ಅಮೃತಸರದ ಸರೋವರದಲ್ಲಿ ಜ್ಞಾನಿಗೆ ಆಸನಗಳ ಬಗ್ಗೆ ಹೇಳಿದ ಸಿದ್ಧಾರೂಢ
ಅಮೃತಸರದ ಸರೋವರದಲ್ಲಿ ಜ್ಞಾನಿಗೆ ಆಸನಗಳ ಬಗ್ಗೆ ಹೇಳಿದ ಸಿದ್ಧಾರೂಢ
ಸಿದ್ಧಬಾಲಕನು ಅಮೃತಸರದಲ್ಲಿಯ ಸರೋವರದಲ್ಲಿ ಸ್ನಾನ
ಮಾಡಿ ಭಿಕ್ಷಾನ್ನ ಭೋಜನ ಮಾಡಿ ಸಿಖ್ ರ ಸುವರ್ಣ ಮಂದಿರದಲ್ಲಿ ಪ್ರವೇಶಿಸಿದನು. ಅಲ್ಲಿ ಗುರುಹಸ್ತ ತಾಡವಲ್ಲಿಯ ಪುರಾತನ ಶಾಸ್ತ್ರಗ್ರಂಥ ಅವಲೋಕನ ಮಾಡಿದನು. ಅಲ್ಲಿಯ ಜನರನ್ನು ಕುರಿತು ನಿಮ್ಮ ಶಾಸ್ತ್ರವು ಪ್ರಣವೋಪಾಸನೆಗೆ ಆದ್ಯತೆ ನೀಡಿದೆ. ಓಂಕಾರದ ಉಪಾಸನೆಯನ್ನು ದೃಡವಾದ ಭಕ್ತಿಯಿಂದ ಮಾಡಬೇಕು ಅಂತಾ ತಿಳಿಸಿದನು.
ಅಲ್ಲಿಂದ ಹೊರಟು ಸಾರಂಗಪುರಕ್ಕೆ ಆಗಮಿಸಿದನು. ಅಲ್ಲಿಂದ ಸಂಚಾರ ಮಾಡುತ್ತಾ ಕುರುಕ್ಷೇತ್ರ, ಹರಿದ್ವಾರ, ಮುಂದೆ ಬದರಿಕಾಶ್ರಮಕ್ಕೆ ಬಂದು ನಾರಾಯಣನ ದರ್ಶನ ಮಾಡಿ, ಕೇದಾರ, ಗಂಗೋತ್ರಿಗೆ ಆಗಮಿಸಿದನು. ಅಲ್ಲಿ ಜ್ಞಾನವ್ಯಾಪಿಯ ಸ್ಥಾನದಲ್ಲಿ ಕುಳಿತು ನಿರ್ವಿಕಲ್ಪದಿ ಅಜಗರನಂತೆ ಶಯನ ಮಾಡಿದನು.
🕉️ ಜ್ಞಾನಿಗೆ ಆಸನ ಕುರಿತು ✡️
ಅಷ್ಟರಲ್ಲಿ ಸಾಧಕ ಯೋಗಿಯು ಅಲ್ಲಿಗೆ ಬಂದು ಶವಾಸನದಲ್ಲಿದ್ದ ಸಿದ್ಧನನ್ನು ಸ್ಪರ್ಶ ಮಾಡಿದ ಕೂಡಲೇ ಎಚ್ಚತ್ತನು ''ನೀನು ಯಾವ ಆಸನದಲ್ಲಿ ಇರುವಿ'' ಅಂತಾ ಸಿದ್ಧನಿಗೆ ಕೇಳಲು ಮರು ಸವಾಲು ಹಾಕುತ್ತ ನೀನು ಯಾವ ಆಸನದಲ್ಲಿರುವಿ ಆ ಕೇಳಿದನು.
