ಸದಾಶಿವಪೇಟೆಯಲ್ಲಿ ಶಿವನರೂಪ ಬಾಲಸಿದ್ಧ ನಂದಿ ಮೇಲೆ ಕುಂತಾಗ ಹೊಡೆಲು ಬಂದ ಪೂಜಾರಿ ಕೈನೋವು

🐂ಸದಾಶಿವಪೇಟೆಯಲ್ಲಿ  ನಂದಿಯೇ ಕಂದರೂಪದಿಂದ ಬಂದನೆಂದು ಸಿದ್ಧನನ್ನು ಭಕ್ತಿಯಿಂದ ಪೂಜಿಸಿ ಅನ್ನಸಂತರ್ಪಣೆದರು,





ಸಂಚಾರ ಮಾಡುತ್ತ ಇರುವಾಗ  ಸಿದ್ದನು ''ನಳದುರ್ಗಕ್ಕೆ ಹೋಗೋಣವೇ ಅಥವಾ ಸಮೀಪದ ಮುಂದಿನ ಊರಾದ ಸದಾಶಿವಪೇಟೆಗೆ ಹೋಗೋಣವೇ ಅಂತಾ ಕೇಳಲು ಸದಾಶಿವಪೇಟೆಗೆ ಹೋಗಲು ಮೂವರೂ ನಿರ್ಧರಿಸಿ ಬೇಸಿಗೆಯ ಬಿಸಿಲಿನಲ್ಲಿಯೇ ಸಂಚರಿಸುತ್ತಾ ಸದಾಶಿವಪೇಟೆಯ ಊರ ಹೊರಗಿನ ಬಸವಣ್ಣ ದೇವಾಲಯವನ್ನು ನೋಡಿದರು. ಅಲ್ಲಿ ವಿಶ್ರಾಂತಿ ಪಡೆದರು. ಸಿದ್ದನು ಎದ್ದು ಗರ್ಭ ಗುಡಿಯಲ್ಲಿ ಬಸವಣ್ಣನ ಶಿಲಾ ಮೂರ್ತಿಯ ಮೇಲೇರಿ ಕೂತುಕೊಂಡನು. ಏಳು ವರ್ಷದ ಸಿದ್ಧನ ಮನೋಹರವಾದ ಮೂರ್ತಿಯು ಬಸವಣ್ಣನ ಮೇಲೆ ಶೋಭಿಸುತ್ತಿತ್ತು. ಆಗ ಪೂಜೆಗಾಗಿ ಬಂದ ಪೂಜಾರಿಯು ನೋಡಿ ಗರ್ಜಿಸುತ್ತ “ಹೇ ಕತ್ತೆ ನೀನು ಹೊಲೆಯನೋ,ಮ್ಲೇoಛನೋ , ಬೇಡನೋ, ಕುರುಬನೋ, ವೀರಶೈವನೋ ನೀನಾರು, ಭಕ್ತಿ ಭಾವದಿಂದ ಪೂಜಿಸುವ ಬದಲಾಗಿ ಧರ್ಮವನ್ನು ಮಣ್ಣುಪಾಲು ಮಾಡಿದ ಪುಣ್ಯಗೇಡಿ ಲಜ್ಞಾಹೀನನೇ ಮೂರ್ತಿಯಿಂದ ಕೆಳಗೆ ಇಳಿ”  ಎಲೇ ಮಗನೇ, ನೀನೆಲ್ಲಿಯವ? ಈಗಿಂದೀಗಲೇ ಕೆಳಗಿಳಿ. ನಿನ್ನ ಭಯಭಕ್ತಿಯನ್ನು ಎಲ್ಲಿಟ್ಟಿರುವೆ ? " ಎಂದು ಕೇಳಲು ಸಿದ್ದನು, “ಪರಮಾತ್ಮನಲ್ಲಿಟ್ಟಿರುವೆನು. ಆದರೆ ನೀನು ಕಲ್ಲಿನಲ್ಲಿಟ್ಟಿರುವೆ'' ಎಂದು ಹೇಳಿದ್ದನ್ನು ಕೇಳಿ, ಅವನ ಬುದ್ಧಿಯು