ಮಹಾಮಂಗಳ ಆರತಿ





    🌺🌺🌺 ಮಂಗಳಾರತಿ 🌺🌺🌺
ಗುರುರಾಜ ಸಿದ್ದಾರೂಢ ಸಮರ್ಥಾ
ಬೆಳಗುವೆನಾರತಿಯಾ
ಗುರುವರ ಬೆಳಗುವೆನಾರತಿಯಾ ||ಪು||
ಮೋಕ್ಷಾಪೇಕ್ಷೆಗೆ ತತ್ವಂ ಪದದ |ಅರ್ಥವ ಭೋಧಿಸಿದೀ
ಗುರುವರ ಅರ್ಥವ ಭೋಧಿಸಿದೀ ||
ಉಕ್ಷಾವಾಹನ ಶಂಕರ ನಮೋಚ್ಚಾರವ ಮಾಡಿಸಿದಿ
ಗುರುವರಾ ಉಚ್ಚಾರವ ಮಾಡಿಸಿದಿ ||೧||
ಶ್ಯಾಮಧಾಮ ಶ್ರೀರಾಮ ಭಿನ್ನ ಶಂಕರ ನೀನಿರುವಿ
ಗುರುವರಾ ಶಂಕರ ನೀನಿರುವಿ || ಕಾಮಾ ಕ್ರೋಧವನಾಶಿಸಿ ಜಗದೊಳು ಶಾಂತಿಯ ಬಿರಿದಿ
ಗುರುವರ ಶಾಂತಿಯ ಬೀರಿದೀ ||೨||
ಚರಣ ಭಜಕರಾ ದುರಿತ ವೃಂದವ ತ್ವರಿತದಿ
ನಾಶಿಸಿದೀ ಗುರುವರಾ ತ್ವರಿತದಿ ನಾಶಿಸಿದೀ ||
ವರಭೂಲತಾಪುರ ದೈವದಿಂದಲಿ ನಿರುತದಿ ವಾಸಿಸಿದೀ
ಗುರುವರಾ ನಿರುತದಿ ವಾಸಿಸಿದೀ ||೩||

ಓಂ ಚೈತನ್ಯಂ ಶಾಶ್ವತಂ ಶಾಂತಂ | ಯೋಮಾತೀತಂ ನಿರಂಜನಂ
ನಾದ ಬಿಂದು ಕಲಾತೀತಂ | ತಸ್ಮಿ ಶ್ರೀ ಗುರುವೇ ನಮಃ || 





🌺🌺🌺🌺🌺 ಮಂಗಳಾರತಿ 2 🌺🌺🌺
ಗುರುದೇವ ಸಿದ್ಧಾರೂಢ ದಯಾನಿಧೇ | 
ಬೆಳಗುವೆ ಆರತಿಯಾ। 
ಗುರುವರಾ ಬೆಳಗುವೆ ಆರತಿಯಾ 
ನರವಾರಕೆ ನೀಂ | ವರಪಂಚಾಕ್ಷರೀ 
ಮಂತ್ರವ ಬೋಧಿಸಿದಿ | 
ಗುರುವರಾ ಮಂತ್ರವ ಬೋಧಿಸಿದಿ ||
ನೆರೆ ಘೋರ ಕಾಲನ ಬಾಧೆಯ
ಕೆಡಿಸುವುಪಾಯವ ತೋರಿಸಿದಿ | 
ಗುರುವರಾ ಉಪಾಯವ ತೋರಿಸಿದಿ ||1||
ಉತ್ತಮರಿಗೆ ನಿಜತತ್ವಂಮಸಿ
ಮಹಾವಾಕ್ಯ ಬೋಧಿಸಿದೀ |
ಗುರುವರಾ ವಾಕ್ಯವ ಬೋಧಿಸಿದಿ ||
ಮಿಥ್ಯಾಬ್ರಾಂತಿಯನಾಶಿಸಿ 
ನಿಜಪದವಿತ್ತು ರಕ್ಷಿಸಿದಿ | 
ಗುರುವರಾ ವಿತ್ತು ರಕ್ಷಿಸಿದಿ ||2||
ಸಂತತಭ್ರೂಲತ ಪುರದೊಳನಂತ
ಮಹಿಮೆಯ ತೋರಿಸಿದೀ | 
ಗುರುವರಾ ಮಹಿಮೆಯ ತೋರಿಸಿದೀ | 
ಸಂತ ಮುಕುಟಮಣಿ ಶಾಂತಿ ಸಾಗರ | 
ಸಂತತ ವಾಸಿಸಿದೀ |
ಗುರುವರಾ ಸಂತತವಾಸಿಸಿದೀ ||3||





