ಕೊನೆ ಮಾತು
🌺 ಸಿದ್ಧಾರೂಢ ಭಾಗವತ ಪುರಾಣ ಓದುವ ಕ್ರಮ 🌺
ಪ್ರಥಮ ಸ್ಕಂದವನ್ನು - ಐದು ದಿನಗಳಲ್ಲಿ ಓದಬೇಕು
ದ್ವಿತೀಯ ಸ್ಕಂದವನ್ನು - ಐದು ದಿನಗಳಲ್ಲಿ ಓದಬೇಕು
ತೃತೀಯ ಸ್ಕಂದವನ್ನು - ಐದು ದಿನಗಳಲ್ಲಿ ಓದಬೇಕು
ಚತುರ್ಥ ಸ್ಕಂದವನ್ನು -ನಾಲಕ್ಕು ದಿನಗಳಲ್ಲಿ ಓದಬೇಕು
ಪಂಚಮ ಸ್ಕಂದವನ್ನು -ನಾಲಕ್ಕು ದಿನಗಳಲ್ಲಿ ಓದಬೇಕು
ಷಷ್ಠ ಸ್ಕಂದವನ್ನು - ಮೂರು ದಿನಗಳಲ್ಲಿ ಓದಬೇಕು.
ಸಪ್ತಮ ಸ್ಕಂದವನ್ನು - ಮೂರು ದಿನಗಳಲ್ಲಿ ಓದಬೇಕು.
ಅಷ್ಟಮ ಸ್ಕಂದವನ್ನು - ಮೂರು ದಿನಗಳಲ್ಲಿ ಓದಬೇಕು
ನವಮ ಸ್ಕಂದವನ್ನು - ಮೂರು ದಿನಗಳಲ್ಲಿ ಓದಬೇಕು
ದಶಮ ಸ್ಕಂದವನ್ನು - ಮೂರು ದಿನಗಳಲ್ಲಿ ಓದಬೇಕು
ಏಕಾದಶ ಸ್ಕಂದವನ್ನು -ಮೂರು ದಿನಗಳಲ್ಲಿ ಓದಬೇಕು
ದ್ವಾದಶ ಸ್ಕಂದವನ್ನು -ಕೊನೆ ದಿನ ಓದಿ ಮುಗಿಸಬೇಕು
ಒಟ್ಟು 42 ದಿನಗಳಲ್ಲಿ ಈ ಭಾಗವತ ಪುರಾಣವನ್ನು ಪ್ರೇಮಯುಕ್ತರಾಗಿ ಭಕ್ತಿಯಿಂದ ಓದುವದರಿಂದ ಮನೋರಥಗಳೆಲ್ಲಾ ಪೂರ್ಣವಾಗಿ, ಸದ್ಗುರುವು ತತ್ಕಾಲವೇ ಕೃಪಾ ಮಾಡುವನು. ಸದ್ಗುರು ಕೃಪೆಯೆಂಬದೇನೂ ಅಲ್ಪವಲ್ಲ. ಯಾವಾತನ ಮೇಲೆ ಆತನ ಕೃಪೆಯಾಗುವದೋ ಅವನು ಸಂಕಲ್ಪಗಳನ್ನೆಲ್ಲಾ ಕಳೆದು, ಲೋಕತ್ರಯದಲ್ಲಿ ಉಪಮಾರಹಿತವಾದ ಆತ್ಮಸ್ವರೂಪವನ್ನು ಕೂಡಲೇ
ಕಾಣುವನು. ಆತ್ಮರೂಪ ನೋಡುವದೆಂದರೆ, ಜೀವನು ತಾನೇ ಬ್ರಹ್ಮನಾಗುವದು. ಆ ಬ್ರಹ್ಮದಿಂದ ಈ ಜಗತ್ತೆಲ್ಲಾ
ಮಾಯಾ ಮೂಲಕ ಹುಟ್ಟಿರುವದು. ವಿಷಮಯವಾದ ಈ ಜಗವು ಬ್ರಹ್ಮರೂಪನಾದಂಥವನಿಗೆ, ತನ್ನ ಶರೀರವೇ ಎಂಬಂತೆ ಕಾಣಿಸುತ್ತಿರುವಾಗ ಅವನಿಗೆ ವಿಷಯಗಳ ಯೋಗದಿಂದ ಯಾವ ಪ್ರಕಾರ ಉದ್ವೇಗವಾದೀತು ? ಗುರುಕೃಪೆ ಮಹಿಮೆಯನು ಅಗಾಧವಾಗಿದೆ. ಯಾವತನು ಶುದ್ಧ ಚಿತ್ತಯುಕ್ತನಾಗಿ ಆ ಕೃಪೆಯನ್ನು ಹೊಂದುವನೋ, ಅವನಿಗೆ ಇಂಥಾ ಆತ್ಮಬೋಧವು ಪ್ರಾಪ್ಯವು. ಇದಕ್ಕೂ ಹೆಚ್ಚಿನ ಲಾಭವೇ ಇಲ್ಲ. ಗ್ರಂಥ ಪಠಣದಿಂದ ಇಂಥಾ ಲಾಭ ಸಿಗುತ್ತಿರುವಾಗ, ಅಲ್ಪಲಾಭಗಳ ಸುದ್ದಿ ಯಾತಕ್ಕೆ ಬೇಕು ? ಸರ್ವ ದೇಶವು ಕೈ ಸೇರಿದಾಗ, ಗ್ರಾಮ ಒಂದನ್ನು ಯಾರು ಬೇಡುವರು ? ಹಾಗೆ ಚರಿತ್ರ ಪಠಣದಿಂದ ವಿಷಯಪ್ರಾಪ್ತಿ ಎಂದು ಅನ್ನಲಿಕ್ಕೆ ನಾಚಿಕೆ ಬರುತ್ತದೆ. ರಾಜನ ಕಡೆ ಹೋದರೆ ತೃಣ ಸಿಗುವುದು ಎಂದು ಹೇಳಿದರೆ ಎಲ್ಲರೂ ನಗುವರು. ಯಾವಾತನಿಂದ ಈ ಜಗತ್ತೆಲ್ಲ ಉತ್ಪನ್ನವಾಯಿತೋ ಆ ಸದ್ಗುರುವು ತನ್ನ ಚರಿತ್ರ ಪಠಣದಿಂದ ಒಲಿಯುವನು. ಆಗ ಆತನಿಗೆ ಉತ್ತಮವಾದದ್ದನ್ನೇ ಬೇಡಬೇಕು. ಈ ಭಾಗವತ ಪಠಣದಿಂದ ಚಿತ್ತವು ಶುದ್ಧವಾಗಿ, ಅದರೊಳಗೆ ವಿಷಯ ಕಾಮನೆ ಉಳಿಯುವುದೇ ಇಲ್ಲ.
12 ಸ್ಕಂದಗಳ ಲಿಂಕ್ ಗಳು 👇👇👇👇👇👇👇
ದಸಮ (10 ನೇ ) ಸ್ಕಂದದಲ್ಲಿಯ ಕಥೆಗಳನ್ನು ಓದಲು ಕ್ಲಿಕ್ ಮಾಡಿ
ಏಕಾದಶ (11 ನೇ ) ಸ್ಕಂದದಲ್ಲಿಯ ಕಥೆಗಳನ್ನು ಓದಲು ಕ್ಲಿಕ್ ಮಾಡಿ
🌺🌺 ಓಂ ನಮಃ ಶಿವಾಯ 🌺🌺
