕುರಿತು ಅಯ್ಯಾ ಶಿಷ್ಯೋತ್ತಮಾ, ನ್ಯಾಯ, ವೈಶೇಷಿಕ, ಕಣಾದರಿಗೆ ಮನದಲ್ಲಿ ಬರುವ ವ್ಯಾಪ್ತಿ ದೋಷಗಳನ್ನು ಅಲ್ಲಗಳೆಯಲು ಇವೆಲ್ಲಾ ಲಕ್ಷಣಗಳು ಖಡ್ಗ ಪ್ರಾಯಗಳಾಗಿವೆ ಅಂತಾ ಹೇಳಲು, ಆ ದ್ವಿಜನು ಹೇ ಸದ್ಗುರುವೇ, ತಮ್ಮ ಅಮೃತ ವಾಕ್ಯಗಳನ್ನು ಕೇಳಿ ನನ್ನ ಮತಿಯಲ್ಲಿಯ ಎಲ್ಲ ದೋಷಗಳು ನಿವಾರಣೆಗಳಾಗಿ ನಾನು ಧನ್ಯನಾದೆ. ಮತಿಗತೀತನೆ ಜಯತು ಜಯ. ಶೃತಿಸುಕಾಯನೆ ಜಯತು ಜಯ ಜಯ ನನಗೆ ರಕ್ಷಿಸು ಅಂತಾ ಪ್ರಾರ್ಥಿಸಿ ಹೋದನು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಸಿದ್ಧರಿಂದ ಚಿದಂಬರ ದೀಕ್ಷಿತನಿಗೆ ಮುಮುಕ್ಷತ್ವದ ಮಾರ್ಗದರ್ಶನ
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1) WhatsApp shareಗಾಗಿ click ಮಾಡಿ📲☎️
2)Facebook share 👉
3)ಸಿದ್ಧಾರೂಢರ ಲೀಲಾಕಥೆಗಳ app ಗಾಗಿ👉offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
