Posts

ಕೊನೆ ಮಾತು

Image
  ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ 🌺 ಸಿದ್ಧಾರೂಢ ಭಾಗವತ ಪುರಾಣ ಓದುವ ಕ್ರಮ 🌺 ಪ್ರಥಮ ಸ್ಕಂದವನ್ನು - ಐದು ದಿನಗಳಲ್ಲಿ ಓದಬೇಕು ದ್ವಿತೀಯ ಸ್ಕಂದವನ್ನು - ಐದು ದಿನಗಳಲ್ಲಿ ಓದಬೇಕು ತೃತೀಯ ಸ್ಕಂದವನ್ನು - ಐದು ದಿನಗಳಲ್ಲಿ ಓದಬೇಕು ಚತುರ್ಥ ಸ್ಕಂದವನ್ನು -ನಾಲಕ್ಕು ದಿನಗಳಲ್ಲಿ ಓದಬೇಕು ಪಂಚಮ ಸ್ಕಂದವನ್ನು -ನಾಲಕ್ಕು ದಿನಗಳಲ್ಲಿ ಓದಬೇಕು ಷಷ್ಠ  ಸ್ಕಂದವನ್ನು -  ಮೂರು ದಿನಗಳಲ್ಲಿ ಓದಬೇಕು. ಸಪ್ತಮ ಸ್ಕಂದವನ್ನು  - ಮೂರು ದಿನಗಳಲ್ಲಿ ಓದಬೇಕು. ಅಷ್ಟಮ ಸ್ಕಂದವನ್ನು - ಮೂರು ದಿನಗಳಲ್ಲಿ ಓದಬೇಕು ನವಮ ಸ್ಕಂದವನ್ನು - ಮೂರು ದಿನಗಳಲ್ಲಿ ಓದಬೇಕು ದಶಮ ಸ್ಕಂದವನ್ನು - ಮೂರು ದಿನಗಳಲ್ಲಿ ಓದಬೇಕು ಏಕಾದಶ ಸ್ಕಂದವನ್ನು -ಮೂರು ದಿನಗಳಲ್ಲಿ ಓದಬೇಕು ದ್ವಾದಶ ಸ್ಕಂದವನ್ನು -ಕೊನೆ ದಿನ ಓದಿ ಮುಗಿಸಬೇಕು ಒಟ್ಟು 42 ದಿನಗಳಲ್ಲಿ ಈ ಭಾಗವತ ಪುರಾಣವನ್ನು  ಪ್ರೇಮಯುಕ್ತರಾಗಿ ಭಕ್ತಿಯಿಂದ  ಓದುವದರಿಂದ  ಮನೋರಥಗಳೆಲ್ಲಾ ಪೂರ್ಣವಾಗಿ, ಸದ್ಗುರುವು ತತ್ಕಾಲವೇ ಕೃಪಾ ಮಾಡುವನು. ಸದ್ಗುರು ಕೃಪೆಯೆಂಬದೇನೂ ಅಲ್ಪವಲ್ಲ. ಯಾವಾತನ ಮೇಲೆ...