ಶ್ರೀ ಗುರುನಾಥಾರೂಢರ ಮಂಗಳಾರತಿ
ಮಂಗಲಂ ಗುರುನಾಥಾರೂಢಗೆ |
ಮಂಗಲಂ ಗುರುನಾಥಾಯೋಗಿಗೇ | 
ಮಂಗಲಂ ಗುರುನಾಥ ತ್ಯಾಗಿಗೆ | 
ಮಂಗಳಾರತಿಯಾ || ಗುರುಲಿಂಗ ಬೋಗಿಗೆ |
ಮಂಗಲಂ ಗುರುಸಾರ್ವಭೌಮಗೆ ಮಂಗಳಾತ್ಮಕ ಜ್ಞಾನ ಸೂರ್ಯಗೆ | ಮಂಗಳಾರತಿ ||1||
ಮಂಗಲಂ ಶ್ರೀ ಬ್ರಹ್ಮನಿಷ್ಠಗೆ | ಮಂಗಲಂ ಗುರು ಮೌನಮುನಿಪಗೆ || ಮಂಗಲಂ ಗುರು ಶಂಭುರೂಪಗೆ | ಸಂಗಮೇಶ್ವರಗೆ | ಸಂಗಮಾಯೋಪಾದಿ ಭ೦ಗಗೆ | ಲಿಂಗಸುಖಸವಿದುಂಡ ಸುಖಿಪಗೆ | ನಿಸ್ಸಂಗ ನಿರ್ಮಲ ತತ್ತ್ವಗೂಡಿದ ಲಿಂಗ ಭಾರತಿಗೆ ||2||
ಸತ್ತುಚಿತ್ತಾನಂದ ರೂಪಗೆ | ನಿತ್ಯ ಪರಿಪೂರ್ಣಾತ್ಮ ಜ್ಯೋತಿಗೆ | ತತ್ತ್ವರೂಪಗೆ ನಿತ್ಯ ಸಂವಿನ್ಮಾತ್ರ ಚಿನ್ಮಯಗೆ | ಅತ್ಯಧಿಕ ಪ್ರಖ್ಯಾತ ಪರತರಗೆ | ತ್ರಿಜ್ಞಾನದ ಜ್ಯೋತಿ ಬೆಳಗುವೆ| ನಿತ್ಯತೃಪ್ತಿ ನೀಡಿ ಕರುಣಿಸು ಭರದಿ ಗುರುನಾಥಾ ॥೩॥ 
ತಂದೆ ತಾಯಿಯು ನೀನೆ ಎಂದು | ಬಂಧು ಬಳಗವು ನೀನೆಂದು | ಕಂದ ನಾ ನೆರೆನಂಬಿ ನಿನ್ನನು ಬಿಡದೆ ಹೊಂದಿಹೆನು | ಇಂದು ಈ ಭವ ಬಂಧನದಿಂದಲಿ ನೊಂದು ತವಪಾದದಲಿ ಬಂದೆ | ತಂದೆ ನೀ ಕೃಪೆ ಮಾಡು ಅಂದದಿ ವಂದಿಸುವೆ ಭರದಿ ||4||
ನೀನು ನಿಂತೋಲಗವೆ ಕಾಶಿಯು | ನಿನ್ನ ವಾಸವು ಬ್ರಹ್ಮಲೋಕವು | ನಿನ್ನ ವಾಕ್ಯವು ತತ್ತ್ವಮಸಿ ಪದ ನೀನೇ ಪರಮಾತ್ಮ ನಿನ್ನ ನುಡಿ ನಿಜ ಶಿವನ ಮಂತ್ರ ನಿನ್ನಡಿಯ ದರ್ಶನ ಪವಿತ್ರವು ನಿನ್ನ ಕರುಣವು ಸರ್ವತೀರ್ಥ ನೀನೇ ಪರಮಾರ್ಥ ||5||
ಜ್ಞಾನದೊಳು ನೀ ಚೆನ್ನಬಸವನು ಮೌನದೊಳು ಶ್ರೀ ಸಿದ್ಧರಾಮನು | ನೀನೇ ಜಂಗಮರೊಳಗೆ ಅಲ್ಲಮಪ್ರಭುವೆ ಗುರುನಾಥಾ | ಯೋಗಿಯೊಳು ನೀ ರಾಜಯೋಗಿಯು | ತ್ಯಾಗಿಯೊಳು ಶುಕಮುನಿಯು ನೀನೇ | ಭೋಗ ಸುಖ ವಿಷಯವನ್ನು ನೀಗಿದ ಪರಮವೈರಾಗಿ ||6||
