ಬಡಬ್ರಾಹ್ಮಣ ಗುಡಿವಿರೂಪಾಕ್ಷಶಾಸ್ತ್ರಿಗೆ ಭಾಗವತ ಪುರಾಣ ನಡೆಸಲು ಆದೇಶಿಸಿ ಅವರ ಮನೆಯಲ್ಲಿ ಕಲ್ಪವೃಕ್ಷದ ಫಲ ನೀಡಿದ ಕಥೆ
🕉️ ಹಳೇಹುಬ್ಬಳ್ಳಿ ಬಡಬ್ರಾಹ್ಮಣ ಗುಡಿ ವಿರೂಪಾಕ್ಷ ಶಾಸ್ತ್ರಿಗೆ ಭಾಗವತ ಪುರಾಣ ನಡೆಸಲು ಆದೇಶಿಸಿದ್ದು ಹಾಗೂ ಅವರ ಮನೆಯಲ್ಲಿ ಕಲ್ಪವೃಕ್ಷದ ಫಲ ನೀಡಿದ 🌷
ಹಳೇಹುಬ್ಬಳ್ಳಿ ಕಿಲ್ಲೆಯಲ್ಲಿ ವಿರೂಪಾಕ್ಷ ಗುಡಿ ಎಂಬ ಬಡಬ್ರಾಹ್ಮಣನು ವೈದಿಕ ವೃತ್ತಿಯಿಂದ ತನ್ನ ಮನೆತನವನ್ನು ನಡೆಸುತ್ತಿದ್ದನು. ಸಂಸ್ಕೃತ, ಕಾವ್ಯ, ನಾಟಕ ಹಾಗೂ ಪಂಚದಶಿ ತತ್ವಗಳ ಅಧ್ಯಯನ ಮಾಡಿದ್ದನು. ಸಂಸಾರ ಬಂಧನದಿಂದ ಮುಕ್ತರಾಗಲು ಸದ್ಗುರು ಹೇಗೆ ದೊರೆಯುವನು ಅಂತಾ ಸಚ್ಚಿದಾನಂದರೆಂದು ಪ್ರಸಿದ್ದಿಯಾದ ತಮ್ಮಣ್ಣ ಶಾಸ್ತ್ರಿಗಳನ್ನು ಕೇಳಲು, ಸಾಕ್ಷಾತ್ ಶಂಕರನ ಅವತಾರಿ ಸಿದ್ದಾರೂಢರೇ ಸದ್ಗುರು ಅಂತಾ ತಿಳಿಸಲು, ಕೂಡಲೇ ವಿರುಪಾಕ್ಷ ಶಾಸ್ತ್ರಿಗಳು ಮಠಕ್ಕೆ ಆಗಮಿಸಿ ಶ್ರೀ ಸಿದ್ಧಾರೂಢರ ಪಾದಾರವಿಂದಗಳಲ್ಲಿ ದಂಡವತ ಪ್ರಣಾಮಗಳನ್ನು ಮಾಡಿ, ತನ್ನ ಬಯಕೆಯನ್ನು ಪ್ರಸ್ತಾಪಿಸಿದರು. ಉತ್ತಮ ಅಧಿಕಾರಿಯೆಂದು ಗುರುತಿಸಿ ಸದ್ಗುರುಗಳು ತತ್ವಮಸಿ ಮಹಾವಾಕ್ಯದ ನಿಜಾರ್ಥವನ್ನು ತಿಳಿಸಿದರು. ಶ್ರೀಗಳ ಮಠದಲ್ಲಿ ಕೀರ್ತನ ಪುರಾಣ ಪ್ರವಚನ, ಭಾಗವತ ಪುರಾಣ ಪ್ರವಚನ, ಶ್ರೀಗಳ ಆಜ್ಞೆಯಂತೆ ಆರಂಭಿಸಿದರು.