ಮಹಾಮಂಗಳ ಆರತಿ

Image
    🌺🌺🌺 ಮಂಗಳಾರತಿ 🌺🌺🌺 ಗುರುರಾಜ ಸಿದ್ದಾರೂಢ ಸಮರ್ಥಾ ಬೆಳಗುವೆನಾರತಿಯಾ ಗುರುವರ ಬೆಳಗುವೆನಾರತಿಯಾ ||ಪು|| ಮೋಕ್ಷಾಪೇಕ್ಷೆಗೆ ತತ್ವಂ ಪದದ |ಅರ್ಥವ ಭೋಧಿಸಿದೀ ಗುರುವರ ಅರ್ಥವ ಭೋಧಿಸಿದೀ || ಉಕ್ಷಾವಾಹನ ಶಂಕರ ನಮೋಚ್ಚಾರವ ಮಾಡಿಸಿದಿ ಗುರುವರಾ ಉಚ್ಚಾರವ ಮಾಡಿಸಿದಿ ||೧|| ಶ್ಯಾಮಧಾಮ ಶ್ರೀರಾಮ ಭಿನ್ನ ಶಂಕರ ನೀನಿರುವಿ ಗುರುವರಾ ಶಂಕರ ನೀನಿರುವಿ || ಕಾಮಾ ಕ್ರೋಧವನಾಶಿಸಿ ಜಗದೊಳು ಶಾಂತಿಯ ಬಿರಿದಿ ಗುರುವರ ಶಾಂತಿಯ ಬೀರಿದೀ ||೨|| ಚರಣ ಭಜಕರಾ ದುರಿತ ವೃಂದವ ತ್ವರಿತದಿ ನಾಶಿಸಿದೀ ಗುರುವರಾ ತ್ವರಿತದಿ ನಾಶಿಸಿದೀ || ವರಭೂಲತಾಪುರ ದೈವದಿಂದಲಿ ನಿರುತದಿ ವಾಸಿಸಿದೀ ಗುರುವರಾ ನಿರುತದಿ ವಾಸಿಸಿದೀ ||೩|| ಓಂ ಚೈತನ್ಯಂ ಶಾಶ್ವತಂ ಶಾಂತಂ | ಯೋಮಾತೀತಂ ನಿರಂಜನಂ ನಾದ ಬಿಂದು ಕಲಾತೀತಂ | ತಸ್ಮಿ ಶ್ರೀ ಗುರುವೇ ನಮಃ ||  🌺🌺🌺🌺🌺 ಮಂಗಳಾರತಿ 2 🌺🌺🌺 ಗುರುದೇವ ಸಿದ್ಧಾರೂಢ ದಯಾನಿಧೇ |  ಬೆಳಗುವೆ ಆರತಿಯಾ।  ಗುರುವರಾ ಬೆಳಗುವೆ ಆರತಿಯಾ  ನರವಾರಕೆ ನೀಂ | ವರಪಂಚಾಕ್ಷರೀ  ಮಂತ್ರವ ಬೋಧಿಸಿದಿ |  ಗುರುವರಾ ಮಂತ್ರವ ಬೋಧಿಸಿದಿ || ನೆರೆ ಘೋರ ಕಾಲನ ಬಾಧೆಯ ಕೆಡಿಸುವುಪಾಯವ ತೋರಿಸಿದಿ |  ಗುರುವರಾ ಉಪಾಯವ ತೋರಿಸಿದಿ ||1|| ಉತ್ತಮರಿಗೆ ನಿಜತತ್ವಂಮಸಿ ಮಹಾವಾಕ್ಯ ಬೋಧಿಸಿದೀ | ಗುರುವರಾ ವಾಕ್ಯವ ಬೋಧಿಸಿದಿ || ಮಿಥ್ಯಾಬ್ರಾಂತಿಯನಾಶಿಸಿ  ನಿಜಪದವಿತ್ತು ರಕ್ಷಿಸಿದಿ |  ಗ...

ಶ್ರೀ ಗುರುನಾಥರೂಢರ ಸಮಾಧಿ ಮಂದಿರ ನಿರ್ಮಾಣ

Image
🌺 ಶ್ರೀ ಗುರುನಾಥಾರಾಢರ ಸಮಾಧಿ ಮಂದಿರ ನಿರ್ಮಾಣ 🌺 ಸದ್ಗುರು ಶ್ರೀ ಸಿದ್ಧಾರೂಢರ ಪರಮ ಶಿಷ್ಯ ಮೌನಯೋಗಿ ಶ್ರೀ ಗುರುನಾಥಾರೂಢರು ೧೯೬೨ರಂದು ಮಹಾಸಮಾಧಿ ತೆಗೆದುಕೊಂಡ ನಂತರ ಅವರ ಸಮಾಧಿ ಮಂದಿರದ ನಿರ್ಮಾಣ ಕಾರ್ಯವನ್ನು ಶ್ರೀ ಸಿದ್ಧಾರೂಢರ ಪ್ರೇರಣೆಯಂತೆ ಶ್ರೀ ಸಿದ್ದರ ಶಿಷ್ಯ ಬೆಂಗಳೂರಿನ ಆವೂಬಾಯಿಯವರ ಆಜ್ಞೆಯಂತೆ ಬೆಂಗಳೂರಿನ ಶ್ರೀ ಶಿವಾಂದ ಸ್ವಾಮಿಗಳು ಮುಂಬೈ ಮತ್ತು ಇತರ ಭಕ್ತರ ಸಹಕಾರದಿಂದ ಅಮೃತಶಿಲೆಯ ಸಮಾಧಿ ಮಂದಿರ ಕಟ್ಟುವ ಕಾರ್ಯ ಪ್ರಾರಂಭಿಸಿದರು. ಇವರ ಜೊತೆಗೆ ಹುಬ್ಬಳ್ಳಿಯ ಶ್ರೀ ರಾಮಣ್ಣ ಹುಲಿಗೆಪ್ಪ ಗಾರವಾಡ ಅವರು ಸಹಕಾರಿಗಳಾಗಿದ್ದರು. ಸುಂದರ ಮಂದಿರ ಕಾರ್ಯ ಭರದಿಂದ ಸಾಗಿ ಅರ್ಧಕ್ಕೂ ಮೇಲ್ಪಟ್ಟು, ಕಾರ್ಯವಾದಾಗ ಅಕಸ್ಮಾತ್ ೧೯೭೦ರಲ್ಲಿ ಶ್ರೀ ಶಿವಾನಂದರು ದೇಹತ್ಯಾಗ ಮಾಡಿದರು. ಆಗ ರಾಮಣ್ಣ ಗಾರವಾಡ ಅವರು ಚಿಂತಾಕ್ರಾಂತರಾಗಿ ಬುದ್ಧಿಗೆ ಮಂಕು ಹಿಡಿದಂತಾಗಿ ಏನು ಮಾಡಲೂ ಮನಸ್ಸಾಗದ ಕುಳಿತರು. ಒಂದು ದಿನ ಸಾಯಂಕಾಲ ಮಬ್ಬುಗತ್ತಲೆಯ ಬಡಕಲು ಶರೀರದ ಮುದುಕ ಸಾಧು ತಲೆಗೆ ಬಿಳಿ ಪಾವುಡ ಸುತ್ತಿದ್ದು, ಕಪ್ಪು ಬಣ್ಣದ ಶರೀರ ಹೊಂದಿದ ಅವನು ಬಂದು, ಲೇ ಹುಚ್ಚಾ, ಹಿಂಗ ಕುಂತರ ಕೆಲಸ ಆಗತೈತೇನು? ಏಳು, ಶ್ರೀ ಗುರುನಾಥಾರೂಢರ ಸಮಾಧಿ ಮಂದಿರದ ಕೆಲಸ ಅರ್ಧ ಆಗಿದ್ದು, ಪೂರ್ಣ ಮಾಡು. ನಿನಗೆ ಯಾವ ಆತಂಕ ಬರದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ನುಡಿದರು. ತಕ್ಷಣ ರಾಮಣ್ಣನ ಮೈಯ್ಯಲ್ಲಿ ಅದಾವುದೋ ಒಂದು ಚೈತನ್ಯ ತುಂಬಿದಂತಾಗಿ ಮಂಕುಕವಿದು ಬುದ್ದಿ...

ಶ್ರೀಗಳ ದೇಹತ್ಯಾಗದ ಬಗ್ಗೆ ನಾಯಿಯ ಸೂಚನೆ

Image
🌺 ಶ್ರೀಗಳ ದೇಹತ್ಯಾಗದ ಬಗ್ಗೆ ನಾಯಿಯ ಸೂಚನೆ 🌺 ಅಕ್ಕಲಕೋಟೆಯ ರಾಮಲಿಂಗ ಸ್ವಾಮಿಗಳು ಶ್ರೀಗುರುನಾಥಾರೂಢರ ಬಹಳ ಆತ್ಮೀಯರು. ಶ್ರೀಗಳ ಶರೀರ ತ್ಯಾಗದ ಸುದ್ದಿ ರಾಮಲಿಂಗ ಸ್ವಾಮಿಗಳ ಮಠದ ಹಲವಾರು ವರ್ಷಗಳ ಸೇವೆಯಲ್ಲಿದ್ದ ನಾಯಿಗೆ ತಿಳಿಯಿತು. ಆ ದಿನ ಆ ನಾಯಿ ತಾನಾಗಿ ರಾಮಲಿಂಗಸ್ವಾಮಿಗಳಿಗೆ ರುದ್ರಾಕ್ಷಿ, ಪೇಟಾ, ಅರಿವೆಗಳನ್ನು, ಪಾದುಕೆಗಳನ್ನು ಅವರ ಮುಂದೆ ತಂದಿಟ್ಟು, ಸ್ವಾಮಿಗಳ ಬಟ್ಟೆಯನ್ನು ಜಗ್ಗತೊಡಗಿತು. ಇದು ಗುರುಗಳು ಪ್ರವಾಸ ಮಾಡುವ ಮುನ್ಸೂಚನೆಯಂತೆ ಸ್ಪಷ್ಟವಾಗಿ ತಿಳಿಯಿತು. ಶ್ರೀ ಗುರುನಾಥರ ಆರೋಗ್ಯದ ಬಗ್ಗೆಯೋ ಹೇಗೆ ಎಂದು ಸಂಶಯ ಬಂದು ಒಟ್ಟಿಗೆ ಯಾವುದೋ ಸಂಕೇತವೆಂದು ತಿಳಿದು ರಾಮಲಿಂಗ ಸ್ವಾಮೀಗಳು ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು. ಅಲ್ಲದೆ ಆ ನಾಯಿಯೂ ಅವರ ಬೆನ್ನು ಹತ್ತಿ ಬಸ್ಸಿನ ತನಕ ಹೋಗಿ ಬಸ್ಸು ಬಿಟ್ಟ ನಂತರ ಅವರನ್ನು ಕಳಿಸಿ ಮರಳಿ ಮಠಕ್ಕೆ ಹೋಯಿತು. ರಾಮಲಿಂಗ ಸ್ವಾಮಿಗಳು ಹುಬ್ಬಳ್ಳಿಗೆ ಬರುವಷ್ಟರಲ್ಲಿ ಶ್ರೀಗುರುನಾಥ ಸ್ವಾಮಿಗಳ ಶರೀರ ತ್ಯಾಗ ಮಾಡುವ ಸಮಯ ಬಂದಿತ್ತು. ದೇಹತ್ಯಾಗದ ನಂತರ ರಾಮಲಿಂಗ ಸ್ವಾಮಿಗಳು ದುಃಖದ ಸನ್ನಿವೇಶದಲ್ಲಿ ಭಾವಪೂರಿತರಾಗಿ ಜೋತಿ ಮುಳುಗಿತು ಹುಬ್ಬಳ್ಳಿ ಕತ್ತಲಾಯಿತು ಎಂಬ ಗೀತೆಯನ್ನು ರಚಿಸಿದರು. 👇👇👇👇👇👇👇👇👇👇👇👇👇👇   ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ...