ನಿನ್ನ ಶಾಂತಿ ಚಂದ್ರ ನಾಚಿದ | ನಿನ್ನ ಶಾಂತಿಗೆ ಸೂರ್ಯ ಆರಿದ | ನಿನ್ನ ಶಾಂತಿಗೆ ತಣ್ಣಗಾಯಿತು ವುರಿವ ವಡವಾಗ್ನಿ | ನಿನ್ನ ಶಾಂತಿಯು ಜ್ಞಾನವೆನಿಸಿತು | ನಿನ್ನ ಶಾಂತಿಯು ಮೌನವೆನಿಸಿತು | ನಿನ್ನ ಶಾಂತಿಯು ಪರಮಾತ್ಮಐಕ್ಯ ಸುಖವಾಯ್ತು ||7||
ಆವ ಸುಖ ಪರಿಭಾವಿಸಿದೊಡೆ ಜೀವ ಪರಮಾತ್ಮಐಕ್ಯ ಸುಖಕೆ | ಹೋವುದೆ ಸರಿ ಶಾಂತಿ ಇಲ್ಲದ ಜ್ಞಾನವೇತರದು ಜಗಕೆ ಶಾಂತಿಯ ಬೀರಲೋಸುಗ ಆಗಮಿಸಿ ಗುರುನಾಥನೆನಿಸಿ| ನೀಗಿ ಸಂಸ್ಕತಿ ಯೋಗಿಯೆನಿಸಿದಿ ಭ್ರೂಲತಾಪುರದಿ ॥೮॥ 
ದೇಹವಿದ್ದಿಲ್ಲದ ವಿದೇಹ ಸಹಜ ಸ್ಥಿತಿಯಲ್ಲಿದ್ದು ಭಕ್ತರ | ನೇಮದಿಂದಲಿ ದೇಹ ಮತಿಯನು ತ್ಯಜಿಸಿ ಎಚ್ಚರಿಸಿ | ಬಾಹ್ಯದೃಷ್ಟಿಲಿ ಹೇಳಕೇಳದೆ ಊಹಿಸುತ ಕುರುವಿಂದ ಲಕ್ಷವ | ಸೋಹ ಮಸ್ಮಿ ನೀನೇ ನೀನಾಗಿದ್ದೆ ಗುರುನಾಥ ||9||
ಕಾದ್ರೋಹಳ್ಳಿಯ ಬಸನಗೌಡನು |ಅದ್ರುಶಾರ್ಯರ ಕರುಣೆಯಿಂದ | ಮುದ್ರೆಗೈದೀ ಕವನಪುಷವ ಸಿದ್ದಗರ್ಪಿಸುತಾ | ಪಾಡಿ ಮಂಗಲ ಬೇಡಿ ಕೊಂಬುವೆ ನೀಡಿ ಯನ್ನಯಮತಿಗೆ ಮಂಗಲ | ರೂಢಿಗೀಶಾರೂಢ ಸಿದ್ದನ ಪುತ್ರ ಗುರುನಾಥ
ಮಂಗಳಂ ಗುರುನಾಥಾರೂಢಗೆ | ಮಂಗಲಂ ಗುರುನಾಥಯೋಗಿಗೆ | ಮಂಗಲಂ ಮಂಗಳಾರತಿಯಾ|| 
ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮಿ ಮಹಾರಾಜ ಕೀ ಜೈ | 
ಶ್ರೀ ಸದ್ಗುರು ಗುರುನಾಥಾರೂಢ ಸ್ವಾಮಿ ಮಹಾರಾಜ ಕೀ ಜೈ | 
ಸಕಲ ಸಾಧು ಸಂತರ ಕೀ ಜೈ ಜೈ ಮಂಗಳಂ ಜಯ ನಮಃ ಪಾರ್ವತೀ ಪತಿ ಹರ ಹರ ಮಹಾದೇವ


ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ

 _______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಕೊನೆ ಮಾತು ಗ್ರಂಥ ಮಹಿಮೆ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