ಅದಕ್ಕೆ ಆ ಯೋಗಿಯು ನಾನು ನಿಂತಿರುವದು ಸ್ತoಭಾಸನ, ನಿನ್ನದು ಯಾವ ಆಸನವು ಅಂತಾ ಪುನಃ ಕೇಳಿದನು. ಅದಕ್ಕೆ ಸಿದ್ದ ಬಾಲಕನು ಆತನನ್ನು ಕುರಿತು ಅಯ್ಯಾ ಯೋಗಿಯೇ ಕೇಳು, ಮಲ ಮಾಯಾದಿಯುಳ್ಳ ಈ ಶರೀರವನ್ನೇ ನಾನೆಂದು ನಿಶ್ಚಯಿಸುವ ಜೀವಿಗಳಿಗೆ ಆಸನದ ಅವಶ್ಯಕತೆಯಿದೆ. ಜೀವನ ಉಪಾಧಿಯನ್ನು ಕಳೆದು ಉಳುಮೆಯಲ್ಲಿ ತಾನು ಬ್ರಹ್ಮಬಿಂಬದಲ್ಲಿ ಪ್ರೀತಿಯಿಂದ ಐಕ್ಯತೆಗೊಂಡ ಮುನಿಗಳಿಗೆ ಯಾವ ಆಸನಗಳು ಬೇಕಾಗಿಲ್ಲ ಅಂತಾ ಹೇಳಿದನು. ಅದಕ್ಕೆ ಆ ಯೋಗಿಯು ಪ್ರಶ್ನಿಸುತ್ತಾ ಹೇ ಮಹಾತ್ಮಾ ಬಿಂಬ ಪ್ರತಿಬಿಂಬಗಳ ಪರತರ ಐಕ್ಯತೆಗೆ ಭೇದವೋ ಅಭೇದವೋ ಹೇಗೆಂಬುದನ್ನು ತಿಳಿಸು ಅಂತಾ ಕೇಳಲು ಸಿದ್ದನು ದರ್ಪಣದಲ್ಲಿ ತನ್ನ ಮುಖದ ಪ್ರತಿಬಿಂಬವು ಕಾಣುವದು, ಮುಖವು ಉತ್ತರಕ್ಕಿರಲು ಪ್ರತಿಬಿಂಬದಲ್ಲಿ ದಕ್ಷಿಣಕ್ಕೆ ತೋರುವದು. ಉಪಾದಿಯಿಂದ ಬಿಂಬ ಪ್ರತಿಬಿಂಬ ಬೇರೆಯಾಗಿ ಅಂದರೆ ಭೇದವಾಗಿ ತೋರುವದು, ಪ್ರತಿಬಿಂಬವು ತನ್ನ ಮುಖವೆಂದೇ ಭಾವಿಸುವನು, ವಿಚಾರ ಮಾಡಲಾಗಿ ಉಪಾಧಿಯಾದ ದರ್ಪಣ ತೆಗೆಯಲು ಬಿಂಬ ಪ್ರತಿಬಿಂಬ ಅಡಗಿ ಐಕ್ಯತೆಯಾಗಿ ಅಭೇದವಾಗುವದಲ್ಲದೆ, ಕಾರಣ ಭೇದಾಭೇದ ನಿರ್ಧಾರ ಗಣನೆಗೆ ಬರುವಂತಿಲ್ಲ. ಅದು ಅನಿರ್ವಚನೀಯವಾಗಿದೆ ಅಂತಾ
ಸಿದ್ಧಾಂತವಾಗಿದೆ ಅಂತಾ ಹೇಳಿದ್ದಕ್ಕೆ ಯೋಗಿಯು ಒಪ್ಪಿದನು. ಬಳಿಕ ಭಿಕ್ಷಾನ್ನದಿಂದ ಈರ್ವರೂ ಭೋಜನ ಮಾಡಿದರು. ನಂತರ ಯೋಗಿಯು ಅಲ್ಲಿಂದ ತೆರಳಿದನು. ಸಿದ್ಧನು ತುಂಡಪಾಣಿಯ ಲಿಂಗದ ದರ್ಶನ ಮಾಡಿಕೊಂಡನು. ಅಲ್ಲಿಯೇ ಜ್ವರಬಾಧೆಯಿಂದ ಬಳಲುತ್ತಿದ್ದ ವಿಪ್ರನಿಗೆ ಜ್ವರ ನಿವಾರಣೆ ಮಾಡಿದನು. ಪಂಚಾಕ್ಷರಿ ಬೋಧನೆ ಮಾಡಿ ಅಲ್ಲಿಂದ ಸಿದ್ದನು ಪ್ರಯಾಣ ಬೆಳೆಸಿದನು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3
«««««ಓಂ ನಮಃ ಶಿವಾಯ »»»»»»»