ಗುರುನಾಥರ ಅಂತಿಮ ಯಾತ್ರೆ

Image
🌺  ಗುರುನಾಥರ ಅಂತಿಮ ಯಾತ್ರೆ 🌺 ಶ್ರೀಗಳವರ ಅಂತಿಮ ಯಾತ್ರೆಗಾಗಿ ವಿಶೇಷ ಅಲಂಕೃತ ಮತ್ತು ವಿದ್ಯುದ್ದೀಪಗಳ ಸರಮಾಲೆಯಿಂದ ಸಿಂಗರಿಸಿದ ದೊಡ್ಡ ರಥವನ್ನು ಎರಡು ಟ್ರಾಕ್ಟರ್ ಗಳಲ್ಲಿ ಸ್ಥಾಪಿಸಿ ಹುಬ್ಬಳ್ಳಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವುದನ್ನು ಜನತೆ ನೋಡಿದರು. ಆ ನೋಟ ಹೃದಯಸ್ಪರ್ಶಿಯಾಗಿತ್ತು, ನಗರದ ನಿವಾಸಿಗಳು ಅಲ್ಲಲ್ಲಿ ಅಂತಿಮ ಗೌರವ ಸಲ್ಲಿಸುವುದಕ್ಕಾಗಿ ಫಲ ಪುಷ್ಟಗಳನ್ನು ಸಲ್ಲಿಸಿದರು. ಮಠದ ಸಂಪ್ರದಾಯದಂತೆ ಈ ಯಾತ್ರೆಯು ಗಣೇಶ ಪೇಟೆಯ ಜಡಿಸಿದ್ದೇಶ್ವರ ಸ್ವಾಮಿಗಳ ಮಠಕ್ಕೆ ಸೂರ್ಯಾಸ್ತ ಸಮಯದಲ್ಲಿ ಬಂದಿತು. ಅಲ್ಲಿ ಭಕ್ತರು ದುಃಖವನ್ನು ತಾಳಲಾರದೆ ಹೃದಯವೇದನೆಯಿಂದ ಮೂರ್ಛಿತರಾಗಿ ಬಿದ್ದರು. ಅಲ್ಲಿ ಅಂತಿಮ ಗೌರವ ಸಲ್ಲಿಸಿದ ನಂತರ ಮೆರವಣಿಗೆ ಮುಂದುವರಿದು ಮಠದ ಕಡೆಗೆ ನಡೆಯಿತು. ಇತ್ತ ಮಠದ ಟ್ರಸ್ಟ ಕಮೀಟಿಯ ಸದಸ್ಯರಿಗೆ ಚೇರಮನ್ನರು ಸುತ್ತೋಲೆ ಕಳಿಸಿದರು. ಸಭೆ ಸೇರಿತು. ಶ್ರೀ ಗುರುನಾಥರ ಸಮಾಧಿಯನ್ನು ಸಿದ್ದಾರೂಢರ ಮಂದಿರ ಮತ್ತು ಕೈಲಾಸ ಮಂಟಪದ ಮಧ್ಯದಲ್ಲಿ ಮಾಡಬೇಕೆಂದು ಹುಬ್ಬಳ್ಳಿಯ ಹನ್ನೊಂದು ಸದಸ್ಯರು ಲೇಯಿಯಲ್ಲಿ ಬರೆದು ಚೇರಮನ್ನರಿಗೆ ಕೊಟ್ಟು ತಿಳಿಸಿದರು. ಆ ಪ್ರಕಾರ ಠರಾವು ಪಾಸಾಯಿತು. ಆದರೆ ಚೇರಮನ್ನರು ಸಮಾಧಿಯನ್ನು ಮಠದ ಹಿಂದಿರುವ ಸ್ಮಶಾನ ಭೂಮಿಯಲ್ಲಿ ಮಾಡಬೇಕೆಂದು ಯೋಚಿಸಿದ್ದರು. ಅದನ್ನು ಒಪ್ಪದ ಬಹುಜನ ಟ್ರಸ್ಟಿಗಳು ಶ್ರೀಮಠದ ಸಹಸ್ರಾರು ಭಕ್ತರು ಅದನ್ನು ಬಲವಾಗಿ ಪ್ರತಿಭಟಿಸಿದಾಗ, ಅದನ್ನು ಗಮನಿಸಿದ ಶ್ರೀ ಮಠದ ...