ವಿಚಾರಕ್ಕೆ ಬಿತ್ತು. ಸಿದ್ಧನು ಅವನನ್ನು ನೋಡಿ ನಗುತ್ತಿರುವಾಗ, ಆ ಪೂಜಾರಿಯು, "ಎಲೇ ನಿನಗೆ ಪ್ರಾಯಶ್ಚಿತ್ತ ಮಾಡುವೆನು'' ಎಂದು ನುಡಿದು ಗ್ರಾಮದೊಳಗೆ ಹೋದನು. ಕೆಲವು ಹೊತ್ತಿನ  ಮೇಲೆ ಕೆಲವು ಗ್ರಾಮಸ್ಥರನ್ನು ಕೂಡಿಕೊಂಡು ಗುಡಿಗೆ ಬಂದು,  ಬಸವಣ್ಣ ಮೇಲೆ ಕುತ್ತಿರುವ ಸಿದ್ಧಬಾಲಕನ ಮೂರ್ತಿಯನ್ನು ಅವರಿಗೆ ತೋರಿಸಿದನು. ಅವರು ಸಿದ್ದನನ್ನು ನೋಡಿ, ಸಿಟ್ಟಿಗೆದ್ದು, "ಎಲೋ ನಿನಗೆ ಹೊಡೆದು ಕೆಳಗೆ ಬಿಳಿಸುವೆವು'' ಎಂದು ಸಮೀಪಕ್ಕೆ ಬಂದರು. ಸಿದ್ಧನಾದರೋ ನಿರ್ಭಯನಾಗಿ ಹಾಸ್ಯವದನದಿಂದ ಅವರ ಕಡೆಗೆ ನೋಡುತ್ತಿದ್ದನು. ಆಗ ಅವರೊಳಗೊಬ್ಬನು ಸಿದ್ಧನಿಗೆ ಮುಷ್ಠಿ ಪ್ರಹಾರ ಮಾಡಬೇಕೆಂದು ಕ್ರೋಧದಿಂದ ಕೈ ಎತ್ತುವಾಗ, ಕೈಗೆ ಗೋಡೆಯೊಳಗಿನ ಒಂದು ಮೊಳೆಯು ತಗುಲಿ ರಕ್ತ ಸೊರಹತ್ತಿತು. ಇದನ್ನು ಕಂಡು ಇತರರು ಹಿಂಜರಿದು ಕೇಳುತ್ತಾರೆ, “ಎಲೇ ಹುಚ್ಚ  ಹುಡುಗನೇ, ದೇವರ ಮೇಲೆ ಯಾತಕ್ಕೆ ಕೂತಿರುವಿ ?'' ಅವರನ್ನು ನೋಡಿ ಹಾಸ್ಯಮುಖದಿಂದ ಸಿದ್ಧನು, "ಕೂತವನು ದೊಡ್ಡವನೊ ಕೂಡ್ರಿಸಿಕೊಂಡವನು ದೊಡ್ಡವನೋ, ನೀವೇ ಹೇಳಿರಿ. ಈ ವಿಗ್ರಹಕ್ಕೆ ಬಹು ಕಾಲದಿಂದ ಆಭಕ್ತ ಜನರು ಭಜಿಸುತ್ತ ಇದ್ದುದರಿಂದ ಇದರ ದೈವಿಕ ಸತ್ವ ಹೋಗಿ ಶಿಲಾಮಾತ್ರ ಉಳಿದಿರುತ್ತದೆಂದು ಇದರಲ್ಲಿ ಪ್ರಾಣಪ್ರತಿಷ್ಠೆ ಮಾಡುವದಕ್ಕೆ ಕೂತಿರುವೆನು ,'' ಎಂದು ಎನ್ನುವ ಜ್ಞಾನಯುಕ್ತ ಹೃದಯದೊಳಗಿಂದ ಹೊರಟ ಅಮೃತಮಯ ವಚನಗಳನ್ನು ಕೇಳಿ, ಅವರಲ್ಲರೂ ಚಕಿತರಾಗಿ  ಒಬ್ಬರಿಗೊಬ್ಬರು