ಬಡಿಗೇರ ಕಾಳಪ್ಪ ಮನೆಯಲ್ಲಿ ಮಾವಿನ ಹಣ್ಣಿನಲ್ಲಿ ಹುಳುಗಳನ್ನು ಮಾಯಾ ಮಾಡಿದ ಸಿದ್ಧಾರೂಢರ ಕಥೆ,
🌿 ಬಡಿಗೇರ ಕಾಳಪ್ಪ ಮನೆಯಲ್ಲಿ ಮಾವಿನ ಹಣ್ಣಿನಲ್ಲಿ ಹುಳುಗಳನ್ನು ಮಾಯಾ ಮಾಡಿದ ಕಥೆ,
ಪ್ರೇಮಳ ಭಕ್ತನಾದ ಕಾಳಪ್ಪ ಬಡಿಗೇರ ಎಂಬಾತನು, ಹೃದಯದಲ್ಲಿ ಅತ್ಯಂತ ಸದ್ಭಾವವುಳ್ಳವನಾಗಿ, ಸದ್ಗುರುವಿಗೆ
ಒಮ್ಮೆ ಮನೆಗೆ ಕರೆದುಕೊಂಡು ಹೋಗಿ ಉಣ್ಣಿಸಬೇಕು ಎಂದು ಸಂಕಲ್ಪ ಮಾಡಿದನು. ಪೇಟೆಗೆ ಹೋಗಿ ಮಧುರವಾದ ಮತ್ತು ರಸಯುಕ್ತವಾದಂತೆ ಕಾಣಿಸುತ್ತಿದ್ದ ಮಾವಿನ ಹಣ್ಣುಗಳನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಇಟ್ಟು, ಸಿದ್ದಾರೂಢರ
ಕಡೆಗೆ ಹೋಗಿ, ಅವರಿಗೆ ಮರುದಿನ ಭೋಜನಕ್ಕೆ ಬರಬೇಕೆಂದು ಆಮಂತ್ರಣ ಕೊಟ್ಟನು. ಎರಡನೇ ದಿವಸ ಪಾಕಕಾರ್ಯವು ಸಿದ್ದವಾದ ಕೂಡಲೇ ಸುಮತಿಯಾದ ಕಾಳಪ್ಪನು ಮಠಕ್ಕೆ ಹೋಗಿ, ಮನೆಗೆ ಬರಲಿಕ್ಕೆ ಸದ್ಗುರುಗಳಿಗೆ ಪ್ರಾರ್ಥಿಸಿದನು. ಕೂಡಲೇ ಸದ್ಗುರುಗಳು ಅವನ ಕೂಡ ಆತನ ಮನೆಗೆ ಬಂದರು. ಸಿದ್ದರಿಗೆ ಒಂದು ಯೋಗ್ಯಾಸನದಲ್ಲಿ ಕೂಡ್ರಿಸಿ, ಕಾಳಪ್ಪನು ಪ್ರೇಮಯುಕ್ತನಾಗ ಪೂಜಾ ಮಾಡುವಂಥವನಾದನು, ಆಮೇಲೆ ಭೋಜನದ್ದೆಶೆಯಿಂದ ಎಲ್ಲಾ ಪದಾರ್ಥಗಳನ್ನು ನೀಡಿದ ತಾಟು ಸದ್ಗುರುಗಳ ಮುಂದೆ ಇಟ್ಟರೂ, ಮತ್ತು ಮಾವಿನ ಹಣ್ಣುಗಳನ್ನು ತಂದು ಕೊಯ್ದು ನೋಡಿದರೇ ವಿಚಿತ್ರ ಕಾಣಿಸಿತು. ಪ್ರತ್ಯೇಕ ಮಾವಿನ ಹಣ್ಣಿನಲ್ಲಿ ಹುಳಗಳು ಇರುವದನ್ನು ಕಂಡು, ಕಾಳಪ್ಪನು ಬಹಳ ಖಿನ್ನನಾಗಿ, ಈಗಲೇ ಹೋಗಿ ಬೇರೆ ಹಣ್ಣುಗಳನ್ನು ತರುವೆನು, ಎಂದು ಹೇಳಿ ಹೊರಟನು. ಇದನ್ನು ನೋಡಿ, ಸದ್ಗುರುಗಳು - “ನೀನು ಈಗ ಏನೂ ಚಿಂತೆ ಮಾಡಬೇಡ' ಎಂದು ಹೇಳಿ, ಆ ಹಣ್ಣುಗಳನ್ನು ತೆಗೆದುಕೊಂಡು ನೋಡಲಾರಂಭಿಸಿದರು. ಒಂದು ಹಣ್ಣು