ಸಿದ್ಧಾರೂಢರು ಹಳಸಿದ ಅನ್ನವನ್ನು ಬಿಸಿ ಅನ್ನ ಮಾಡಿದ ಕಥೆ

Image
         🌺    ಸಿದ್ಧರಿಂದ ಹಳಸಿದ ಅನ್ನ ಮಹಿಮೆ 🌺 ಜಂಗಮನ ಮುಖದಿಂದಲೇ ಪರಮಾತ್ಮ ತೃಪ್ತವೆನ್ನುವದನ್ನು ತಿಳಿಸುವದಕ್ಕಾಗಿ  ಅಲ್ಲದೆ ಆ ತಾಯಿ ಆ ಬದನಗುಡ್ಡದ ಬಸವಣ್ಣನ ಮೇಲೆ ಇರಿಸಿದ ಪ್ರೀತಿ ವಿಶ್ವಾಸ ನಿಷ್ಠೆಯ  ಫಲ ರೂಪವಾದ ಪರಮಾತ್ಮನು ಯಾರು ಎಂಬುದನ್ನು ತಿಳಿಸಲೆಂದೆ ಒಂದು ಲೀಲೆ ಮಾಡುತ್ತಾರೆ ಶ್ರೀ ಸಿದ್ದರು. (ಉಜ್ಜಣ್ಣನವರ ಭೀಮಪ್ಪ ಮತ್ತು ಲಕ್ಷ್ಮಮ್ಮ ನಿಗೆ ಸಿದ್ಧರು ದತ್ತು ಪುತ್ರರಾಗುದ್ದರು ಅವರು ನಿತ್ಯ ಉಜ್ಜಣ್ಣನವರ ಮನೆಗೆ ಹೋಗಿ ಬರುವ ರೂಡಿ ಇತ್ತು ) ಒಮ್ಮೆ ಶ್ರಾವಣ ಮಾಸದ ಮೊದಲನೇ ಸೋಮವಾರ ಲಕ್ಷಮ್ಮನ ಮನೆದೇವರ ಬೂದನಗುಡ್ಡದ ಬಸವಣ್ಣನಿಗೆ ಎಡೆ  ಒಯ್ಯಬೇಕೆಂದು ನಸುಕಿನಲ್ಲಿ ಎದ್ದು ಮಡಿಯಿಂದ ಅಡಿಗೆ ಮಾಡಿ ಹೆಡಿಗೆಯಲ್ಲಿ ತುಂಬಿಕೊಂಡು ತಯ್ಯಾರಾಗಿ ಹೊರಟಳು. ಇದು ಪ್ರತಿವರ್ಷ ವಾಡಿಕೆ. ಅದರಂತೆ ಸುಮಾರು 10-11 ಗಂಟೆಯ ಸಮಯ ಹೆಡಿಗೆ ತಲೆಯ ಮೇಲಿಟ್ಟ ಕೊಂಡು ಹೋಗಬೇಕೆಂದು ತಯಾರಾಗಿ ಅಡಿಗೆ ಮನೆ ಕೀಲಿಹಾಕುತ್ತಿದ್ದಳು, ಅಷ್ಟರಲ್ಲಿ ಗಂಡ ಭೀಮಪ್ಪ ಮಗನಾದ ಶ್ರೀ ಸಿದ್ದರು ಎದುರಿಗೆ ಬಂದು ನಿಂತರು. ನಮಗೆ ತುಂಬ ಹಸಿವಾಗಿದೆ ಊಟಕ್ಕೆ ಕೊಟ್ಟು ಹೋಗು ಎಂದರು. ಅದಕ್ಕೆ ಲಕ್ಷ್ಮಮ್ಮ ಸಿಡಿಮಿಡಿಯಿಂದ ಮನೆಯ ದೇವರು ಬೆಂಕಿಯಂಥವ ಆ ದೇವರಿಗೆ ನೈವೇದ್ಯ ಮಾಡದೆ ಉಣ್ಣುವಂತಿಲ್ಲ ಹೋಳಿಗೆ, ನಾನು ಬಂದ ಮೇಲೆ ಊಟ ಮಾಡುವಿರಂತೆ ಎಂದು ಹೇಳಿದವಳೆ, ತಲೆಯ ಮೇಲೆ  ಎಲ್ಲವನ್ನು ಅಡಿಗೆಯ ಹೆಡಿಗೆಯ...

