ಶ್ರೀಗಳ ದೇಹತ್ಯಾಗದ ಬಗ್ಗೆ ನಾಯಿಯ ಸೂಚನೆ
🌺 ಶ್ರೀಗಳ ದೇಹತ್ಯಾಗದ ಬಗ್ಗೆ ನಾಯಿಯ ಸೂಚನೆ 🌺
ಅಕ್ಕಲಕೋಟೆಯ ರಾಮಲಿಂಗ ಸ್ವಾಮಿಗಳು ಶ್ರೀಗುರುನಾಥಾರೂಢರ ಬಹಳ ಆತ್ಮೀಯರು. ಶ್ರೀಗಳ ಶರೀರ ತ್ಯಾಗದ ಸುದ್ದಿ ರಾಮಲಿಂಗ ಸ್ವಾಮಿಗಳ ಮಠದ ಹಲವಾರು ವರ್ಷಗಳ ಸೇವೆಯಲ್ಲಿದ್ದ ನಾಯಿಗೆ ತಿಳಿಯಿತು. ಆ ದಿನ ಆ ನಾಯಿ ತಾನಾಗಿ ರಾಮಲಿಂಗಸ್ವಾಮಿಗಳಿಗೆ ರುದ್ರಾಕ್ಷಿ, ಪೇಟಾ, ಅರಿವೆಗಳನ್ನು, ಪಾದುಕೆಗಳನ್ನು ಅವರ ಮುಂದೆ ತಂದಿಟ್ಟು, ಸ್ವಾಮಿಗಳ ಬಟ್ಟೆಯನ್ನು ಜಗ್ಗತೊಡಗಿತು. ಇದು ಗುರುಗಳು ಪ್ರವಾಸ ಮಾಡುವ ಮುನ್ಸೂಚನೆಯಂತೆ ಸ್ಪಷ್ಟವಾಗಿ ತಿಳಿಯಿತು.
ಶ್ರೀ ಗುರುನಾಥರ ಆರೋಗ್ಯದ ಬಗ್ಗೆಯೋ ಹೇಗೆ ಎಂದು ಸಂಶಯ ಬಂದು ಒಟ್ಟಿಗೆ ಯಾವುದೋ ಸಂಕೇತವೆಂದು ತಿಳಿದು ರಾಮಲಿಂಗ ಸ್ವಾಮೀಗಳು ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು. ಅಲ್ಲದೆ ಆ ನಾಯಿಯೂ ಅವರ ಬೆನ್ನು ಹತ್ತಿ ಬಸ್ಸಿನ ತನಕ ಹೋಗಿ ಬಸ್ಸು ಬಿಟ್ಟ ನಂತರ ಅವರನ್ನು ಕಳಿಸಿ ಮರಳಿ ಮಠಕ್ಕೆ ಹೋಯಿತು. ರಾಮಲಿಂಗ ಸ್ವಾಮಿಗಳು ಹುಬ್ಬಳ್ಳಿಗೆ ಬರುವಷ್ಟರಲ್ಲಿ ಶ್ರೀಗುರುನಾಥ ಸ್ವಾಮಿಗಳ ಶರೀರ ತ್ಯಾಗ ಮಾಡುವ ಸಮಯ ಬಂದಿತ್ತು. ದೇಹತ್ಯಾಗದ ನಂತರ ರಾಮಲಿಂಗ ಸ್ವಾಮಿಗಳು ದುಃಖದ ಸನ್ನಿವೇಶದಲ್ಲಿ ಭಾವಪೂರಿತರಾಗಿ ಜೋತಿ ಮುಳುಗಿತು ಹುಬ್ಬಳ್ಳಿ ಕತ್ತಲಾಯಿತು ಎಂಬ ಗೀತೆಯನ್ನು ರಚಿಸಿದರು.
👇👇👇👇👇👇👇👇👇👇👇👇👇👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
👇
👇
