ಶ್ರೀ ಗುರುನಾಥರೂಢರ ಸಮಾಧಿ ಮಂದಿರ ನಿರ್ಮಾಣ


🌺 ಶ್ರೀ ಗುರುನಾಥಾರಾಢರ ಸಮಾಧಿ ಮಂದಿರ ನಿರ್ಮಾಣ 🌺


ಸದ್ಗುರು ಶ್ರೀ ಸಿದ್ಧಾರೂಢರ ಪರಮ ಶಿಷ್ಯ ಮೌನಯೋಗಿ ಶ್ರೀ ಗುರುನಾಥಾರೂಢರು ೧೯೬೨ರಂದು ಮಹಾಸಮಾಧಿ ತೆಗೆದುಕೊಂಡ ನಂತರ ಅವರ ಸಮಾಧಿ ಮಂದಿರದ ನಿರ್ಮಾಣ ಕಾರ್ಯವನ್ನು ಶ್ರೀ ಸಿದ್ಧಾರೂಢರ ಪ್ರೇರಣೆಯಂತೆ ಶ್ರೀ ಸಿದ್ದರ ಶಿಷ್ಯ ಬೆಂಗಳೂರಿನ ಆವೂಬಾಯಿಯವರ ಆಜ್ಞೆಯಂತೆ ಬೆಂಗಳೂರಿನ ಶ್ರೀ ಶಿವಾಂದ ಸ್ವಾಮಿಗಳು ಮುಂಬೈ ಮತ್ತು ಇತರ ಭಕ್ತರ ಸಹಕಾರದಿಂದ ಅಮೃತಶಿಲೆಯ ಸಮಾಧಿ ಮಂದಿರ ಕಟ್ಟುವ ಕಾರ್ಯ ಪ್ರಾರಂಭಿಸಿದರು. ಇವರ ಜೊತೆಗೆ ಹುಬ್ಬಳ್ಳಿಯ ಶ್ರೀ ರಾಮಣ್ಣ ಹುಲಿಗೆಪ್ಪ ಗಾರವಾಡ ಅವರು ಸಹಕಾರಿಗಳಾಗಿದ್ದರು. ಸುಂದರ ಮಂದಿರ ಕಾರ್ಯ ಭರದಿಂದ ಸಾಗಿ ಅರ್ಧಕ್ಕೂ ಮೇಲ್ಪಟ್ಟು, ಕಾರ್ಯವಾದಾಗ ಅಕಸ್ಮಾತ್ ೧೯೭೦ರಲ್ಲಿ ಶ್ರೀ ಶಿವಾನಂದರು ದೇಹತ್ಯಾಗ ಮಾಡಿದರು.


ಆಗ ರಾಮಣ್ಣ ಗಾರವಾಡ ಅವರು ಚಿಂತಾಕ್ರಾಂತರಾಗಿ ಬುದ್ಧಿಗೆ ಮಂಕು ಹಿಡಿದಂತಾಗಿ ಏನು ಮಾಡಲೂ ಮನಸ್ಸಾಗದ ಕುಳಿತರು. ಒಂದು ದಿನ ಸಾಯಂಕಾಲ ಮಬ್ಬುಗತ್ತಲೆಯ ಬಡಕಲು ಶರೀರದ ಮುದುಕ ಸಾಧು ತಲೆಗೆ ಬಿಳಿ ಪಾವುಡ ಸುತ್ತಿದ್ದು, ಕಪ್ಪು ಬಣ್ಣದ ಶರೀರ ಹೊಂದಿದ ಅವನು ಬಂದು, ಲೇ ಹುಚ್ಚಾ, ಹಿಂಗ ಕುಂತರ ಕೆಲಸ ಆಗತೈತೇನು? ಏಳು, ಶ್ರೀ ಗುರುನಾಥಾರೂಢರ ಸಮಾಧಿ ಮಂದಿರದ ಕೆಲಸ ಅರ್ಧ ಆಗಿದ್ದು, ಪೂರ್ಣ ಮಾಡು. ನಿನಗೆ ಯಾವ ಆತಂಕ ಬರದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ನುಡಿದರು. ತಕ್ಷಣ ರಾಮಣ್ಣನ ಮೈಯ್ಯಲ್ಲಿ ಅದಾವುದೋ ಒಂದು ಚೈತನ್ಯ ತುಂಬಿದಂತಾಗಿ ಮಂಕುಕವಿದು ಬುದ್ದಿ  ನಿಚ್ಚಳವಾಯಿತು.


ಈ ರೀತಿ ರಾಮಣ್ಣನಲ್ಲಿ ಚೈತನ್ಯದ ಚಿಲುಮೆ ಹಚ್ಚಿದವರಾರು ಎಂದು ಮರದ ತುಂಬೆಲ್ಲ ಆ ಮುದುಕನನ್ನು ಹುಡುಕಿದರೂ ಸಿಗಲಿಲ್ಲ. ಆಗ ರಾಮಣ್ಣ ತನ್ನಷ್ಟಕ್ಕೆ ತಾನೇ ತಿಳಿದುಕೊಂಡಿದ್ದೇನೆಂದರೆ ಆ ಮುದುಕ ಬೇರೆ ಯಾರೂ ಅಲ್ಲ. ಚಿಂತೆಯನ್ನು ಕಳೆದಿರುವ ಚಿಂತಾಮಣಿಯಾದ ಸದ್ಗುರು ಸಿದ್ಧಾರೂಢರೇ ಬೇರೆ ರೂಪದಿಂದ ಬಂದು ಎಚ್ಚರಿಸಿದ್ದಾರ ಎಂದು ಮನಗಂಡು, ಸಂತೋಷಭರಿತರಾಗಿ ಶ್ರೀ ಸಿದ್ಧಾರೂಢರ ಸಮಾಧಿಗೆ ಕೈ ಮುಗಿದು ಮುಂದೆ ಶ್ರೀ ಗುರುನಾಥಾರೂಢರ ಸಮಾಧಿ ಮಂದಿರದ ಕಾರ್ಯಕ್ಕೆ ಅಣಿಯಾದರು.


ಮುಂದೆ ಹಣದ ಕೊರತೆಯಾದಾಗ ಭಕ್ತರಿಂದ ಅನುಕೂಲತೆಗಳು ಸಹಜವಾಗಿ ಲಭಿಸಿದ್ದರಿಂದ ಸುಂದರ ಮಂದಿರ ನಿರ್ಮಾಣವಾಯಿತು. ಇದಕ್ಕೆಲ್ಲ ಶ್ರೀ ಸಿದ್ಧಾರೂಢರ ಆಶೀರ್ವಾದದ ಫಲವೇ ಹೊರತು ಬೇರೇನೂ ಇಲ್ಲ. ಇಂಥ ಪವಿತ್ರ ಸೇವೆ ಮಾಡುವ ಭಾಗ್ಯ ಶ್ರೀ ಸಿದ್ಧರಿಂದ ದೊರತದ್ದು ನನ್ನ ಭಾಗ್ಯವೆನ್ನುತ್ತಾರೆ ರಾಮಣ್ಣನವರು.



   👇👇👇👇👇👇👇👇👇👇
_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಮಂಗಳ ಆರತಿ ಪದಗಳು

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