ಆದರೆ ಭಾಗವತ ಪುರಾಣ ಸಂಸ್ಕೃತ ಶ್ಲೋಕಗಳಲ್ಲಿದ್ದುದರಿಂದ ಅದರ ಅರ್ಥವನ್ನು ಹೇಳಲು ಬಹಳ ಕಠಿಣವಾಗತೊಡಗಿದ್ದರಿಂದ, ವಿರುಪಾಕ್ಷ ಶಾಸ್ತ್ರಿಗಳು ನೇರವಾಗಿ ತಮ್ಮಣ್ಣ ಶಾಸ್ತ್ರಿಗಳಲ್ಲಿ ಹೋಗಿ ತನಗೊದಗಿದ ಸಮಸ್ಯೆಯನ್ನು ಹೇಳಿದರು. ಅದಕ್ಕೆ ನೀವು ಗುರು ಸ್ಮರಣೆ ಮಾಡಿರಿ ಅಂತಾ ಹೇಳಿದರು. ಅದೇ ಪ್ರಕಾರ ಗುರುಸ್ಮರಣೆಯಿಂದ, ಗ್ರಂಥಾವಲೋಕನದಿಂದ ಅರ್ಥವಾಗಿ ಸುಲಲಿತ ಕನ್ನಡದಲ್ಲಿ ಹೇಳುವ ಆಶ್ಚರ್ಯಕರ ಮಹಿಮೆಯ ಸೌಭಾಗ್ಯ ಬಂದೊದಗಿತು. ಗುರುಸ್ಮರಣೆಯಲ್ಲಿ ಅಪಾರ ಸಾಮರ್ಥ್ಯವಿದ್ದು, ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತಿ ಗಿರಿ೦ ಎಂಬ ಶೃತಿವಾಕ್ಯ ಅರ್ಥಪೂರ್ಣವಾಗಿದೆ.
ವಿರೂಪಾಕ್ಷ ಶಾಸ್ತ್ರಿಗಳಿಗೆ ಐದು ಜನ ಗಂಡು ಮಕ್ಕಳು ಓರ್ವ ಹೆಣ್ಣುಮಗಳಿದ್ದರು. ಗುರುಧ್ಯಾನಾಸಕ್ತ ಈ ಬಡಕುಟುಂಬದ ಯೋಗಕ್ಷೇಮವನ್ನು ಶ್ರೀಗಳೇ ನೋಡಿಕೊಳ್ಳುತ್ತಿದ್ದರು, ಒಂದಾನೊಂದು ದಿನ ಹಿರಿಯ ಮಗ ತಾಯಿಗೆ ಬಹಳೇ ಕಾಡಿ, ತನಗೀಗ ,ಬೆಲ್ಲ ಬೇಕು ಅಂತಾ ಹಠಮಾಡಿದನು. ಮನೆಯಲ್ಲಿ ಎಳ್ಳು ಕಾಳಿನಷ್ಟು ಬೆಲ್ಲವಿದ್ದಿಲ್ಲ. ರೇಣುಕಾಚಾಯಿ ತನ್ನ ಗಂಡನಿಗೆ ಹೇಳಲು, ಶಾಸ್ತ್ರಿಗಳು ತನ್ನ ಹೆಂಡತಿಗೆ ಏನಾದರೂ ಹೇಳಿ ಮಗನಿಗೆ ಸಮಾಧಾನ ಮಾಡು ಅಂತಾ ಕೀರ್ತನದ ಸಮಯವಾಗಿದ್ದರಿಂದ ಮಠಕ್ಕೆ ತೆರಳಿದರು.