ಕೈಯಲ್ಲಿ ಹಿಡಿದುಕೊಂಡು ಅದನ್ನು ತಿರುವಿ, ತಿರುವಿ, ನೋಡುತ್ತಾ ಸಿದ್ದರು “ಇದು ಶುದ್ಧವಿದೆ ಏನೇನೂ ಹುಳವಿಲ್ಲ”, ಎನ್ನುತ್ತಾ ಎಲ್ಲಾ ಉಳಿದ ಮಾವಿನ ಹಣ್ಣುಗಳನ್ನು ಹಾಗೆಯೇ ನೋಡಿ “ಯಾವದರೂಳಗೂ ಹುಳಗಳಿಲ್ಲ", ಅಂದರು. ಇತರರೂ ನೋಡಿದರು, ಆದರೆ ಈಗ ಒಂದು ಹುಳ ಕಾಣಿಸಲಿಲ್ಲ, ಮತ್ತು ತಿಂದರೆ ಬಹಳ ಮಧುರವಾಗಿ ಇದ್ದವು. ಸದ್ಗುರು ಹಸ್ತ ಸ್ಪರ್ಶವಾದ ಕೂಡಲೇ ಆ ಹಣ್ಣುಗಳು ಶುದ್ಧವಾದದ್ದನ್ನು ನೋಡಿ ಎಲ್ಲರಿಗೂ ಮಹದಾಶ್ಚರ್ಯವಾಯಿತು. ನಿರ್ಜಿವ ಹಣ್ಣುಗಳು ಸದ್ಗುರುವಿನ ಸ್ಪರ್ಶದಿಂದ ಶುದ್ಧವಾದ ಮೇಲೆ, ಸಜೀವ ಮನುಷ್ಯರು ಯಾಕಾಗಲಿಕ್ಕಿಲ್ಲ ? ಸಜೀವ ಇಷ್ಟೇ ಅಲ್ಲ, ಉತ್ತಮವಾದ ಬುದ್ಧಿಯುಕ್ತನಾದ ನರನು ಆ ಸಿದ್ಧ ಕೃಪಘನನ ಸ್ಪರ್ಶ ಮಾತ್ರದಿಂದ ಅವಶ್ಯವಾಗಿ ಶುದ್ಧನಾಗಿ, ಆಮೇಲೆ ಸದ್ಗುರು ತನ್ನೊಳಗೆ ಆತನನ್ನು ತೆಗೆದುಕೊಳ್ಳುವನು. ಶುದ್ಧವಾದ ಮೇಲೆ ಆ ನಿರ್ಮಲವಾದ ಫಲವನ್ನು ಸದ್ಗುರುವು ಹೊಟ್ಟೆಯಲ್ಲಿ ಹಾಕಿಕೊಳ್ಳುವನು. ಅದು ನಾಮ ರೂಪಗಳನ್ನು ಬಿಟ್ಟು ದೇಹದಲ್ಲಿ ಸಮರಸವಾಗುವದು. ಹಾಗೆಯೇ ಭಕ್ತನು ಸದ್ಗುರುವಿನ ಸ್ಪರ್ಶದಿಂದ, ಕೂಡಲೇ ಚಿತ್ತದ ನಿರ್ಮಲತೆಯನ್ನು ಹೊಂದಿ, ಅನಂತರ ಸದ್ಗುರುವು ಆತನನ್ನು ತನ್ನ ಸ್ವರೂಪದೊಳಗೆ ತೆಗೆದುಕೊಂಡು ಅದರಲ್ಲಿ ಸಮರಸ ಮಾಡಿಕೊಳ್ಳುವನು . ಇರಲಿ, ಕಾಳಪ್ಪನಿಗೆ ಬಹಳ ಆನಂದವಾಗಿ ಪ್ರೇಮದಿಂದ ಸದ್ಗುರುಗಳ ಚರಣಕ್ಕೆ ಬಿದ್ದು, - “ನಾನು ಇವತ್ತಿನ ದಿನ ಧನ್ಯನಾಗಿ ಹೋದೆನು. ನನ್ನ ಉದ್ಧಾರವಾಯಿತು,” ಎಂದು ಅಂದನು. ಅನಂತರ ಸದ್ಗುರುಗಳಿಗೆ ದಕ್ಷಿಣೆ ತಾಂಬೂಲಾದಿಗಳನ್ನು ಅರ್ಪಿಸಿ, ಅವರನ್ನು ಮಠಕ್ಕೆ ಮುಟ್ಟಿಸಿದನು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