ಶ್ರೀಗುರುನಾಥರ ಅವತಾರ ಸಮಾಪ್ತಿ

Image
     🌺 ಶ್ರೀಗುರುನಾಥರ  ಅವತಾರ ಸಮಾಪ್ತಿ 🌺 ಸುಮಾರು ಹತ್ತೊಂಭತ್ತುನೂರಾ ಅರವತ್ತೆರಡನೆಯ ಇಸ್ವಿಯಲ್ಲಿ ಶ್ರೀಗುರುನಾಥರ ದೇಹದ ಆರೋಗ್ಯ ವಿಷಮಿಸಿತು. ಅನ್ನ ನೀರುಗಳನ್ನು ತೆಗೆದುಕೊಳ್ಳದೆ ನಿರಶನರಾದರು, ಆಶಕ್ತಿಯಿಂದಾಗಿ ಹಾಸಿಗೆಯಿಂದ ಮೇಲೇಳಲು ಬರುತ್ತಿರಲಿಲ್ಲ. ಚೇರಮನ್ನರು ಶ್ರೀಗಳವರನ್ನು ಔಷಧೋಪಚಾರಕ್ಕಾಗಿ ಹುಬ್ಬಳ್ಳಿಯ ಕೋ-ಆಪರೇಟಿವ್ ದವಾಖಾನೆಗೆ ಸೇರಿಸಿದರು. ಶ್ರೀಗಳವರಿಗೆ ದೇಹದ ಪ್ರಜ್ಞೆಯಿಲ್ಲದೆ ಮಾತು ಮನಗಳಿಗೆ ಮೀರಿದ ತಮ್ಮ ಸ್ವರೂಪವಾದ ಅರ್ಥಾತ್ ಬ್ರಹ್ಮಾನಂದದಲ್ಲಿಯೇ ಯಾವಾಗಲೂ ಇದ್ದರು. ಆಸ್ಪತ್ರೆಯಲ್ಲಿ ಡಾಕ್ಷರ ಸೋನಟಕ್ಕೆ ಹಾಗೂ ಆರ್. ಬಿ. ಪಾಟೀಲ ಇವರಿಂದ ಔಷಧೋಪಚಾರ ನಡೆಯಿತು. ಸ್ವಾಮಿಗಳು ಯಾವಾಗಲೂ ಅಂತರ್ಮುಖಿಗಳಾಗಿ ನಿರ್ವಿಕಲ್ಪ ಸಮಾಧಿಯಲ್ಲಿದ್ದರು. ಅವರ ದೇಹದ ತಾಪಮಾನ ಒಮ್ಮಿದೊಮ್ಮೆ ಅತಿ ಹೆಚ್ಚಾಗಿ ಅಪಾಯವಾಗುವುದನ್ನು ಕಂಡು, ಮೂರು  ಥರ್ಮಾಮೀಟರ ಉಪಯೋಗಿಸಿ ಪರೀಕ್ಷಿಸಿದರು. ಚುಚ್ಚುಮದ್ದು ಕೊಡುತ್ತಿರುವಾಗಲೂ ತಮಗೂ ದೇಹಕ್ಕೂ ಯಾವ ಸಂಬಂಧವಿಲ್ಲದಂತೆ ಇದ್ದರು. ಇಂಥ ಸ್ಥಿತಿಯನ್ನು ಕಂಡ ಡಾಕ್ಟರರು ಆಶ್ಚರ್ಯಚಕಿತರಾದರು. ಟ್ರಸ್ಟಕಮೀಟಿಯವರ ಕಟ್ಟಪ್ಪಣೆಯ ಮೇರೆಗೆ ಶ್ರೀಗಳ ಸ್ಥಿತಿಯನ್ನು ಕಂಡು, ಅವರನ್ನು ನೋಡುವುದಕ್ಕೆ ಯಾರಿಗೂ ಅವಕಾಶ ವಿರಲಿಲ್ಲವಾದ್ದರಿಂದ ವರ್ತಮಾನ ಪತ್ರಿಕೆಗಳಲ್ಲಿ ಬಂದ ಸುದ್ದಿಯನ್ನು ಭಕ್ತರು ನಂಬಬೇಕಾಯಿತು. (ಶ್ರೀಗುರುಸಿದ್ದಪ್ಪ ಧಾರವಾಡ ಇವರು ಬರೆದ ಶ್ರೀಗುರುನಾಥಾರೂಢರ ಚರ...