ಆಗ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಗೌರವ್ವ ಎಂಬುವಳು ಒಂದು ಗಾಡಿ ತುಂಬಾ ಬೆಲ್ಲದ ಪೆಂಟಿಗಳನ್ನು ಮಠಕ್ಕೆ ತಂದು ಶ್ರೀಗಳಿಗೆ ಅರ್ಪಿಸಿದಳು. ಅದರಲ್ಲಿಯ ನಾಲ್ಕು ಪೆಂಟಿಗಳನ್ನು ಬೇರೆ ಕಡೆ ಇಟ್ಟಿದ್ದನ್ನು ಕೀರ್ತನವಾದ ಮೇಲೆ ಶಾಸ್ತ್ರಿಗಳಿಗೆ ನೀಡಲು ಮುಂದೆ ಬಂದಳು. ಆಗ ಶಾಸ್ತ್ರಿಗಳು ಮಠಕ್ಕೆ ತಂದಿರುವುದನ್ನು ನಿರಾಕರಿಸಿದರು. ಆಗ ಗೌರವ್ವ ಮಠಕ್ಕೆ ಕೊಡುವುದನ್ನು ಅರ್ಪಿಸಿದ್ದೇನೆ. ನಿಮ್ಮ ಸಲುವಾಗಿ ಇವುಗಳನ್ನು ತೆಗೆದುಕೊಳ್ಳಿರಿ ಅಂತ ಎಷ್ಟು ವಿನಂತಿಸಿದರೂ ನಿರಾಕರಿಸಿದ್ದಕ್ಕೆ ಶ್ರೀ ಸಿದ್ಧಾರೂಢರ ಎದುರಿಗೆ ಗೌರವ್ವ ಫಿರ್ಯಾದಿ ನೀಡಿದಳು. ಆಗ ಶ್ರೀಗಳು ಶಾಸ್ತ್ರಿಗಳನ್ನು ಕರೆದು, ನಿಮ್ಮ ಮನೆಯಲ್ಲಿ ಬೆಲ್ಕವಿಲ್ಲ. ಮಕ್ಕಳ ಸಲುವಾಗಿ ತೆಗೆದುಕೊ ಅಂತಾ ಹೇಳಿದ ಕೂಡಲೇ, ತನ್ನ ಮನೆಯ ವಿಷಯವನ್ನು ಅರಿತ ತ್ರಿಕಾಲ ಜ್ಞಾನಿಗಳಾದ ಸದ್ಗುರುಗಳು ಈ ಪ್ರಕಾರ ಮಾಡಿದ್ದಕ್ಕೆ ಬಿಕ್ಕಿ ಬಿಕ್ಕಿ ಅಳುತ್ತಾ, ಧಾರಾಕಾರ ಅಶ್ರುಗಳಿಂದ ಶಾಸ್ತ್ರಿಗಳು ಶ್ರೀಗಳ ಪಾದಗಳಲ್ಲಿ ಹೊರಳಾಡಿದರು. ನಾಲ್ಕು ಪೆಂಟಿ ಬೆಲ್ಲಗಳನ್ನು ತಂದು ಹೆಂಡತಿಗೆ ಸಿದ್ದನೇ ಈ ಮಹಿಮೆ ಮಾಡಿದ ಅಂತಾ ಹರ್ಷದಿಂದ ಹೇಳ ತೊಡಗಿದರು.
ಅದೇ ಪ್ರಕಾರ ಶಾಸ್ತ್ರಿಗಳ ಮನೆಯಲ್ಲಿ ಆಕಳು ಹಾಲು ಕೊಡಲಾರದ್ದನ್ನು ಗಮನಿಸಿ, ಮೇವು ಸಹಿತ ಆಕಳು ದಯಪಾಲಿಸಿದ್ದು, ಕಾಶೀಯಾತ್ರೆಗೆ ಹೋಗಿ ಬಂದ ಬಳಿಕ ನೂರು ಜನರ ಪ್ರಸಾದ ಮಾಡಿದಾಗ ೩೦೦, ೪೦೦ ಜನರ ಆಗಮನ
ಅವರೆಲ್ಲರಿಗೆ ತೃಪ್ತಿ ನೀಡುವಂತೆ ವ್ಯವಸ್ಥೆ, ಈ ಎಲ್ಲ ಗುರುಮಹಿಮೆಗಳು ಬಡ ಬ್ರಾಹ್ಮಣನು ಮಾಡಿದ ಶ್ರದ್ಧಾ ಭಕ್ತಿಯ ಗುರುಸ್ಮರಣೆ ಕಾರಣೀಭೂತ.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