ಅನ್ನುತ್ತಾರೆ, “ಈ ಭಾಷಣವು ಅಲ್ಪವಲ್ಲ . ಇದರಲ್ಲಿ ಜ್ಞಾನ ಪ್ರತಾಪವು ಪ್ರಕಾಶಿಸುತ್ತದೆ. ಬಾಲರೂಪನಾಗಿ ಕಾಣಿಸುತ್ತಿದ್ದರೂ ಈತನು ಮಹಾಪುರುಷನಿರುವನು. " ಈ ಪ್ರಕಾರ ಅಂದು  ಅವರೆಲ್ಲರು ಭಕ್ತಿಯಿಂದ ಸಿದ್ಧನ  ಚರಣಗಳನ್ನು ಹಿಡಿಯುವಂಥವರಾದರು. ಆಗ ಅವರನ್ನು ಕುರಿತು ಸಿದ್ದನು ಅಂದದ್ದೇನೆಂದರೆ,

“ಭಕ್ತರೆ- ನನ್ನ ವಚನವನ್ನು ಕೇಳಿರಿ. ಮಹಾತ್ಮನ ಪೂಜೆಯೇ ಶ್ರೇಷ್ಠವಾದದ್ದು. ಮೂರ್ತಿ ಪೂಜೆಯು ಅದಕ್ಕೂ ಕನಿಷ್ಟವು. ಯಾಕೆಂದರೆ ಮಹಾತ್ಮರ ರೂಪಿನಿಂದ ಪರಮಾತ್ಮನು ಪ್ರತ್ಯಕ್ಷನಿರುವನು ಎಂದು ಶೃತಿ ಸ್ಮೃತಿ ಗಳು ಸ್ಪಷ್ಟವಾಗಿ ಹೇಳುತ್ತವೆ. ಹ್ಯಾಗೆ ಗರ್ಭಗತ ಪ್ರಾಣಿಗೆ ತಾಯಿಮುಖದಲ್ಲಿ ಹಾಕಿದ ಅನ್ನದಿಂದಲೇ ತೃಪ್ತಿಯಾಗುವದೋ ಹಾಗೆ ಮಹಾತ್ಮರಿಗೆ ಪೂಜಿಸುವುದರಿಂದ ಪರಮಾತ್ಮನು ಪ್ರೀತನಾಗುವನು.'' ಈ ಮಹದ್ಭಾಷಣವನ್ನು ಕೇಳಿದ ಕೂಡಲೇ ಸಕಲ ಜನರು ಆಶ್ಚರ್ಯಚಕಿತರಾಗಿ,  ಈ ಮಹಾತ್ಮನನ್ನು ಪೂಜಿಸುವೇವು, ಎಂದು ಅಂದುಕೊಂಡು, ಪೂಜಾಸಾಮಗ್ರಿ ತರಲಿಕ್ಕೆ ಗೃಹಗಳಿಗೆ ಹೋದರು. ಈ ವರ್ತಮಾನವನ್ನು ಗ್ರಾಮದ ಇತರ ಜನರೂ ಕೇಳಿಕೊಂಡು ಸರ್ವರು ಪೂಜಾ ಮತ್ತು  ನೈವೇದ್ಯ ಪದಾರ್ಥಗಳನ್ನು ತೆಗೆದುಕೊಂಡು  ಅತ್ಯಾತುರದಿಂದ ಬಸವಣ್ಣನ  ಮೇಲೆ ಕೂತಿರುವ ಸಿದ್ಧನ  ಬಳಿಗೆ ಬಂದರು. ಪುರುಷರೂ, ಸ್ತ್ರೀಯರೂ, ಬಾಲಕರೂ ಹೃದಯದಲ್ಲಿ ಅತ್ಯಂತ ಆಹ್ಲಾದಯುಕ್ತರಾಗಿ ನಂದಿಯ ಮೇಲೆ ಆರೂಢನಾಗಿರುವ ಸುಂದರವಾದ ಮೂರ್ತಿಯನ್ನು ಕಂಡು ಬಹಳ ಹರ್ಷಪಟ್ಟರು. ಸಿದ್ದನನ್ನು ಪೂಜಿಸಿ ನೈವೇದ್ಯದಿಂದ ತುಂಬಿದ ಪಾತ್ರೆಗಳನ್ನು ಆತನ ಮುಂದಿಟ್ಟು ಸೇವಿಸಬೇಕೆಂದು ಪ್ರಾರ್ಥಿಸುತ್ತಿರುವರು. ಅಷ್ಟರಲ್ಲಿ ನಿದ್ದೆ ಹೋಗುತ್ತಿದ್ದ ಸೋಮಭೀಮರಿಬ್ಬರೂ ಎಚ್ಚತ್ತು, ಸಿದ್ಧನ ಬಳಿಗೆ ಬಂದು ಮಧುರವಾದ ನೈವೇದ್ಯ ಪದಾರ್ಥಗಳನ್ನು ನೋಡಿ, ತವಕದಿಂದ ಅವನ್ನು ಹಿಡಿಯುತ್ತಿರುವಾಗ, ಅವರಿಗೆ ಸಿದ್ಧನು, “ನೋಡಿರಿ, ಈಶ್ವರನು ನಮ್ಮಗೋಸ್ಕರ  ಅನ್ನವನ್ನು ಇಲ್ಲಿಗೇ ಕಳುಹಿಸಿಕೊಟ್ಟನು. ಈಗ ಈಶ್ವರ ನಾಮಸ್ಮರಣೆ ಮಾಡುತ್ತಾ ನಿಮ್ಮ ಹಸಿವು  ಶಾಂತಿಮಾಡಿಕೊಳ್ಳಿರಿ,'' ಎಂದು ನುಡಿದನು.

ನಂತರ ಆ ಗ್ರಾಮಸ್ಥರಲ್ಲಿ ಓರ್ವನು ಸಿದ್ದನನ್ನು ಕುರಿತು 'ಭೂಲೋಕದಲ್ಲಿಯ ಕಾಶಿ ವಗೈರೆ ಕ್ಷೇತ್ರಗಳಲ್ಲಿ ಇತರೆ ಗ್ರಾಮಗಳಲ್ಲಿ ಶಿಲಾಮೂರ್ತಿಗಳಲ್ಲಿರುವ ವೈಭವಗಳು, ಫಲಗಳು, ನ್ಯೂನ್ಯತೆಗಳ ಕುರಿತು ನಿನ್ನ ವಿಚಾರವೇನು" ಅಂತ ಕೇಳಿದನು. ಆಗ ಸಿದ್ದನು ಮೊದಲಿಗೆ ಋಷಿಗಳು ರಾಜರು ತಪಸ್ಸು ಯಾಗಗಳನ್ನು ಮಾಡಿದ ಪುಣ್ಯಗಳ ಧಾರೆ ಎರೆದು ಆ ಮೂರ್ತಿಗಳಲ್ಲಿ ಪ್ರಾಣಪ್ರತಿಷ್ಠೆಯನ್ನು  ಮಾಡಿರುತ್ತಾರೆ. ಅಲ್ಲಿ ಬಹು ಜನರು ಹೋಗಿ ಧನ, ವಸ್ತ್ರಾದಿ ದಾನಗಳನ್ನು ನೀಡಿ ಪುಣ್ಯವನ್ನು ಧಾರೆಯೆರೆಯುವರು. ಈ ಪ್ರಕಾರ ಜನರು ಭಕ್ತಿಯಿಂದ ಸದಾ ನಡೆದುಕೊಂಡಲ್ಲಿ ಪೂಜಾ ಶಾಂತಿಗಳ ವೈಭವ ನಡೆದು ನಾಶವಿಲ್ಲ. ಭ್ರಮಿಷ್ಠರು  ಬಡದಾಡುತ್ತ ತಾಮಸ ಗುಣದಿಂದ ಮೂರ್ತಿಯನ್ನು ಸ್ಥಾಪಿಸಲು ಇರುವ ಅಲ್ಪ ಪುಣ್ಯ ಸಹ ನಶಿಸುವದು. ಪುಣ್ಯ ನಾಶವಾದ ಮೂರ್ತಿಯು ಜೀವವಿಲ್ಲದ ಹೆಣವಾಗುವದು. ಪುಣ್ಯ ಧಾರೆಯಾದಲ್ಲಿ ಮಾತ್ರ ಸುಖ ಸಂಪತ್ತಿನ ಫಲವು ದೊರೆಯುವದು. "ಪುಣ್ಯದಿಂದಲೇ ದೇವೇಂದ್ರ, ಬ್ರಹ್ಮ, ವಿಷ್ಣು, ಮಹೇಶ್ವರನಾಗುವವನಲ್ಲದೆ ಸಾಯುಜ್ಯ ಮುಕ್ತಿ ಸಹ ದೊರಕುವದು ಅಂತಾ ತೈತ್ತರೀಯ ಉಪನಿಷತ್ ಸಾರಿದೆ. ಅನ್ನವನ್ನು ಊಟ ಮಾಡಿದ ತಾಯಿಯು ತನ್ನ ಮೊಲೆಯಿಂದ ಮಗುವಿಗೆ ಹಾಲುಣಿಸಿ ಪಾಲಿಸುವಂತೆ ಮಹಾತ್ಮರನ್ನು ಸೇವಿಸಲು ಅನ್ನರೂಪದ ಬಸವಣ್ಣ, ಉಣ್ಣುತ್ತ ಸರ್ವರಿಗೂ ಸುಖವನ್ನು ನೀಡುವನು' ಅಂತಾ ಹೇಳಿದನು. ಇಂದು ನಮ್ಮೆಲ್ಲರ  ಪುಣ್ಯದಿಂದ ನಂದಿಯೇ ಕಂದರೂಪದಿಂದ ಬಂದನೆಂದು ಭಕ್ತಿಯಿಂದ ಪೂಜಿಸಿ ಅನ್ನಸಂತರ್ಪಣೆ ಮಾಡಿ ಸಿದ್ಧನಿಗೆ ಜಯಜಯಕಾರ ಹಾಕಿದರು, ಈ ಜನರ ಸಂಗತಿಯು  ಈಗ ನಮಗೆ ಒಳ್ಳೇದಲ್ಲ,  ಎಂದು ಅಂದುಕೊಂಡು, ತನ್ನ ಮಿತ್ರರಿಗೆ ನೇತ್ರ ಸಂಕೇತ ಮಾಡಿ, ಜನರ ದೃಷ್ಟಿ ತಪ್ಪಿಸಿ, ಸಿದ್ಧನು  ಅಲ್ಲಿಂದ ನಡೆದನು. ಮೂವರು ಮುಂದೆ ಹೋಗುತ್ತಿರುವಾಗ ಇರುಳಾಯಿತು.


ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಸಂಚಾರದಲ್ಲಿ ಸೋಮು, ಭೀಮು, ಸಿದ್ಧ ಮೂವರು ಹಲವು ವಿಧ ಕಷ್ಟ ಸಂಕೋಲೆಗಳಿಗೀಡಾದ ಕಥೆ
ಎಲ್ಲಾ  ಕಥೆಗಳ ಲಿಂಕಗಳು 
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ ಒತ್ತಿ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)

«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